For Quick Alerts
ALLOW NOTIFICATIONS  
For Daily Alerts

ಕಾಲುಗಳ ಅಂದ-ಚೆಂದ ಹೆಚ್ಚಿಸುವ ಮನೆಯಲ್ಲಿಯೇ ಮಾಡಿದ ಸ್ಕ್ರಬ್‌ಗಳು

|

ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಲವಾರು ರೀತಿಯ ಸರ್ಕಸ್ ಮಾಡಬೇಕಾಗುತ್ತದೆ. ಆದರೆ ಕೆಲವೊಂದು ಸಲ ಆರೈಕೆ ಅತಿಯಾದರೆ ಅದರಿಂದ ಅಡ್ಡಪರಿಣಾಮವು ಉಂಟಾಗಬಹುದು. ಕೆಲವರಿಗೆ ಮೈಕಾಂತಿ ಚೆನ್ನಾಗಿರಬೇಕೆಂಬ ಆಸೆಯಿರುವುದು. ರೇಷ್ಮೆಯಂತೆ ಹೊಳೆಯುವ ಮತ್ತು ನಯವಾದ ತ್ವಚೆಯು ನಿಮಗೆ ಬೇಕಿದ್ದರೆ ಆಗ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ, ಹೊಸ ಕೋಶಗಳು ಬೆಳೆಯುವಂತೆ ಮಾಡಬೇಕು. ಇದನ್ನು ಸುಲಿತ(ಎಕ್ಸ್ಫಾಲಿಯೇಶನ್) ಎಂದು ಕರೆಯಲಾಗುವುದು. ಇದು ರಕ್ತಸಂಚಾರವನ್ನು ಉತ್ತಮಪಡಿಸಿ, ಚರ್ಮ ಬಿಳಿಯಾಗಿಸುವುದು.

ಹೆಚ್ಚಾಗಿ ಮುಖ ಹಾಗೂ ಕೈಗಳಿಗೆ ನಾವು ಹೀಗೆ ಮಾಡುತ್ತೇವೆ. ಆದರೆ ಕಾಲುಗಳನ್ನು ಮಾತ್ರ ಕಡೆಗಣಿಸುತ್ತೇವೆ. ಅದರಲ್ಲೂ ಮಹಿಳೆಯರು ಸ್ಕರ್ಟ್ ಅಥವಾ ಸಣ್ಣ ಬಟ್ಟೆ ಧರಿಸುವ ತನಕ ಕಾಲುಗಳ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಕಾಲುಗಳಿಗೆ ಕೂಡ ಸರಿಯಾದ ಆರೈಕೆ ಬೇಕು ಮತ್ತು ಎಕ್ಸ್ಫಾಲಿಯೇಷನ್ ನಿಂದಾಗಿ ತುಂಬಾ ನಯವಾಗಿ ಕಾಣಬಹುದು. ಈ ಲೇಖನದಲ್ಲಿ ಕಾಲುಗಳಿಗಾಗಿ ಎರಡು ಸರಳ ಸ್ಕ್ರಬ್ ಗಳನ್ನು ಹೇಳಿಕೊಡಲಿದ್ದೇವೆ. ಇದರಲ್ಲಿ ಪ್ರಮುಖವಾಗಿ ಉಪ್ಪು ಮತ್ತು ಸಕ್ಕರೆ ಸ್ಕ್ರಬ್. ಇದರ ತಯಾರಿ ಮತ್ತು ಬಳಸುವುದನ್ನು ತಿಳಿಯಿರಿ.

ಸಕ್ಕರೆ ಸ್ಕ್ರಬ್

ಸಕ್ಕರೆ ಸ್ಕ್ರಬ್

ಬೇಕಾಗುವ ಸಾಮಗ್ರಿಗಳು

  • 1/2 ಕಪ್ ಸಕ್ಕರೆ
  • 1/4 ಕಪ್ ಆಲಿವ್ ತೈಲ
  • ಕೆಲವು ಹನಿ ಸಾರಭೂತ ತೈಲ(ಆಯ್ಕೆಗೆ ಬಿಟ್ಟದ್ದು)

ತಯಾರಿಸುವ ವಿಧಾನ

*ಒಂದು ಸ್ವಚ್ಛವಾಗಿರುವ ಪಿಂಗಾಣಿಯಲ್ಲಿ ಸಕ್ಕರೆ ಮತ್ತು ಆಲಿವ್ ತೈಲ ಹಾಕಿ.

*ಕೆಲವು ಹನಿ ಸಾರಭೂತ ತೈಲವನ್ನು ಹಾಕಿ,

*ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಸ್ಕ್ರಬ್ ಮಾಡಿ.

*ಇದನ್ನು ಮುಚ್ಚಳ ಬಿಗಿಯಾಗಿರುವಂತಹ ಡಬ್ಬದಲ್ಲಿ ಹಾಕಿಕೊಂಡು, ನಿಮಗೆ ಬೇಕಾದಾಗ ಬಳಸಬಹುದು.

