ನೀವೊಬ್ಬ ಒಳ್ಳೆಯ ಪತಿಯಾಗಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ

ಮದುವೆ ಎಂಬುದು ಎಲ್ಲರ ಜೀವನದಲ್ಲೂ ಅತೀ ಪ್ರಮುಖವಾದ ಘಟ್ಟ. ಇಲ್ಲಿಯವರೆಗೂ ಒಬ್ಬಂಟಿಯಾಗಿದ್ದ ನಿಮ್ಮ ಬದುಕಲ್ಲಿ ಮತ್ತೊಂದು ಜೀವದ ಪ್ರವೇಶವಾಗುತ್ತದೆ. ಮದುವೆ ಮುನ್ನ ನಿಮ್ಮಿಷ್ಟದಂತೆ ನಡೆದುಕೊಳ್ಳುತ್ತಿದ್ದ ನೀವು ಮದುವೆಯಾದ ನಂತರದಲ್ಲಿ ಜಂಟಿಯಾಗಿ ಒಬ್ಬರ ಹಿಡಿತದಲ್ಲಿ ಇರುತ್ತೀರಿ. ಅದೇ ನಿಮ್ಮ ಗಂಡ ಅಥವಾ ನಿಮ್ಮ ಹೆಂಡತಿ. ಹಿಡಿತ ಎಂದ ತಕ್ಷಣ ನಿಮ್ಮ ಮೇಲೆ ಪ್ರತಿ ವಿಷಯದಲ್ಲೂ ನಿಯಂತ್ರಣ ಸಾಧಿಸುವುದು ಎಂದಲ್ಲ. ಅದರ ಬದಲಿಗೆ ಪ್ರೀತಿಯ ತೆಕ್ಕೆಯಲ್ಲಿ ಬಂದಿಯಾಗುವುದು ಎಂದರ್ಥ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ನಿಮ್ಮ ಸಂಗಾತಿಯ ಮನದಲ್ಲಿ ಇಟ್ಟುಕೊಂಡೇ ತೆಗೆದುಕೊಳ್ಳಬೇಕು.

ಮದುವೆ ಎಂಬುದು ಎಲ್ಲರ ಜೀವನದಲ್ಲೂ ಅತೀ ಪ್ರಮುಖವಾದ ಘಟ್ಟ. ಇಲ್ಲಿಯವರೆಗೂ ಒಬ್ಬಂಟಿಯಾಗಿದ್ದ ನಿಮ್ಮ ಬದುಕಲ್ಲಿ ಮತ್ತೊಂದು ಜೀವದ ಪ್ರವೇಶವಾಗುತ್ತದೆ. ಮದುವೆ ಮುನ್ನ ನಿಮ್ಮಿಷ್ಟದಂತೆ ನಡೆದುಕೊಳ್ಳುತ್ತಿದ್ದ ನೀವು ಮದುವೆಯಾದ ನಂತರದಲ್ಲಿ ಜಂಟಿಯಾಗಿ ಒಬ್ಬರ ಹಿಡಿತದಲ್ಲಿ ಇರುತ್ತೀರಿ. ಅದೇ ನಿಮ್ಮ ಗಂಡ ಅಥವಾ ನಿಮ್ಮ ಹೆಂಡತಿ. ಹಿಡಿತ ಎಂದ ತಕ್ಷಣ ನಿಮ್ಮ ಮೇಲೆ ಪ್ರತಿ ವಿಷಯದಲ್ಲೂ ನಿಯಂತ್ರಣ ಸಾಧಿಸುವುದು ಎಂದಲ್ಲ. ಅದರ ಬದಲಿಗೆ ಪ್ರೀತಿಯ ತೆಕ್ಕೆಯಲ್ಲಿ ಬಂದಿಯಾಗುವುದು ಎಂದರ್ಥ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ನಿಮ್ಮ ಸಂಗಾತಿಯ ಮನದಲ್ಲಿ ಇಟ್ಟುಕೊಂಡೇ ತೆಗೆದುಕೊಳ್ಳಬೇಕು. ಮದುವೆಯ ಬಳಿಕ ಗಂಡನ ಪ್ರೀತಿಯಲ್ಲಿ ಹೆಂಡತಿ ಇರುವುದು ಅಥವಾ ಹೆಂಡತಿಯ ಪ್ರೀತಿಯ ಗುಂಗಿನಲ್ಲಿ ಗಂಡ ಕಾಲಕಳೆಯುವುದು ಸಾಮಾನ್ಯ. ಆದರೆ ಈ ಪ್ರೀತಿ ಶಾಶ್ವತವಾಗಿ ಉಳಿಯಬೇಕು ಎಂದರೆ ಅದಕ್ಕೆ ಕೆಲವೊಂದು ಟಿಪ್ಸ್ ಗಳನ್ನು ಗಂಡ ಅನುಸರಿಸಬೇಕಾಗುತ್ತದೆ.

