ಕಂಕುಳ ಚರ್ಮ ಕಪ್ಪಾಗಿದ್ದರೆ, ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

By Arshad
Subscribe to Boldsky

ಸಾಮಾನ್ಯವಾಗಿ ತೋಳಿಲ್ಲದ ಉಡುಪು ತೊಡಲು ಹತ್ತರಲ್ಲಿ ಎಂಟು ಮಹಿಳೆಯರು ಹಿಂದೇಟು ಹಾಕಲು ಕಂಕುಳ ಚರ್ಮದ ಬಣ್ಣ ಗಾಢವಾಗಿರುವುದೇ ಆಗಿದೆ. ಈ ಬಣ್ಣವನ್ನು ಇತರರು ಗಮನಿಸಿದರೆ ಎಂಬ ಮುಜುಗರ ಎಂತಹದ್ದು ಎಂಬುದನ್ನು ಯಾರೂ ಊಹಿಸಬಹುದು. ಕಂಕುಳ ಬಣ್ಣ ಗಾಢವಾಗಲು ಕೆಲವಾರು ಕಾರಣಗಳಿವೆ. ಅತ್ಯಂತ ಸಮಾನ್ಯವಾದ ಕಾರಣವೆಂದರೆ ಈ ಭಾಗದ ಕೂದಲನ್ನು ನಿವಾರಿಸಲು ಬಳಸುವ ವಿಧಾನಗಳಾದ ಶೇವಿಂಗ್, ವ್ಯಾಕ್ಸಿಂಗ್ ಇತ್ಯಾದಿ. ಇದರ ಜೊತೆಗೇ ಸ್ವಚ್ಛತೆಯ ಕೊರತೆ, ಸತ್ತ ಜೀವಕೋಶಗಳನ್ನು ಕಾಲಕಾಲಕ್ಕೆ ಕೆರೆದು ತೆಗೆಯದೇ ಇರುವುದು, ಈ ಭಾಗದಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಮೊದಲಾದವು ಸಹಾ ಚರ್ಮದ ಬಣ್ಣ ಗಾಢವಾಗಲು ಕಾರಣ.

ಒಂದು ವೇಳೆ ತೋಳಿಲ್ಲದ ಉಡುಪು ನಿಮ್ಮಲ್ಲಿದ್ದೂ ತೊಟ್ಟುಕೊಳ್ಳಲು ಹಿಂದೇಟು ಹಾಕುತ್ತಿದ್ದರೆ ಈ ಲೇಖನ ನಿಮಗಾಗಿಯೇ ಇದೆ. ಇಂದು ಈ ಕೊರತೆಯನ್ನು ಸಮರ್ಥವಾಗಿ ಹಾಗೂ ಸುಲಭವಾಗಿ ನಿವಾರಿಸಬಲ್ಲ ಕೆಲವು ವಿಧಾನಗಳನ್ನು ಸೂಚಿಸಲಾಗಿದ್ದು ನಿಮಗೆ ಸೂಕ್ತವೆನಿಸಿದ ವಿಧಾನವನ್ನು ಅನುಸರಿಸುವ ಮೂಲಕ ಶೀಘ್ರವೇ ನಿಮ್ಮ ಸಹಜವರ್ಣವನ್ನು ಕಂಕುಳಭಾಗದಲ್ಲಿಯೂ ಪಡೆಯಬಹುದು ಹಾಗೂ ಈ ಭಾಗದಲ್ಲಿ ಸಂಗ್ರಹವಾಗಿದ್ದ ಕೊಳೆ, ಒಣಗಿದ ಬೆವರು ಹಾಗೂ ಹಠಮಾರಿಯಾಗಿ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ನಿವಾರಿಸಲು ಸಾಧ್ಯವಾಗಲಿದೆ. ಈ ವಿಧಾನಗಳಲ್ಲಿ ಬಳಸಲಾದ ಸಾಮಾಗ್ರಿಗಳು ಸುಲಭವಾಗಿ ನಿಮ್ಮ ಅಡುಗೆ ಮನೆಯಲ್ಲಿಯೇ ಲಭ್ಯವಿರುವಂತಹದ್ದಾಗಿದ್ದು ಪ್ರಬಲವೂ ಆಗಿವೆ.