*ಸ್ವಲ್ಪ ಸ್ಕ್ರಬ್ ತೆಗೆದುಕೊಂಡು ಅದನ್ನು ಕಾಲುಗಳಿಗೆ 4-5 ನಿಮಿಷ ಕಾಲ ಸ್ಕ್ರಬ್ ಮಾಡಿ.

*15 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆಯಿರಿ.

*ವಾರದಲ್ಲಿ ಒಂದು ಸಲ ಇದನ್ನು ಬಳಸಿ.

Most Read: ಈ 4 ರಾಶಿಚಕ್ರದವರು ನಾಯಕತ್ವ ಗುಣದಲ್ಲಿ ಎತ್ತಿದ ಕೈ!

ಸಕ್ಕರೆ ಲಾಭಗಳು

ಸಕ್ಕರೆ ಲಾಭಗಳು

ಸಕ್ಕರೆಯು ಒಣ, ಎದ್ದುಬಂದಿರುವ ಚರ್ಮವನ್ನು ತೆಗೆಯುವುದು ಮತ್ತು ಚರ್ಮವು ನಯವಾಗುವುದು. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದು ಚರ್ಮವು ಹೊಳೆಯುವಂತೆ ಮಾಡುವುದು. ಸಕ್ಕರೆಯು ಚರ್ಮಕ್ಕೆ ತೇವಾಂಶ ಮತ್ತು ಮೊಶ್ಚಿರೈಸ್ ಮಾಡುವುದು. ಗ್ಲೈಕೊಸಿಕ್ ಆಮ್ಲವು ಬಿಸಿಲಿನಿಂದ ಆಗಿರುವ ಹಾನಿ ತಡೆಯುವುದು ಮತ್ತು ಕಾಂತಿಯುತ ತ್ವಚೆ ನೀಡುವುದು. ನಿಯಮಿತವಾಗಿ ಬಳಸಿದರೆ ಚರ್ಮದ ರಂಧ್ರದೊಳಗೆ ಬೆಳೆಯುವ ಕೂದಲು ಮತ್ತು ಬೊಕ್ಕೆ ನಿವಾರಿಸುವುದು.

ಆಲಿವ್ ತೈಲ

ಆಲಿವ್ ತೈಲ

ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಇ ಹೊಂದಿರುವಂತಹ ಆಲಿವ್ ತೈಲವು ಚರ್ಮಕ್ಕೆ ಮೃಧುತ್ವ ನೀಡುವುದು. ಬಿಸಿಲಿನಲ್ಲಿರುವಂತಹ ಹಾನಿಕಾರಕವಾದ ಯುವಿ ಕಿರಣಗಳಿಂದ ಇದು ರಕ್ಷಿಸುವುದು. ಫ್ರೀ ರ್ಯಾಡಿಕಲ್ ನಿಂದಾಗಿ ಆಗುವ ಹಾನಿ ತಪ್ಪಿಸುವುದು. ಈ ಗುಣದಿಂದಾಗಿಯೇ ಹೆಚ್ಚಿನ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಇದನ್ನು ಬಳಸುವರು. ಸಕ್ಕರೆ ಜತೆ ಬಳಸಿದಾಗ ಇದು ಅದ್ಭುತವಾದ ಫಲಿತಾಂಶ ನೀಡುವುದು.

ಉಪ್ಪಿನ ಸ್ಕ್ರಬ್

ಉಪ್ಪಿನ ಸ್ಕ್ರಬ್

ಬೇಕಾಗುವ ಸಾಮಗ್ರಿಗಳು

*1 ಕಪ್ ಉಪ್ಪು

*1/2 ಕಪ್ ತೆಂಗಿನೆಣ್ಣೆ

*4 ಚಮಚ ಲಿಂಬೆರಸ

ಕೆಲವು ಹನಿ ಸಾರಭೂತ ತೈಲ(ಆಯ್ಕೆಗೆ ಬಿಟ್ಟದ್ದು)

ತಯಾರಿಸುವ ವಿಧಾನ

*ಉಪ್ಪು, ತೆಂಗಿನೆಣ್ಣೆ, ಲಿಂಬೆರಸ ಮತ್ತು ಕೆಲವು ಹನಿ ಸಾರಭೂತ ತೈಲವನ್ನು ಸ್ವಚ್ಛವಾಗಿರುವ ಸಣ್ಣ ಪಾತ್ರೆಗೆ ಹಾಕಿ.

*ಈ ಸ್ಕ್ರಬ್ ನ್ನು ಬಳಸಿಕೊಂಡು ಕೆಲವು ನಿಮಿಷ ಕಾಲ ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿ.

*ಸ್ನಾನ ಮಾಡುವ ವೇಳೆ ನೀವು ಹೀಗೆ ಮಾಡಿ.

*ನಯ ಹಾಗೂ ಕಾಂತಿಯುತ ಚರ್ಮ ಪಡೆಯಲು ನೀವು ಇಡೀ ದೇಹಕ್ಕೆ ಸ್ಕ್ರಬ್ ಮಾಡಬಹುದು.

