For Quick Alerts
ALLOW NOTIFICATIONS  
For Daily Alerts

ಶೇವ್ ನಂತರ ಹಚ್ಚಬಹುದಾದ ಎಣ್ಣೆಗಳು

By Super
|

ಆಫ್ಟರ್ ಶೇವ್ ಲೋಷನ್ ಮತ್ತು ಆಯಿಲ್‍ಗಳು ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ಮಾರಲ್ಪಡುತ್ತವೆ. ಈ ಉತ್ಪನ್ನಗಳು ಪುರುಷರಿಗೆ ಅಲರ್ಜಿಯನ್ನು ಮತ್ತು ತುರಿಕೆಯನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ದುಡ್ಡಿಗೆ ತಕ್ಕಂತೆ ದಂಡಿಯಾಗಿ ದೊರೆಯುವ ಈ ಆಫ್ಟರ್ ಶೇವ್ ಆಯಿಲ್ ಬಳಸುವ ಬದಲು ಮನೆಯಲ್ಲಿಯೇ ಆಫ್ಟರ್ ಶೇವ್ ಆಯಿಲನ್ನು ಸಿದ್ಧಪಡಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಮತ್ತು ಆರ್ಥಿಕ ದೃಷ್ಟಿಯಿಂದ ಒಳ್ಳೆಯದು. ಇವು ಸುಲಭವಾಗಿ ದೊರೆಯುವುದರ ಜೊತೆಗೆ ಯಾವುದೇ ಅಡ್ಡಪರಿಣಾಮಗಳನ್ನುಂಟು ಮಾಡದಿರುವ ಕಾರಣಕ್ಕಾಗಿ ಖ್ಯಾತಿಯನ್ನು ಪಡೆದಿವೆ. ಕೆಲವೊಮ್ಮೆ ಆಲ್ಕೋಹಾಲ್ ಇರುವ ಆಫ್ಟರ್ ಶೇವ್ ಕ್ರೀಮ್‍ಗಳು ಶೇವಿಂಗ್ ಮಾಡುವಾಗ ಗಾಯಗೊಂಡ ಚರ್ಮವು ಮತ್ತೆ ಬೆಳೆಯಲು ತಡೆಯನ್ನು ಒಡ್ಡುತ್ತವೆ. ಆದರೆ ಮನೆಯಲ್ಲಿ ತಯಾರಾದ ಆಫ್ಟರ್ ಶೇವ್ ಆಯಿಲ್‍ಗಳು ಈ ಅಡ್ಡಪರಿಣಾಮವನ್ನುಂಟು ಮಾಡುವುದಿಲ್ಲ.

ಈ ಆಫ್ಟರ್ ಶೇವ್ ಆಯಿಲ್ ಅಥವಾ ಲೋಷನ್‍ಗಳನ್ನು ಶೇವ್ ಮಾಡಿದ ನಂತರ ಆರಾಮವನ್ನು ನೀಡಲು ಬಳಸುತ್ತಾರೆ. ಹಾಗಾಗಿ ನೀವು ಮನೆಯಲ್ಲಿ ಆಫ್ಟರ್ ಶೇವ್ ಲೋಷನ್ ತಯಾರಿಸಲು ಹೋದಾಗ ಶೇವ್ ಮಾಡಿದ ನಂತರ ಚರ್ಮ ಉರಿಯುವುದನ್ನು, ಇನ್‍ಫೆಕ್ಷನ್ ಮತ್ತು ಅಲರ್ಜಿಗಳನ್ನು ತಡೆಯುವಂತಹ ಪದಾರ್ಥಗಳನ್ನು ಬಳಸಿಕೊಳ್ಳುವುದು ಉತ್ತಮ. ಅದಕ್ಕಾಗಿ ಲೋಳೆ, ಟೀ ಟ್ರೀ ಆಯಿಲ್, ಆಲಿವ್ ಎಣ್ಣೆ, ಬೇ ರಮ್, ವೋಡ್ಕಾ ಇತ್ಯಾದಿಗಳನ್ನು ಬಳಸಿಕೊಳ್ಳಿ. ಈ ಪದಾರ್ಥಗಳು ಮನೆಯಲ್ಲಿ ತಯಾರಿಸಲಾಗುವ ಆಫ್ಟರ್ ಶೇವ್ ಲೋಷನ್‍ಗಳಲ್ಲಿ ಅಗ್ರಸ್ಥಾನವನ್ನು ಪಡೆದಿವೆ.

