For Quick Alerts
ALLOW NOTIFICATIONS  
For Daily Alerts

ಬೆರಳಿನಲ್ಲಿ ಮೂಡಿರುವ ಉಂಗುರದ ಗುರುತಿನ ನಿವಾರಣೆ ಹೇಗೆ?

By Arshad
|

ನಮ್ಮ ಹಸ್ತದ ನಾಲ್ಕನೆಯ (ಹೆಬ್ಬೆಟ್ಟಿನಿಂದ ಪ್ರಾಂಭಿಸಿದರೆ) ಬೆರಳಿಗೆ ಉಂಗುರ ಬೆರಳು ಎಂದೇ ಕರೆಯುತ್ತಾರೆ. ಏಕೆ ಹೀಗೆ ಎಂದರೆ ಈ ಬೆರಳಿನಿಂದ ಪ್ರಾರಂಭವಾದ ನರ ನೇರವಾಗಿ ಹೃದಯಕ್ಕೇ ಹೋಗುತ್ತದಂತೆ. ಹಾಗಾದರೆ ಉಳಿದ ಬೆರಳುಗಳಲ್ಲಿರುವ ನರಗಳು ಎಲ್ಲಿ ಹೋಗುತ್ತವೆ? ನಗು ಬರಿಸುವ ಈ ಕುಹಕಪ್ರಶ್ನೆಗೆ ಉತ್ತರ ಪಡೆಯುವ ಬದಲು ಈ ನಂಬಿಕೆಯಿಂದ ಸತತವಾಗಿ ಒಂದೇ ಬೆರಳಿಗೆ ಉಂಗುರ ಧರಿಸಿ ಉಂಗುರವಿದ್ದ ಸ್ಥಳ ಹೆಚ್ಚೂ ಕಡಿಮೆ ಬಿಳಿಚಿಕೊಂಡಿರುವುದನ್ನು ಗಮನಿಸಿ.

ಸಾಮಾನ್ಯವಾಗಿ ಹೆಚ್ಚಿನವರು ತಮ್ಮ ವಿವಾಹದ ಕುರುಹಾಗಿ ಈ ಉಂಗುರವನ್ನು ಯಾವತ್ತೂ ತೆಗೆಯದೇ ಇರುವ ಕಾರಣ ಹೆಚ್ಚೂ ಕಡಿಮೆ ಈ ಕಲೆ ಅಥವಾ ಬದಲಾದ ಚರ್ಮದ ಬಣ್ಣ ಶಾಶ್ವತವಾಗಿಬಿಡುತ್ತದೆ. ಉಂಗುರದ ಗುರುತು ಶಾಶ್ವತವಾಗುವ ಮುನ್ನವೇ ಸೂಕ್ತ ಕ್ರಮ ಕೈಗೊಂಡರೆ ಈ ಭಾಗವೂ ಬೆರಳಿನ ಉಳಿದ ಭಾಗದಂತಹ ಬಣ್ಣ ಪಡೆದು ಸಹಜ ಸೌಂದರ್ಯ ಉಳಿಯುತ್ತದೆ. ಆದ್ದರಿಂದ ಎಷ್ಟು ಮೊದಲು ಈ ಕ್ರಮಗಳನ್ನು ಅನುಸರಿಸುತ್ತೇವೋ ಅಷ್ಟೂ ಒಳ್ಳೆಯದು. ಇದಕ್ಕೆ ಹೆಚ್ಚೇನೂ ಕಷ್ಟಪಡಬೇಕಾಗಿಲ್ಲ.