ಕಂಕುಳ ಕೂದಲಿನ ನಿವಾರಣೆಗೆ ಫಲಪ್ರದ ಮನೆಮದ್ದು

ಅಲ್ಲದೇ ಇವು ಅಗ್ಗವೂ ಆಗಿದ್ದು ಇವನ್ನು ಬಳಸದೇ ಇರಲು ನಿಮಗೆ ಕಾರಣ ಉಳಿಯುವುದಿಲ್ಲ. ಇವುಗಳಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲದಿರುವ ಕಾರಣ ಸುರಕ್ಷಿತವಾಗಿ ಬಳಸಬಹುದು. ಅತಿ ಗಾಢವಾದ ಬಣ್ಣವನ್ನು ನಿವಾರಿಸಲು ಕೊಂಚ ಹೆಚ್ಚು ಸಮಯ ಬಳಸಬೇಕಾಗಿ ಬರಬಹುದು. ಆದರೆ ಇದರ ಪರಿಣಾಮದಿಂದ ನಿಮಗೆ ನಿಮ್ಮ ನೆಚ್ಚಿನ ಉಡುಪುಗಳನ್ನು ತೊಡುವಂತಾದರೆ ಇದಕ್ಕಿಂತ ಹೆಚ್ಚಿನ ಪ್ರತಿಫಲವಿದೆಯೇ?....

ಅರಿಶಿನ ಪುಡಿ+ಕೊಬ್ಬರಿ ಎಣ್ಣೆ+ಆಲುಗಡ್ಡೆ ರಸ

ಅರಿಶಿನ ಪುಡಿ+ಕೊಬ್ಬರಿ ಎಣ್ಣೆ+ಆಲುಗಡ್ಡೆ ರಸ

ಒಂದು ಚಿಕ್ಕ ಬೋಗುಣಿಯಲ್ಲಿ ½ ಚಿಕ್ಕಚಮಚ ಅರಿಶಿನ ಪುಡಿ, ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆ ಹಾಗೂ ½ ಚಿಕ್ಕ ಚಮಚ ಆಲುಗಡ್ಡೆ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

- ಈ ಮಿಶ್ರಣವನ್ನು ಈಗತಾನೇ ಉಗುರುಬೆಚ್ಚನೆಯ ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ ಕಂಕುಳ ಭಾಗಕ್ಕೆ ತೆಳುವಾಗಿ ಹಚ್ಚಿ

- ಕೈಗಳನ್ನು ಮೇಲಿರಿಸಿದ ಸ್ಥಿತಿಯಲ್ಲಿ ಕೆಲವಾರು ನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ

- ಬಳಿಕ ಉಗುರುಬೆಚ್ಚನೆಯ ನೀರಿನಿಂದ ಹಾಗೂ ಮೃದುವಾದ ಮೈಯುಜ್ಜುವ ಬ್ರಶ್ ಬಳಸಿ ಕೆರೆದು ನಿವಾರಿಸಿ ತೊಳೆದುಕೊಳ್ಳಿ.

- ಸೋಪು ಉಪಯೋಗಿಸದಿರಿ. ಬಳಿಕ ದಪ್ಪ ಟವೆಲ್ ನಿಂದ ಒತ್ತಿ ಒರೆಸಿಕೊಳ್ಳಿ.

- ಈ ವಿಧಾನವನ್ನು ವಾರಕ್ಕೆರಡು ಬಾರಿ ಬಣ್ಣ ತಿಳಿಯಾಗುವವರೆಗೂ ಅನುಸರಿಸಿ.

ಓಟ್ಸ್ ರವೆ ಹಾಗೂ ಸೌತೆಕಾಯಿ

ಓಟ್ಸ್ ರವೆ ಹಾಗೂ ಸೌತೆಕಾಯಿ

- ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ದೊಡ್ಡ ಚಮಚ ನೀರಿನಲ್ಲಿ ಬೇಯಿಸಿ ತಣಿಸಿದ ಓಟ್ಸ್ ರವೆ (oatmeal) ಹಾಗೂ ಎರಡು ದೊಡ್ಡ ಚಮಚ ಅರೆದ ಎಳೆಸೌತೆಯ ತಿರುಳನ್ನು ಬೆರೆಸಿ ಮಿಶ್ರಣ ಮಾಡಿ.

