For Quick Alerts
ALLOW NOTIFICATIONS  
For Daily Alerts

ಸಂಗಾತಿಯಲ್ಲಿ ಲೈಂಗಿಕ ನಿರಾಸಕ್ತಿ, ಈ ಕಾರಣಗಳಿರಬಹುದು

By Manju
|

ಗಂಡು-ಹೆಣ್ಣಿನ ಸಮಾಗಮ ಎನ್ನುವುದು ಪ್ರಕೃತಿದತ್ತವಾದ ನಿಯಮವಾಗಿದೆ. ದೇಹದ ಬಯಕೆ ಈಡೇರಿಸಲು ಮಾತ್ರವಲ್ಲ ವಂಶಾವೃದ್ಧಿಗೆ ಈ ಪ್ರಕೃಯೆ ಬಹುಮುಖ್ಯ. ಸಮಾಜ ಈ ಅವಶ್ಯಕತೆಯನ್ನು ಬದ್ದಗೊಳಿಸಲು ವಿವಾಹ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಲೈಂಗಿಕ ತೃಪ್ತಿ ಎನ್ನುವುದು ದಾಂಪತ್ಯದಲ್ಲಿ ಪತಿ-ಪತ್ನಿ ಸಂಬಂಧ ಬೆಸೆಯುವ ಪ್ರಬಲವಾದ ಅಸ್ತ್ರವಾಗಿದೆ. ದಂಪತಿಯಲ್ಲಿ ಮಾಧುರ್ಯ ಉಳಿಯಲು, ಅನ್ಯೂನ್ಯ ಹೆಚ್ಚಲು ಲೈಂಗಿಕ ತೃಪ್ತಿ ಬಹು ಮುಖ್ಯವಾಗಿದೆ.

ಆದರೆ ಲೈಂಗಿಕ ಅವಶ್ಯಕತೆಯೊಂದೇ ಸಂಗಾತಿಗಳನ್ನು ಬೆಸೆಯಲು ಏಕಮಾತ್ರ ಕಾರಣವಾಗಲಾರದು. ಈ ಕ್ರಿಯೆ ಆರೋಗ್ಯಕರ ಹಾಗೂ ಭಾವನಾತ್ಮಕವಾಗಿದ್ದಾಲೇ ಪರಿಪೂರ್ಣತೆಯನ್ನು ಸಾಧಿಸುತ್ತದೆ.

ಲೈಂಗಿಕ ಕ್ರಿಯೆಯಲ್ಲಿ ತೊಡಗಿಗೊಳ್ಳುವುದರಿಂದ ಆ ಜೋಡಿಗೆ ಸಂತೋಷ, ಅನ್ಯೋನ್ಯತೆ, ಒತ್ತಡ ನಿವಾರಣೆ, ಹೀಗೆ ಅನೇಕ ಪ್ರಯೋಜನಗಳಿವೆ. ಆದರೆ ಲೈಂಗಿಕ ಕ್ರಿಯೆಯಿಂದ ಮಾತ್ರ ಸಂಸಾರ ಸುಂದರವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅನೇಕ ಕಾರಣಗಳಿಂದ ಕೆಲವರಲ್ಲಿ ಲೈಂಗಿಕ ಆಸಕ್ತಿ ಕುಂದುವುದು. ಅನಾರೋಗ್ಯದ ಕಾರಣ, ವಯಸ್ಸು ಮತ್ತಿತರ ಕಾರಣಗಳಿಂದ ಲೈಂಗಿಕ ಆಸಕ್ತಿ ಕುಂದಬಹುದು. ಆದರೆ ದಮೊತಿಯಲ್ಲಿ ಒಬ್ಬರಿಗೆ ಲೈಂಗಿಕ ಆಸಕ್ತಿ ಕಡಿಮೆಯಾಗಿ ಮತ್ತೊಬ್ಬರಲ್ಲಿ ಈ ಕುರಿತು ತುಂಬಾ ಆಸಕ್ತಿ ಇದ್ದರೆ, ಇಬ್ಬರ ಭಾವನಾತ್ಮಕ ಸಂಬಂಧ ಅಷ್ಟು ಸರಿಯಾಗಿ ಇಲ್ಲದಿದ್ದರೆ ಅಂಥ ಸಂಸಾರದಲ್ಲಿ ತೊಂದರೆ ತಪ್ಪಿದ್ದಲ್ಲ.

