For Quick Alerts
ALLOW NOTIFICATIONS  
For Daily Alerts

ಸಂಗಾತಿ ಸುಮ್‌-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?

|

ಸಂಗಾತಿ ಏಕೋ ನನ್ನ ಮೇಲೆ ಡೌಟ್‌ ಪಡುತ್ತಿದ್ದಾರೆ, ನಾನೇನು ತಪ್ಪೇ ಮಾಡಿಲ್ಲ, ಆದರೂ ಅವರಿಗೆ ನನ್ನ ಮೇಲೆ ಸಂಶಯ, ಅವರ ಆ ವರ್ತನೆ ಮನಸ್ಸಿಗೆ ತುಂಬಾನೇ ನೋವಾಗುತ್ತೆ, ಅವರ ಜೊತೆ ಬಾಳಿಯಾದರೂ ಏನು ಪ್ರಯೋಜನ? ಅನಿಸುತ್ತಿದೆ ಎಂದು ಕೆಲವರು ತುಂಬಾ ಸಂಕಟ ಪಡುತ್ತಾರೆ.

ಹೌದು ಜೊತೆಯಲ್ಲಿ ಬಾಳುತ್ತಿರುವ ಸಂಗಾತಿ ನಾವು ಅವರಿಗೆ ಮೋಸ ಮಾಡುತ್ತಿರಬಹುದೇ ಎಂದು ಸಂಶಯ ವ್ಯಕ್ತಪಡಿಸಿದಾಗ ಮನಸ್ಸಿಗೆ ತುಂಬಾನೇ ನೋವಾಗುವುದು, ಇದೇ ಕಾರಣಕ್ಕೆ ಮನೆಯಲ್ಲಿ ದೊಡ್ಡ ಜಗಳವೇ ನಡೆಯಬಹುದು. ಅವರು ನಮ್ಮ ಮೇಲೆ ಸಂಶಯ ಪಡುತ್ತಿದ್ದಾರೆ ಎಂದ ಮೇಲೆ ಅವರ ಸಂಶಯ ಸುಳ್ಳು ಎಂದು ಸಾಬೀತು ಪಡಿಸಬೇಕಾಗಿರುವುದು ನಿಮ್ಮ ಕರ್ತವ್ಯವಾಗಿರುತ್ತದೆ. ಈ ರೀತಿ ಮಾಡಿದಾಗ ಮಾತ್ರ ಜಗಳ ಮುಕ್ತಾಯವಾಗುವುದು.

ನಿಮ್ಮ ಸಂಗಾತಿ ನಿಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದಾದರೆ ಏಕೆ ಎಂದು ಚಿಂತಿಸುವುದು ಒಳ್ಳೆಯದು...

ಅವರೇ ನಿಮಗೆ ಮೋಸ ಮಾಡುತ್ತಿರಬಹುದು: ಸುಮ್ಮನೆ ನಿಮ್ಮನ್ನು ಸಂಶಯ ಪಡುತ್ತಿದ್ದಾರೆ, ಕಾರಣವಿಲ್ಲದೆ ಜಗಳಕ್ಕೆ ಬರುತ್ತಿದ್ದಾರೆ ಎಂದಾದರೆ ಅವರು ತಪ್ಪು ಮಾಡುತ್ತಿರಬಹುದು, ಆದ್ದರಿಂದ ಅವರು ಅವರ ತಪ್ಪನ್ನು ಮರೆ ಮಾಚಲು ನಿಮ್ಮ ಮೇಲೆ ಗೂಬೆ ಕೂರಿಸುತ್ತಾರೆ. ಕಳ್ಳನ ಮನಸ್ಸು ಹುಳ್ಳ-ಹುಳ್ಳಗೆ ಅಂತಾರಲ್ಲ, ಅದೇ ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದರೆ ನಿಮ್ಮ ಮೇಲೆ ಸುಮ್ಮನೆ ತಪ್ಪು ಹೊರಿಸಲು ಪ್ರಯತ್ನಿಸಬಹುದು. ನೀವು ಸರಿಯಿಲ್ಲ ಅಂತ ಬಿಂಬಿಸಿ ಅವರು ಸರಿ ಎಂಬುವುದನ್ನು ಬಿಂಬಿಸುವ ಪ್ರಯತ್ನ ಮಾಡುತ್ತಿರಬಹುದು.