- ಈ ಮಿಶ್ರಣವನ್ನು ಈಗತಾನೇ ಉಗುರುಬೆಚ್ಚನೆಯ ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ ಕಂಕುಳ ಭಾಗಕ್ಕೆ ತೆಳುವಾಗಿ ಹಚ್ಚಿ

- ಕೈಗಳನ್ನು ಮೇಲಿರಿಸಿದ ಸ್ಥಿತಿಯಲ್ಲಿ ಕೆಲವಾರು ನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ

- ಬಳಿಕ ಉಗುರುಬೆಚ್ಚನೆಯ ನೀರಿನಿಂದ ಹಾಗೂ ಮೃದುವಾದ ಮೈಯುಜ್ಜುವ ಬ್ರಶ್ ಬಳಸಿ ಕೆರೆದು ನಿವಾರಿಸಿ ತೊಳೆದುಕೊಳ್ಳಿ.

- ಸೋಪು ಉಪಯೋಗಿಸದಿರಿ. ಬಳಿಕ ದಪ್ಪ ಟವೆಲ್ ನಿಂದ ಒತ್ತಿ ಒರೆಸಿಕೊಳ್ಳಿ.

- ಈ ವಿಧಾನವನ್ನು ವಾರಕ್ಕೆರಡು ಅಥವಾ ಮೂರು ಬಾರಿ ಬಣ್ಣ ತಿಳಿ ಯಾಗುವವರೆಗೂ ಅನುಸರಿಸಿ

ಕಡ್ಲೆಹಿಟ್ಟು, ಬೆಣ್ಣೆಹಣ್ಣಿನ ಅವಶ್ಯಕ ತೈಲ ಮತ್ತು ಆಲಿವ್ ಎಣ್ಣೆ

ಕಡ್ಲೆಹಿಟ್ಟು, ಬೆಣ್ಣೆಹಣ್ಣಿನ ಅವಶ್ಯಕ ತೈಲ ಮತ್ತು ಆಲಿವ್ ಎಣ್ಣೆ

ಒಂದು ಚಿಕ್ಕ ಬೋಗುಣಿಯಲ್ಲಿ ½ ಚಿಕ್ಕ ಚಮಚ ಕಡ್ಲೆಹಿಟ್ಟು, ನಾಲ್ಕು ತೊಟ್ಟು ಬೆಣ್ಣೆಹಣ್ಣಿನ ಅವಶ್ಯಕ ತೈಲ (avocado essential oil) ಹಾಗೂ ಒಂದು ದೊಡ್ಡ ಚಮಚ ತಣ್ಣನೆಯ ವಿಧಾನದಲ್ಲಿ ಹಿಂಡಲಾದ (cold process) ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ.

- ಈ ಮಿಶ್ರಣವನ್ನು ಈಗತಾನೇ ಉಗುರುಬೆಚ್ಚನೆಯ ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ ಕಂಕುಳ ಭಾಗಕ್ಕೆ ತೆಳುವಾಗಿ ಹಚ್ಚಿ

- ಕೈಗಳನ್ನು ಮೇಲಿರಿಸಿದ ಸ್ಥಿತಿಯಲ್ಲಿ ಸುಮಾರು ಐದು ನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ

- ಬಳಿಕ ಉಗುರುಬೆಚ್ಚನೆಯ ನೀರಿನಿಂದ ಹಾಗೂ ಮೃದುವಾದ ಮೈಯುಜ್ಜುವ ಬ್ರಶ್ ಬಳಸಿ ಕೆರೆದು ನಿವಾರಿಸಿ ತೊಳೆದುಕೊಳ್ಳಿ.

- ಸೋಪು ಉಪಯೋಗಿಸದಿರಿ. ಬಳಿಕ ದಪ್ಪ ಟವೆಲ್ ನಿಂದ ಒತ್ತಿ ಒರೆಸಿಕೊಳ್ಳಿ.

- ಈ ವಿಧಾನವನ್ನು ವಾರಕ್ಕೆರಡು ಬಾರಿ ಬಣ್ಣ ತಿಳಿಯಾಗುವವರೆಗೂ ಅನುಸರಿಸಿ

ಅಕ್ಕಿ ಹಿಟ್ಟು + ಹಾಲು

ಅಕ್ಕಿ ಹಿಟ್ಟು + ಹಾಲು

- ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ದೊಡ್ಡ ಚಮಚ ಅಕ್ಕಿಹಿಟ್ಟು ಮತ್ತು ಎರಡು ದೊಡ್ಡ ಚಮಚ ಹಸಿಹಾಲನ್ನು ಬೆರೆಸಿ ಮಿಶ್ರಣ ಮಾಡಿ.

