Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಸಿಹಿಯಾದ ಸಂಬಂಧದಲ್ಲಿ ಕಹಿ ಬಿತ್ತುವ ವಿಚಾರಗಳಿವು
ಪ್ರೀತಿಯಲ್ಲಿ ಏರಿಳಿತಗಳು ಸಹಜ, ಆದರೆ ಸಂಬಂಧದಲ್ಲಿ ಕಹಿಯೇ ತುಂಬಿದ್ದರೆ, ಅಲ್ಲಿ ಪ್ರೀತಿಗೆ ಜಾಗವೆಲ್ಲಿಂದ ಬರಬೇಕು ಹೇಳಿ? ನಮ್ಮ ಮಾತು, ಹಾವ-ಭಾವ ನಡವಳಿಕೆ ಹೀಗೆ ಪ್ರತಿಯೊಂದು ನಮ್ಮ ಸಂಬಂಧದ ಮೇಲೆ ಪ್ರಭಾವ ಬೀರುವುದು. ಆದ್ದರಿಂದ ಪ್ರತಿಕ್ಷಣವನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಇಲ್ಲಿ ನಾವು ನಿಮ್ಮ ಸಂಬಂಧ ಕಹಿಮಾಡುವ ಅಂದರೆ ಸಂಬಂಧದಲ್ಲಿ ಬಿರುಕು ತರುವ ಕೆಲವೊಂದು ವಿಚಾರಗಳ ಬಗ್ಗೆ ಹೇಳಿದ್ದೇವೆ. ಇವುಗಳ ವಿಚಾರದಲ್ಲಿ ಎಂದಿಗೂ ನಿರ್ಲಕ್ಷ್ಯ ಮಾಡದಿರುವುದು ಉತ್ತಮ.
ಸಂಬಂಧದಲ್ಲಿ ಕಹಿತರುವ ವಿಚಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಮಾತಿನಲ್ಲಿ ವ್ಯಂಗ್ಯತೆ:
ಸಂಬಂಧದಲ್ಲಿ ವ್ಯಂಗ್ಯತೆ ಬರಲೇಬಾರದು. ನಿಮ್ಮ ಮಾತಿನ ಮೂಲಕ ಸಂಗಾತಿಗೆ ಕಿರಿಕಿರಿಯುಂಟಾಗುತ್ತಿದೆ ಅಂದರೆ ಅಲ್ಲಿ ಪ್ರೀತಿಗೆ ಜಾಗವೇ ಇರುವುದಿಲ್ಲ ಆದ್ದರಿಂದ ನಿಮ್ಮ ಮಾತುಗಳ ಮೂಲಕ ನೋಯಿಸುವುದು, ವ್ಯಂಗ್ಯವಾಗಿ ಮಾತನಾಡುವುದನ್ನು ಮಾಡಬೇಡಿ. ಇವುಗಳ ಈಗಾಗಲೇ ನೊಂದಿರುವ ಜೀವಕ್ಕೆ ಮತ್ತಷ್ಟು ನೋವು ಮಾಡುವುದು. ಪ್ರೀತಿಯಲ್ಲಿ ಕಷ್ಟದ ಸಮಯಗಳು ಬಂದೇ ಬರುತ್ತವೆ. ಹಾಗಂತ ಅದೇ ಸಮಯವನ್ನು ಬಳಸಿಕೊಂಡು ನೋವಿನ ಮಾತನಾಡಬಾರದು. ಈ ವೇಳೆ ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಬೇಕು. ಆಗ ಎಷ್ಟೋ ಮನಸ್ತಾಪಗಳು ಬರೆಹರಿಯುತ್ತವೆ.

ಸಮಯ ನೀಡದಿರುವುದು:
ನಿಮ್ಮ ಪ್ರಿತಿಸುವ ಹೃದಯ ಸಂತೋಷವಾಗಿರಬೇಕೆಂದರೆ ಮೊದಲು ಆ ಹೃದಯದ ಬಳಿ ಮನಸ್ಸು ಬಿಚ್ಚಿ ಮಾತನಾಡಿ. ಆ ಹೃದಯಕ್ಕಾಗಿ ಅಮೂಲ್ಯವಾದ ಸಮಯ ನೀಡಿ. ಏಕೆಂದರೆ ನಿಮ್ಮ ಸಂಗಾತಿ ಅದಕ್ಕಾಗಿ ಸದಾ ಕಾಯುತ್ತಿರುತ್ತಾಳೆ. ಅದು ಬಿಟ್ಟು ಸಿಕ್ಕ ಸಮಯದಲ್ಲಿ ನೋವು ನೀಡುವ ಮಾತುಗಳನ್ನಾಡಿದರೆ, ಸಂಬಂಧ ಆರೋಗ್ಯಕರವಾಗಿರುವುದಾದರೂ ಹೇಗೆ ಹೇಳಿ? ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಿರಿ. ಇದರ ಜೊತೆಗೆ ಆಕೆಯ ಮನಸ್ಸಿನಲ್ಲಿರುವ ವಿಚಾರಗಳನ್ನು ಅರಿತು ಬಗೆಹರಿಸಲು ಪ್ರಯತ್ನಿಸಿ.

