ಮುಖದ ಹಾಗೂ ಚರ್ಮದ ಮೇಲೆ ಬೀಳುವ ದದ್ದುಗಳಿಗೆ ಮನೆಮದ್ದುಗಳು

Posted By: Hemanth
Subscribe to Boldsky

ಚರ್ಮದ ಆರೈಕೆಯು ಸರಿಯಾಗಿಲ್ಲವೆಂದಾದರೆ ಅಥವಾ ದೇಹದಲ್ಲಿ ಯಾವುದಾದರೂ ವ್ಯತಿರಿಕ್ತ ಪರಿಣಾಮ ಉಂಟಾದರೆ ಆಗ ಅದು ಚರ್ಮದ ಮೇಲೆ ಕಾಣಿಸಿಕೊಳ್ಳುವುದು. ಚರ್ಮದಲ್ಲಿ ಅಲರ್ಜಿ ಮತ್ತು ಉರಿಯೂತದಿಂದಾಗಿ ತುರಿಕೆ, ಚರ್ಮ ಕೆಂಪಾಗುವುದು ಮತ್ತು ಕೆಲವೊಂದು ಸಲ ದೇಹದ ಕೆಲವು ಭಾಗಗಳಲ್ಲಿ ದದ್ದುಗಳು (ರಾಷೆಸ್) ಕಾಣಿಸಿಕೊಳ್ಳಬಹುದು.  ಗುಳ್ಳೆಗಳ ಗಾತ್ರ ಮತ್ತು ಅದು ಎಷ್ಟು ಮಟ್ಟಕ್ಕೆ ಹರಡಿದೆ ಎನ್ನುವುದನ್ನು ನೋಡಿ ಚಿಕಿತ್ಸೆ ನೀಡಲಾಗುತ್ತದೆ. ಗುಳ್ಳೆಗಳು ತೀವ್ರವಾಗಿದ್ದರೆ ಆಗ ಚರ್ಮತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಮಾಡಿಕೊಳ್ಳುವುದು ಅತೀ ಅಗತ್ಯ.

ಕೆಲವು ಚರ್ಮದ ದದ್ದುಗಳು ತುಂಬಾ ಸಹಜ ಮತ್ತು ಇದು ಅಲರ್ಜಿಯಿಂದ ಬರುವುದು. ಬಿಸಿಲಿಗೆ ಮೈಯೊಡ್ಡುವುದು, ಇಸುಬಿನಿಂದ ಚರ್ಮದಲ್ಲಿ ಗುಳ್ಳೆಗಳು ಬರಬಹುದು. ಚರ್ಮದಲ್ಲಿನ ಗುಳ್ಳೆಗಳನ್ನು ಹಾಗೆ ಬಿಟ್ಟರೆ ಅದರಿಂದ ಸಮಸ್ಯೆ ಖಚಿತ. ಇದಕ್ಕೆ ಮಾರುಕಟ್ಟೆಯಲ್ಲಿ ಕೆಲವು ಕ್ರೀಮ್ ಗಳು ಲಭ್ಯವಿದೆ. ಆದರೆ ಇದು ರಾಸಾಯನಿಕಗಳಿಂದ ಕೂಡಿದೆ. ಉರಿಯೂತ ಶಮನಕಾರಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿರುವ ಕೆಲವು ಮನೆಮದ್ದಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ಚರ್ಮದ ಗುಳ್ಳೆಗಳನ್ನು ತಡೆದು ಅದು ಹರಡದಂತೆ ಮಾಡುವುದು. ತುರಿಕೆ, ಉರಿಯೂತ ಮತ್ತು ಚರ್ಮ ಕೆಂಪಾಗುವ ಸಮಸ್ಯೆಗೂ ಇದು ಒಳ್ಳೆಯದು. ಚರ್ಮದ ಆರೋಗ್ಯ ಕಾಪಾಡಲು ಮುಂದೆ ಓದಿಕೊಳ್ಳಿ....

