For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್‌ ಲಾಕ್‌ಡೌನ್‌ನಿಂದಾಗಿ ಸಂಸಾರದಲ್ಲಿ ಒಡುಕು ಮೂಡುತ್ತಿದೆಯೇ?

|

ಕೆಲವೊಂದು ನೈಸರ್ಗಿಕ ವಿಪತ್ತುಗಳು, ಜೀವನದಲ್ಲಿಎದುರಾಗುವ ಸವಾಲುಗಳು ಸಂಬಂಧದ ಮೌಲ್ಯ ತಿಳಿಯುವಂತೆ ಮಾಡುವುದು ಸುಳ್ಳಲ್ಲ. ಈ ಸಂದರ್ಭದಲ್ಲಿ ನಾವು ಹೇಗೆ ಒಬ್ಬರೊಬ್ಬರ ಸಹಾಯಕ್ಕೆ ನಿಲ್ಲುತ್ತೇವೆ, ಮಾನಸಿಕವಾಗಿ ಬೆಂಬಲ ನೀಡುತ್ತೇವೆ ಅದರ ಮೇಲೆ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು.

ಇದೀಗ ಕೊರೊನಾವೈರಸ್‌ನಿಂದಾಗಿ ಇಡೀ ದೇಶವೇ ಲಾಕ್‌ಡೌನ್‌ ಆಗಿದೆ. ಕೆಲವರಿಗೆ ಕೈಯಲ್ಲಿ ಕೆಲಸವಿಲ್ಲ, ಇನ್ನು ಕೆಲವರಿಗೆ ಆರ್ಥಿಕವಾಗಿ ನಷ್ಟವಾಗುತ್ತಿದೆ, ಕೆಲಸದ ಅಭದ್ರತೆ ಕಾಡುತ್ತಿದೆ. ಜೊತೆಗೆ ಕೊರೊನಾವೈರಸ್‌ ಭಯದ ಜೊತೆಗೆ ಇತರ ಆರೋಗ್ಯ ಸಮಸ್ಯೆಗಳಿರುತ್ತದೆ. ಮಾನಸಿಕ ಒತ್ತಡವಿರುತ್ತದೆ, ಇವೆಲ್ಲಾ ನೇರವಾಗಿ ಸಂಸಾರದ ಮೇಲೆ ಪರಿಣಾಮ ಬೀರುವುದು.

ಲಾಕ್‌ಡೌನ್‌ನಿಂದಾಗಿ ಸಮಯವೇ ಇಲ್ಲ ಎಂದು ಓಡಾಡುತ್ತಿದ್ದವರಿಗೆ ಇದೀಗ ಮನೆಯಲ್ಲಿಯೇ ಒಂದಿಷ್ಟು ಸಮಯ ಕಳೆಯಲು ಅವಕಾಶ ಸಿಕ್ಕಿದ್ದರೂ ಮೇಲೆ ಹೇಳಿದ ಕಾರಣಗಳಿದ್ದರೆ ಸಣ್ಣ ಪುಟ್ಟ ಜಗಳ-ವಿರಸ ಮೂಡುವುದು ಕೂಡ ಸಹಜ. ಇಂಥ ಸಂದರ್ಭದಲ್ಲಿಯೇ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಬೇಕಾಗಿರುವುದು. ಆಗ ಸಂಬಂಧದಲ್ಲಿ ನೆಮ್ಮದಿ ಇರುತ್ತದೆ, ಏನೇ ಸಮಸ್ಯೆ ಬರಲಿ ಎದುರಿಸುತ್ತೇನೆ ಎಂಬ ಧೈರ್ಯವೂ ಮೂಡುವುದು.

ಇಲ್ಲದಿದ್ದರೆ ಚಿಕ್ಕ-ಪುಟ್ಟ ಸಮಸ್ಯೆಗಳು ದೊಡ್ಡದಾಗಿ ಬೆಳೆದು, ಸಂಸಾರದಲ್ಲಿ ದೊಡ್ಡ ಜಗಳವೇ ಉಂಟಾಗಿ ಬಿರುಕು ಉಂಟಾಗುವುದು. ಇಲ್ಲಿ ನಾವು ಈ ಕಷ್ಟಕರ ಸಂದರ್ಭದಲ್ಲಿ ನಿಮ್ಮ ಸಂಬಂಧದ ಮೇಲೆ ಯಾವ ಕೆಟ್ಟ ಪರಿಣಾಮ ಬೀರದಿರಲು ಕೆಲವೊಂದು ರಿಲೇಷನ್‌ಟಿಪ್ಸ್ ನೀಡಿದ್ದೇವೆ ನೋಡಿ:

ಮಿಲನ

ಮಿಲನ

ಗಂಡ-ಹೆಂಡತಿ ಜಗಳ ಉಂಟು ಮಲಗುವ ತನಕ ಎಂಬ ಮಾತೇ ಇದೆ. ಏನೇ ವೈಮನಸ್ಸು ಇದ್ದರೂ ಎರಡು ಶರೀರಗಳು ಒಂದಾದಾಗ ಅನುರಾಗ ಮೂಡುವುದು. ವೈರಸ್, ಆರ್ಥಿಕ ಸಮಸ್ಯೆ, ಮತ್ತಿತರ ಎಲ್ಲಾ ಸಮಸ್ಯೆಗಳನ್ನು ಆ ಕ್ಷಣ ನೀವಿಬ್ಬರು ಮರೆತು ಖುಷಿಯಾಗಿರುವಿರಿ.

ಆದರೆ ಕೆಲವೊಮ್ಮೆ ಮಾನಸಿಕ ಒತ್ತಡ, ಮತ್ತಿತರ ಸಮಸ್ಯೆಯಿಂದಾಗಿ ನಿಮ್ಮ ಸಂಗಾತಿ ಬೇಸರದಲ್ಲಿದ್ದರೆ ನಿಮ್ಮ ಜೊತೆ ಖುಷಿಯಾಗಿರಲು ಆಸಕ್ತಿ ತೋರದಿದ್ದರೆ ಒತ್ತಾಯ ಮಾಡುವುದು ಅಥವಾ ಮಾತಿನಲ್ಲಿ ನೋಯಿಸುವುದು ಮಾಡಬೇಡಿ. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಅವರ ಮನಸ್ಥಿತಿಯನ್ನು ಗೌರವಿಸಿ. ಒಂದು ಬೆಚ್ಚಗಿನ ಅಪ್ಪುಗೆ, ಮಧುರವಾದ ಮುತ್ತು ನೀಡುವುದು, ಅವರ ಕೈಯನ್ನು ಹಿಡಿದು ಅವರನ್ನು ಕಂಫರ್ಟ್ ಝೋನ್‌ಗೆ ತನ್ನಿ, ಆಗ ಅವರು ನಿಮ್ಮನ್ನು ಸೇರಲು ಆಸಕ್ತಿ ತೋರಿಸುತ್ತಾರೆ.

ಆರೋಗ್ಯಕರ ಸಂಭೋಗ ಗಂಡ-ಹೆಂಡತಿ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವುದು.

ಮಾತಿಗೆ ಮಾತು ಬೆಳೆಸಬೇಡಿ

ಮಾತಿಗೆ ಮಾತು ಬೆಳೆಸಬೇಡಿ

ಅವರು ಏನೋ ಒಂದು ಹೇಳಿದ್ದಕ್ಕೆ ನೀವು ತಿರುಗಿ ಹೇಳುವುದು ಹೀಗೆ ಮಾತಿಗೆ- ಮಾತು ಬೆಳೆಸುವುದರಿಂದ ಮನಸ್ತಾಪ ಬರುವುದಲ್ಲದೇ ಮತ್ತೇನು ಪ್ರಯೋಜನವಿಲ್ಲ. ಇನ್ನು ನಿಮ್ಮ ಸಂಗಾತಿ ಮೂಡಿ ಟೈಪ್ ಆಗಿದ್ದರೆ ಮಾತನಾಡುವಾಗ ತುಂಬಾ ಹುಷಾರು ಆಗಿರಬೇಕು, ಇಲ್ಲಾ ಅಂದ್ರೆ ನಿಮ್ಮ ಮಾತುಗಳೇ ಸಾಕು ಅವರ ಮನಸ್ಸು ಹಾಳಾಗಲು.

ಇದರಿಂದ ಇಬ್ಬರ ನೆಮ್ಮದಿಯೂ ಹಾಳಾಗುವುದು. ಮನೆಯಲ್ಲಿರುವುದೇ ಹಿಂಸೆ ಅನಿಸುವುದು. ಹೊರಗಡೆ ಹೋಗಲೂ ಸಾಧ್ಯವಾಗದೆ ಮನೆಯಲ್ಲಿ ಇರಲೂ ಆಗದೆ ಉಸಿರುಗಟ್ಟಿದ ಅನುಭವ ಉಂಟಾಗುವುದು. ಹಾಗಾದರೆ ಇರಲು ನಿಮಗೆ ಅವರಲ್ಲಿ ಏನಾದರೂ ತಪ್ಪುಗಳು ಕಂಡರೆ ನೀವು ಮಾಡಿದ್ದು, ನಿಮ್ಮಂದ ಆಗಿದ್ದು ಅನ್ನುವ ಬದಲು ನನಗೆ ಅನಿಸುತ್ತೆ ಅಂತ ನಿಮ್ಮ ಅಭಿಪ್ರಾಯವನ್ನು ಸಮಯ, ಸಂದರ್ಭ ನೋಡಿ ಹೇಳಿ.

