For Quick Alerts
ALLOW NOTIFICATIONS  
For Daily Alerts

ಆಲೂ ಹಾಗಲಕಾಯಿ ಪಲ್ಯ, ಸ್ಟೆಪ್ ಬೈ ಸ್ಟೆಪ್ ರೆಸಿಪಿ

|

ಹಾಗಲಕಾಯಿ ಅಂದರೆ ಸಾಕು ಕೆಲವರು ಮುಖವನ್ನು ಸೊಟ್ಟಗೆ ಮಾಡುತ್ತಾರೆ. ಯಾರಪ್ಪ ಕಷಾಯ ರೀತಿಯ ಅಡುಗೆ ತಿನ್ನುತ್ತಾರೆ ಅಂತ ಅಂದುಕೊಳ್ಳುತ್ತಾರೆ. ಆದರೆ ಹಾಗಲಕಾಯಿ ಅಡುಗೆ ಮಾಡುವ ರೀತಿಯಲ್ಲಿ ಮಾಡಿದರೆ ತುಂಬಾ ರುಚಿಕರವಾಗಿರುತ್ತದೆ.

ಇಲ್ಲಿ ನಾವು ಹೆಚ್ಚು ಕಹಿ ಇಲ್ಲದೆ ಆಲೂಗಡ್ಡೆ ಹಾಕಿ ಮಾಡುವ ಹಾಗಲಕಾಯಿ ಫ್ರೈ ರೆಸಿಪಿಯನ್ನು ಸ್ಟೆಪ್ ಬೈ ಸ್ಟೆಪ್ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು

* ಹಾಗಲಕಾಯಿ 3-4( ಗಾತ್ರ ದೊಡ್ಡದಾಗಿದ್ದರೆ 2 ಸಾಕು)
* ಈರುಳ್ಳಿ 2
* ಹಸಿ ಮೆಣಸಿನಕಾಯಿ 2-3
* ಆಲೂಗಡ್ಡೆ 1
* ಸ್ವಲ್ಪ ಕೊತ್ತಂಬರಿ ಸೊಪ್ಪು
* ಸ್ವಲ್ಪ ಇಂಗು
* ಹುಣಸೆ ಹಣ್ಣು
* ಅರಿಶಿಣ ಪುಡಿ ಅರ್ಧ ಚಮಚ
* ಖಾರದ ಪುಡಿ(ಖಾರಕ್ಕೆ ತಕ್ಕಷ್ಟು)
* ಕೊತ್ತಂಬರಿ ಪುಡಿ ಅರ್ಧ ಚಮಚ
* ರುಚಿಗೆ ತಕ್ಕ ಉಪ್ಪು
* ಎಣ್ಣೆ

ಮಾಡುವ ವಿಧಾನ

ಸ್ಟೆಪ್ 1

ಸ್ಟೆಪ್ 1

ಹಾಗಾಲಕಾಯಿಯನ್ನು ತೊಳೆದು ಕತ್ತರಿಸಿ. ನಂತರ ಉಪ್ಪು ಹಾಗೂ ಹುಣಸೆ ಹಣ್ಣನ್ನು ಹಾಕಿ ಮಿಕ್ಸಿ ಮಾಡಿ 10 ನಿಮಿಷ ಇಡಿ. ಹೀಗೆ ಮಾಡಿದರೆ ಹಾಗಲಕಾಯಿ ಕಹಿ ಬಿಡುತ್ತದೆ.

ಸ್ಟೆಪ್ 2

ಸ್ಟೆಪ್ 2

ಈರುಳ್ಳಿಯನ್ನು ಕತ್ತರಿಸಿಡಿ.

ಸ್ಟೆಪ್ 3

ಸ್ಟೆಪ್ 3

ಹಸಿ ಮೆಣಸನ್ನೂ ಚಿಕ್ಕದಾಗಿ ಕತ್ತರಿಸಿ.

ಸ್ಟೆಪ್ 4

ಸ್ಟೆಪ್ 4

ಆಲೂಗಡ್ಡೆಯನ್ನು ಕತ್ತರಿಸಿ. ನಂತರ ಬಾಣಲಿಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಅದರಲ್ಲಿ ಕತ್ತರಿಸಿದ ಆಲೂಗಡ್ಡೆ ಹಾಕಿ ಫ್ರೈ ಮಾಡಿ. ನಂತರ ಅದನ್ನು ಉರಿಯಿಂದ ಇಳಿಸಿ ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ.

ಸ್ಟೆಪ್ 5

ಸ್ಟೆಪ್ 5

ಈಗ ಬಾಣಲಿಗೆ ಎಣ್ಣೆ ಹಾಕಿ , ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ, ನಂತರ ಇಂಗು ಹಾಕಿ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

ಸ್ಟೆಪ್ 6

ಸ್ಟೆಪ್ 6

ಈಗ ಹಸಿ ಮೆಣಸಿನಕಾಯಿ ಹಾಗೂ ಫ್ರೈ ಮಾಡಿದ ಆಲೂಗಡ್ಡೆ ಹಾಕಿ 2-3 ನಿಮಿಷ ಫ್ರೈ ಮಾಡಿ. .

ಸ್ಟೆಪ್ 7

ಸ್ಟೆಪ್ 7

ಈಗ ಹಾಗಲಕಾಯಿಯನ್ನು ಹಿಂಡಿ ಹಾಕಿ (ಹೀಗೆ ಮಾಡಿದರೆ ಕಹಿ ಕಮ್ಮಿಯಾಗುವುದು), ನಂತರ , ನಂತ ಅರಿಶಿಣ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ ಹಾಕಿ 3-4 ನಿಮಿಷ ಹುರಿಯಿರಿ.

ಸ್ಟೆಪ್ 8

ಸ್ಟೆಪ್ 8

ರುಚಿಗೆ ತಕ್ಕ ಉಪ್ಪನ್ನು ಸೇರಿಸಿ.

ಸ್ಟೆಪ್ 9

ಸ್ಟೆಪ್ 9

ಈಗ ಸೌಟ್ ನಿಂದ ಆಡಿಸುತ್ತಾ ಹುರಿಯಿರಿ. ನಂತರ ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಹಾಗಲಕಾಯಿ ಫ್ರೈ ರೆಡಿ.

English summary

Aloo Karela: Step By Step Recipe | Variety Of Fry Recipe | ಆಲೂ ಹಾಗಲಕಾಯಿ ಫ್ರೈ, ಸ್ಟೆಪ್ ಬೈ ಸ್ಟೆಪ್ ರೆಸಿಪಿ | ಅನೇಕ ಬಗೆಯ ಪಲ್ಯದ ರೆಸಿಪಿ

If you want to try this dry Indian side dish recipe, check out step by step procedure to prepare aloo karela. Serve this Indian side dish hot with rotis or dal and rice.
X
Desktop Bottom Promotion