ರೋಸ್ ವಾಟರ್

ರೋಸ್ ವಾಟರ್

ಚರ್ಮದ ಗುಳ್ಳೆಗಳಿಗೆ ರೋಸ್ ವಾಟರ್ ತುಂಬಾ ಪರಿಣಾಮಕಾರಿ ಎಂದು ಹಿಂದಿನಿಂದಲೂ ಪರಿಗಣಿಸಲಾಗಿದೆ. ಬಾಧಿತ ಪ್ರದೇಶಕ್ಕೆ ರೋಸ್ ವಾಟರ್ ಹಚ್ಚಿಕೊಂಡು ಸುಮಾರು 15-20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.

ಓಟ್ ಮೀಲ್

ಓಟ್ ಮೀಲ್

ಚರ್ಮದಲ್ಲಿನ ಗುಳ್ಳೆಯ ಉರಿಯೂತ ಕಡಿಮೆ ಮಾಡಿ ಶಮನ ನೀಡುವಲ್ಲಿ ಓಟ್ ಮೀಲ್ ಪರಿಣಾಮಕಾರಿ. ಬಾಧಿತ ಪ್ರದೇಶಕ್ಕೆ ಓಟ್ ಮೀಲ್ ಹಚ್ಚಿಕೊಳ್ಳಿ ಮತ್ತು ಹತ್ತು ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆಯಿರಿ.

ಆಲಿವ್ ತೈಲ

ಆಲಿವ್ ತೈಲ

ಆಲಿವ್ ತೈಲದಲ್ಲಿ ಇರುವಂತಹ ಪೋಷಣೆ ನೀಡುವಂತಹ ಗುಣವು ಚರ್ಮದ ಗುಳ್ಳೆ ಸಮಸ್ಯೆ ನಿವಾರಣೆಗೆ ತುಂಬಾ ಪರಿಣಾಮಕಾರಿ ಮನೆಮದ್ದು. ಸ್ವಲ್ಪ ಆಲಿವ್ ತೈಲವನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಐಸ್ ಕ್ಯೂಬ್

ಐಸ್ ಕ್ಯೂಬ್

ಕೆಲವೊಂದು ಚರ್ಮದ ಸಮಸ್ಯೆಗಳಿಗೆ ತಂಪು ಚಿಕಿತ್ಸೆ ಪರಿಣಾಮಕಾರಿ. ಇದು ಕಿರಿಕಿರಿ ತಪ್ಪಿಸುವುದು ಮಾತ್ರವಲ್ಲದೆ ಉರಿಯೂತ ಮತ್ತು ಚರ್ಮ ಕೆಂಪಾಗುವುದನ್ನು ತಡೆಯುವುದು. ಒಂದು ಸ್ವಚ್ಛ ಬಟ್ಟೆಯಲ್ಲಿ ಐಸ್ ಕ್ಯೂಬ್ ಹಾಕಿಕೊಂಡು ಬಾಧಿತ ಪ್ರದೇಶಕ್ಕೆ ಹಚ್ಚಿ. ಗುಳ್ಳೆಗಳಿಂದ ಮುಕ್ತಿ ಪಡೆಯಲು ದಿನದಲ್ಲಿ ಹಲವಾರು ಸಲ ಇದನ್ನು ಪ್ರಯತ್ನಿಸಿ.

ಕ್ಯಾಮೊಮೈಲ್ ಚಹಾ

ಕ್ಯಾಮೊಮೈಲ್ ಚಹಾ

ಚರ್ಮದ ಕೆಲವು ಸಮಸ್ಯೆಗಳಿಗೆ ಕ್ಯಾಮೊಮೈಲ್ ಚಹಾವು ತುಂಬಾ ಪರಿಣಾಮಕಾರಿ ಮದ್ದು. ಈ ಗಿಡಮೂಲಿಕೆಯ ಮದ್ದು ತುರಿಕೆ ಮತ್ತು ಉರಿಯೂತದಿಂದ ಶಮನ ನೀಡುವುದು. ಕ್ಯಾಮೊಮೈಲ್ ಚಹಾದ ಬ್ಯಾಗ್ ನ್ನು ಕುದಿಸಿ ತಣ್ಣಗೆ ಮಾಡಿ ಬಾಧಿತ ಪ್ರದೇಶದ ಮೇಲಿಡಿ.

