Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ನೀವು ಸರಿಯಾದ ವ್ಯಕ್ತಿಯನ್ನು ಮದುವೆಯಾಗಿದ್ದೀರಿ ಎಂದು ಹೇಳುವ ಸೂಚನೆಗಳಿವು
ಮದುವೆ ಎಂಬುದು ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟ. ಅಲ್ಲಿಯವರೆಗೆ ಏಕಾಂಗಿಯಾಗಿದ್ದ ಜೀವನಕ್ಕೆ ಇನ್ನೊಂದು ವ್ಯಕ್ತಿಯ ಆಗಮನ. ಅವರ ಜೊತೆ ಉಳಿದ ಜೀವನ ಕಳೆಯುವುದು ಒಂದು ಮಹತ್ವದ ನಿರ್ಧಾರ. ಆದರೆ ಅದನ್ನು ಬಹಳ ಜಾಗರೂಕತೆಯಿಂದ ತೆಗೆದುಕೊಳ್ಳಬೇಕಾಗುತ್ತದೆ.
ಒಂದು ವೇಳೆ ನೀವು ತೆಗೆದುಕೊಂಡ ನಿರ್ಧಾರ ತಪ್ಪಾಗಿದ್ದರೆ ನೀವಷ್ಟೇ ಅಲ್ಲ, ನಿಮ್ಮ ಕುಟುಂಬವೂ ಸಹಿತ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಸಂತೋಷದ ದಾಂಪತ್ಯವನ್ನು ನಡೆಸಲು ಸರಿಯಾದ ವ್ಯಕ್ತಿಯನ್ನು ಆರಿಸುವುದು ಮುಖ್ಯ.
ಹಾಗಾದ್ರೆ ನೀವು ಸರಿಯಾದ ವ್ಯಕ್ತಿಯನ್ನು ಮದುವೆಯಾಗಿದ್ದೀರಾ ಅಥವಾ ಇಲ್ಲವೋ ಎಂದು ಚಿಂತಿಸುತ್ತಿದ್ದೀರಾ? ಈ ಸ್ಟೋರಿ ನೋಡಿ. ನೀವು ಸರಿಯಾದ ವ್ಯಕ್ತಿಯನ್ನು ಮದುವೆಯಾಗಿದ್ದರೆ ಅವರು ಈ ಚಿಹ್ನೆಗಳನ್ನು ಹೊಂದಿರುತ್ತಾರೆ.

ಅವರೊಂದಿಗೆ ನೀವು ನೀವಾಗಿರುತ್ತೀರಿ:
ಹೌದು, ನಿಮ್ಮ ಸಂಗಾತಿಯ ಜೊತೆಗೆ ನೀವು ನಿಮ್ಮತನವನ್ನು ಉಳಿಸಿಕೊಳ್ಳು ಸಾಧ್ಯವಾದರೆ ಅವರು ಉತ್ತಮ ಆಯ್ಕೆ ಎಂದರ್ಥ. ನಿಮಗೆ ಹೇಗೆ ಬೇಕೋ ಹಾಗೆ ಇರಲು ನಿಮಗೆ ಸಾಧ್ಯವಾದರೆ ನಿಮ್ಮ ಆಯ್ಕೆ ಸರಿಯಾಗಿದೆ ಎಂದರ್ಥ. ಅವರೊಂದಿಗಿದ್ದಾಗ ನಿಮ್ಮ ನೈಜ ವ್ಯಕ್ತಿತ್ವ ಹೊರಹಾಕಲು ಸಾಧ್ಯವಾಗುತ್ತಿದೆ ಎಂದರೆ ಅವರು ನಿಮಗೆ ಉತ್ತಮ ಆಯ್ಕೆ.

ಯಾವುದೇ ವಿಚಾರವನ್ನು ಹಂಚಿಕೊಳ್ಳುತ್ತೀರಿ:
ಮೇಲೆ ಹೇಳಿದಂತೆ, ಯಾವುದೇ ವಿಚಾರವನ್ನು ಹೇಳಿಕೊಳ್ಳಲು ನೀವು ಹಿಂಜರಿಯುವುದಿಲ್ಲ. ಅದು ನಿಮ್ಮ ಜೀವನದಲ್ಲಾದ ಅತೀ ಕಹಿ ಘಟನೆಯಾದರೂ ಸರಿ ಅಥವಾ ಯಾರಿಗೂ ಹೇಳಲೇಬಾರದು ಎಂದು ಅಂದುಕೊಂಡ ವಿಚಾರವಾದರೂ ಸರಿಯೇ ಅವರ ಬಳಿ ಹೇಳಿಕೊಳ್ಳಲು ಮುಂದಾಗುತ್ತೀರಿ. ಯಾವ ವಿಚಾರವಾದರೂ ಅವರ ಬಳಿ ಹೇಳಿಕೊಂಡರಷ್ಟೇ ನಿಮಗೆ ಸಮಾಧಾನದ ಅನುಭವ. ಇಂತಹ ಸಂಗಾತಿಯನ್ನು ಪಡೆದಿದ್ದರೆ ನೀವು ಉತ್ತಮ ಜೀವನ ಸಂಗಾತಿ ಹೊಂದಿದ್ದೀರಿ ಎಂದರ್ಥ.

