For Quick Alerts
ALLOW NOTIFICATIONS  
For Daily Alerts

ನೇಲ್ ಸ್ಪಾ: ಮನೆಯಲ್ಲಿಯೇ ಮಾಡೋಣ ಬಾ

|
Nail Spa At Home
ಚೆಂದದ ಬೆರಳಿಗೆ ಮುಕುಟವಿಟ್ಟಂತೆ ಕಾಣುವ ಅಂದದ ಉಗುರು ಎಲ್ಲರಿಗೂ ಇಷ್ಟ. ಆದರೆ ಇರೋ ಹತ್ತಿಪ್ಪತ್ತು ಉಗುರಿನ ಆರೈಕೆಗೆ ಬ್ಯೂಟಿಪಾರ್ಲರಿಗೆ ಹೋಗುವುದ್ಯಾಕೆ. ಅದರಿಂದ ಸಮಯ ಮತ್ತು ದುಡ್ಡು ಎರಡೂ ವ್ಯರ್ಥ. ಬ್ಯೂಟಿ ಪಾರ್ಲರುಗಳಲ್ಲಿ ಮಾಡುವಂತೆ ಮನೆಯಲ್ಲಿಯೇ ಕುಳಿತು ನಿಮ್ಮ ಉಗುರಿಗೆ ಸ್ಪಾ ಮಾಡಿ.

ನೇಲ್ ಸ್ಪಾಕ್ಕೆ ಬೇಕಾಗುವ ಸಾಮಾಗ್ರಿಗಳು:
* ಕೈ ಮತ್ತು ಕಾಲುಗಳನ್ನು ಇಡಲು 2 ಪಾತ್ರೆ
* ಉರುಟುಕಲ್ಲು
* ಬಿಸಿ ಮತ್ತು ತಣ್ಣನೆಯ ನೀರು
* ಕ್ಯೂಟಿಕಲ್ ಕ್ರೀಮ್
* ಸೋಪ್ ಸಲ್ಯೂಶನ್
* ನೇಲ್ ಕಟ್ಟರ್
* ಪ್ಯೂಮಿಕ್
* ಆಸಿಟೋನ್
* ಉಪ್ಪು
* ಸುಗಂಧವಿರುವ ಎಣ್ಣೆ
* ಟವಲ್

ಸ್ಪಾ ಮಾಡುವ ವಿಧಾನ:

1. ಆಸಿಟೋನ್ ಉಪಯೋಗಿಸಿ ಕೈ ಮತ್ತು ಕಾಲು ಬೆರಳುಗಳಲ್ಲಿರುವ ನೇಲ್ ಪಾಲಿಷ್ ತೆಗೆಯಬೇಕು.

2. ಉದ್ದ ಬೆಳೆದಿರುವ ಉಗುರುಗಳನ್ನು ಸರಿಯಾದ ರೀತಿಯಲ್ಲಿ ಕತ್ತರಿಸಬೇಕು. ಬೆರಳುಗಳಲ್ಲಿ ಉಗುರಿನ ಕೆಳಗಡೆ ಚರ್ಮ ಕಿತ್ತು ಬಂದಿದ್ದರೆ ಅದನ್ನು ನಿಧಾನಕ್ಕೆ ತೆಗೆಯಬೇಕು.

3. ನಂತರ ಕ್ಯೂಟಿಕಲ್ ಕ್ರೀಮ್ ಹಚ್ಚಬೇಕು.

4. ಈಗ ಪಾತ್ರೆ ಅಥವಾ ಬೇಸನ್ ನಲ್ಲಿ ಬಿಸಿ ನೀರು ಹಾಕಿ ಅದರಲ್ಲಿ ಉಪ್ಪು ಮತ್ತು ಸೋಪ್ ಸಲ್ಯೂಶನ್ ಹಾಕಿ, ಉರುಟುಕಲ್ಲು ಅದರಲ್ಲಿ ಹಾಕಬೇಕು. ಆ ನೀರಿನಲ್ಲಿ ಕೈ ಕಾಲುಗಳನ್ನು 10 ನಿಮಿಷ ನೆನೆಸಬೇಕು.

5. ಕಲ್ಲುನಿಂದ ತಿಕ್ಕಿ ಕ್ಯೂಟಿಕಲ್ ಕ್ರೀಮ್ ತೆಗೆಯಬೇಕು. ಪ್ಯೂಮಿಕ್ ಕಲ್ಲು ಬಳಸಿ ಕಾಲಿನ ತುದಿ ತಿಕ್ಕಬೇಕು. ಹೀಗೆ ಮಾಡಿ ನಿರ್ಜೀವ ತ್ವಚೆ ತೆಗೆಯಬಹುದು.

6. ಈಗ ತಣ್ಣೀರಿನಿಂದ ಕೈ ಕಾಲುಗಳನ್ನು ತೊಳೆದು ಸುಗಂಧವಿರುವ ಎಣ್ಣೆಯಿಂದ ಮಸಾಜ್ ಮಾಡಬೇಕು. ಈ ರೀತಿ ಮಾಡಲು ಹೆಚ್ಚೆಂದರೆ 1/2 ಗಂಟೆ ಸಾಕು.
ಮನೆಯಲ್ಲಿಯೆ ಕೈ ಕಾಲುಗಳನ್ನು ಸ್ಪಾ ಮಾಡಿ ನಿಮ್ಮ ಸೌಂದರ್ಯ ಮತ್ತಷ್ಟು ಹೆಚ್ಚಿಸಿಕೊಳ್ಳಿ.

English summary

How to Do Nail Spa At Home | Tips For Nail Beauty | ನೇಲ್ ಸ್ಪಾ ಮನೆಯಲ್ಲಿಯೆ ಮಾಡುವುದು ಹೇಗೆ? | ಉಗುರಿನ ಸೌಂದರ್ಯಕ್ಕೆ ಕೆಲ ಸಲಹೆ

A nail spa sounds like very posh and expensive salon treatment but actually it is an out an out simple thing to have at home. If you do not want to know how to do spa have a look in this article.
Story first published: Friday, January 27, 2012, 14:21 [IST]
X
Desktop Bottom Promotion