ಅಲೋವೆರಾ ಲೋಳೆ

ಅಲೋವೆರಾ ಲೋಳೆ

ಅಲೋವೆರಾವು ಹಲವಾರು ರೀತಿಯ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಸ್ವರ್ಗದ ಗಿಡವೆಂದರೂ ತಪ್ಪಾಗದು. ತಾಜಾ ಅಲೋವೆರಾ ಲೋಳೆ ತೆಗೆದು ಬಾಧಿತ ಪ್ರದೇಶಕ್ಕೆ ಹಚ್ಚಿಕೊಂಡು 20-25 ನಿಮಿಷ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ಚರ್ಮವನ್ನು ತೊಳೆಯಿರಿ.

ಮಜ್ಜಿಗೆ

ಮಜ್ಜಿಗೆ

ಅಲರ್ಜಿಯಿಂದ ಉಂಟಾಗಿರುವ ಚರ್ಮದ ಗುಳ್ಳೆಗಳಿಗೆ ಮಜ್ಜಿಗೆ ತುಂಬಾ ಪರಿಣಾಮಕಾರಿ. ತಾಜಾ ಮಜ್ಜಿಗೆಯನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣಗಿನ ನೀರಿನಿಂದ ಚರ್ಮವನ್ನು ತೊಳೆಯಿರಿ.

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಇರುವಂತಹ ನಂಜುನಿರೋಧಕ ಗುಣವು ಚರ್ಮದ ಗುಳ್ಳೆ ಮತ್ತು ಇತರ ಕಿರಿಕಿರಿ ಉಂಟು ಮಾಡುವ ಸಮಸ್ಯೆ ನಿವಾರಿಸುವುದು. ಭಟ್ಟಿ ಇಳಿಸಿದ ನೀರಿನೊಂದಿಗೆ ಆ್ಯಪಲ್ ಸೀಡರ್ ವಿನೇಗರ್ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣದಲ್ಲಿ ಒಂದು ಹತ್ತಿ ಉಂಡೆ ಅದ್ದಿಕೊಳ್ಳಿ ಮತ್ತು ಬಾಧಿತ ಪ್ರದೇಶಕ್ಕೆ ಇದನ್ನು ಹಚ್ಚಿ. 5-10 ನಿಮಿಷ ಬಳಿಕ ತಣ್ಣೀರಿನಿಂದ ಚರ್ಮ ತೊಳೆಯಿರಿ.

ತುಳಸಿ ಎಲೆಗಳು

ತುಳಸಿ ಎಲೆಗಳು

ಚರ್ಮದ ಮೇಲಿನ ಗುಳ್ಳೆಗಳ ನಿವಾರಣೆಗೆ ತುಳಸಿ ಎಲೆಗಳು ತುಂಬಾ ಪರಿಣಾಮಕಾರಿ. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮದ ಸಮಸ್ಯೆಗಳನ್ನು ನಿವಾರಿಸುವುದು. ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಜಜ್ಜಿ ಅದಕ್ಕೆ ಸ್ವಲ್ಪ ನೀರು ಹಾಕಿ. ಈ ಪೇಸ್ಟ್ ನ್ನು ಬಾಧಿತ ಪ್ರದೇಶಕ್ಕೆ ಹಚ್ಚಿ. 15 ನಿಮಿಷ ಬಳಿಕ ತಣ್ಣೀರಿನಿಂದ ತೊಳೆಯಿರಿ.

English summary

Best Remedies To Get Relief From Skin Rashes

One skin problem that can cause a great deal of discomfort is a skin rash. A majority of these rashes are caused by allergens and can be characterized by inflamed, itchy and red skin. This type of rash can occur on any part of your body. And, its treatment would depend on the severity of the symptoms. In case of a severe reaction, it is highly recommended to consult a dermatologist to know about the underlying cause.