For Quick Alerts
ALLOW NOTIFICATIONS  
For Daily Alerts

ಊಟದ ಸವಿಯನ್ನು ಹೆಚ್ಚಿಸುವ ಬೀಟ್‌ರೂಟ್ ಪಲ್ಯ

By Arshad
|

ಇಂದಿನ ದಿನಗಳಲ್ಲಿ ಆರೋಗ್ಯದ ಕಾಳಜಿ ಹೆಚ್ಚುತ್ತಿರುವುದು ಸಾಮಾನ್ಯವಾಗಿ ಎಲ್ಲಾ ವರ್ಗದ ಜನರಲ್ಲಿ ಕಂಡುಬರುತ್ತಿದೆ. ಅಂತೆಯೇ ಆಹಾರವಸ್ತುಗಳನ್ನು ಕೊಂಡುಕೊಳ್ಳಲು ಹಿಂದಿನ ದಿನಗಳಲ್ಲಿ ಹಿಂದೇಟು ಹಾಕುತ್ತಿದ್ದ ಜಾಯಮಾನ ಕಡಿಮೆಯಾಗಿದೆ. ಇಂದು ಕೊಂಚ ದುಬಾರಿಯಾದರೂ ಸರಿ, ಆರೋಗ್ಯಕರವಾಗಿರುವ ಎಲ್ಲಾ ತರಕಾರಿ ಮತ್ತು ಆಹಾರವಸ್ತುಗಳನ್ನು ಜನರು ಹೆಚ್ಚಾಗಿ ಕೊಳ್ಳುತ್ತಿದ್ದಾರೆ.

ಅಂತೆಯೇ ಒಂದು ಕಾಲದ ಶ್ರೀಮಂತರ ತರಕಾರಿಯಾಗಿದ್ದ ಬೀಟ್‌ರೂಟ್ ಸಹಾ ಇಂದು ಮನೆಮನೆಯ ಅಡುಗೆಗಳಲ್ಲಿ ಸ್ಥಾನ ಪಡೆದಿದೆ. ಬೀಟ್‌ರೂಟ್ ಅನ್ನು ಸಾಂಬಾರಿನೊಂದಿಗೆ ಹೋಳಿನ ರೂಪದಲ್ಲಿ ಸೇವಿಸಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಬದಲಿಗೆ ಪಲ್ಯದ ರೂಪದಲ್ಲಿ ಹೆಚ್ಚು ಇಷ್ಟಪಡುತ್ತಾರೆ. ಅಂತೆಯೇ ಇಂದು ಸುಲಭವಾಗಿ ತಯಾರಿಸಬಹುದಾದ ಬೀಟ್‌ರೂಟ್ ಪಲ್ಯದ ವಿಧಾನವನ್ನು ಆರಿಸಲಾಗಿದೆ. ಇದರೊಂದಿಗೆ ಕಡ್ಲೆಬೇಳೆಯನ್ನು ಬಳಸಿರುವ ಕಾರಣ ವಿಶಿಷ್ಟ ಸ್ವಾದವನ್ನು ನೀಡುತ್ತದೆ.

Beetroot Puriyal Recipe

ಬೀಟ್‌ರೂಟ್‌ನಲ್ಲಿರುವ ಉತ್ತಮ ಪ್ರಮಾಣದ ಕರಗುವ ನಾರು, ಆಂಟಿ ಆಕ್ಸಿಡೆಂಟುಗಳು, ವಿವಿಧ ವಿಟಮಿನ್‌ಗಳು ಮತ್ತು ಖನಿಜಗಳು ಈ ಪಲ್ಯವನ್ನು ಒಂದು ಪರಿಪೂರ್ಣ ಆಹಾರವನ್ನಾಗಿಸಿದೆ. ಈ ಪಲ್ಯದ ಜೊತೆಗೆ ಒಂದೆರಡು ಚಪಾತಿಗಳನ್ನು ತಿಂದರೂ ಇಡಿಯ ಊಟದಲ್ಲಿ ಲಭಿಸುವಷ್ಟು ಪೋಷಕಾಂಶಗಳು ಲಭ್ಯವಾಗುತ್ತದೆ. ಅಲ್ಲದೇ ಇದನ್ನು ಸುಲಭವಾಗಿ ಮತ್ತು ಶೀಘ್ರವಾಗಿ ತಯಾರಿಸಲು ಸಾಧ್ಯವಾದುದರಿಂದ ಮಧ್ಯಾಹ್ನದ ಮತ್ತು ರಾತ್ರಿ ಊಟಗಳಲ್ಲಿ ತಯಾರಿಸಲು ಸೂಕ್ತವಾಗಿದೆ. ಮಿಶ್ರ ವೆಜ್ ಪಲ್ಯದ ರೆಸಿಪಿ

*ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಸುಮಾರು ಹದಿನೈದು ನಿಮಿಷಗಳು
*ತಯಾರಿಕಾ ಸಮಯ: ಸುಮಾರು ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಬೀಟ್‌ರೂಟ್ -3 (ಮಧ್ಯಮಗಾತ್ರದ್ದು)-ಚಿಕ್ಕದಾಗಿ ತುಂಡುಗಳನ್ನಾಗಿಸಿದ್ದು
*ಈರುಳ್ಳಿ -2 (ಮಧ್ಯಮಗಾತ್ರದ್ದು)-ಚಿಕ್ಕದಾಗಿ ಹೆಚ್ಚಿದ್ದು
*ಮೆಣಸಿನ ಪುಡಿ - 1/2 ಚಿಕ್ಕ ಚಮಚ
*ಕಾಯಿತುರಿ - ಅರ್ಧ ಹೋಳು


