For Quick Alerts
ALLOW NOTIFICATIONS  
For Daily Alerts

ಬೆವರಿನಿಂದ ಬಳಲದಿರಲಿ ನಿಮ್ಮ ಚೆಂದದ ಪಾದ

|
Cure Sweaty Feet Easily
ಅಂಗೈನಲ್ಲಿ ಅತಿಯಾದ ಬೆವರು ಕಾಣಿಸಿಕೊಳ್ಳುವವರಲ್ಲಿ ಪಾದಗಳಲ್ಲೂ ಹೆಚ್ಚು ಬೆವರು ಕಂಡುಬರುತ್ತದೆ. ಇದರಿಂದ ಪಾದ ಸೋಂಕಿಗೆ ಒಳಗಾಗಿ ವಾಸನೆಯೂ ಸುಳಿಯಬಹುದು. ಕೆಲವೊಬ್ಬರಿಗೆ ಇದು ವಂಶವಾಹಿಯಾಗಿದ್ದರೆ, ಇನ್ನೂ ಕೆಲವರಿಗೆ ಬಿಸಿ ವಾತಾವರಣ ಮತ್ತು ಹಾರ್ಮೊನ್ ಬದಲಾವಣೆಯಿಂದಲೂ ಬರುತ್ತದೆ.

ಪಾದ ಬೆವರುವುದನ್ನು ತಡೆಯುವುದು ಹೇಗೆ?

1. ಸೋಂಕುಗಳಿಂದ ತಪ್ಪಿಸಿಕೊಳ್ಳಲು ಪಾದಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಬೆವರಿನಿಂದ ಬ್ಯಾಕ್ಟೀರಿಯಾ ಸೇರಿಕೊಳ್ಳುವುದರಿಂದ ಪಾದದ ಚರ್ಮಕ್ಕೆ ಹಾನಿಯುಂಟಾಗಬಹುದು.

2. ಹೊರಗಿನಿಂ ಮನೆಗೆ ಮರಳಿದ ನಂತರ ಪಾದಗಳನ್ನು ಶುದ್ಧವಾಗಿ ತೊಳೆಯುವುದನ್ನು ಮರೆಯಬೇಡಿ. ಇದಕ್ಕೆ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸೋಪನ್ನು ಬಳಸಿದರೆ ಬೆವರು ಕಡಿಮೆಯಾಗುತ್ತದೆ.

3. ಪಾದದಲ್ಲಿ ಒಣಗಿದ ಚರ್ಮವಿದ್ದರೆ ಅದನ್ನು ಹೋಗಲಾಡಿಸಿ. ಬೆವರು ಬರದಂತೆ ತಡೆಯಲು ನಿರ್ಜೀವ ಚರ್ಮವನ್ನು ತೆಗೆದುಹಾಕಬೇಕು. ಸ್ನಾನ ಮಾಡುವಾಗ ಪಾದವನ್ನು ಮೃದುವಾಗಿ ಸ್ಕ್ರಬ್ ಮಾಡಿಕೊಂಡರೆ ಉತ್ತಮ

4. ಪಾದವನ್ನು ಶುದ್ಧಗೊಳಿಸಲು ಪ್ಯೂಮಿಕ್ ಸ್ಟೋನ್ ಬಳಸಿ.

5. ಪಾದಗಳು ಬೆವರುವುದನ್ನು ತಡೆಯಲು ವಾರಕ್ಕೆ ಎರಡು ಬಾರಿ ಪೆಡಿಕ್ಯೂರ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ಬಿಸಿ ನೀರಿನಲ್ಲಿ ಉಪ್ಪು ಬೆರೆಸಿ ಕಾಲನ್ನು ಅದ್ದಿದರೆ ಸಾಕು.

6. ಸ್ಪಿರಿಟ್ ನಲ್ಲಿ ಹತ್ತಿಯನ್ನು ಅದ್ದಿ ಅದರಿಂದ ಪಾದವನ್ನು ಶುದ್ಧಗೊಳಿಸಿ. ಆದರೆ ಸ್ಪಿರಿಟ್ ಬಳಸುವ ಮೊದಲು ಅದು ನಿಮ್ಮ ದೇಹಕ್ಕೆ ಹೊಂದುತ್ತದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಬೇಕು.

7. ಪ್ಲಾಸ್ಟಿಕ್, ಸಿಂಥೆಟಿಕ್ ಶೂಗಳನ್ನು ಧರಿಸಬಾರದು. ಲೆದರ್ ಮತ್ತು ಸಡಿಲವಾದ ಚಪ್ಪಲಿಗಳು ಕಾಲಿನಲ್ಲಿ ಬೆವರು ಮೂಡುವುದನ್ನು ಕಡಿಮೆಗೊಳಿಸುತ್ತದೆ.

8. ಕಾಟನ್ ಸಾಕ್ಸ್ ಗಳನ್ನು ಧರಿಸಿ ಎರಡು ದಿನಕ್ಕೊಮ್ಮೆ ಬದಲಾಯಿಸುತ್ತಿರಬೇಕು. ಶೂಗಳನ್ನು ಬಿಸಿಲಿನಲ್ಲಿರಿಸಿದರೆ ಅದು ಕ್ರಿಮಿ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯಕವಾಗುತ್ತದೆ. ಇದರಿಂದ ಬೆವರುವುದೂ ಕೂಡ ತಗ್ಗುತ್ತದೆ.ಸ

English summary

Cure Sweaty Feet Easily | Treat Stinky Feet | ಬೆವರಿನ ಪಾದಗಳನ್ನು ಸುಲಭವಾಗಿ ನಿವಾರಿಸುವುದು ಹೇಗೆ

Sweaty feet leads to stinky feet which can be embarrassing at social gatherings. Also sweaty feet makes it difficult to walk therefore keeping you uncomfortable. Sweating spoils the shoes and sandals and can also lead to foot infections. So here are some of the easy tips to cure sweaty feet.
Story first published: Monday, October 17, 2011, 11:58 [IST]
X
Desktop Bottom Promotion