ಅವರೊಂದಿಗೆ ಸದಾ ಹೆಜ್ಜೆ ಹಾಕುತ್ತಿರುತ್ತೀರಿ:
ನೀವಿಬ್ಬರೂ ಒಟ್ಟಿಗೆ ಕುಳಿತು ವೈನ್ ಕುಡಿಯುವುದು, ವಿದೇಶ ಪ್ರಯಾಣ ಮಾಡುವುದು ಮತ್ತು ರಸ್ತೆ ಬದಿಯ್ಲಿ ಇಬ್ಬರೇ ನಡೆಯುತ್ತಾ ಸಾಗುವುದರಿಂದ ನಿಮ್ಮಿಬ್ಬರಿಗೂ ಸಂತೋಷ ಸಿಗುತ್ತಿದೆಯೇ ಹಾಗಾದರೆ ನೀವು ಉತ್ತಮ ಸಂಗಾತಿಯನ್ನು ಆಯ್ಕೆ ಮಾಡಿದ್ದೀರಿ ಎಂದರ್ಥ.

ಆಕೆ ಅಥವಾ ಆತ ಉತ್ತಮ ಪೋಷಕರ ಎಂಬ ಭಾವನೆ ಬರುವುದು:
ನಿಮ್ಮ ಕುಟುಂಬವನ್ನು ವಿಸ್ತರಿಸಲು ನೀವು ಬಯಸಿದರೆ, ಮಕ್ಕಳನ್ನು ಪ್ರೀತಿಸುವ ವ್ಯಕ್ತಿಯನ್ನು ನೀವು ಮದುವೆಯಾಗಬೇಕು. ಮಕ್ಕಳ ಮೇಲೆ ಆಸೆ, ಆರೈಕೆ ಹಾಗೂ ಕಾಳಜಿ ಇರುವವರನ್ನು ವಿವಾಹವಾಗದರೆ ಉತ್ತಮ. ಒಂದು ಪಕ್ಷ ಅವರಿಗೆ ಮಗುವನ್ನು ಹಿಡಿಯಲು ಭಯವಿದ್ದರೂ, ಅವನ ಗುಣಗಳು ಮತ್ತು ಸ್ವಭಾವದಿಂದ ಅವನು ಯಾವ ರೀತಿಯ ಪೋಷಕ ಎಂಬುದು ನಿಮಗೆ ಚೆನ್ನಾಗಿ ಅರ್ಥವಾಗುತ್ತದೆ.

ಸದಾ ಅವರೊಂದಿಗೆ ಇರಲು ಇಚ್ಛಿಸುತ್ತೀರಿ:
ಕೆಲವು ಸಂದರ್ಭಗಳಲ್ಲಿ, ಜನರು ಸಂಬಂಧಗಳಲ್ಲಿ ಸಿಲುಕಿಕೊಳ್ಳಬಹುದು, ಅದು ಅವರಿಗೆ ಉಸಿರುಕಟ್ಟುವಂತೆ ಮಾಡುತ್ತದೆ. ಅಲ್ಲಿ ಇರಲು ಆಗದೇ ಹೊರಬರಲು ಆಗದೇ ಒದ್ದಾಟ ನಡೆಸುತ್ತಿರುತ್ತಾರೆ. ಆದರೆ ನೀವು ಒಳ್ಳೆಯ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದೇ ಆದಲ್ಲಿ , ಈ ರೀತಿ ಆಗುವುದಿಲ್ಲ. ಸದಾ ಅವರ ಜೊತೆಯೇ ಇರಲು ನಿಮ್ಮ ಮನಸ್ಸು ಹಾತೊರೆಯುತ್ತಿರುತ್ತದೆ.

ನಿಮಗೆ ಶುದ್ಧ ಪ್ರೀತಿ ನೀಡುತ್ತಾರೆ:
ನೀವು ಹೇಗೇ ಇರಲಿ ನಿಮ್ಮ ಸಂಗಾತಿ ಉತ್ತಮವಾದ ಆಯ್ಕೆಯಾಗಿದ್ದರೆ ನಿಮಗೆ ಪ್ರೀತಿಯಷ್ಟೇ ನೀಡುತ್ತಿರುತ್ತಾರೆ. ಅದು ಯಾವುದೇ ಸಂದರ್ಭವಿರಲಿ, ನೀವು ಜಗಳವಾಡಿದ್ದರೂ ಅಥವಾ ಏನಾದರೂ ಸಮಸ್ಯೆ ಉದ್ಭವಿಸಿದಾಗಲೂ ನಿಮ್ಮನ್ನೂ ಪ್ರೀತಿಸುವುದನ್ನು ಎಂದಿಗೂ ಮರೆಯುವುದಿಲ್ಲ.



Click it and Unblock the Notifications