ಅದನ್ನು ಈ ಲೇಖನದಲ್ಲಿ ಹೇಳಿದ್ದೇವೆ. ಸಾಧ್ಯವಾದಲ್ಲಿ ಅನುಸರಿಸಿ, ಸಂಸಾರವನ್ನು ಸುಖಮಯ ಮಾಡಿಕೊಳ್ಳಿ.

ಸಂಸಾರದಲ್ಲಿ ಪ್ರೀತಿ ಶಾಶ್ವತವಾಗಿರಾಲು ಸಲಹೆಗಳು:

ಸಂಸಾರದಲ್ಲಿ ಪ್ರೀತಿ ಶಾಶ್ವತವಾಗಿರಾಲು ಸಲಹೆಗಳು:

ಆಕೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿ:

ಸಂಬಂಧದಲ್ಲಿ ಇದು ಬಹಳ ಮುಖ್ಯ. ಹೊಂದಾಣಿಕೆ ಇಲ್ಲದೇ ಜೀವನ ಸಾಧ್ಯವಿಲ್ಲ. ಮದುವೆಯಾದ ಬಳಿಕ ಗಂಡ ಹೆಂಡತಿಯನ್ನು ಅರ್ಥ ಮಾಡಿಕೊಳ್ಳುವುದು ಅಥವಾ ಹೆಂಡತಿ ಗಂಡನನ್ನು ಅರ್ಥ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಅಷ್ಟೇ ಅಲ್ಲ ಇದು ನಡೆಯಲೇ ಬೇಕಾದ ಪ್ರಕ್ರಿಯೆ ಕೂಡ ಹೌದು. ಒಬ್ಬರ ಬೇಕು ಬೇಡಗಳನ್ನು ಇನ್ನೊಬ್ಬರು ಅರ್ಥ ಮಾಡಿಕೊಂಡು ಅದರಂತೆ ನಡೆದರೆ ಮಾತ್ರ ಜೀವನ ಖುಷಿಯಾಗಿರುತ್ತದೆ. ಹಾಗಂತ ಇದು ಒಂದೇ ದಿನದಲ್ಲಿ ನಡೆಯುವ ಸಂಭವಿಸುವುದು ಕಷ್ಟ. ಹಾಗಂತ ತಾಳ್ಮೆ ಕಳೆದುಕೊಳ್ಳುವುದಲ್ಲ. ಇದಕ್ಕೆ ಗಂಡನ ಜೊತೆ ಹೆಂಡತಿ ಅಥವಾ ಹೆಂಡತಿಯ ಜೊತೆ ಗಂಡ ಹೆಚ್ಚು ಕಾಲ ಕಳೆಯುವುದರಿಂದ ಒಬ್ಬರಿಗೆ ಒಬ್ಬರು ಮಾನಸಿಕವಾಗಿ ಹತ್ತಿರವಾಗುತ್ತಾರೆ. ಗಂಡನಿಗೆ ಯಾವ ವಸ್ತುಗಳು ಅಥವಾ ಯಾವ ವಿಚಾರಗಳು ಇಷ್ಟ ಎಂಬುದು ಹೆಂಡತಿಗೆ ತಿಳಿಯುತ್ತದೆ. ಅದೇ ರೀತಿ ಗಂಡನಿಗೂ ಕೂಡ ತನ್ನ ಪತ್ನಿಯ ಬಗ್ಗೆ ಸಂಪೂರ್ಣ ಅರಿವು ಮೂಡುತ್ತದೆ. ಇದಕ್ಕೆ ಸರಿಹೊಂದುವಂತೆ ಗಂಡ ನಡೆದುಕೊಳ್ಳಲು ಮುಂದಾದರೆ ಹೆಂಡತಿಗೆ ಬಹಳ ಇಷ್ಟವಾಗುತ್ತದೆ.

