Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಬೆಂಗಳೂರು: ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ವ್ರತದ ಸಿದ್ಧತೆಗಳು ಕಳೆಗಟ್ಟಿದ್ದು, ರಾಜಧಾನಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕೃಷ್ಣರಾಜೇಂದ್ರ (ಕೆ.ಆರ್.) ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಪೂಜೆಗೆ ಕೇವಲ ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಬೆಳಗಿನ ಜಾವದಿಂದಲೇ ಗ್ರಾಹಕರು ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಆದರೆ, ಹಬ್ಬದ ಈ ಸಂದರ್ಭವನ್ನು ಬಂಡವಾಳ ಮಾಡಿಕೊಂಡಿರುವ ವ್ಯಾಪಾರಿಗಳು ಹೂವು ಹಾಗೂ ಹಣ್ಣುಗಳ ದರವನ್ನು ದಿಢೀರನೆ ಹೆಚ್ಚಿಸಿದ್ದು, ಸಾರ್ವಜನಿಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ವರಮಹಾಲಕ್ಷ್ಮೀ ಪೂಜೆ ಹಾಗೂ ಮನೆ ಅಲಂಕಾರಕ್ಕೆ ಹೂವು-ಹಣ್ಣುಗಳಿಗೆ ಭಾರಿ ಬೇಡಿಕೆ ಬಂದಿರುವುದನ್ನೇ ಆಧರಿಸಿ ದರವನ್ನು ದುಪ್ಪಟ್ಟು ಹಾಗೂ ಮುಮ್ಮಡಿ ಏರಿಕೆ ಮಾಡಲಾಗಿದೆ. ಕಳೆದ ವಾರ ಸಾಮಾನ್ಯವಾಗಿದ್ದ ಮಾರುಕಟ್ಟೆ ದರಗಳಿಗೆ ಹೋಲಿಸಿದರೆ, ಪ್ರಸ್ತುತ ಪ್ರತಿಯೊಂದು ವಸ್ತುವಿನ ಬೆಲೆಯಲ್ಲೂ ಗಣನೀಯ ಜಿಗಿತ ಕಂಡುಬಂದಿದೆ.

ಹೂವುಗಳ ದರ ಹೋಲಿಕೆ (ಪ್ರತಿ ಕೆಜಿ / ಹಾರಕ್ಕೆ):
| ಹೂವಿನ ವಿವರ | ಕಳೆದ ವಾರದ ದರ | ಪ್ರಸ್ತುತ ದರ |
|---|---|---|
| ಸೇವಂತಿಗೆ | ₹150 | ₹450 |
| ಮಲ್ಲಿಗೆ | ₹500 | ₹1,200 |
| ಕನಕಾಂಬರ | ₹2,000 | ₹5,000 – ₹6,000 |
| ತಾವರೆ ಹಾರ | ₹500 | ₹2,500 |
| ಗುಲಾಬಿ ಹಾರ | ₹200 | ₹500 |
| ಸಂಪಿಗೆ ಹಾರ | ₹500 | ₹3,500 |
| ಮಲ್ಲಿಗೆ ಹಾರ | ₹500 | ₹1,500 |
| ದುಂಡು ಮಲ್ಲಿಗೆ ಹಾರ | ₹2,000 | ₹5,000 |
ಹಣ್ಣುಗಳ ದರ ಹೋಲಿಕೆ (ಪ್ರತಿ ಕೆಜಿಗೆ):
| ಹಣ್ಣಿನ ವಿವರ | ಕಳೆದ ವಾರದ ದರ | ಪ್ರಸ್ತುತ ದರ |
|---|---|---|
| ಸೇಬು | ₹110 | ₹270 |
| ದಾಳಿಂಬೆ | ₹120 | ₹260 |
| ಕಿತ್ತಳೆ | ₹80 | ₹180 |
| ಏಲಕ್ಕಿ ಬಾಳೆಹಣ್ಣು | ₹50 | ₹100 |
| ಮೂಸಂಬಿ | ₹100 | ₹150 |
| ದ್ರಾಕ್ಷಿ | ₹70 | ₹170 |
| ಅನಾನಸ್ | ₹60 | ₹150 |
ಬೆಲೆಗಳು ಎಷ್ಟೇ ದುಬಾರಿಯಾಗಿದ್ದರೂ, ವರ್ಷಕ್ಕೊಮ್ಮೆ ಬರುವ ಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾ-ಭಕ್ತಿಗಳಿಂದ ಆಚರಿಸಲೇಬೇಕೆಂಬ ಉತ್ಸಾಹದಲ್ಲಿ ಸಾರ್ವಜನಿಕರು ದರ ಏರಿಕೆಯ ನಡುವೆಯೂ ಸಾಲಿನಲ್ಲಿ ನಿಂತು ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಪರಿಣಾಮವಾಗಿ ಮಾರುಕಟ್ಟೆಯ ಸುತ್ತಮುತ್ತ ಭಾರಿ ಜನಸಂದಣಿ ಉಂಟಾಗಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.



Click it and Unblock the Notifications