- ಬಳಿಕ ಒಂದು ಹತ್ತಿಯ ವೃತ್ತಾಕಾರದ ಪಟ್ಟಿಯನ್ನು (ಸ್ಕ್ರಬ್ ಪ್ಯಾಡ್) ಈ ದ್ರಾವಣದಲ್ಲಿ ಅದ್ದಿ ಈಗತಾನೇ ಉಗುರುಬೆಚ್ಚನೆಯ ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ ಕಂಕುಳ ಭಾಗಕ್ಕೆ ನವಿರಾದ ಮಸಾಜ್ ನೊಂದಿಗೆ ಹಚ್ಚಿಕೊಳ್ಳಿ.

-ಹೀಗೆ ಸುಮಾರು ಐದರಿಂದ ಹತ್ತು ನಿಮಿಶ ಮಾಡಬೇಕಾಗಿ ಬರುವ ಕಾರಣ ಆಪ್ತರ ನೆರವು ಪಡೆಯುವುದು ಉತ್ತಮ.

- ಬಳಿಕ ಈ ಭಾಗವನ್ನು ಒಂದು ಒದ್ದೆಯಾದ ಬಟ್ಟೆಯಿಂದ ಒರೆಸಿಕೊಂಡು ಸ್ವಚ್ಛಗೊಳಿಸಿ.

- ಗಮನಾರ್ಹ ಬದಲಾವಣೆ ಪಡೆಯಲು ವಾರಕ್ಕೆ ನಾಲ್ಕೈದು ಬಾರಿ ಅನುಸರಿಸಿ.

- ತೀರಾ ಕಪ್ಪಗಾಗಿರುವ ಕಂಕುಳಿಗೆ ಈ ವಿಧಾನ ಸೂಕ್ತವಾಗಿದೆ.

ಕಾಫಿ ಪುಡಿ + ಟೊಮಾಟೋ ಹಣ್ಣಿನ ತಿರುಳು

ಕಾಫಿ ಪುಡಿ + ಟೊಮಾಟೋ ಹಣ್ಣಿನ ತಿರುಳು

- ಒಂದು ಚಿಕ್ಕ ಬೋಗುಣಿಯಲ್ಲಿ ಮೂರು ದೊಡ್ಡ ಚಮಚ ಈಗ ತಾನೇ ಅರೆದ ಟೊಮಾಟೋ ಹಣ್ಣಿನ ತಿರುಳು (ಬೀಜ, ಸಿಪ್ಪೆ ಇಲ್ಲದ್ದು) ಹಾಗೂ

ಎರಡು ಚಿಕ್ಕ ಚಮಚ ತಾಜಾ ಕಾಫಿಬೀಜಗಳನ್ನು ಹುರಿದು ಮಾಡಿದ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿ.

- ಈ ಮಿಶ್ರಣವನ್ನು ಈಗತಾನೇ ಉಗುರುಬೆಚ್ಚನೆಯ ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ ಕಂಕುಳ ಭಾಗಕ್ಕೆ ತೆಳುವಾಗಿ ಹಚ್ಚಿ

- ಕೈಗಳನ್ನು ಮೇಲಿರಿಸಿದ ಸ್ಥಿತಿಯಲ್ಲಿ ಸುಮಾರು ಐದರಿಂದ ಹತ್ತು ನಿಮಿಷಗಳ ನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ

- ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

- ಸೋಪು ಉಪಯೋಗಿಸದಿರಿ. ಬಳಿಕ ದಪ್ಪ ಟವೆಲ್ ನಿಂದ ಒತ್ತಿ ಒರೆಸಿಕೊಳ್ಳಿ.

- ಈ ವಿಧಾನವನ್ನು ವಾರಕ್ಕೆ ಮೂರರಿಂದ ನಾಲ್ಕು ಬಾರಿ (ದಿನ ಬಿಟ್ಟು ದಿನ) ಬಣ್ಣ ತಿಳಿಯಾಗುವವರೆಗೂ ಅನುಸರಿಸಿ.

