For Quick Alerts
ALLOW NOTIFICATIONS  
For Daily Alerts

'ಸಿಂಗಾರ ಸಿರಿಯೇ' ಎಂದು 60ನೇ ವಯಸ್ಸಿನಲ್ಲಿ ವೆಡ್ಡಿಂಗ್‌ ಫೋಟೋಶೂಟ್: ರೊಮ್ಯಾಂಟಿಕ್ ವೀಡಿಯೋ ಸಕತ್ ವೈರಲ್

|

ಅದೊಂದು ಜೋಡಿಯ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಗಮನ ಸೆಳೆಯುತ್ತಿದೆ. ಆ ಜೋಡಿ ತಮ್ಮ ವೆಡ್ಡಿಂಗ್‌ ಆ್ಯನಿವರ್ಸರಿಗೆ ಮಾಡಿಸಿಕೊಂಡ ಫೋಟೋಶೂಟ್‌ ತುಂಬಾನೇ ವೈರಲ್ ಆಗಿದೆ. 60ರ ಪ್ರಾಯದ ಈ ಜೋಡಿ ಸಿಂಗಾರ ಸಿರಿಯೇ ಹಾಡಿಗೆ ಹೆಜ್ಜೆ ಹಾಕಿರುವುದು ತುಂಬಾನೇ ಕ್ಯೂಟ್‌ ಆಗಿದ್ದು ನೋಡಿದವರು ಈ ಜೋಡಿಯ ಮೋಡಿಗೆ ಫುಲ್ ಫಿದಾ ಆಗಿದ್ದಾರೆ. ಅಷ್ಟೊಂದು ಸೂಪರ್ ಆಗಿದೆ ಈ ವೀಡಿಯೋ...

marriage goal

ಇಳಿ ವಯಸ್ಸಿನಲ್ಲೂ ಇಷ್ಟೊಂದು ರೊಮ್ಯಾಂಟಿಕ್‌ ಆಗಿ ಇರಲು ಸಾಧ್ಯನಾ? ಎಂದು ನಿಮಗೆ ವೀಡಿಯೋ ನೋಡಿದಾಗ ಅನಿಸುವುದು, ನಾವೆಲ್ಲಾ ಮದುವೆಯಾಗುವಾಗ ಅಥವಾ ಪ್ರೀವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಇಷ್ಟೊಂದು ರೊಮ್ಯಾಂಟಿಕ್ ಆಗಿರುತ್ತೇವೆ, ಆದರೆ ಇಳಿ ವಯಸ್ಸಿನಲ್ಲಿಯೂ ಇದೇ ರೀತಿ ಇರುತ್ತೀವಾ ಎಂದು ಕೇಳಿದರೆ ಬಹುತೇಕ ಜನರಿಗೆ ಉತ್ತರಿಸಲು ಕಷ್ಟವಾಗುವುದು. ಏಕೆಂದರೆ ಮದುವೆಯಾಗಿ ಸ್ವಲ್ಪ ವರ್ಷದಲ್ಲಿಯೇ ಸಂಸಾರ ಜಂಜಾಟ ಮಾಡಿಕೊಂಡಿರುತ್ತಾರೆ.

ವಯಸ್ಸು 60 ಆದರೂ ಈ ಇಳಿ ಪ್ರಾಯದಲ್ಲಿ ಆ ಜೋಡಿಯ ಅನ್ಯೂನ್ಯತೆ ನೋಡುವಾಗ ನಿಜವಾದ ದಾಂಪತ್ಯ ಎಂದರೆ ಇದು ಎಂದನಿಸದೆ ಇರಲ್ಲ, ಯುವ ದಂಪತಿಗೆ ನಮಗೂ ಕೂಡ ಇವರಂತೆಯೇ ಬಾಳಬೇಕು ಎಂದು ಅನಿಸುವಷ್ಟು ಕ್ಯೂಟ್ ಆಗಿದೆ.

ಪ್ರೇಮಿಗಳ ದಿನಕ್ಕೆ ಅತ್ಯುತ್ತಮ ಸಂದೇಶ ನೀಡುವ ವೀಡಿಯೋ ಇದಾಗಿದೆ, ಹೌದು ನೀವು ವ್ಯಾಲೆಂಟೈನ್ಸ್‌ ಡೇಗೆ ನೀವು ಇಷ್ಟಪಡುವವರಿಗೆ ಪ್ರಪೋಸ್ ಮಾಡುತ್ತೀರಿ ಎಂದಾದರೆ ಈ ವೀಡಿಯೋದಲ್ಲಿರುವ ಜೋಡಿಯಂತೆ 60 ವರ್ಷದಲ್ಲೂ ಹೀಗೆ ಖುಷಿ-ಖುಷಿಯಾಗಿ ಜೀವನ ನಡೆಸುತ್ತೇವೆ ಎಂಬ ಭರವಸೆ ನಿಮ್ಮಲ್ಲಿ ಇರಲಿ.