*ತೆಂಗಿನೆಣ್ಣೆ ಗಟ್ಟಿಯಾಗಿದ್ದರೆ ಸ್ವಲ್ಪ ಬಿಸಿ ಮಾಡಿ ಕರಗಿಸಿ.

*ಗಾಜಿನ ಜಾರ್ ನಲ್ಲಿ ಇದನ್ನು ಹಾಕಿಡಬಹುದು ಮತ್ತು ಬಳಸಿಕೊಳ್ಳಬಹುದು.

ಉಪ್ಪಿನ ಲಾಭಗಳು

ಉಪ್ಪಿನ ಲಾಭಗಳು

ಉಪ್ಪಿನಲ್ಲಿ ಇರುವಂತಹ ಶಮನಕಾರಿ ಗುಣವು ತುರಿಕೆ ಮತ್ತು ಒಣ ಚರ್ಮವನ್ನು ನಿವಾರಿಸುವುದು. ರಕ್ತ ಸಂಚಾರವನ್ನು ಉತ್ತಮಪಡಿಸಿ, ಚರ್ಮವು ಹೊಳೆಯುವಂತೆ ಹಾಗೂ ಆರೋಗ್ಯವಾಗಿರುವಂತೆ ಮಾಡುವುದು. ಚರ್ಮದ ರಂಧ್ರಗಳನ್ನು ಆಳವಾಗಿ ಸ್ವಚ್ಛಗೊಳಿಸುವುದು ಮತ್ತು ಚರ್ಮವನ್ನು ನಿರ್ವಿಷಗೊಳಿಸುವುದು. ಚರ್ಮದಲ್ಲಿ ಅತಿಯಾಗಿರುವ ಎಣ್ಣೆಯಂಶ ತೆಗೆಯುವುದು. ಇದರಿಂದ ನಯವಾದ ತ್ವಚೆ ನಿಮ್ಮದಾಗುವುದು.

ತೆಂಗಿನೆಣ್ಣೆಯ ಲಾಭಗಳು

ತೆಂಗಿನೆಣ್ಣೆಯ ಲಾಭಗಳು

ತೆಂಗಿನೆಣ್ಣೆಯು ಚರ್ಮಕ್ಕೆ ತೇವಾಂಶ ನೀಡುವ ಗುಣ ಹೊಂದಿದೆ. ಇದು ಚರ್ಮವನ್ನು ಮೊಶ್ಚಿರೈಸ್ ಆಗಿ ಇಡುವುದು ಮಾತ್ರವಲ್ಲದೆ ಒಣ ಹಾಗೂ ಕಿತ್ತುಬರುವ ಚರ್ಮ ನಿವಾರಣೆ ಮಾಡುವುದು. ಸೂಕ್ಷ್ಮಾಣು ವಿರೋಧಿ ಗುಣ ಹೊಂದಿರುವ ತೆಂಗಿನೆಣ್ಣೆಯು ಯಾವುದೇ ರೀತಿಯ ಸೋಂಕು ಬರದಂತೆ ತಡೆಯುವುದು. ನಿಯಮಿತವಾಗಿ ತೆಂಗಿನೆಣ್ಣೆ ಬಳಕೆ ಮಾಡಿದರೆ ಮೃದು ಹಾಗೂ ಆರೋಗ್ಯಕರ ಚರ್ಮ ಪಡೆಯಬಹುದು.

Most Read : ನೆನಪಿಡಿ ಇಂತಹ ತಪ್ಪುಗಳನ್ನು ಎಂದೂ ಮಾಡಬೇಡಿ- 'ಪಿತೃ ದೋಷ' ಬರಬಹುದು!

ಲಿಂಬೆರಸದ ಲಾಭಗಳು

ಲಿಂಬೆರಸದ ಲಾಭಗಳು

ಲಿಂಬೆರಸದಲ್ಲಿ ಇರುವಂತಹ ವಿಟಮಿನ್ ಸಿ ಚರ್ಮವನ್ನು ಬಿಳಿಯಾಗಿಸುವುದು. ಇದರ ಹೊರತಾಗಿ ಚರ್ಮದಲ್ಲಿ ಇರುವ ಅತಿಯಾದ ಎಣ್ಣೆಯಂಶ ತೆಗೆದುಹಾಕುವುದು. ಚರ್ಮದಲ್ಲಿ ಕಲೆಗಳು ಇದ್ದರೆ ಲಿಂಬೆರಸವು ಇದನ್ನು ತೆಗೆಯುವುದು. ಲಿಂಬೆರಸ ಬಳಸಿದ ಕೂಡಲೇ ನೀವು ಬಿಸಿಲಿಗೆ ಹೋಗಬೇಡಿ. ಇದರಿಂದ ಚರ್ಮಕ್ಕೆ ಹಾನಿಯಾಗಬಹುದು.

English summary

2 Amazing Scrubs That Will Give You Smooth Legs Instantly

Exfoliation helps in removing the dead skin cells and restoring the new cells. This will improve the blood circulation and help in brightening the skin. Legs too need proper pampering and regular exfoliation to look smooth. You can easily make natural scrubs for the same. The two main scrubs are salt and sugar scrub.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more