ಕನಿಷ್ಠ ವಾರಕ್ಕೆ ಒಂದು ದಿನವಾದರೂ ಹೆಂಡತಿಗೆ ಅಡುಗೆ ಮಾಡಿಕೊಡುವುದರಿಂದ ಆಕೆಯ ಮನಸ್ಸನ್ನು ಗೆಲ್ಲಬಹುದು. ವಾರದ ಕೊನೆಯಲ್ಲಿ ಹೆಂಡತಿ ಇಷ್ಟಪಟ್ಟಂತೆ ಹೊರಗಡೆ ಕರೆದುಕೊಂಡು ಹೋಗುವುದು, ಆಕೆಗೆ ಇಷ್ಟವಾದ ವಸ್ತುಗಳನ್ನು ತೆಗೆದು ಕೊಡುವುದು ಇಂತಹ ಸಣ್ಣ ಪುಟ್ಟ ಸಂತೋಷಗಳನ್ನು ನೀಡಿದರೆ ಸಂಸಾರ ಸುಖಮಯವಾಗಿರುತ್ತದೆ.

​ಹಣಕಾಸಿನ ಬಗ್ಗೆ ಮುಕ್ತವಾಗಿ ಮಾತನಾಡಿ:

​ಹಣಕಾಸಿನ ಬಗ್ಗೆ ಮುಕ್ತವಾಗಿ ಮಾತನಾಡಿ:

ಸಾಮಾನ್ಯವಾಗಿ ಮನೆಯ ಯಜಮಾನ ಗಂಡು ಎಂಬುದು ಶತಮಾನಗಳಿಂದಲೂ ನಡೆದುಕೊಂಡೇ ಬಂದಿದೆ. ಹಾಗಗೆಯೇ ಮದುವೆಯಾದ ಬಳಿಕ ಮನೆಯ ಯಜಮಾನ ನೀವೇ ಆಗಿರುತ್ತೀರಿ. ಹಾಗೆಂದು ಹಣದ ವಿಚಾರವನ್ನು ಅಥವಾ ಮನೆಯ ಖರ್ಚಿನ ವಿಚಾರವನ್ನು ಹೆಂಡತಿಯ ಬಳಿ ಹೇಳಬಾರದು ಎಂದೇನಿಲ್ಲ. ಪ್ರತಿ ವಿಚಾರದಲ್ಲೂ ನಿಮಗೆ ಸಾತ್ ಕೊಡಲು ಬಂದಿರುವ ನಿಮ್ಮ ಹೆಂಡತಿಯ ಬಳಿ ಈ ವಿಚಾರಗಳನ್ನು ಹಂಚಿಕೊಳ್ಳುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಒಬ್ಬ ಒಳ್ಳೆಯ ನಿಮ್ಮ ಮನಸ್ಸಿಗೆ ಹತ್ತಿರವಾಗಿರುವ ನಿಮ್ಮ ಹೆಂಡತಿ ಎಂಬ ಗೆಳತಿಯಿಂದ ಪರಿಹಾರಗಳು ಸಿಗುತ್ತವೆ. ಅಷ್ಟೇ ಅಲ್ಲ, ಮಹಿಳೆಯರು ಇಂತಹ ಹಣಕಾಸಿನ ವಿಚಾರಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಅನ್ನೊ ನಂಬಿಕೆಯಿದೆ. ಮನೆಗೆ ಸಂಬಂಧ ಪಟ್ಟ ಪ್ರತಿಯೊಂದು ಹಣಕಾಸಿನ ವಿಚಾರವನ್ನು ಗಂಡ ಹೆಂಡತಿ ಇಬ್ಬರೂ ಸಮನಾಗಿ ನೋಡಿಕೊಂಡರೆ ಮುಂದೆ ಯಾವುದೇ ತಾಪತ್ರಯಗಳು ಬರುವುದಿಲ್ಲ. ಹಣಕಾಸಿನ ವಿಚಾರವನ್ನು ಗಂಡ ಆಗಲಿ ಅಥವಾ ಹೆಂಡತಿಯಾಗಲಿ ಮುಚ್ಚಿಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಬದಲಿಗೆ ಹೆಚ್ಚು ತೊಂದರೆಗಳು ಎದುರಾಗುತ್ತವೆ. ಗಂಡ ಮುಚ್ಚಿಟ್ಟ ಹಣಕಾಸಿನ ವಿಚಾರವು ಮುಂದೆ ವಿಪರೀತ ಮಟ್ಟಕ್ಕೆ ಹೋದಾಗ ಹೆಂಡತಿಯಾಗಲಿ ಅಥವಾ ಬೇರೆ ಯಾರೇ ಆಗಲಿ ಏನನ್ನೂ ಮಾಡಲು ಸಾಧ್ಯವಿಲ್ಲ.

ಹೆಂಡತಿ ಇದ್ದಾಗ ಮೊಬೈಲ್, ಟಿವಿಯಿಂದ ದೂರವಿರಿ:

ಹೆಂಡತಿ ಇದ್ದಾಗ ಮೊಬೈಲ್, ಟಿವಿಯಿಂದ ದೂರವಿರಿ:

ಇತ್ತೀಚಿನ ದಿನಗಳಲ್ಲಿ ಸಂಬಂಧವನ್ನು ಹಾಳು ಮಾಡುತ್ತಿರುವುದೇ ಈ ಮೊಬೈಲ್, ಲ್ಯಾಪ್ ಟಾಪ್ ಗಳು. ತಮ್ಮ ಬಿಡುವಿನ ವೇಳೆಯನ್ನು ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯುದನ್ನು ಬಿಟ್ಟು ಯಾವಾಗಲೂ ಈ ಜೀವವಿಲ್ಲದ ವಸ್ತುಗಳ ಜೊತೆ ಕಳೆಯುತ್ತಾರೆ. ಇದರಿಂದ ನಿಜವಾದ ಸಂಬಂಧದ ಮೌಲ್ಯ ಹಾಳಾಗುತ್ತಿರುವುದು ಸತ್ಯ. ಈ ಸಮಯವನ್ನು ನಿಮ್ಮವರೊಡನೆ ಕಳೆದರೆ ನಿಮ್ಮ ನಡುವಿನ ಭಾಂದವ್ಯ ಹೆಚ್ಚಾಗುವುದು. ಗಂಡ-ಹೆಂಡತಿಯ ನಡುವೆ ಇರಬೇಕಾದ ನಿಜವಾದ ಪ್ರೀತಿ ಈ ಸಂದರ್ಭದಲ್ಲಿ ಮರೆಯಾಗುತ್ತಿರುವುದು ಅತ್ಯಂತ ವಿಷಾದನೀಯ. ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಂತರ ಗಂಡ ಹೆಂಡತಿಯ ಬಳಿ ಅಷ್ಟಾಗಿ ಮಾತನಾಡಲು ಇಷ್ಟ ಪಡದೇ ಸೋಫಾ ಮೇಲೆ ಕುಳಿತು ಟಿವಿ ನೋಡಲು ಮುಂದಾದರೆ ದಿನವಿಡೀ ಕಾಯುತ್ತಾ ಕುಳಿತಿರುವ ಹೆಂಡತಿಯ ಮನಸ್ಸಿಗೆ ನೋವಾಗುವುದಿಲ್ಲವೇ? ಇದರಿಂದ ನೀವು ಹತ್ತಿರವಾಗುವುದು ಬಿಟ್ಟು ನಿಮ್ಮ ನಡುವೆ ಅಂತರ ಬೆಳೆಯಲು ಕಾರಣವಾಗಬಹುದು. ಅದರ ಬದಲು ಸಮಯ ಸಿಕ್ಕಾಗ ಬೇರೆ ಬೇರೆ ಚಟುವಟಿಕೆಗಳಲ್ಲಿ ಜೊತೆಯಲ್ಲಿ ಪಾಲ್ಗೊಳ್ಳುವುದು, ಹೆಂಡತಿಯ ಕೆಲಸ ಕಾರ್ಯಗಳಲ್ಲಿ ನೆರವಾಗುವುದು, ಇತ್ಯಾದಿಗಳಿಂದ ಒಬ್ಬರಿಗೆ ಒಬ್ಬರು ಹತ್ತಿರವಾಗಬಹುದು. ಇದರಿಂದ ಹೆಂಡತಿಗೂ ಕೂಡ ಮನಸ್ಸಿಗೆ ಹೆಚ್ಚು ಖುಷಿಯಾಗುತ್ತದೆ.