ಯುವ ಪೀಳಿಗೆ ಇವರನ್ನು ನೋಡಿ ಕಲಿಯಬೇಕು.

ಯುವ ಪೀಳಿಗೆ ಇವರನ್ನು ನೋಡಿ ಕಲಿಯಬೇಕು.

ಈಗೀನ ಯುವ ಜನತೆ ಖುಷಿ-ಖುಷಿಯಿಂದ ಮದುವೆಯಾಗುತ್ತಾರೆ, ಆದರೆ ಮದುವೆಯಾದ ಒಂದು ಚಿಕ್ಕ ಸಮಸ್ಯೆ ಬಂದರೂ ಎದುರಿಸಲು ಸಿದ್ಧವಾಗುವುದಿಲ್ಲ, ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ, ಚಿಕ್ಕ ವಿಷಯಕ್ಕೆ ಡಿವೋರ್ಸ್‌ ಬೇಕು ಅಂತ ಕೋರ್ಟ್ ಮೆಟ್ಟಿಲೇರುತ್ತಾರೆ, ಆದರೆ ಸಂಸಾರದಲ್ಲಿ ಬರೀ ಸುಖ ಮಾತ್ರವಲ್ಲ ಕಷ್ಟಗಳು ಇರುತ್ತದೆ ಎಂಬುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಪ್ರೀತಿ, ಹೊಂದಾಣಿಕೆ, ಪರಸ್ಪರ ಗೌರವವಿದ್ದರೆ ಮಾತ್ರ ಸಂಸಾರ ಗಟ್ಟಿಯಾಗಿ ಸುಂದರವಾಗಿರುತ್ತದೆ. ಇಂದಿನ ತಲೆಮಾರಿಗೆ ಇಂಥ ಹಿರಿಯ ಜೋಡಿಗಳು ಆದರ್ಶವಾಗಿದ್ದಾರೆ.

 ಸುಮ್-ಸುಮ್ಮನೆ ಪ್ರೀತಿಯ ನಾಟಕ ಬೇಡ

ಸುಮ್-ಸುಮ್ಮನೆ ಪ್ರೀತಿಯ ನಾಟಕ ಬೇಡ

ಕೆಲವರು ಆಡುವ ಪ್ರೀತಿಯ ನಾಟಕದಿಂದ ಕೆಲವರ ಬದುಕೇ ಹಾಳಾಗಿ ಹೋಗುವುದು. ಪ್ರೀತಿ ಯಾವತ್ತಿಗೂ ಸುಂದರ, ಆದರೆ ಕೆಲವರು ಪ್ರೀತಿಸಿ ಮೋಸ ಮಾಡುತ್ತಾರೆ, ಹೀಗೆ ಮಾಡಿದರೆ ಅದು ಪ್ರೀತಿಯೇ ಅಲ್ಲ, ಅದನ್ನು ಪ್ರೀತಿ ಎಂದು ಹೇಳಲು ಸಾಧ್ಯವಿಲ್ಲ, ಅವರು ಬೇರೆ ಯಾವುದೋ ಕಾರಣಕ್ಕೆ ಹೀಗೆ ಪ್ರೀತಿಯ ನಾಟಕ ಆಡಿರುತ್ತಾರೆ, ಆದ್ದರಿಂದ ಪ್ರೀತಿ ಮಾಡುವಾಗ ಏನೇ ಕಷ್ಟ ಬಂದರೂ ಇಬ್ಬರು ಜೊತೆಯಾಗಿ ಸುಂದರವಾದ ಬದುಕು ನಡೆಸುತ್ತೇನೆ ಎಂಬ ದೃಢ ನಿರ್ಧಾರ ಇರಬೇಕು.

 ಪ್ರೀತಿಯನ್ನು ಹಠ ಮಾಡಿ ಪಡೆಯಲು ಸಾಧ್ಯವಿಲ್ಲ

ಪ್ರೀತಿಯನ್ನು ಹಠ ಮಾಡಿ ಪಡೆಯಲು ಸಾಧ್ಯವಿಲ್ಲ

ಕೆಲವರು ತಾವು ಇಷ್ಟಪಟ್ಟ ವ್ಯಕ್ತಿ ನಮಗೇ ಸಿಗಬೇಕೆಂದು ಕೆಟ್ಟ ಹಠ ಮಾಡುತ್ತಾರೆ, ಪ್ರೀತಿಯೆಂಬುವುದು ಹುಟ್ಟಬೇಕೇ ಹೊರತು ಬಲವಂತದಿಂದ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ನೀವು ಯಾರನ್ನಾದರೂ ಇಷ್ಟಪಟ್ಟರೆ ಅವರು ಇಷ್ಟಪಡಲೇಬೇಕು ಎಂಬ ಕೆಟ್ಟ ಹಠ ಬೇಡ. ನಿಮ್ಮನ್ನು ಇಷ್ಟಪಡುವ ವ್ಯಕ್ತಿ ಜೊತೆಗೆ ಬದುಕಿ, ಬದುಕು ಸುಂದರವಾಗುವುದು.

