Just In
Don't Miss
- Sports
ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ: ಜೀವಮಾನ ಶ್ರೇಷ್ಠ ಸ್ಥಾನಕ್ಕೇರಿದ ರೋಹಿತ್ ಶರ್ಮಾ, ಅಶ್ವಿನ್ ನಂಬರ್ 3
- News
'ಮಾರ್ಕೆಪೂನವ್' ಜಾತ್ರೆ ಸಂಪನ್ನ; ಸೂಚಿ ಚುಚ್ಚಿಕೊಂಡು ಹರಕೆ ತೀರಿಸಿದ ಮಕ್ಕಳು
- Movies
ಪುನೀತ್ ರಾಜ್ ಕುಮಾರ್ ಸಾಧನೆಗೆ ಶುಭಕೋರಿದ ಕಿಚ್ಚ ಸುದೀಪ್
- Automobiles
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ತನ ಜೋತು ಬೀಳಲು ಬಿಟ್ಟರೆ ಸೌಂದರ್ಯ ಜೋಕೆ!
ಹೆಣ್ಣಿನ ಅಂದ ಹೆಚ್ಚಿಸುವಲ್ಲಿ ಸ್ತನಗಳು ಪ್ರಮುಖ ಪಾತ್ರವಹಿಸುತ್ತದೆ. ಆಕರ್ಷಕವಾದ ಸ್ತನಗಳು ಹೆಣ್ಣಿನ ದೇಹದ ಆಕೃತಿಯನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಯೌವನದಲ್ಲಿ ಸ್ತನಗಳು ಜೋತು ಬಿದ್ದಂತೆ ಇದ್ದರೆ ಆಕರ್ಷಕವಾಗಿ ಕಾಣುವುದಿಲ್ಲ. ಆದ್ದರಿಂದ ಸ್ತನಗಳಿಗೆ ಆಕರ್ಷಕ ಆಕಾರ ನೀಡಲು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
ಬ್ರಾದ ಗಾತ್ರ: ಸರಿಯಾದ ಗಾತ್ರದ ಬ್ರಾ ಧರಿಸಬೇಕು. ತುಂಬಾ ಸಡಿಲವಾದ ಅಥವಾ ಬಿಗಿಯಾದ ಬ್ರಾ ಧರಿಸಬಾರದು. ಸರಿಯಾದ ಗಾತ್ರದ ಬ್ರಾಗಳನ್ನು ಕೊಳ್ಳಬೇಕು. ಅದು ಸಡಿಲವಾದ ಮೇಲೆ ಧರಿಸಬಾರದು.
ಸ್ಪೋರ್ಟ್ಸ್ ಬ್ರಾ: ವ್ಯಾಯಾಮ ಮಾಡುವಾಗ ಸಾಮಾನ್ಯವಾದ ಬ್ರಾಗಳಿಗಿಂತ ಸ್ಪೋರ್ಟ್ಸ್ ಬ್ರಾಗಳನ್ನು ಧರಿಸಿದರೆ ಸ್ತನ ಆಕರ್ಷಕ ಆಕಾರವನ್ನು ಪಡೆಯುತ್ತದೆ.
ಮಸಾಜ್: ಸ್ತನ ಗಾತ್ರ ಹೆಚ್ಚಾಗಲು ಮತ್ತು ಜೋತು ಬೀಳುವುದನ್ನು ತಡೆಯಲು ವೃತ್ತಾಕಾರವಾಗಿ ಮಸಾಜ್ ಮಾಡಬೇಕು.
ಅಂಡರ್ ವೈರ್ ಬ್ರಾ: ಸ್ತನ ಜೋತು ಬಿದ್ದಿದ್ದರೆ ಅಂಡರ್ ವೈರ್ ಬ್ರಾಗಳನ್ನು ಧರಿಸುವುದರಿಂದ ಅವುಗಳನ್ನು ಆಕರ್ಷಕವಾದ ಆಕಾರಕ್ಕೆ ತರಬಹುದು.
ವ್ಯಾಯಾಮ: ವ್ಯಾಯಾಮ ಮಾಡಿದರೆ ಆಕರ್ಷಕ ಸ್ತನ ಗಾತ್ರ ಪಡೆಯಬಹುದು. ಪುಶ್ ಅಪ್, ಡಂ ಬೆಲ್ ವ್ಯಾಯಾಮ ಮಾಡಿದರೆ ಸ್ತನಗಳು ಮಧ್ಯವಯಸ್ಸು ದಾಟಿದರೂ ಜೋತು ಬೀಳುವುದಿಲ್ಲ.
ಹೆರಿಗೆಯ ನಂತರ ಹೆಚ್ಚಿನ ಮಹಿಳೆಯರ ಸ್ತನಗಳು ಜೋತು ಬೀಳುತ್ತದೆ. ಆದ್ದರಿಂದ ಮಗು ಹಾಲು ಕುಡಿಯುತ್ತಿರುವ ಸಮಯದಲ್ಲಿ ಸ್ತನಗಳು ಜೋತು ಬೀಳದಂತೆ ಬ್ರಾಗಳನ್ನು ಧರಿಸುವುದು ಒಳ್ಳೆಯದು. ಹೈಸ್ಕೂಲಿನಲ್ಲಿ ಓದುವ ಸಮಯಕ್ಕೆ ಹೆಚ್ಚಿನ ಹೆಣ್ಣು ಮಕ್ಕಳು ವಯಸ್ಸಿಗೆ ಬರುತ್ತಾರೆ. ಆಗ ದೇಹದಲ್ಲಿ ಕೂಡ ಅನೇಕ ವ್ಯತ್ಯಾಸಗಳಾಗುತ್ತವೆ, ಸ್ತನ ಬೆಳೆಯಲಾರಂಭಿಸುತ್ತದೆ. ಆದರೆ ಹೆಚ್ಚಿನ ಹೆಣ್ಣು ಮಕ್ಕಳು ಬ್ರಾ ಹಾಕಲು ಸಂಕೋಚ ಪಡುತ್ತಾರೆ. ಆಗ ತಾಯಿ ಅಥವಾ ಅಕ್ಕ ತಿಳುವಳಿಕೆ ಹೇಳಿ ಹಾಕಿಸಬೇಕು. ಇಲ್ಲದಿದ್ದರೆ ಸ್ತನ ಜೋತು ಬೀಳುವುದು.