ನಿಮ್ಮ ತ್ವಚೆಗೆ ಸರಿಹೊಂದುವಂತಹ ಆಫ್ಟರ್ ಶೇವ್ ಪದಾರ್ಥವನ್ನು ಆಯ್ಕೆ ಮಾಡಿಕೊಂಡ ಮೇಲೆ ಅದನ್ನು ಒಂದು ಸ್ಪ್ರೇ ಬಾಟಲಿನಲ್ಲಿ ತುಂಬಿ, ಅಥವಾ ಏರ್ ಟೈಟ್ ಬಾಟಲಿನಲ್ಲಿ ತುಂಬಿ ರೆಫ್ರಿಜಿರೇಟರಿನಲ್ಲಿಡಿ. ಇಲ್ಲವಾದಲ್ಲಿ ಅದನ್ನು ಕೇಕ್ ಅಥವಾ ಬಾರ್ ನಂತೆ ಮಾಡಿ ತಣ್ಣಗಿರುವ ಜಾಗದಲ್ಲಿಡಿ. ಮನೆಯಲ್ಲಿ ತಯಾರಾಗುವ ಆಫ್ಟರ್ ಶೇವ್ ಕ್ರೀಮ್‍ಗಳು ಸಾವಯವ ಉತ್ಪನ್ನಗಳಾಗಿದ್ದು ಧೀರ್ಘ ಕಾಲ ಬಾಳಿಕೆಗೆ ಬರುವುದಿಲ್ಲ. ಕಾರಣ ಇವುಗಳಲ್ಲಿ ಆ ಉತ್ಪನ್ನವನ್ನು ಕೆಡದಂತೆ ಇಡುವ ಸಂರಕ್ಷಕಗಳು ಇರುವುದಿಲ್ಲ. ಆದರೂ ಸಹ ಇವುಗಳು ಕೆಡದಂತೆ ಕಾಪಾಡುವ ಕ್ರಮಗಳನ್ನು ಕೈಗೊಳ್ಳಿ.

ಇಲ್ಲಿ ಕೆಲವೊಂದು ಪ್ರಸಿದ್ಧ ಹೋಮ್ ಮೇಡ್ ಆಫ್ಟರ್ ಶೇವ್ ಆಯಿಲ್‍ಗಳನ್ನು ನೀಡಿದ್ದೇವೆ ಬಳಸಿ ನೋಡಿ.

1. ಲೋಳೆ

1. ಲೋಳೆ

ಲೋಳೆ ಅಥವಾ ಅಲೋವಿರಾವು ಔಷಧೀಯ ಗುಣಗಳನ್ನು ತನ್ನಲ್ಲಿ ಒಳಗೊಂಡಿದೆ. ಇದು ಉಪಶಮನಕಾರಿ ಗುಣಗಳನ್ನು , ಆರಾಮವನ್ನು ಮತ್ತು ತಂಪನ್ನು ನೀಡುವ ಗುಣಗಳನ್ನು ತನ್ನಲ್ಲಿ ಒಳಗೊಂಡಿದೆ. ಇದನ್ನು ನೀವು ನೇರವಾಗಿ ಎಲೆಯಿಂದ ತೆಗೆದು ಶೇವ್ ಮಾಡಿದ ತ್ವಚೆಗೆ ಲೇಪಿಸಬಹುದು. ಇದು ರೇಜರ್ ನಿಂದ ಉಂಟಾದ ಗಾಯಗಳನ್ನು ಬೇಗನೆ ಗುಣಪಡಿಸುತ್ತದೆ.