ಮನೆಯಲ್ಲಿಯೇ ಲಭ್ಯವಿರುವ ಸುಲಭ ಸಾಮಾಗ್ರಿ ಹಾಗೂ ಕೊಂಚವೇ ನಮ್ಮ ಅಭ್ಯಾಸಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ಗುರುತು ಶಾಶ್ವತವಾಗದಂತೆ ನೋಡಿಕೊಳ್ಳಬಹುದು. ಕೆಲವೊಮ್ಮೆ ಈ ಬಣ್ಣ ಶಾಶ್ವತವಾಗಿದ್ದು ನಮಗೆ ಇದರ ಅರಿವೇ ಇರುವುದಿಲ್ಲ. ಆಗ ಅನಿವಾರ್ಯವಾಗಿ ಉಂಗುರವನ್ನು ಬೇರೆ ಬೆರಳಿಗೆ ಅಥವಾ ಇನ್ನೊಂದು ಕೈಯ ಉಂಗುರ ಬೆರಳಿಗೆ ಬದಲಾಯಿಸಬೇಕಾಗಿ ಬರಬಹುದು.

ಒಂದು ವೇಳೆ ಈ ಭಾಗದ ಚರ್ಮ ಪರೆ ಎದ್ದಂತೆ ಎದ್ದು ಬರುತ್ತಿದ್ದರೆ, ಅಥವಾ ಈ ಭಾಗದಲ್ಲಿ ಮರದ ಚೆಕ್ಕೆಯಂತೆ ಒರಟಾಗಿ ಹೋಗಿದ್ದರೆ ಮಾತ್ರ ಚರ್ಮವೈದ್ಯರನ್ನು ಕಾಣುವುದು ಅನಿವಾರ್ಯ. ಯಾವುದಕ್ಕೂ ಕೆಳಗಿನ ಸ್ಲೈಡ್ ಶೋನಲ್ಲಿ ನೀಡಲಾಗಿರುವ ಸುಲಭ ವಿಧಾನಗಳನ್ನು ಅನುಸರಿಸಿ ನೋಡಿ, ಫಲಕಾರಿ ಎಂದು ಕಂಡುಬಂದರೆ ಕೆಲವು ಕಾಲ ಮುಂದುವರೆಸಿ ಈ ಬಿಳಿಚಿದ ಭಾಗ ಮತ್ತೊಮ್ಮೆ ಸಹಜವರ್ಣ ಪಡೆಯುವಂತೆ ಮಾಡಬಹುದು...

ಸತ್ತ ಜೀವಕೋಶಗಳನ್ನು ನಿವಾರಿಸಿ (Exfoliation)

ಸತ್ತ ಜೀವಕೋಶಗಳನ್ನು ನಿವಾರಿಸಿ (Exfoliation)

ಸಾಮಾನ್ಯವಾಗಿ ಸ್ನಾನ ಅಥವಾ ಕೈ ತೊಳೆಯುವಾಗಲೂ ಉಂಗುರವನ್ನು ಕಳಚದೇ ಇದ್ದರೆ ಉಂಗುರದ ಅಡಿಭಾಗದಲ್ಲಿ ಕೊಳೆ ತುಂಬಿಕೊಳ್ಳುವುದು ಹಾಗೂ ಅಲ್ಲಿನ ಸತ್ತ ಜೀವಕೋಶಗಳಿಗೆ ಹೊರಹೋಗಲು ದಾರಿಯೇ ಇಲ್ಲದೇ ಅಲ್ಲಿಯೇ ಗಟ್ಟಿಯಾಗಿಬಿಡುತ್ತದೆ. ಈ ಜೀವಕೋಶಗಳು ಚರ್ಮದ ಬಣ್ಣವನ್ನು ಗಾಢವಾಗಿಸಿ ಹೆಚ್ಚೂ ಕಡಿಮೆ ಒಂದು ಹೆಚ್ಚುವರಿ ಪದರದಂತೆ ಅಂಟಿಕೊಂಡಿರುತ್ತದೆ. ಉಂಗುರ ತಗೆದಾಗ ಅಸಹ್ಯಕರವಾಗಿ ಕಾಣುತ್ತದೆ. ಆದ್ದರಿಂದ ಈ ಭಾಗದ ಸತ್ತ ಜೀವಕೋಶಗಳನ್ನು ನಿವಾರಿಸುವುದು ಅಗತ್ಯ. ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಬೆರಳನ್ನು ಕೊಂಚ ಹೊತ್ತು ಮುಳುಗಿಸಿಟ್ಟು ಬಳಿಕ ಒರಟು ಬ್ರಶ್ ನಿಂದ ಒರೆಸಿ ಈ ಪದರವನ್ನು ಹಂತಹಂತವಾಗಿ ನಿವಾರಿಸಬಹುದು.

