Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ನಿಮ್ಮ ಬಾಳಸಂಗಾತಿಯಾಗುವವರಲ್ಲಿ ಈ ಅಭ್ಯಾಸಗಳಿದ್ದರೆ, ಮದುವೆಯ ಬಗ್ಗೆ ಇನ್ನೊಮ್ಮೆ ಯೋಚಿಸಿ
ಜೀವನದಲ್ಲಿ ಮದುವೆ ಎಂಬುದು ಬಹಳ ದೊಡ್ಡ ನಿರ್ಧಾರ. ಈ ಅಭೂತಪೂರ್ವ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಏಕೆಂದರೆ ಮದುವೆಯಿಂದ ನಿಮ್ಮ ಜೀವನವೇ ಬದಲಾಗುವುದು, ಅದು ಒಳ್ಳೆಯ ರೀತಿಯೂ ಇರಬಹುದು ಅಥವಾ ಕೆಟ್ಟ ರೀತಿಯಲ್ಲಾದರೂ ಆಗಬಹುದು. ಆದ್ದರಿಂದ ವೈವಾಹಿಕ ಜೀವನವೂ ಯಾವುದೇ ಹಳಿ ತಪ್ಪಪಾರದೆಂದರೆ ನಿಮ್ಮ ಸಂಗಾತಿಯ ಆಯ್ಕೆಯಲ್ಲಿ ಬಹಳ ಜಾಗರೂಕರಾಗಿರುವುದು ತುಂಬಾ ಮುಖ್ಯ.
ಜೀವನ ಸಂಗಾತಿಯನ್ನು ಆರಿಸಿಕೊಳ್ಳುವಾಗ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ. ಇಲ್ಲವಾದರೆ, ನಂತರದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ವಿವಾಹವಾಗಲು ಸಂಗಾತಿ ಆಯ್ಕೆ ಮಾಡಿಕೊಳ್ಳುವ ಮುನ್ನ ಅಥವಾ ಪ್ರೀತಿ ಮಾಡುತ್ತಿರುವವರು ಮದುವೆಗೆ ಓಕೆ ಹೇಳುವ ಮೊದಲು ಗಮನ ಕೊಡಬೇಕಾದ ಪ್ರಮುಖ ವಿಷಯಗಳು ಯಾವುವು ಎಂಬುದನ್ನು ನೋಡಿಕೊಂಡು ಬರೋಣ.
ಸಂಗಾತಿ ಆಯ್ಕೆ ಮಾಡುವಾಗ ನೆನಪಿಡಬೇಕಾದ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:

ಪ್ರತಿ ವಿಚಾರಕ್ಕೂ ನಕಾರಾತ್ಮಕ ಪ್ರತಿಕ್ರಿಯೆ:
ಕೆಲವೊಮ್ಮೆ ಪರಸ್ಪರರ ಒಳಿತಿಗಾಗಿ ವಿಷಯಗಳನ್ನು ಹೇಳುವುದು ಒಳ್ಳೆಯದು, ಆದರೆ ಪ್ರತಿಯೊಂದು ವಿಚಾರಕ್ಕೂ ನಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರೆ ಅಥವಾ ನೀವು ಯಾವುದೇ ಕೆಲಸ ಮಾಡಲು ಹೊರಟರೂ ಅದಕ್ಕೆ ಅಡ್ಡಪಡಿಸುತ್ತಲೇ ಇದ್ದರೆ, ನೀವು ಸ್ವಲ್ಪ ಎಚ್ಚರಿಕೆಯಿಂದ ಮದುವೆಯ ನಿರ್ಧಾರ ಮಾಡುವುದು ಒಳ್ಳೆಯದು ಏಕೆಂದರೆ, ನಿಮ್ಮನ್ನು ಪ್ರೀತಿಸುವ ವ್ಯಕ್ತಿ, ಪ್ರತಿ ಕೆಲಸದಲ್ಲೂ ನಿಮಗೆ ಬೆನ್ನೆಲುಬಾಗಿ ನಿಲ್ಲಬೇಕೇ ಹೊರತು, ಪ್ರತಿ ಕೆಲಸಕ್ಕೂ ಅಡ್ಡಗೋಡೆಯಂತಲ್ಲ. ಹೀಗೆ ಪ್ರತಿಯೊಂದಕ್ಕೂ ಋಣಾತ್ಮಕವಾಗಿ ಪ್ರತಿಕ್ರಿಯಿಸಿದರೆ ಮುಂದೆ ಸಮಸ್ಯೆಗಳಾಗಿ ಬದಲಾಗಬಹುದು. ಆದ್ದರಿಂದ ಇಂತಹ ಅಭ್ಯಾಸಗಳಿದ್ದರೆ, ಅವರ ಜೊತೆ ಮದುವೆ ಉತ್ತಮ ಆಯ್ಕೆಯಲ್ಲ.