​ಯಾವುದೇ ಚರ್ಚೆಯನ್ನು ಕೂಡಲೇ ಬಗೆಹರಿಸಿಕೊಳ್ಳಿ:

​ಯಾವುದೇ ಚರ್ಚೆಯನ್ನು ಕೂಡಲೇ ಬಗೆಹರಿಸಿಕೊಳ್ಳಿ:

ನಿಮ್ಮ ನಡುವಿನ ಮನಸ್ತಾಪವನ್ನು ಎಂದಿಗೂ ಎಳೆಯಲು ಹೋಗಬೇಡಿ. ಗಂಡ ಹೆಂಡತಿಯ ನಡುವೆ ಜಗಳ ಆದಂತಹ ಸಂದರ್ಭದಲ್ಲಿ ಯಾರಾದರೂ ಒಬ್ಬರು ಸೋತು ಸುಮ್ಮನಾಗಬಿಡಬೇಕು ಎಂದು ದೊಡ್ಡವರು ಹೇಳುತ್ತಾರೆ. ಆದರೆ ಇದು ಕೂಡ ಕೆಲವೊಮ್ಮೆ ವಿರುದ್ಧವಾಗಿ ತಿರುಗುತ್ತದೆ. ಯಾವುದಾದರೂ ವಿಚಾರವನ್ನು ಜಗಳ ಮಾಡಿ ಅಥವಾ ಚರ್ಚೆ ಮಾಡಿ ಅರ್ಧಕ್ಕೆ ಬಿಟ್ಟರೆ ಮತ್ತೊಮ್ಮೆ ಅದೇ ವಿಚಾರ ಇನ್ನಷ್ಟು ದೊಡ್ಡದಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಹೆಂಡತಿಯ ತಲೆಯಲ್ಲಿ ಆ ವಿಚಾರ ಕೊರೆಯುತ್ತಲೇ ಇರುತ್ತದೆ. ಹೀಗಾಗಿ ಅಂದಿನ ವಿಚಾರವನ್ನು ಅಲ್ಲೇ ಬಗೆಹರಿಸಿಕೊಂಡು ಮುಂದುವರೆಯುವುದು ಒಳ್ಳೆಯದು. ಇದರಿಂದ ಇಬ್ಬರ ಮನಸ್ಸಿನಲ್ಲಿ ಯಾವುದೇ ಗೊಂದಲಗಳು, ಮುಚ್ಚು ಮರೆಗಳು ಇಲ್ಲದಂತೆ ಚರ್ಚೆಯ ಗ್ರಾಸವಾಗಿರುವ ವಿಷಯ ಪರಿಹಾರವಾಗುತ್ತದೆ. ಇಬ್ಬರ ಮನಸ್ಸು ಕೂಡ ಹಗುರವಾಗುತ್ತದೆ. ಇಲ್ಲವಾದಲ್ಲಿ ಈ ವಿಚಾರ ತಲೆಯೊಳಗೆ ಇದ್ದು, ಚಿಂತೆ ಮಾಡಿ ನಿಮ್ಮ ಮನಸ್ಥಿತಿಯನ್ನು ಹಾಳುಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ.