ಸನ್ ಸ್ಕ್ರೀನ್ ಸಹಾ ಸೂಕ್ತವಾಗಿದೆ

ಸನ್ ಸ್ಕ್ರೀನ್ ಸಹಾ ಸೂಕ್ತವಾಗಿದೆ

ಉಂಗುರದ ಭಾಗ ಬಿಳಿಚಿಕೊಂಡಿರಲು ಸೂರ್ಯನ ಬೆಳಕು ಪ್ರಧಾನ ಪಾತ್ರ ವಹಿಸುತ್ತದೆ. ಅಂದರೆ ಬಿಸಿಲಿಗೆ ಬಿದ್ದ ಚರ್ಮ ಕೊಂಚ ದಟ್ಟವಾಗುತ್ತಾ ಹೋದರೆ ಉಂಗುರದ ಅಡಿಯ ಚರ್ಮಕ್ಕೆ ಬಿಸಿಲು ಸಿಗದೇ ಇರುವ ಕಾರಣ ಬಿಳಿಚಿಕೊಂಡೇ ಇರುತ್ತದೆ. ಇದನ್ನು ತಡೆಯಲು ಬಿಸಿಲಿಗೆ ಹೋಗುವಾಗ ಸನ್ ಸ್ಕ್ರೀನ್ ಲೇಪನವನ್ನು ಕೈಗಳಿಗೂ ಹಚ್ಚಿಕೊಂಡು ಹೋದರೆ ದಟ್ಟವಾಗಲು ಸಾಧ್ಯವಾಗುವುದಿಲ್ಲ.

ಮನೆಮದ್ದು

ಮನೆಮದ್ದು

ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ಲಿಂಬೆಯ ರಸವನ್ನು ಹಿಂಡಿ ಇದಕ್ಕೆ ಒಂದು ದೊಡ್ಡ ಚಮಚ ಜೇನು ಸೇರಿಸಿ ಕದಡಿ. ಈ ಮಿಶ್ರಣವನ್ನು ಒಂದು ಹತ್ತಿಯುಂಡೆಯ ಮೂಲಕ ದಪ್ಪನಾಗಿ ಚರ್ಮದ ಬಣ್ಣ ಬದಲಾಗಿದ್ದೆಡೆ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆ ಮೂರು ಸಲ ಅನುಸರಿಸುವ ಮೂಲಕ ಕಠಿಣಕರ ಎಂದೆನ್ನಿಸುವ ಭಾಗವೂ ನಿಧಾನವಾಗಿ ಸಹಜವರ್ಣ ಪಡೆಯುತ್ತದೆ. ಅಲ್ಲದೇ ಈ ವಿಧಾನದಿಂದ ಬೆರಳುಗಳೂ ಸೌಮ್ಯ ಮತ್ತು ಸುಂದರವಾಗಿ ಕಾಣುತ್ತವೆ.

