For Quick Alerts
ALLOW NOTIFICATIONS  
For Daily Alerts

ನೇಲ್ ಆರ್ಟನ್ನು ರಕ್ಷಿಸುವ ಉಪಾಯಗಳು

By Super
|

ಹೆಣ್ಣಿನ ಅಂದ ಹೆಚ್ಚಿಸುವ ಅಂಶಗಳಲ್ಲಿ ಉಗುರುಗಳು ಸಹ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತವೆ. ಇಂತಹ ಉಗುರುಗಳನ್ನು ಸಹ ಕಲಾತ್ಮಕವಾಗಿ ಸಿಂಗರಿಸಿಕೊಳ್ಳುವುದು ತುಂಬಾ ಹಿಂದಿನಿಂದ ನಡೆದು ಬಂದ ಕಲೆಯಾಗಿದೆ. ಇದರ ಇತಿಹಾಸದತ್ತ ಇಣುಕಿ ನೋಡಿದಾಗ ಅದು ಈಜಿಪ್ಟಿಯನ್ ನಾಗರೀಕತೆಯ ಕಾಲದಷ್ಟು ಹಿಂದಕ್ಕೆ ಸರಿಯುತ್ತದೆ. ಅವರು ತಮ್ಮ ಉಗುರುಗಳನ್ನು ದ್ರಾಕ್ಷಿ ಮುಂತಾದ ಸಸ್ಯಗಳ ಪೊರೆಯನ್ನು ತಮ್ಮ ಉಗುರುಗಳ ಶೃಂಗಾರಕ್ಕಾಗಿ ಬಳಸಿಕೊಳ್ಳುತ್ತಿದ್ದರು. ನಿಮ್ಮ ಭಾವ ಮತ್ತು ಅಭಿರುಚಿಗೆ ಅನುಗುಣವಾಗಿ ಈ ನೇಲ್ ಆರ್ಟ್ ಮಾಡಿಕೊಳ್ಳಬಹುದು. ಅದು ಸರಳವಾಗಿರಬಹುದು ಅಥವಾ ಕಡುಬಣ್ಣದಿಂದ ಕೂಡಿರಬಹುದು. ನೇಲ್ ಆರ್ಟನ್ನು ಯಾವ ವಯಸ್ಸಿನವರು ಬೇಕಾದರು ಮಾಡಬಹುದು. ಮಹಿಳೆಯರಲ್ಲಿ ಬಹುತೇಕ ಮಂದಿ ನೇಲ್ ಆರ್ಟ್ ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ. ನೇಲ್ ಆರ್ಟ್ ಮಾಡಿಸಿಕೊಳ್ಳುವುದು ಸುಲಭ, ಅಲ್ಲದೆ ಇದನ್ನು ಮನೆಯಲ್ಲಿ ಬೇಕಾದರು ಮಾಡಿಕೊಳ್ಳ ಬಹುದು.

ನಿಮಗೆ ಇಷ್ಟವಾದ ಶೈಲಿಯ ನೇಲ್ ಆರ್ಟನ್ನು ನೀವು ಮಾಡಿಕೊಳ್ಳಬಹುದು. ಉದಾಹರಣೆಗೆ ಫ್ರೆಂಚ್ ಆರ್ಟ್, ಇದು ಮಾಡಿಕೊಳ್ಳಲು ಸರಳ ಮತ್ತು ಮಾಡಿದ ನಂತರ ಆಕರ್ಷಕವಾಗಿ ಸಹ ಕಾಣುತ್ತದೆ. ಇದಲ್ಲ ಬೇಡೆಡ್ ನೇಲ್ಸ್ ಅಥವಾ ನ್ಯೂಸ್ ಪೇಪರ್ ಪ್ರಿಂಟ್ ಮುಂತಾದ ಶೈಲಿಯನ್ನು ಸಹ ಬಳಸಬಹುದು. ಆದರೆ ಈ ಶೈಲಿಗಳನ್ನು ಬಳಸುವ ಮೊದಲು ಸೆಲ್ಲೋ ಟೇಪ್, ಟ್ರಾನ್ಸ್ ಪರೆಂಟ್ ನೇಲ್ ಎನಾಮೆಲ್ ಅಥವಾ ನೇಲ್ ಕಲರ್ ಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಇದರ ಜೊತೆಗೆ ನೇಲ್ ಆರ್ಟ್ ಮಾಡಲು ಕೆಲವೊಂದು ಹಂತಗಳನ್ನು ಪಾಲಿಸಬೇಕಾಗುತ್ತದೆ. ಇದಲ್ಲದೆ ಉಗುರುಗಳನ್ನು ಸರಿಯಾಗಿಟ್ಟುಕೊಳ್ಳಲು ಆರೋಗ್ಯಕರ ಪಥ್ಯವನ್ನು ಸಹ ಪಾಲಿಸಬೇಕಾಗುವುದು. ಇಲ್ಲಿ ಮನೆಯಲ್ಲಿ ನೇಲ್ ಆರ್ಟನ್ನು ಕಾಪಾಡಿಕೊಳ್ಳುವ ಬಗೆಯನ್ನು ನೀಡಿದ್ದೇವೆ ಓದಿಕೊಳ್ಳಿ.