2. ಟೀ ಟ್ರೀ ಆಯಿಲ್

2. ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲನ್ನು ಲ್ಯಾವೆಂಡರ್ ಎಣ್ಣೆಯ ಜೊತೆಗೆ ಬೆರೆಸಿ ಮಿಶ್ರಣ ಮಾಡಿ. ಒಂದು ವೇಳೆ ಲ್ಯಾವೆಂಡರ್ ಎಣ್ಣೆ ನಿಮಗೆ ಬೇಡವಾದಲ್ಲಿ ಯಾವುದಾದರು ಸುಗಂಧಭರಿತ ಎಣ್ಣೆಯನ್ನು ಬಳಸಬಹುದು. ಇದನ್ನು ಶೇವ್ ಆದ ನಂತರ ಮುಖಕ್ಕೆ ಲೇಪಿಸಿ. ಇದು ಸಹ ಗಾಯಗಳನ್ನು ಮಾಯುವಂತೆ ಮಾಡುತ್ತದೆ ಮತ್ತು ಉರಿಯನ್ನು ಕಡಿಮೆ ಮಾಡುತ್ತದೆ.

3. ವಿಚ್ ಹಜೆಲ್ ಎಕ್ಸ್ ಟ್ರ್ಯಾಕ್ಟ್

3. ವಿಚ್ ಹಜೆಲ್ ಎಕ್ಸ್ ಟ್ರ್ಯಾಕ್ಟ್

ವಿಚ್ ಹಜೆಲ್ ಎಕ್ಸ್ ಟ್ರ್ಯಾಕ್ಟ್ ಅನ್ನು ಸ್ವಲ್ಪ ನೀರು ಮತ್ತು ಕೆಲವು ಹನಿ ಆಲೀವ್ ಎಣ್ಣೆಯ ಜೊತೆಗೆ ಬೆರೆಸಿ. ಇದಕ್ಕೆ ಸುವಾಸನೆ ಬರಲು ಲ್ಯಾವೆಂಡರ್ ಹೂಗಳನ್ನು, ರೋಸ್ ಮೇರಿ ಇತ್ಯಾದಿ ದ್ರವ್ಯಗಳನ್ನು ಬೆರೆಸಬಹುದು. ಆನಂತರ ಈ ಮಿಶ್ರಣಕ್ಕೆ ಚಕ್ಕೆಯನ್ನು ಸೇರಿಸಿ ಒಂದು ಜಾಡಿಯಲ್ಲಿಡಿ. ಈ ಮಿಶ್ರಣವನ್ನು ಒಂದು ಜಾಡಿಯಲ್ಲಿಟ್ಟುಕೊಂಡು 2 - 3 ವಾರಗಳ ಕಾಲ ಬಿಡಿ ಮತ್ತು ಇದರ ರಸವನ್ನು ಆಫ್ಟರ್ ಶೇವ್ ಲೋಶನ್ ಆಗಿ ಬಳಸಿ.

4. ಬೇ ರಮ್

4. ಬೇ ರಮ್

ಕಿತ್ತಳೆಯ ರಸವನ್ನು ಬೇ ರಮ್ ಜೊತೆಗೆ ಬೆರೆಸಿ, ಅದಕ್ಕೆ ಸ್ವಲ್ಪ ಲವಂಗ, ಚಕ್ಕೆ ಮತ್ತು ಸ್ವಲ್ಪ ವೋಡ್ಕಾವನ್ನು ಬೆರೆಸಿ. ಈ ಮಿಶ್ರಣವನ್ನು ಬೆಳಕಿಲ್ಲದ ಮತ್ತು ತಂಪಾಗಿರುವ ಸ್ಥಳದಲ್ಲಿ ಎರಡು ವಾರ ಇಡಿ. ನಂತರ ಇದನ್ನು ಮೂರು- ನಾಲ್ಕು ಬಾರಿ ಫಿಲ್ಟರ್ ಮಾಡಿ, ಈ ಮಿಶ್ರಣ ಸ್ವಚ್ಛವಾಗಿ ನಿಮಗೆ ಕಾಣಬೇಕು. ಆ ನಂತರ ಒಂದು ಜಾಡಿ ಅಥವಾ ಬಾಟಲಿಯಲ್ಲಿ ಹಾಕಿಕೊಂಡು ಆಫ್ಟರ್ ಶೇವ್ ಆಗಿ ಬಳಸಿ.

