For Quick Alerts
ALLOW NOTIFICATIONS  
For Daily Alerts

ಈ ನಂಬಿಗಸ್ಥ ನಾಯಿ ಯಜಮಾನನ ಸಮಾಧಿ ಬಿಟ್ಟು ಕದಲುತ್ತಿಲ್ಲ

By Srinath
|

ಬೀಜಿಂಗ್, ನ. 27: ಸ್ವಾಮಿ ನಿಷ್ಠೆ, ನಂಬಿಕೆಯ ವಿಷಯದಲ್ಲಿ ನಾಯಿಯನ್ನು ಮೀರಿದ ಪ್ರಾಣಿ ಉಂಟೆ? ಆದರೆ ಆ ನಾಯಿ ತನ್ನ ನೇಮ, ನಿಷ್ಠೆಯನ್ನೆಲ್ಲ ಧಾರೆಯೆರೆಯುವುದು 'ನಂಬಿಕೆಯ ದ್ರೋಹಿ' ಎಂದೇ ಗುರುತಿಸಲ್ಪಡುವ ಮನುಷ್ಯ ಪ್ರಾಣಿಗೆ! ಆದರೆ ಯಜಮಾನ ಮತ್ತು ಸ್ವಾಮಿನಿಷ್ಠೆ ಅಂದರೆ ಹೀಗಿರಬೇಕು ಎಂಬುದಕ್ಕೆ ಇಲ್ಲೊಂದು ನಾಯಿ ಮತ್ತು ಯಜಮಾನ ಸಾಕ್ಷಿಯಾಗಿದ್ದಾರೆ.

ಚೀನಾದ ಲಿಯೊನಿಂಗ್ ಪ್ರಾಂತ್ಯದಲ್ಲಿ ಪಂಜಿಯಾತುನ್ ಎಂಬ ಗ್ರಾಮದಲ್ಲಿ 68 ವರ್ಷದ ಲಾವೊ ಪನ್ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಈ ನಾಯಿಯೊಂದಿಗೆ ಏಕಾಂಗಿಯಾಗಿ ವಾಸವಾಗಿದ್ದರು. ಇಂತಿಪ್ಪ ಲಾವೊ ಪನ್ ಮೊನ್ನೆ ಈ ಲೋಕಕ್ಕೆ ಗುಡ್ ಬೈ ಹೇಳಿದ್ದಾರೆ. ಆದರೆ ಆ ನಾಯಿಯೋ ಯಜಮಾನನ ಸಮಾಧಿ ಬಿಟ್ಟು ಕದಲುತ್ತಿಲ್ಲ. ಏಳು ದಿನಗಳಿಂದಲೂ ಅನ್ನಾಹಾರವಿಲ್ಲದೆ ಯಜಮಾನನಿಗಾಗಿ ಕಣ್ಣೀರು ಹಾಕುತ್ತಿರುವುದು ನೋಡುಗರ ಹೃದಯವನ್ನು ಕಲಕುತ್ತಿದೆ.

ಆಶ್ಚರ್ಯದ ಸಂಗತಿಯೆಂದರೆ, ಈ ನಾಯಿಯ ಗೋಳಾಟ ನೋಡಿ ಗ್ರಾಮದವರು ನಾಯಿಯನ್ನು ಉಪಾಯವಾಗಿ ಊರೊಳಕ್ಕೆ ಕರೆತಂದು ಸಾಕಿಕೊಳ್ಳಲು ಯತ್ನಿಸಿದರು. ಉಹುಃ ಏನೂ ಪ್ರಯೋಜನವಾಗಿಲ್ಲ. ನಾಯಿ ಯಾವುದೋ ಮಾಯದಲ್ಲಿ ಯಜಮಾನನ ಸಮಾಧಿ ಬಳಿಗೆ ಓಡಿಹೋಗಿ ತನ್ನ ಅಚಲ ನಿಷ್ಠೆ ತೋರುತ್ತಿದೆ.

ಬೈರೇಗೌಡರ ಸಾಕುನಾಯಿ ಪ್ರೇಮವೂ ಹೀಗಿತ್ತು: ಯಾಕೋ ಈ ಹೊತ್ತಿನಲ್ಲಿ ಕೋಲಾರದ ವೇಮಗಲ್ ನಲ್ಲಿ ದಶಕದ ಹಿಂದೆ ಕಡುಬಂದ ದೃಶ್ಯವೊಂದು ಮತ್ತೆ ಕಣ್ಣ ಮುಂದೆ ಹಾದುಹೋಗುತ್ತಿದೆ. ಹಿರಿಯ ರಾಜಕಾರಣಿ, ಕೃಷಿ ಸಚಿವ ಸಿ. ಬೈರೇಗೌಡರು ಮೃತಪಟ್ಟಾಗ ಅವರ ಸಾಕು ನಾಯಿ ಹೀಗೇ ಗೋಳಾಡಿತ್ತು.

English summary

China - Faithful dog stays at masters grave, ನಂಬಿಗಸ್ಥ ನಾಯಿ ಯಜಮಾನನ ಸಮಾಧಿ ಬಿಟ್ಟು ಕದಲುತ್ತಿಲ್ಲ

In a tear-jerking display of loyalty, a faithful dog in China has refused to leave his late master's graveside even after going seven days without food.
Story first published: Sunday, November 27, 2011, 11:03 [IST]
X