For Quick Alerts
ALLOW NOTIFICATIONS  
For Daily Alerts

ಸುಗಂಧ ದ್ರವ್ಯ ಇಲ್ಲದೇ ದೇಹದ ದುರ್ವಾಸನೆಯನ್ನು ತಡೆಯಬಹುದೇ?

|

ಡಿಯೊಡರೆಂಟ್ (ಸುಗಂಧ ದ್ರವ್ಯ) ಇಲ್ಲದೆ ದುರ್ವಾಸನೆಯನ್ನು ತಡೆಯುವುದು ಹೇಗೆ ಎಂಬ ಕುರಿತು ನಿಮಗೆ ಅಚ್ಚರಿಯಾಗುತ್ತಿದೆಯೇ? ಹೌದು ನಿಮ್ಮ ದೇಹದ ದುರ್ಗಂಧವನ್ನು ಸ್ವಾಭಾವಿಕವಾಗಿ ತಡೆಯಬಹುದು. ಸಾಮಾನ್ಯವಾಗಿ ನಾವು ರಾಸಾಯನಿಕಗಳಿಂದ ಮಾಡಿದ ಡಿಯೊಡರೆಂಟ್‌ಗಳ ಮೂಲಕ ನಮ್ಮ ದೇಹದ ದುರ್ಗಂಧವನ್ನು ಮರೆ ಮಾಚುತ್ತಿರುತ್ತೇವೆ. ಆದರೆ ನಾವು ಸೇವಿಸುವ ಆಹಾರವನ್ನು ಬದಲಾಯಿಸಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಹೊರ ಬರಬಹುದು.

ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಸುಗಂಧ ದ್ರವ್ಯಗಳು ರಾಸಾಯನಿಕಗಳಿಂದ ಕೂಡಿದ್ದು, ನಮ್ಮ ದೇಹಕ್ಕೆ ದೀರ್ಘಕಾಲದಲ್ಲಿ ಹಾನಿಯುಂಟು ಮಾಡುತ್ತವೆ. ಹಾಗಾಗಿ ಶುದ್ಧವಾದ ಆಹಾರವನ್ನು ಸೇವಿಸುವ ಮುಲಕ, ದೇಹದ ದುರ್ಗಂಧವನ್ನು ನಿವಾರಿಸಿಕೊಳ್ಳಲು ಮತ್ತು ರಾಸಾಯನಿಕಗಳ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬಹುದು.

ನಮ್ಮಲ್ಲಿ ಬಹುತೇಕರಿಗೆ ತಿಳಿದಿರುವುದಿಲ್ಲ ನಮ್ಮ ದೇಹದ ದುರ್ಗಂಧ ಮತ್ತು ಬಾಯಿಯ ದುರ್ಗಂಧವು, ನಮ್ಮ ಜೀರ್ಣಾಂಗ ವ್ಯೂಹದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದಾಗಿಯೇ ನಾವು ಹೇಳುತ್ತಿರುವುದು ನೀವು ಸರಿಯಾದ ಆಹಾರವನ್ನು ಸೇವಿಸಿದರೆ, ದೇಹದ ದುರ್ಗಂಧದ ಸಮಸ್ಯೆಯಿರುವುದಿಲ್ಲ. ಸರಿಯಾದ ಆಹಾರ ಸೇವನೆಯ ಅಭ್ಯಾಸವನ್ನು ರೂಢಿಸಿಕೊಂಡರೆ, ನಿಮ್ಮ ದೇಹದ ದುರ್ಗಂಧವನ್ನು ದೂರ ಮಾಡಿಕೊಳ್ಳುವುದು ದೊಡ್ಡ ಸಮಸ್ಯೆಯೇ ಅಲ್ಲ. ಬನ್ನಿ ಎಂತಹ ಆಹಾರವನ್ನು ಸೇವಿಸಬೇಕೆಂಬ ಕುರಿತು ನೋಡೋಣ.