ಸದಾ ಮೇಲ್ವಿಚಾರಣೆ:
ಪ್ರತಿಯೊಬ್ಬರೂ ಕಾಳಜಿ ಮಾಡುವಂತಹ ಸಂಗಾತಿಯನ್ನು ಇಷ್ಟಪಡುತ್ತಾರೆ, ಆದರೆ ಕಾಳಜಿ ಮತ್ತು ವ್ಯಂಗ್ಯ ಅಥವಾ ಅನುಮಾನದ ಮೇಲ್ವಿಚಾರಣೆ ನಡುವೆ ವ್ಯತ್ಯಾಸವಿದೆ. ನಿಮ್ಮ ಸಂಗಾತಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸವನ್ನು ಹೊಂದಿದ್ದರೆ, ಆತುರದಲ್ಲಿ ಮದುವೆಯ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನೀವು ಏನು ಮಾಡುತ್ತೀರಿ, ಎಲ್ಲಿ ಹೋಗುತ್ತೀರಿ, ಯಾರ ಜೊತೆ ಹೋಗುತ್ತೀರಿ ಎಂಬುದು ಸುರಕ್ಷತೆ ದೃಷ್ಟಿಯಿಂದ ಕೇಳುತ್ತಿದ್ದರೆ ಉತ್ತಮ. ಆದರೆ ಎಲ್ಲಿ ಹೋಗುತ್ತಿದ್ದೇನೆಂದು ಹೇಳಿ ಹೋಗಿದ್ದರೂ, ಪದೇ ಪದೇ ಕರೆಮಾಡಿ, ನೀವಿರುವ ಜಾಗವನ್ನು ಪ್ರಶ್ನೆ ಮಾಡುತ್ತಿದ್ದರೆ, ಆ ವ್ಯಕ್ತಿಯ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಒಳಿತು.

ಗೊಂದಲ:
ನಿಮ್ಮ ಸಂಗಾತಿಗೆ ನಿಮ್ಮೊಂದಿಗೆ, ಪಾರ್ಟಿಯಲ್ಲಿ ಸುತ್ತಾಡಲು ಇಷ್ಟ. ಆದರೆ ಮದುವೆಯ ವಿಚಾರ ಬಂದರೆ ಅಲಕ್ಷ್ಯ ಮಾಡುತ್ತಿದ್ದರೆ ಅಥವಾ ಮದುವೆಯ ಮಾತುಗಳಲ್ಲಿ ಗೊಂದಲಗಳಿದ್ದರೆ, ನೀವು ಜಾಗರೂಕರಾಗಿರಬೇಕು. ಇದರರ್ಥ ಅವರಿಗೆ ನಿಮ್ಮೊಂದಿಗೆ ಕಾಲ ಕಳೆಯಲಷ್ಟೇ ಆಸಕ್ತಿ ಬಿಟ್ಟರೆ ಮದುವೆಯಲ್ಲಿ ಇಲ್ಲ ಎಂಬುದು. ಒಂದು ವೇಳೆ ಇವರನ್ನು ಮದುವೆಯಾದರೂ ಸಹ, ಮದುವೆಯ ನಂತರ ಜಗಳಕ್ಕೆ ಕಾರಣವಾಗಬಹುದು.

ನಿಷ್ಟೆಯಿಲ್ಲದಿರುವುದು:
ಬದುಕುವುದಕ್ಕೆ ಸುಳ್ಳು ಹೇಳುವುದು ಸಾಮಾನ್ಯ, ಆದರೆ ಸುಳ್ಳು ಹೇಳಿಕೊಂಡೇ ಬದುಕುವುದು ಸರಿಯಲ್ಲ. ಸುಳ್ಳುಗಳನ್ನೇ ಮೈಗೂಡಿಸಿಕೊಂಡಿದ್ದರೆ ಅಥವಾ ಸುಳ್ಳುನಿಂದಲೇ ಸಂಬಂಧ ಕಟ್ಟಿಕೊಂಡಿದ್ದರೆ ನೀವು ಸ್ವಲ್ಪ ಯೋಚಿಸಿ. ಏಕೆಂದರೆ ಮದುವೆ ಮುನ್ನವೇ ಇಷ್ಟೊಂದು ಅಪ್ರಾಮಾಣಿಕನಾಗಿರುವವರು ಮದುವೆಯಾದ ಮೇಲೆ ಹೇಗಿರಬಹುದೆಂದು. ಪ್ರಾಮಾಣಿಕತೆ, ನಿಷ್ಠೆ ನಿಜವಾದ ಪ್ರೀತಿಗೆ ಅವಶ್ಯಕವಾದ ವಿಚಾರಗಳು, ಅವೇ ನಿಮ್ಮ ಸಂಗಾತಿಯ ಬಳಿ ಇಲ್ಲವಾದರೆ, ಅಲ್ಲಿ ಪ್ರೀತಿ ಹುಟ್ಟಲೂ ಸಾಧ್ಯವೇ ಇಲ್ಲ.

ಕುಟುಂಬವನ್ನು ಇಷ್ಟಪಡದೇ ಇರುವುದು:
ಪ್ರತಿಯೊಬ್ಬರಿಗೂ ಕುಟುಂಬವೆಂಬುದು ಒಂದು ಬೆಲೆಕಟ್ಟಲಾಗದ ಭಾವನೆ. ತನ್ನನ್ನು ವರಿಸುವ ಹುಡುಗ ಅಥವಾ ಹುಡುಗಿ ತನ್ನ ಕುಟುಂಬವನನ್ನು ಇಷ್ಟಪಡಬೇಕು, ತನ್ನ ಕುಟುಂಬದ ಭಾಗವಾಗರಬೇಕು ಎಂದು ಎಲ್ಲರೂ ಆಶಿಸುತ್ತಾರೆ. ಆದರೆ ನಿಮ್ಮ ಸಂಗಾತಿಯಾಗುವವರಿಗೆ ನಿಮ್ಮ ಕುಟುಂಬದ ಮೇಲೆ ಗೌರವ, ಪ್ರೀತಿ ಇಲ್ಲದಿದ್ದರೆ, ಆ ಕನಸು ಭಗ್ನವಾಗಬಹುದು. ಆದ್ದರಿಂದ ಇಂತಹ ಮನಸ್ಥಿತಿ ಇರುವ ವ್ಯಕ್ತಿಯನ್ನು ಮದುವೆಯಾಗದಿರುವುದೇ ಉತ್ತಮ.



Click it and Unblock the Notifications