ಕಂದು ಸಕ್ಕರೆ- ಲಿಂಬೆ ರಸ-ಜೇನು

ಕಂದು ಸಕ್ಕರೆ- ಲಿಂಬೆ ರಸ-ಜೇನು

- ಒಂದು ಚಿಕ್ಕ ಬೋಗುಣಿಯಲ್ಲಿ ಮೂರು ಚಿಕ್ಕ ಚಮಚ ಕಂದು ಸಕ್ಕರೆ (ಸಾವಯಯ ವಿಧಾನದಲ್ಲಿ ತಯಾರಿಸಿದ ಸಕ್ಕರೆ ಅಥವಾ ಅಪ್ಪಟ ಬೆಲ್ಲ),

ಒಂದು ದೊಡ್ಡ ಚಮಚ ತಾಜಾ ಲಿಂಬೆರಸ ಹಾಗೂ ಮೂರು ಚಿಕ್ಕ ಚಮಚ ಜೇನು ಬೆರೆಸಿ ಮಿಶ್ರಣ ಮಾಡಿ.

- ಈ ಮಿಶ್ರಣವನ್ನು ಈಗತಾನೇ ಉಗುರುಬೆಚ್ಚನೆಯ ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ ಕಂಕುಳ ಭಾಗಕ್ಕೆ ತೆಳುವಾಗಿ ಹಚ್ಚಿ ನಯವಾಗಿ ಮಸಾಜ್ ಮಾಡಿ.

- ಬಳಿಕ ಈ ಭಾಗವನ್ನು ಒಂದು ಒದ್ದೆಯಾದ ಬಟ್ಟೆಯಿಂದ ಒರೆಸಿಕೊಂಡು ಸ್ವಚ್ಛಗೊಳಿಸಿ.

- ಗಮನಾರ್ಹ ಬದಲಾವಣೆ ಪಡೆಯಲು ವಾರಕ್ಕೆ ನಾಲ್ಕೈದು ಬಾರಿ (ದಿನ ಬಿಟ್ಟು ದಿನ) ಅನುಸರಿಸಿ.

ಎಪ್ಸಂ ಉಪ್ಪು + ಬಾದಾಮಿ ಎಣ್ಣೆ

ಎಪ್ಸಂ ಉಪ್ಪು + ಬಾದಾಮಿ ಎಣ್ಣೆ

- ಒಂದು ಚಿಕ್ಕ ಬೋಗುಣಿಯಲ್ಲಿ ½ ಚಿಕ್ಕ ಚಮಚ ಎಪ್ಸಂ ಉಪ್ಪು ಮತ್ತು ಎರಡು ದೊಡ್ಡ ಚಮಚ ಬಾದಾಮಿ ಎಣ್ಣೆಯನ್ನು ಬೆರೆಸಿ ಉಪ್ಪು ಕರಗುವವರೆಗೂ ಮಿಶ್ರಣ ಮಾಡಿ.

- ಈ ದ್ರವವನ್ನು ಈಗತಾನೇ ಉಗುರುಬೆಚ್ಚನೆಯ ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ ಕಂಕುಳ ಭಾಗಕ್ಕೆ ತೆಳುವಾಗಿ ಹಚ್ಚಿ ನಯವಾಗಿ ಮಸಾಜ್ ಮಾಡಿ.

- ಸುಮಾರು ಐದರಿಂದ ಹತ್ತು ನಿಮಿಷಗಳವರೆಗೆ ಮಸಾಜ್ ಮಾಡಬೇಕಾದುದರಿಂದ ಆಪ್ತರ ನೆರವು ಪಡೆದುಕೊಳ್ಳಬಹುದು.

- ಈ ವಿಧಾನ ಕೊಂಚ ಪ್ರಬಲವಾದುದರಿಂದ ವಾರಕ್ಕೊಮ್ಮೆ ಮಾತ್ರ ಅನುಸರಿಸಿದರೆ ಸಾಕು. ಹೆಚ್ಚೇನೂ ಗಾಢವಿಲ್ಲದ ಕಂಕುಳಿಗೆ ಈ ವಿಧಾನ ಸೂಕ್ತವಾಗಿದೆ.

For Quick Alerts
ALLOW NOTIFICATIONS
For Daily Alerts

    English summary

    Homemade Underarm Whitening Scrubs That Actually Work

    A number of factors can cause this skin problem. The most common ones are shaving, waxing, build-up of dead skin cells, poor hygiene, etc. And, if not treated in time, this skin problem can become a permanent one. So, if you too are someone who shies away from sleeveless clothing because of the appearance of the underarms, then today's post is perfect for you. As today we've compiled a list of homemade scrubs that can remove debris from the skin on your underarms and lighten its appearance.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more