ಒಂದು ವೇಳೆ ತುಂಬಾ ಸಮಯದಿಂದ ದೈಹಿಕವಾಗಿ ಸಂಗಾತಿಯಿಂದ ದೂರವಿದ್ದರೆ ಕೆಲವೊಂದು ಅಂಶಗಳನ್ನು ಗಮನಿಸುವುದು ಒಳ್ಳೆಯದು, ಇಲ್ಲದಿದ್ದರೆ ಸಂಸಾರದಲ್ಲಿ ಕೋಲಾಹಲ ತಪ್ಪಿದ್ದಲ್ಲ. ನಾವಿಲ್ಲಿ ಯಾರು ಸಂಗಾತಿಯಿಂದ ದೈಹಿಕ ಅಂತರ ಕಾಯ್ದುಕೊಳ್ಳಲು ಬಯಸುತ್ತಾರೆ, ಯಾವಾಗ ನಿಮ್ಮ ಈ ಅಂತರ ಅಪಾಯಕಾರಿ ಎಂಬುವುದರ ಕುರಿತು ಹೇಳಿದ್ದೇವೆ ನೊಡಿ:

ನೀವು ಎಂದಿಗೂ ಲೈಂಗಿಕ ಕ್ರಿಯೆ ಬಯಸದೇ ಇದ್ದರೆ

ನೀವು ಎಂದಿಗೂ ಲೈಂಗಿಕ ಕ್ರಿಯೆ ಬಯಸದೇ ಇದ್ದರೆ

ನಾನು ಸಂನ್ಯಾಸಿಯಂತೆ ಬದುಕುತ್ತೇನೆ, ನನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ಲ ಎಂದರೆ ತಪ್ಪಿಲ್ಲ, ಆದರೆ ಮದುವೆಯಾದ ಮೇಲೆ ನನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ಲ ಎಂದರೆ ಅದು ದೊಡ್ಡ ತಪ್ಪು.

ಮದುವೆ ಎಂಬುವುದು ದೈಹಿಕ ಆಸೆಗಳನ್ನು ಈಡೇರಿಸಿಕೊಳ್ಳಲು ಸಮಾಜ ಹಾಕಿಕೊಟ್ಟ ಉತ್ತಮವಾದ ಚೌಕಷ್ಟು, ಆದರೆ ಮದುವೆಯಾದ ಮೇಲೆ ನನಗೆ ಆಸಕ್ತಿ ಇಲ್ಲ ಎಂದರೆ ಅದು ಸಂಗಾತಿಗೆ ಮಾಡುವ ಮಹಾದ್ರೋಹವಾಗುತ್ತದೆ. ಕೆಲವರಲ್ಲಿ ಲೈಂಗಿಕ ಸಾಮಾರ್ಥ್ಯ ಕಡಿಮೆ ಇರುತ್ತದೆ, ಇನ್ನು ಕೆಲವರು ಸಲಿಂಗಿಗಳಾಗಿರುತ್ತಾರೆ, ಇಂಥವರು ಸಮಾಜದ ಕಣ್ಣಿಗೆ ಮಣ್ಣೆರೆಚಲು ಮದುವೆಯಾಗುತ್ತಾರೆ. ಆದರೆ ಸಂಗಾತಿಗೆ ಸುಖ ನೀಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಆಸಕ್ತಿ ಇಲ್ಲ ಎಂದು ಹೇಳುತ್ತಾರೆ.