Steps To Care for Nail Art At Home

ನೇಲ್ ಆರ್ಟ್ ಕಾಪಾಡುವ ಸಲಹೆ # 1
ಮನೆಯಲ್ಲಿ ನೇಲ್ ಆರ್ಟ್ ಕಾಪಾಡಲು ಮೊದಲು ಮಾಡಬೇಕಾದ ಕೆಲಸ ಉಗುರಿನ ಸ್ಥಿತಿಯನ್ನು ಅರಿತುಕೊಳ್ಳುವುದು. ನೇಲ್ ಆರ್ಟನ್ನು ಪ್ರತಿ ಹಂತದಲ್ಲು ಕಾಳಜಿವಹಿಸಿ ನೋಡಿಕೊಳ್ಳಿ ಮತ್ತು ಕೊನೆಯಲ್ಲಿ ಬಂದ ಫಲಿತಾಂಶವನ್ನು ಬರೆದಿಡಿ. ನಿಮ್ಮ ಉಗುರಿನ ಸ್ಥಿತಿಯನ್ನು ಅರಿತುಕೊಳ್ಳಲು ಅದನ್ನು ನೇಲ್ ಕಟರಿನಲ್ಲಿರುವ ಫೈಲ್‍ನಿಂದ ಉಜ್ಜಿ ಮೃದುಗೊಳಿಸಿ. ನಂತರ ಅದಕ್ಕೆ ಕ್ಯುಟಿಕಲ್ ಸಾಫ್ಟ್ ನರ್ ಲೇಪಿಸಿ, ನಂತರ ಅದಕ್ಕೆ ಬೆಚ್ಚಗಿರುವ ಸೋಪ್ ನೀರನ್ನು ಹಾಕಿ ತೊಳೆಯಿರಿ. ಇದರಿಂದಾಗಿ ನಿಮ್ಮ ಉಗುರುಗಳು ಧೀರ್ಘಕಾಲ ಉತ್ತಮವಾಗಿರುತ್ತವೆ.

ನೇಲ್ ಆರ್ಟ್ ಕಾಪಾಡುವ ಸಲಹೆ # 2
ಎರಡನೆ ಹಂತ ಬೇಸ್ ಕೋಟನ್ನು ಲೇಪಿಸುವುದು. ಬೇಸ್ ಕೋಟ್ ಉಗುರಿನ ಆಯಸ್ಸನ್ನು ಹೆಚ್ಚಿಸುತ್ತದೆ ಮತ್ತು ಆಕರ್ಷಕಗೊಳಿಸುತ್ತದೆ. ಜೊತೆಗೆ ಇದು ಉಗುರಿನ ಬಣ್ಣಗುಂದದಂತೆ ಕಾಪಾಡುತ್ತದೆ. ಕೆಟ್ಟದಾಗಿರುವ ಬೇಸ್ ಕೋಟ್ ನಿಮ್ಮ ಉಗುರಿನಲ್ಲಿ ಹಳದಿ ಕಲೆಗಳನ್ನುಂಟು ಮಾಡುತ್ತದೆ. ಹಾಗಾಗಿ ಉತ್ತಮವಾದ ಬೇಸ್ ಕೋಟನ್ನು ಆಯ್ಕೆ ಮಾಡಿಕೊಳ್ಳಿ.

ನೇಲ್ ಆರ್ಟ್ ಕಾಪಾಡುವ ಸಲಹೆ # 3
ಮೂರನೆಯ ಹಂತದಲ್ಲಿ ನಿಮ್ಮ ನೆಚ್ಚಿನ ನೇಲ್ ಕಲರನ್ನು ಆಯ್ಕೆ ಮಾಡಿಕೊಳ್ಳಿ. ಇದನ್ನು ಆಯ್ಕೆ ಮಾಡುವಾಗ ನಿಮ್ಮ ಮೈಬಣ್ಣಕ್ಕೆ ಸರಿಹೊಂದುವಂತಹ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ. ಒಂದೊಂದು ವೇಳೆ ನ್ಯೂಡ್ ನೇಲ್ ಕಲರ್ ಸಹ ನಿಮ್ಮ ಲುಕ್ ಅನ್ನು ಇಮ್ಮಡಿಗೊಳಿಸುತ್ತದೆ ಎಂಬುದನ್ನು ಮರೆಯಬೇಡಿ. ಏಕೆಂದರೆ ಈ ತರದ ನೇಲ್ ಕಲರ್ ನೈಟ್ ಪಾರ್ಟಿಯಿಂದ ಹಿಡಿದು ಆಫೀಸ್‍ವರೆಗು ಎಲ್ಲಾ ಕಡೆ ಸಲ್ಲುತ್ತದೆ.