ನಿರಂತರ ಜಗಳ:
ಸಂಬಂಧವೆಂದರೆ ಅಲ್ಲಿ ಸರಸ-ವಿರಸ ಸಾಮಾನ್ಯ. ಆದರೆ ವಿರಸವೇ ಬದುಕಾಗಾಬಾರದು. ಯಾವಾಗ ಜಗಳ-ಮನಸ್ತಾಪ ಕ್ರಮೇಣ ಹೆಚ್ಚಾಗುತ್ತವೆಯೋ ಆಗ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ಇದು ಉತ್ತಮ ಸಂಬಂಧದ ಲಕ್ಷಣವಲ್ಲ. ಹೆಚ್ಚಿನವರು ತಮ್ಮ ಸಂಗಾತಿಯೊಂದಿಗೆ ಸಣ್ಣ ಸಣ್ಣ ವಿಷಯಗಳಿಗಾಗಿ ಜಗಳವಾಡಲು ಪ್ರಾರಂಭಿಸುತ್ತಾರೆ. ಆದರೆ ಅದೇ ಮುಂದೆ ನಿಮ್ಮ ನಡುವಿನ ಬಂಧವನ್ನು ಮುರಿಯುವ ದೊಡ್ಡ ಕಾರಣವಾಗಬಾರದು. ಆದ್ದರಿಂದ ಇಂತಹ ಸಂದರ್ಭದಲ್ಲಿ ಜಗಳದ ಕಾರಣಗಳನ್ನು ಅರಿತುಕೊಂಡು, ಅವರ ಜೊತೆ ಮಾತನಾಡಲು ಪ್ರಯತ್ನಿಸಬೇಕು.

ಸಮಸ್ಯೆ ಹಂಚಿಕೊಳ್ಳದಿರುವುದು:
ಯಾವುದೇ ಸಮಸ್ಯೆಗಳನ್ನು ಹಂಚಿಕೊಂಡರೆ ಮಾತ್ರ ಅದಕ್ಕೆ ಪರಿಹಾರ ಕಂಡುಹಿಡಿಯಲು ಸಾಧ್ಯವಾಗುವುದು. ನೀವು ನಿಮಗಾಗುತ್ತಿರುವ ಸಮಸ್ಯೆಯನ್ನು ನಿಮ್ಮ ಸಂಗಾತಿಯ ಬಳಿ ಹೇಳಿಕೊಳ್ಳದೇ, ನಿಮ್ಮ ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗುತ್ತಿದ್ದರೆ, ಅದರಿಂದ ಏನೂ ಪ್ರಯೋಜನ ಸಿಗುವುದಿಲ್ಲ. ಈ ಕಾರಣದಿಂದಾಗಿ ಸಂಬಂಧದಲ್ಲಿ ಸಮಸ್ಯೆಗಳು ಹೆಚ್ಚಾಗಲು ಆರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡಬೇಕು, ಒಟ್ಟಿಗೆ ಸಮಯ ಕಳೆಯಬೇಕು, ಎಲ್ಲವನ್ನು ಹೇಳಿಕೊಳ್ಳಬೇಕು. ಆಗ ಅದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದು.

ಅತಿಯಾದ ಆಲೋಚನೆ:
ನಿಜ, ಇದು ಕೂಡ ಸಂಬಂಧದಲ್ಲಿ ಕಹಿ ಉಂಟುಮಾಡಲು ಕಾರಣವಾಗುವುದು. ಯಾವುದೋ ಒಂದು ವಿಚಾರದ ಬಗ್ಗೆ ಅತಿಯಾಗಿ ಯೋಚಿಸುವುದರಿಂದ ನಿಮ್ಮ ಮನಸ್ಸು ಕೆಡುವುದರ ಜೊತೆಗೆ ನಿಮ್ಮ ಸಂಗಾತಿಯ ಮನಸ್ಸನ್ನು ಹಾಳು ಮಾಡುತ್ತೀರಿ. ಆದ್ದರಿಂದ ಇಲ್ಲದ ವಿಚಾರದ ಬಗ್ಗೆ ಅತಿಯಾಗಿ ಯೋಚಿಸುವುದನ್ನು ಬಿಡಿ. ಅಂತಹದ್ದೇನಾದರೂ ತಲೆಯೊಳಗೆ ಕೊರೆಯುತ್ತಿದ್ದರೆ, ಕೂಡಲೇ ನಿಮ್ಮ ಸಂಗಾತಿಯ ಜೊತೆ ಕೂತು ಮಾತನಾಡಿ, ಪರಿಹರಿಸಿಕೊಳ್ಳಿ.



Click it and Unblock the Notifications