ಗಿಡಮೂಲಿಕೆಗಳ ಆರೈಕೆ

ಗಿಡಮೂಲಿಕೆಗಳ ಆರೈಕೆ

ಈ ಭಾಗದ ವರ್ಣವನ್ನು ಸಹಜವರ್ಣಕ್ಕೆ ತಿರುಗಿಸಲು ಲೋಳೆಸರ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಈಗತಾನೇ ಹಿಂಡಿದ ಲೋಳೆಸರದ ರಸವನ್ನು ಹಚ್ಚಿಕೊಂಡು ಉಂಗುರವನ್ನು ಧರಿಸಿ ಆಗಾಗ ತಿರುಗಿಸುತ್ತಾ ಇರಿ. ಕನಿಷ್ಠ ದಿನಕ್ಕೆ ಮೂರು ಬಾರಿಯಾದರೂ ತಿರುಗಿಸಬೇಕು. ಇದರಿಂದ ಗಾಢವಾಗಿದ್ದ ಅಥವಾ ಬಿಳಿಚಿದ್ದ ಭಾಗ ನಿಧಾನವಾಗಿ ಸಹಜವರ್ಣ ಪಡೆಯುತ್ತದೆ.

ಮ್ಯಾನಿಕ್ಯೂರ್

ಮ್ಯಾನಿಕ್ಯೂರ್

ಉಗುರುಗಳಿಗೆ ಆರೈಕೆ ನೀಡುವ ಸೌಂದರ್ಯವಿಧಾನವಾದ ಮ್ಯಾನಿಕ್ಯೂರ್ ಸಹಾ ಉಂಗುರದ ಕಲೆಯನ್ನು ನಿವಾರಿಸಲು ಸಮರ್ಥವಾಗಿದೆ. ಇದಕ್ಕಾಗಿ ವೃತ್ತಿಪರ ಮ್ಯಾನಿಕ್ಯೂರ್ ತಜ್ಞರನ್ನು ಭೇಟಿಯಾಗಿ. ಬಣ್ಣ ಗಮನಾರ್ಹವಾಗಿ ಬದಲಾವಣೆಯಾಗಲು ತಿಂಗಳಿಗೆ ಕನಿಷ್ಟ ಎರಡು ಬಾರಿಯಾದರೂ ಭೇಟಿ ನೀಡಬೇಕು.

ಬೇರೆ ಬೆರಳಿಗೆ ತೊಡಿ

ಬೇರೆ ಬೆರಳಿಗೆ ತೊಡಿ

ಒಂದು ವೇಳೆ ಬದಲಾದ ಬಣ್ಣ ಬಹಳವಾಗಿಯೇ ಎದ್ದು ಕಾಣುತ್ತಿದ್ದರೆ ಇದಕ್ಕೆ ಅನಿವಾರ್ಯವಾಗಿ ಉಂಗುರವನ್ನು ಬೇರೆ ಬೆರಳಿಗೆ ಅಥವಾ ಇನ್ನೊಂದು ಕೈಗೆ ಬದಲಾಯಿಸುವುದೇ ಸೂಕ್ತ ಕ್ರಮ. ಬಹುಕಾಲ ತೆಗೆಯದೇ ಇದ್ದ ಉಂಗುರವನ್ನು ಬೆರಳ ಗಂಟಿನಿಂದ ಹೊರತೆಗೆಯುವುದು ಕಷ್ಟವಾದರೆ ನಿಮ್ಮ ಆಯ್ಕೆಯ ಅಕ್ಕಸಾಲಿಗರ ಬಳಿ ತೆರಳಿ ಅವರಲ್ಲಿರುವ ಉಪಕರಣದಿಂದ ತೆಗೆಸಿಕೊಳ್ಳಬಹುದು. ಉಂಗುರ ಇಲ್ಲದೇ ಬಿಸಿಲಿಗೆ ಒಡ್ಡಿದ ಬಳಿಕ ನಿಧಾನವಾಗಿ ಈ ಭಾಗವೂ ಸಹಜವರ್ಣ ಪಡೆಯುತ್ತಾ ಹೋಗುತ್ತದೆ.

English summary

Tips To Get Rid Of Ring Mark On Finger

Wearing rings for a prolonged period of time can cause ugly and unwanted marks around your fingers. If ignored, these marks can become permanent. Therefore, it is best to treat the mark on the finger at the earliest. There are a handful of home remedies that you can try to get rid of this ugly-looking mark. Take a look at some of these simple body care tips to help get rid of the ring mark on your finger:
X
Desktop Bottom Promotion