https://www.boldsky.com/img/300x225/2015/03/23-1427108866-smellgoodcvr.jpg

ಸ್ವಾಭಾವಿಕ ಆಹಾರಗಳು
ಅತಿ ಹೆಚ್ಚಾಗಿ ತರಕಾರಿಗಳನ್ನು ಸೇವಿಸುವ ಮೂಲಕ ನೀವು ಈ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದು. ಹೆಚ್ಚು ನಾರಿನಂಶವಿರುವ, ಆಂಟಿ-ಆಕ್ಸಿಡೆಂಟ್ ಅಧಿಕವಾಗಿರುವ ಮತ್ತು ವಿವಿಧ ಬಗೆಯ ಕಿಣ್ವಗಳಿಂದ ಕೂಡಿದ ಆಹಾರವನ್ನು ಸೇವಿಸಿ. ಇವುಗಳು ನಿಮ್ಮ ದೇಹವನ್ನು ಆಲ್ಕಾಲೈಸ್ ಮಾಡುತ್ತವೆ ಮತ್ತು ನೀರಿನಂಶವನ್ನು ಒದಗಿಸುತ್ತವೆ. ಜೊತೆಗೆ ನಿಮ್ಮ ದೇಹಕ್ಕೆ ಸ್ವಾಭಾವಿಕವಾಗಿ ಸುಗಂಧವನ್ನು ಒದಗಿಸುತ್ತವೆ. ನಿಮ್ಮ ದೇಹದ ದುರ್ಗಂಧವನ್ನು ಹೋಗಲಾಡಿಸಲು ಇದು ಸಹಾಯವಾಗಲಿದೆ ವಿಪರೀತ ಬೆವರುವ ಸಮಸ್ಯೆಯೇ? ಇಲ್ಲಿದೆ ನೈಸರ್ಗಿಕ ಬಾಡಿ ಸ್ಪ್ರೇಗಳು!

ವಿಟಮಿನ್ ಬಿ
ನಿಮ್ಮ ದೇಹಕ್ಕೆ ಅಗತ್ಯ ಪ್ರಮಾನದಲ್ಲಿ ಮೆಗ್ನಿಷಿಯಂ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ನೀಡುವ ಮೂಲಕ ದೇಹದ ದುರ್ಗಂಧವನ್ನು ನಿವಾರಿಸಿಕೊಳ್ಳಬಹುದು.

ನೀರು
ಡಿಯೊಡರೆಂಟ್ ಇಲ್ಲದೆ ದುರ್ವಾಸನೆಯನ್ನು ತಡೆಯುವುದು ಹೇಗೆ? ಅಗತ್ಯ ಪ್ರಮಾಣದ ನೀರನ್ನು ಪ್ರತಿ ನಿತ್ಯವು ಸೇವಿಸುವ ಮೂಲಕ ನಿಮ್ಮ ದೇಹದ ದುರ್ಗಂಧವನ್ನು ದೂರವಿರಿಸಿಕೊಳ್ಳಬಹುದು. ಇದು ದೇಹದ ದುರ್ಗಂಧವನ್ನು ದೂರವಿರಿಸಿಕೊಳ್ಳುವ ಒಂದು ಸ್ವಾಭಾವಿಕವಾದ ಮಾರ್ಗವಾಗಿದೆ. ಪ್ರತಿನಿತ್ಯ ಕನಿಷ್ಠ 5-6 ಲೀಟರ್ ನೀರನ್ನು ಸೇವಿಸಿ.

ಡಿಟಾಕ್ಸಿಫೈ ಮಾಡಿ
ಪ್ರತಿನಿತ್ಯ ನಿಮ್ಮ ದೇಹವನ್ನು ಡಿಟಾಕ್ಸಿಫೈ ಮಾಡಿಕೊಳ್ಳಿ. ಇದರಿಂದ ನಿಮ್ಮ ದೇಹದ ದುರ್ಗಂಧ ದೂರವಾಗುತ್ತದೆ. ಟಾಕ್ಸಿನ್‌ಗಳು ದೇಹದ ದುರ್ಗಂಧಕ್ಕೆ ದಾರಿ ಮಾಡಿಕೊಡುತ್ತವೆ.

English summary

How To Smell Good Without Deodorant

Are you wondering how to smell good without using any perfume? Well, there are natural ways to eliminate the odours. Normally, we try to mask the smells that are emitted by the body using chemicals like deodorants, have a look how to solve this problem...
X
Desktop Bottom Promotion