ಮದುವೆಯಾದ ಮೇಲೆ ನಿಮ್ಮ ಸಂಗಾತಿ ನಿಮ್ಮಿಂದ ದೈಹಿಕ ಅಂತರ ಕಾಯ್ದುಕೊಳ್ಳುತ್ತಿದ್ದರೆ ಆ ಸಂಗಾತಿ ಜೊತೆ ನೀವು ಬಯಸಿದ ವೈವಾಹಿಕ ಜೀವನ ಸಿಗುವುದಿಲ್ಲ ಎಂದು ಹೇಳಬಹುದು.

 ಅನಾರೋಗ್ಯದ ಕಾರಣ

ಅನಾರೋಗ್ಯದ ಕಾರಣ

ಚೆನ್ನಾಗಿ ಸಾಗುತ್ತಿದ್ದ ಸಂಸಾರದಲ್ಲಿ ಇದ್ದಕ್ಕಿದ್ದಂತೆ ಸಂಗಾತಿಗೆ ಅಪಘಾತ ಅಥವಾ ಮತ್ಯಾವುದೋ ಕಾಯಿಲೆ ಬರಬಹುದು, ಈ ಕಾರಣದಿಂದಾಗಿ ಅವರಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೇ ಇರಬಹುದು ಅಥವಾ ಆಸಕ್ತಿ ಕುಂದಬಹುದು. ಈ ಸಂದರ್ಭದಲ್ಲಿ ದೈಹಿಕ ಆಸೆಗಿಂತ ಇಬ್ಬರಲ್ಲಿ ಮಾನಸಿಕ ಬಂಧ ಮುಖ್ಯವಾಗಿರುತ್ತದೆ. ಇಬ್ಬರಲ್ಲಿ ಪ್ರೀತಿ, ಹೊಂದಾಣಿಕೆಯಿದ್ದರೆ ಅಲ್ಲಿ ದೈಹಿಕ ಆಸೆಗಿಂತ ಪ್ರೀತಿಗೆ ಹೆಚ್ಚು ಮಹತ್ವವಿರುತ್ತದೆ. ಅಂಥ ದಂಪತಿಗಳು ಜೀವನ ಮೊದಲಿನ ಸ್ಥಿತಿಗೆ ಬರುವವರೆಗೆ ದೈಹಿಕವಾಗಿ ಸೇರುವುದಿಲ್ಲ, ಸಂಗಾತಿಯಿಂದ ದೈಹಿಕ ಸುಖ ಸಿಗುತ್ತಿಲ್ಲ ಎಂಬ ನಿರಾಸೆಯೂ ಅವನು/ಅವಳಿಗೆ ಕಾಡುವುದಿಲ್ಲ, ಆ ದಂಪತಿಯಲ್ಲಿ ಪವಿತ್ರ ಪ್ರೇಮವನ್ನಷ್ಟೇ ಕಾಣಬಹುದು.