​ಹೆಂಡತಿಯ ಮೇಲಿರುವ ಪ್ರೀತಿಯನ್ನು ಮುಕ್ತವಾಗಿ ಹೇಳಿ:

​ಹೆಂಡತಿಯ ಮೇಲಿರುವ ಪ್ರೀತಿಯನ್ನು ಮುಕ್ತವಾಗಿ ಹೇಳಿ:

ಇದು ಹೆಚ್ಚಿನ ಗಂಡಂದರು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಒಂದು. ತನ್ನ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದನ್ನು ಹೇಳದೇ ಇರುವುದು. ಹೆಂಡತಿಗೆ ಆಗಾಗ ಐ ಲವ್ ಯು ಎಂದು ಹೇಳಬೇಕು ಎಂದು ಗಂಡನಿಗೆ ಮನಸ್ಸಿನಲ್ಲಿ ಬಯಕೆ ಇರುತ್ತದೆ. ಆದರೆ ಅದಕ್ಕೆ ಸರಿಯಾದ ಸಂದರ್ಭ ಅಥವಾ ಸಮಯ ಸಿಕ್ಕಿರುವುದಿಲ್ಲ. ಅಥವಾ ಹೇಳಲು ಯಾವುದೇ ವಿಚಾರ ಅಡ್ಡಿ ಬಂದಿರಬಹುದು. ಒಂದು ವೇಳೆ ಸಿಕ್ಕಿದರೂ ಕೂಡ ಬೇರೆ ಬೇರೆ ಕಾರಣಗಳಿಗಾಗಿ ಸುಮ್ಮನೆ ಆಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೆ ನಿಮ್ಮ ಮನಸ್ಸಿನಲ್ಲಿರುವ ಪ್ರೀತಿಯ ಭಾವನೆಗಳನ್ನು ಸ್ವಲ್ಪ ಹೊಸದಾಗಿ ಹೇಳಿಕೊಳ್ಳಿ. ಇದಕ್ಕೆ ಯಾವುದೇ ಒಳ್ಳೆಯ ಸಂದರ್ಭಗಳ ಅಗತ್ಯವಿಲ್ಲ. ಇರುವ ಸಂದರ್ಭದಲ್ಲಿ ಹೇಳಲು ಮುಂದಾದರೆ ನಿಮ್ಮ ಹೆಂಡತಿಯ ಮನಸ್ಸಿನಲ್ಲಿ ಇದೊಂದು ಅಚ್ಚಳಿಯದ ನೆನಪಾಗಿ ಉಳಿದು ನಿಮ್ಮನ್ನು ಸದಾ ಪ್ರೀತಿಸುವಂತೆ ನಿಮ್ಮ ಹೆಂಡತಿಗೆ ಮನಸ್ಸು ಬರುತ್ತದೆ.

English summary

Tips To Be A Good Husband For A Happy Marriage In Kannada

Here we told about Tips to Be a Good Husband for a Happy Marriage in Kannada, have a look
Story first published: Wednesday, January 27, 2021, 14:00 [IST]
X
Desktop Bottom Promotion