ನಿಮ್ಮ ಸಂಗಾತಿಯ ವರ್ತನೆ ಇತ್ತೀಚೆಗೆ ಬದಲಾಗಿದ್ದರೆ ಅವರು ತಪ್ಪು ಮಾಡುತ್ತಿದ್ದು ನಿಮ್ಮನ್ನು ಹೇಳುತ್ತಿರಬಹುದು.

ನಮ್ಮ ಮೇಲೆ ಸಂಶಯ ವ್ಯಕ್ತಪಡಿಸಿದಾಗ ಏನು ಮಾಡಬೇಕು?

ನಮ್ಮ ಮೇಲೆ ಸಂಶಯ ವ್ಯಕ್ತಪಡಿಸಿದಾಗ ಏನು ಮಾಡಬೇಕು?

ಸಂಶಯದ ಭೂತ ಹೊಕ್ಕರೆ ಆ ಸಂಸಾರ ಹಾಳಾದಂತೆ. ನಮ್ಮ ಸಂಗಾತಿ ನಮ್ಮ ಮೇಲೆ ಸಂಶಯ ವ್ಯಕ್ತಪಡಿಸಿದಾಗ ನಾವು ಜಗಳವಾಡಿ ಏನೂ ಪ್ರಯೋಜನವಿಲ್ಲ, ಅವರಿಗೆ ಈಗ ಸಂಶಯ ಬರಲು ಕಾರಣವೇನು ಎಂಬುವುದನ್ನು ಕೇಳಿ. ನಿಮ್ಮಲ್ಲಾದ ಯಾವುದೋ ಬದಲಾವಣೆಯಿಂದ ಆ ರೀತಿ ಅನಿಸುತ್ತಿದೆಯೇ ಅಥವಾ ನಿಮಗೆ ಯಾರಾದರೂ ಆಪ್ತರಾದಾಗ ಅವರಿಗೆ ಅಸುರಕ್ಷತೆ ಭಾವನೆ ಉಂಟಾಗಿದ್ದೇ ಎಂಬುವುದನ್ನು ತಿಳಿದುಕೊಳ್ಳಿ. ಅವರ ಸಂಶಯಕ್ಕೆ ಕಾರಣವೇನು ಎಂದು ತಿಳಿದರೆ ನಿಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಿ ಎಲ್ಲವೂ ಸರಿಯಾಗುತ್ತೆ.

ನಿಮ್ಮ ಫೋನ್‌ನ ಪಾಸ್‌ವರ್ಡ್‌ ಅವರಿಗೆ ಗೊತ್ತಿರಲಿ, ನೀವು ಯಾವುದೇ ವಿಷಯವನ್ನು ಮರೆ ಮಾಚುತ್ತಿರುವಂತೆ ಅವರಿಗೆ ಅನಿಸಬಾರದು, ಓಪನ್ ಆಗಿರಿ, ಅಗ ಅವರಿಗೂ ಸಂಶಯ ದೂರಾಗುವುದು.

ನಂಬಿಕೆ

ನಂಬಿಕೆ

ಸಂಸಾರದಲ್ಲಿ ನಂಬಿಕೆ ಎಂಬುವುದು ತುಂಬಾನೇ ಮುಖ್ಯ. ಈ ನಂಬಿಕೆಯನ್ನು ನಾವು ಗಳಿಸಬೇಕು. ನಮ್ಮ ಸಂಗಾತಿಯೊಂದಿಗೆ ಯಾವುದೇ ವಿಷಯವನ್ನು ಮುಚ್ಚಿಡಬಾರದು, ನಂಬಿಕೆಯ ಬುನಾದಿಯ ಮೇಲೆ ಸಂಸಾರ ಕಟ್ಟಬೇಕು, ಆಗ ಈ ಬಗೆಯ ಸಂಶಯ ಬರುವುದಿಲ್ಲ.