ಇತ್ತೀಚೆಗೆ ಸಂಗಾತಿ ನಿರಾಸಕ್ತಿ ತೋರುತ್ತಿದ್ದರೆ

ಇತ್ತೀಚೆಗೆ ಸಂಗಾತಿ ನಿರಾಸಕ್ತಿ ತೋರುತ್ತಿದ್ದರೆ

ಮೇಲೆ ಹೇಳಿದ ಕಾರಣ ಯಾವುದೂ ಇಲ್ಲ, ಇತ್ತೀಚೆಗೆ ಯಾಕೋ ಸಂಗಾತಿ ತನ್ನತ್ತ ಆಸಕ್ತಿ ತೋರಿಸುತ್ತಿಲ್ಲ, ಸದಾ ಮೊಬೈಲ್ ಅಥವಾ ತನ್ನದೇ ಲೋಕದಲ್ಲಿ ಇರುತ್ತಾರೆ ಎಂದಾದರೆ ನೀವು ಅವರ ನಡುವಳಿಕೆ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು. ಕೆಲವೊಮ್ಮೆ ಅನೈತಿಕ ಸಂಬಂಧಕ್ಕೆ ಬಿದ್ದಾಗ ಸಂಗಾತಿಯಿಂದ ಈ ರೀತಿ ದೈಹಿಕ ಅಂತರ ಕಾಯ್ದುಕೊಳ್ಳುತ್ತಾರೆ. ನೀವು ಆಸೆಯಿಂದ ಸಮೀಪ ಹೋದಾಗ ಅವರು ನಿರಾಕರಿಸಿದರೆ ಖಂಡಿತ ಅದು ಒಳ್ಳೆಯ ಸೂಚನೆ ಅಲ್ಲ.

ಸಂಗಾತಿ ಬೇರೆ ಸಂಬಂಧದಲ್ಲಿ ಇದ್ದಾನೆ/ಳೆ ಎಂದು ಸೂಚಿಸುವ ಲಕ್ಷಣಗಳು

ಸಂಗಾತಿ ಬೇರೆ ಸಂಬಂಧದಲ್ಲಿ ಇದ್ದಾನೆ/ಳೆ ಎಂದು ಸೂಚಿಸುವ ಲಕ್ಷಣಗಳು

  • ನಿಮ್ಮ ಮಾತುಗಳನ್ನು ಕೇಳಲು ನಿರಾಸಕ್ತಿ ತೋರುವುದು
  • ಅವರು ಮಾತು ಮತ್ತು ಪ್ರವೃತ್ತಿಗೆ ಸಂಬಂಧವೇ ಇರಲ್ಲ
  • ನೀವು ಏನು ಹೇಳುತ್ತೀರೋ ಅವರು ನಿರ್ಲಕ್ಷ್ಯಸುತ್ತಾರೆ.
  • ತುಂಬಾ ಸಮಯದಿಂದ ಲೈಂಗಿಕ ತೃಪ್ತಿ ಇಲ್ಲದಿದ್ದರೆ ಏನಾಗುತ್ತೆ?

    ತುಂಬಾ ಸಮಯದಿಂದ ಲೈಂಗಿಕ ತೃಪ್ತಿ ಇಲ್ಲದಿದ್ದರೆ ಏನಾಗುತ್ತೆ?

    • ನೀವು ಬಯಸಿದ ಪ್ರೀತಿ, ಲೈಂಗಿಕ ಸುಖ ಸಂಗಾತಿಯಿಂದ ದೊರೆಯದಿದ್ದರೆ ಅತೃಪ್ತಿ ಉಂಟಾಗುವುದು, ಇದರಿಂದ ಮಾನಸಿಕ ಒತ್ತಡ ಉಂಟಾಗುವುದು.
    • ಸಂಬಂಧದಲ್ಲಿ ಬಂಧವು ಕ್ಷೀಣಿಸುವುದು.
    • ಸಂಗಾತಿಯಿಂದ ಲೈಂಗಿಕ ಸುಖ ದೊರೆಯದಿದ್ದರೆ ಅದಕ್ಕೆ ಕಾರಣ ತಿಳಿದುಕೊಳ್ಳಿ. ಆಗ ನೀವು ಅವರ ಜೊತೆ ಬಾಳಬೇಕೆ ಇಲ್ಲ ನಿಮ್ಮನ್ನು ಪ್ರೀತಿಸುವ ವ್ಯಕ್ತಿಗಾಗಿ ಹುಡುಕಬೇಕೆ ಎಂಬುವುದು ಸ್ಪಷ್ಟವಾಗುವುದು.

English summary

Effects of Not Having Sex for a Long Time in Kannada

Here are effect of not having sex for long time, read on,
Story first published: Saturday, November 7, 2020, 18:13 [IST]
X
Desktop Bottom Promotion