*ಸಾಸಿವೆ - 1/2 ಚಿಕ್ಕ ಚಮಚ
*ಕಡ್ಲೆ ಬೇಳೆ - 2 ದೊಡ್ಡ ಚಮಚ
*ಅರಿಶಿನ ಪುಡಿ - ಒಂದು ಚಿಟಿಕೆ
*ಕರಿಬೇವಿನ ಎಲೆಗಳು-5-6
*ಜೀರಿಗೆ - 1/2 ಚಿಕ್ಕ ಚಮಚ
*ಉಪ್ಪು - ರುಚಿಗನುಸಾರ
*ಎಣ್ಣೆ - 1 ದೊಡ್ಡ ಚಮಚ
*ಬೆಳ್ಳುಳ್ಳಿ - ನಾಲ್ಕು ಎಸಳು - ನುಣ್ಣಗೆ ಅರೆದದ್ದು ಬರೀ 10 ನಿಮಿಷದಲ್ಲಿ ತಯಾರಿಸಿ ರುಚಿ ರುಚಿಯಾದ ಬೀಟ್‍ರೂಟ್ ಹಲ್ವಾ!

ವಿಧಾನ:
1) ಬಾಣಲೆಯನ್ನು ಮಧ್ಯಮ ಉರಿಯ ಮೇಲಿಟ್ಟು ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಬಳಿಕ ಜೀರಿಗೆ, ಕರಿಬೇವಿನ ಎಲೆ ಹಾಕಿ ಹುರಿಯಿರಿ.
2) ಬಳಿಕ ಈರುಳ್ಳಿ ಮತ್ತು ಕಡ್ಲೆಬೇಳೆ ಹಾಕಿ ಈರುಳ್ಳಿ ಕಂದುಬಣ್ಣ ಬರುವವರೆಗೆ ಹುರಿಯಿರಿ.
3) ಈಗ ಬೀಟ್‌ರೂಟ್ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
4) ನಂತರ ಮೆಣಸಿನ ಪುಡಿ, ಅರಿಶಿನ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿಯಿಂದ ಎಣ್ಣೆ ಬಿಡುವತನಕ ತಿರುವುತ್ತಿರಿ.
5) ಈಗ ಕೊಂಚ ನೀರು ಹಾಕಿ (ಬೀಟ್ ರೂಟ್ ಮುಳುಗುವಷ್ಟು) ಉರಿ ಕೊಂಚ ಹೆಚ್ಚಿಸಿ ಕುದಿಸಿ. ನಡುನಡುವೆ ತಿರುವುತ್ತಿರಿ. ಬೀಟ್ ರೂಟ್ ಬೇಯುವವರೆಗೆ ಕುದಿಸುವುದನ್ನು ಮುಂದುವರೆಸಿ. ನೀರು ಕಡಿಮೆ ಎನಿಸಿದರೆ ಕೊಂಚ ಸೇರಿಸಬಹುದು.
6) ಬೀಟ್ ರೂಟ್ ಬೆಂದಿದೆ ಎಂದು ತಿಳಿದ ಬಳಿಕ ಜ್ವಾಲೆಯನ್ನು ನಂದಿಸಿ ಮತ್ತೊಮ್ಮೆ ತಿರುವಿರಿ
7) ನಂತರ ಕಾಯಿತುರಿ ಹಾಕಿ ತಿರುವಿ. ಉಪ್ಪು ಸೇರಿಸಿ ಬಿಸಿಬಿಸಿ ಇರುವಂತೆಯೇ ಬಡಿಸಿ, ಮೆಚ್ಚುಗೆಗಳಿಸಿ. ಸರಳ ತಯಾರಿಕೆಯ ಹರಿಕಾರ ಆಲೂ-ಬೀನ್ಸ್ ಪಲ್ಯ

ಸಲಹೆ:
1) ಬೀಟ್‌ರೂಟ್‌ನಲ್ಲಿರುವ ವಿವಿಧ ಪೋಷಕಾಂಶಗಳು ರಕ್ತದ ಶುದ್ಧಿಯನ್ನು ಸಹಕರಿಸುವ ಕಾರಣ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಉತ್ತಮ ಆಹಾರವಾಗಿದೆ.
2) ಈ ಪಲ್ಯವನ್ನು ಚಪಾತಿ ರೊಟ್ಟಿಗಳೊಡನೆ ಸೇವಿಸಲು ರುಚಿಯಾಗಿರುತ್ತದೆ. ಮೊಸರನ್ನ, ಲಿಂಬೆ ಅನ್ನ ಅಥವಾ ಬಿಳಿಯನ್ನದ ಜೊತೆಗೂ ಸೇವಿಸಬಹುದು. ಕೇವಲ ಅನ್ನದ ಜೊತೆ ಸೇವಿಸಬೇಕಾದರೆ ಕೊಂಚ ನೀರು ಹೆಚ್ಚು ಸೇರಿಸಿದರೆ ಉತ್ತಮ.

English summary

Beetroot Puriyal Recipe

Eating healthy food is the most important thing these days. Making the best use of the easiest available veggies in your daily diet makes a difference. Today we here to present "Beetroot Puriyal Recipe", which is made using beetroot and channa dal. As beetroot is rich in dietary fiber, antioxidant compounds it also has a wide variety of vitamins and minerals & is a great deal to include this in your diet. have a look
X
Desktop Bottom Promotion