 ಮನೆಯಲ್ಲಿ ಅಪ್ಪ-ಅಮ್ಮನೇ ನೋಡಿ

ಮನೆಯಲ್ಲಿ ಅಪ್ಪ-ಅಮ್ಮನೇ ನೋಡಿ

ಮನೆಯಲ್ಲಿ 30-40 ವರ್ಷ ಜೊತೆಯಾಗಿ ದಾಂಪತ್ಯ ಜೀವನ ನಡೆಸಿದವರಿದ್ದರೆ ಅವರನ್ನೊಮ್ಮೆ ಗಮನಿಸಿ. ಕೆಲವೊಂದು ವಿಷಯಕ್ಕೆ ಇಬ್ಬರೂ ಕಿತ್ತಾಡುತ್ತಾರೆ, ಆದರೆ ಒಬ್ಬರನ್ನೊಬ್ಬರು ಎಂದಿಗೂ ಬಿಟ್ಟುಕೊಡುವುದಿಲ್ಲ. ಅವರಿಬ್ಬರು ಎಷ್ಟೇ ಕಿತ್ತಾಡಿದರೂ ಒಬ್ಬರಿಗೆ ಹುಷಾರಿಲ್ಲದಿದ್ದರೆ ಮತ್ತೊಬ್ಬರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಸಂಗಾತಿಗೆ ಚಿಕ್ಕ ನೋವಾದರೂ ಇವರಿಗೆ ಸಹಿಸಲು ಸಾಧ್ಯವಿಲ್ಲ ಅದುವೇ ಪ್ರೀತಿ.

 ಒಂದು ಸುಂದರ ದಾಂಪತ್ಯ ಕಟ್ಟಿಕೊಳ್ಳುವುದು ಹೇಗೆ?

ಒಂದು ಸುಂದರ ದಾಂಪತ್ಯ ಕಟ್ಟಿಕೊಳ್ಳುವುದು ಹೇಗೆ?

ನೂರೆಂಟು ಕನಸುಗಳನ್ನು ಇಟ್ಟುಕೊಂಡು ವೈವಾಹಿಕ ಜೀವನಕ್ಕೆ ಕಾಲಿಡುತ್ತೇವೆ, ಆದರೆ ಎಲ್ಲವೂ ನಾವು ಅಂದುಕೊಂಡ ರೀತಿಯಲ್ಲಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಆದ್ದರಿಂದ ಮದುವೆಯಾಗುತ್ತಿದ್ದೇವೆ ಎಂದಾದರೆ ಹೊಂದಾಣಿಕೆಗೆ ಮೊದಲು ಸಿದ್ಧರಾಗಬೇಕು. ನಾನು ಎಂಬ ಅಹಂ ಬಿಡಬೇಕು. ಪ್ರತಿಯೊಂದು ವಿಷಯವನ್ನು ನಾವು ಎಂಬ ದೃಷ್ಟಿಯಿಂದ ನೋಡಬೇಕಾಗುತ್ತದೆ.

ದಾಂಪತ್ಯ ಎಂದರೆ ಅಲ್ಲಿ ಸಂಗಾತಿಯ ಬಗ್ಗೆ ಗೌರವವೂ ಇರಬೇಕಾಗುತ್ತದೆ. ಒಬ್ಬರನ್ನೊಬ್ಬರು ಗೌರವಿಸಬೇಕು, ಯಾವುದೇ ವಿಷಯವಾದರೂ ಜೊತೆಯಾಗಿ ನಿರ್ಧಾರ ತೆಗೆದುಕೊಳ್ಳಬೇಕು, ಬತ್ತದಷ್ಟು ಪ್ರೀತಿ ಇರಬೇಕು, ಆಗ ಮಾತ್ರ ಸುಂದರ ದಾಂಪತ್ಯ ಕಟ್ಟಲು ಸಾಧ್ಯ.

English summary

Elderly Couple Wedding Anniversary Shoot Video Goes Viral

Marriage Goal: Elderly Couple Wedding Anniversary Shoot Video Goes Viral, have a look,
Story first published: Saturday, February 4, 2023, 21:14 [IST]
X
Desktop Bottom Promotion