ಸಮಧಾನದಿಂದ ವರ್ತಿಸಿ

ಸಮಧಾನದಿಂದ ವರ್ತಿಸಿ

ಕಾರಣವಿಲ್ಲದೆ ಸಂಶಯಪಟ್ಟಾಗ ಮನಸ್ಸಿಗೆ ತುಂಬಾ ನೋವಾಗುತ್ತೆ,ಈ ಬಗೆಯ ಸಂಶಯ ಪಿಶಾಚಿ ಜೊತೆ ಬದುಕಬೇಕೇ ಎಂದು ಅನಿಸುವುದು, ಆದರೆ ಸಂಸಾರ ಎಂದರೆ ಏಳು ಬೀಳು ಸಹಜ, ನಿಮ್ಮ ಸಂಗಾತಿಯಲ್ಲಾದ ಬದಲಾವಣೆಗೆ ಏನು ಕಾರಣ ಎಂಬುವುದನ್ನು ಸಮಧಾನದಿಂದ ಯೋಚಿಸಿ, ಅವರ ಮೇಲೆ ಹೆಚ್ಚಿನ ಪ್ರೀತಿ ತೋರಿಸಿ. ಅವರಿಗೆ ಅವರು ಬಯಸಿದ ರೀತಿಯಲ್ಲಿ ಪ್ರೀತಿ ಸಿಗದೇ ಹೋದಾಗ ಆ ರೀತಿ ಅನಿಸಬಹುದು, ಆದ್ದರಿಂದ ಅವರನ್ನು ತುಂಬಾ ಪ್ರೀತಿಸಿ, ಮುಕ್ತವಾಗಿ ಮಾತನಾಡಿ ಸಂಶಯ ಕೊನೆಯಾಗುವುದು.

 ನಿಮ್ಮ ಬಗ್ಗೆಯೂ ಜಾಗ್ರತೆ

ನಿಮ್ಮ ಬಗ್ಗೆಯೂ ಜಾಗ್ರತೆ

ಸಂಶಯ ಇರುವವರ ಜೊತೆ ಬದುಕುವಾಗ ತುಂಬಾ ಎಚ್ಚರವಹಿಸಬೇಕು. ಏಕೆಂದರೆ ಅವರು ಹಾನಿಯುಂಟು ಮಾಡಬಹುದು. ಆದ್ದರಿಂದ ನಿಮ್ಮ ಬಗ್ಗೆ ಕೂಡ ಜಾಗ್ರತೆವಹಿಸಬೇಕು. ಅವರು ನಿಮಗೆ ದೈಹಿಕವಾಗಿ ತೊಂದರೆ ಕೊಡುವವರಾದರೆ ನೀವು ತುಂಬಾನೇ ಎಚ್ಚರವಹಿಸಬೇಕು.

 ಕೌನ್ಸಿಲಿಂಗ್ ಮಾಡಿಸಿ

ಕೌನ್ಸಿಲಿಂಗ್ ಮಾಡಿಸಿ

ನಿಮ್ಮ ಸಂಗಾತಿಗೆ ಏನು ಮಾಡಿದರೂ ಸಂಶಯ ಹೋಗದಿದ್ದರೆ ನೀವು ಕೌನ್ಸಿಲಿಂಗ್‌ ಮಾಡಿಸುವುದು ಒಳ್ಳೆಯದು, ಕೌನ್ಸಿಲಿಂಗ್‌ ಮಾಡಿಸಿದರೆ ಅವರಲ್ಲಿರುವ ಸಂಶಯ ಹೋಗಲಾಡಿಸಲು ಸಹಕಾರಿಯಾಗಿದೆ.

 ಪಾರದರ್ಶಕವಾಗಿರಿ

ಪಾರದರ್ಶಕವಾಗಿರಿ

ಅವರಿಗೆ ನೀವೇನೂ ಬಚ್ಚಿಡುತ್ತಿದ್ದೀರಿ ಎಂದು ಅನಿಸಬಾರದು, ಎಲ್ಲಾ ವಿಷಯವನ್ನು ಪಾರದರ್ಶಕವಾಗಿ ಇಟ್ಟುಕೊಳ್ಳಿ. ಯಾರನ್ನು ಭೇಟಿ ಮಾಡುವುದಾದರೂ ನಿಮ್ಮವರ ಜೊತೆ ಮುಕ್ತವಾಗಿ ಹೇಳಿ. ಯಾವುದೇ ಫೋನ್‌ ಕಾಲ್‌ ಬಂದರೂ ಅವರ ಎದುರಿಗೆ ಮಾತನಾಡಿ. ಇನ್ನು ಫೇಸ್‌ಬುಕ್‌ ಅಥವಾ ಸೋಷಿಯಲ್‌ ಮೀಡಿಯಾದಲ್ಲಿ ಚಟುವಟಿಕೆಯಿಂದ ಇರುವುದಾದರೆ ಅದರಿಂದ ನಿಮ್ಮ ಸಂಬಂಧಕ್ಕೆ ಹಾನಿಯಾಗದಂತೆ ಎಚ್ಚರವಹಿಸಿ.

English summary

Tips to Handle Being Accused of Cheating When Innocent in kannada

Life partner suspecting you: here are tips to handle being accused of cheating,
Story first published: Friday, January 27, 2023, 18:03 [IST]
X
Desktop Bottom Promotion