ನೇಲ್ ಆರ್ಟ್ ಕಾಪಾಡುವ ಸಲಹೆ # 4
ಉಗುರಿಗೆ ಬಣ್ಣ ಹಚ್ಚುವಾಗ ಎರಡು ಕೋಟ್ ಲೇಪಿಸಿ, ಯಾವುದೇ ಕಾರಣಕ್ಕು ಉಗುರಿನ ಮೇಲೆ ಇರುವ ಹೊರ ಚರ್ಮದ ಪೊರೆಗೆ ಬಣ್ಣ ತಾಗದಂತೆ ಎಚ್ಚರವಹಿಸಿ. ಒಂದು ವೇಳೆ ಚರ್ಮಕ್ಕೆ ಬಣ್ಣ ಲೇಪಿಸಿದರು ಚಿಂತಿಸಬೇಕಿಲ್ಲ, ಏಕೆಂದರೆ ಅದು ಸ್ನಾನ ಮಾಡುವಾಗ ಹೋಗಿ ಬಿಡುತ್ತದೆ. ಆನಂತರ ಅದರ ಮೇಲೆ ನ್ಯೂಡ್ ಪಾಲಿಷ್ ಹಾಕಿ ಒಣಗಲು ಬಿಡಿ. ಇದರಿಂದಾಗಿ ನಿಮ್ಮ ನೇಲ್ ಆರ್ಟ್ ಧೀರ್ಘಕಾಲ ಉಳಿಯುತ್ತದೆ.

ನೇಲ್ ಆರ್ಟ್ ಕಾಪಾಡುವ ಸಲಹೆ # 5
ಮುಂದಿನ ಹಂತದಲ್ಲಿ ಒಂದು ಹೊಳೆಯುವ ಗ್ಲಿಟ್ಟರ್ ಪಾಲಿಶನ್ನು ತೆಗೆದುಕೊಳ್ಳಿ. ನಿಮ್ಮ ಬ್ರಷ್‍ನಲ್ಲಿಯಿರುವ ಪಾಲಿಶೆಲ್ಲವನ್ನು ತೆಗೆದುಹಾಕಿ, ಕೇವಲ ಗ್ಲಿಟ್ಟರ್ ಮಾತ್ರ ಅದರಲ್ಲಿ ಹೊಳೆಯುತ್ತ ಇರುವಂತೆ ನೋಡಿಕೊಳ್ಳಿ. ಈಗ ನಿಮ್ಮ ಉಗುರಿನ ಮೇಲೆ ನಿಮಗಿಷ್ಟವಾದ ಕಲೆಗಳನ್ನು ಮೂಡಿಸಿ. ಅದು ಉಗುರಿನ ಮೇಲೆ ಇರುವ ಬೆರಳ ಚರ್ಮದತ್ತ ಸಾಗಿರುವಂತೆ ಇದ್ದರೆ, ಇನ್ನೂ ಚಂದ.

ನೇಲ್ ಆರ್ಟ್ ಕಾಪಾಡುವ ಸಲಹೆ # 6
ಈಗ ಬ್ರಷ್ ಅನ್ನು ನೆನೆಸಿ, ನಂತರ ನಿಮ್ಮ ಬೆರಳುಗಳ ಮೇಲೆ ಇರುವ ಹೆಚ್ಚುವರಿ ನೇಲ್ ಪಾಲಿಶನ್ನು ತೆಗೆಯಿರಿ. ನಂತರ ಬ್ರಷ್‍ನಲ್ಲಿ ಮತ್ತೆ ಪಾಲಿಷ್ ತೆಗೆದುಕೊಂಡು ಉಗುರಿನ ತುದಿಯಲ್ಲಿ ಫ್ರೆಂಚ್ ಟಿಪ್ ರಚಿಸಿ. ಕೊನೆಯದಾಗಿ ಮತ್ತೊಂದು ಕೋಟ್ ಅವಶ್ಯಕವಾದರೆ ಲೇಪಿಸುವುದನ್ನು ಮರೆಯಬೇಡಿ ಮತ್ತು ಜೊತೆಗೆ ಮುತುವರ್ಜಿಯನ್ನು ವಹಿಸಿ ಲೇಪಿಸುವುದನ್ನು ಸಹ ಮರೆಯಬೇಡಿ. ಈ ಹೆಚ್ಚುವರಿ ಕೋಟ್ ಉಗುರಿನ ಮೇಲೆ ಶಾಶ್ವತವಾಗಿ ನಿಲ್ಲುತ್ತದೆ.

English summary

Steps To Care for Nail Art At Home

You can also get beautiful and healthy nails at home by taking proper care of it and by maintaining a healthy diet. Here are a few points you need to take a note of while doing a nail art at home. Read on.
X
Desktop Bottom Promotion