5. ಶಿಯಾ ಬಟರ್

5. ಶಿಯಾ ಬಟರ್

ಐವರಿ ಬಣ್ಣದ ಈ ಕೊಬ್ಬನ್ನು ಆಫ್ರಿಕನ್ ಶಿಯಾ ಮರದ ಹಣ್ಣಿನಿಂದ ತೆಗೆಯಲಾಗುತ್ತದೆ. ಇದನ್ನು ಅದರ ಮೂಲ ಸ್ವರೂಪದಲ್ಲಿಯೇ ಆಫ್ಟರ್ ಶೇವ್ ಲೋಷನ್ ಆಗಿ ಬಳಸುತ್ತಾರೆ. ಇದನ್ನು ಫ್ರಿಡ್ಜ್ ನಲ್ಲಿಟ್ಟರೆ ಅದು ಗಟ್ಟಿಯಾಗಿ ಬಾರ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದನ್ನು ತ್ವಚೆಗೆ ಆರಾಮ ಮತ್ತು ತಂಪು ನೀಡಲು ಬಳಸುತ್ತಾರೆ. ಇದರಲ್ಲಿ ಸ್ವಾಭಾವಿಕವಾಗಿ ಪರಿಮಳವು ಅಡಗಿರುತ್ತದೆ.

6. ಆಪ್ಪಲ್ ಸಿಡೆರ್ ವಿನೆಗರ್

6. ಆಪ್ಪಲ್ ಸಿಡೆರ್ ವಿನೆಗರ್

ಇದು ಸಹ ಪ್ರಸಿದ್ಧ ಆಫ್ಟರ್ ಶೇವ್ ಆಯಿಲ್ ಆಗಿದೆ. ಇದನ್ನು ಸಹ ಇದರ ಮೂಲ ಸ್ವರೂಪದಲ್ಲಿಯೇ ಆಫ್ಟರ್ ಶೇವ್ ಆಯಿಲ್ ಆಗಿ ಬಳಸಬಹುದು. ಇದಕ್ಕೆ ಪರಿಮಳ ಬರಬೇಕಾದರೆ ಇದಕ್ಕೆ ಸ್ವಲ್ಪ ಚಕ್ಕೆಯನ್ನು ಮತ್ತು ಏಲಕ್ಕಿಯನ್ನು ಬಳಸಬಹುದು. ಆಗ ಅದಕ್ಕೆ ಕಟುವಾದ ಸ್ವರೂಪ ದೊರೆಯುತ್ತದೆ ಮತ್ತು ಪ್ರಬಲವಾದ ಆಫ್ಟರ್ ಶೇವ್ ಆಯಿಲ್ ಸಿದ್ಧಗೊಳ್ಳುತ್ತದೆ.

7. ಸೌತೆಕಾಯಿಯ ಆಫ್ಟರ್ ಶೇವ್ ಲೋಷನ್

7. ಸೌತೆಕಾಯಿಯ ಆಫ್ಟರ್ ಶೇವ್ ಲೋಷನ್

ಇದು ತುಂಬ ಸರಳವಾದ ಆಫ್ಟರ್ ಶೇವ್ ಲೋಷನ್. ಇದನ್ನು ತಯಾರಿಸಲು ಸೌತೆಕಾಯಿ, ಪುದಿನಾ ಮತ್ತು ನೀರು ಸಾಕು. ಇದಕ್ಕಾಗಿ ಅರ್ಧ ಕಪ್ ಸೌತೆಕಾಯಿಯನ್ನು ತೆಗೆದುಕೊಳ್ಳಿ, ಇದಕ್ಕೆ ಕಾಲು ಕಪ್ ಪುದಿನಾವನ್ನು ಬೆರೆಸಿ, ಒಂದು ಕಪ್ ನೀರನ್ನು ಇದಕ್ಕೆ ಸೇರಿಸಿ ರುಬ್ಬಿ. ನಂತರ ಇದನ್ನು ಫಿಲ್ಟರ್ ಮಾಡಿ ಫ್ರಿಡ್ಜ್ ನಲ್ಲಿಡಿ. ಆಮೇಲೆ ಇದನ್ನು ಆಫ್ಟರ್ ಶೇವ್ ಲೋಷನ್ ಆಗಿ ಬಳಸಬಹುದು.

English summary

Homemade Aftershave Oils For Men

Instead of endlessly looking at mass produced aftershave oils, you can choose to prepare homemade aftershave oil all from locally available items within your reach and from materials that don’t cause any allergic reactions
X
Desktop Bottom Promotion