ಇಬ್ಬರು ಕೂತಾಗ ಸಮಸ್ಯೆಗಳ ಬಗ್ಗೆ ಮಾತನಾಡಿ

ಇಬ್ಬರು ಕೂತಾಗ ಸಮಸ್ಯೆಗಳ ಬಗ್ಗೆ ಮಾತನಾಡಿ

ಸಮಸ್ಯೆ, ತೊಂದರೆಗಳನ್ನು ಮನಸ್ಸಿನಲ್ಲಿಯೇ ಇಟ್ಟು ಕೊರಗುವುದಕ್ಕೆ ಇಬ್ಬರೇ ಒಂದು ಕಡೆ ಕೂತು ನಿಮ್ಮ ಸಮಸ್ಯೆಗಳ ಕುರಿತು ಮಾತನಾಡಿ. ಆಗ ಸಮಸ್ಯೆಗೆ ಒಂದು ಪರಿಹಾರವೂ ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ಏನೇ ಸಮಸ್ಯೆಯಿದ್ದರೂ ಮನಸ್ಸು ಬಿಚ್ಚಿ ಮಾತನಾಡಿದರೆ ಸರಿ ಹೋಗುವುದು. ಇನ್ನು ಆರ್ಥಿಕ ತೊಂದರೆಯಾದರೆ ಇನ್ನು ಸ್ವಲ್ಪ ಸಮಯದಲ್ಲಿ ಜೀವನ ಸುಧಾರಿಸುತ್ತದೆ, ನಾವೊಬ್ಬರೇ ಅಲ್ಲ, ಇಡೀ ವಿಶ್ವದಲ್ಲಿ ಅನೇಕರು ಸಮಸ್ಯೆ ಎದುರಿಸುತ್ತಿದ್ದಾರೆ, ಈ ಲಾಕ್‌ಡೌನ್ ಮುಗಿದ ಮೇಲೆ ಎಲ್ಲವೂ ಸರಿ ಹೋಗುವುದು ಎಂದು ಧೈರ್ಯ ತುಂಬಿ.

ಅವರ ಖಾಸಗಿತನಕ್ಕೂ ಸಮಯ ನೀಡಿ

ಅವರ ಖಾಸಗಿತನಕ್ಕೂ ಸಮಯ ನೀಡಿ

ಪ್ರತಿಯೊಬ್ಬರು ಕೆಲವೊಂದು ಕ್ಷಣ ನಮಗಾಗಿಯೇ ಇರಬೇಕೆಂದು ಬಯಸುವುದು ಸಹಜ. ಮನೆ ಸ್ವಲ್ಪ ದೊಡ್ಡದಾಗಿದ್ದರೆ ಸ್ವಲ್ಪ ಹೊತ್ತು ಅವರು ಹೋಗಿ ಒಂಟಿಯಾಗಿ ಕೂರಬೇಕೆಂದು ಬಯಸಿದರೆ ಡಿಸ್ಟರ್ಬ್‌ ಮಾಡಬೇಡಿ. ಇನ್ನು ಪರಸ್ಪರ ಮೊಬೈಲ್ ಚೆಕ್‌ ಮಾಡುವುದೆಲ್ಲಾ ಮಾಡಬೇಡಿ. ಇದರಿಂದ ಮನಸ್ಸಿನ ನೆಮ್ಮದಿ ಹಾಳಾಗುವುದು. ನಿಮ್ಮ ಇಷ್ಟದ ಸಿನಿಮಾ ಕಾಣುವುದು, ಓದುವುದು, ಹಾಡು ಕೇಳುವುದು ಮಾಡಿ, ಅವರನ್ನು ಅವರಿಷ್ಟದ ಕೆಲಸ ಮಾಡಲು ಬಿಡಿ.

ಇಬ್ಬರು ಜೊತೆಗೂಡಿ ಕೆಲವೊಂದಿಷ್ಟು ಕೆಲಸ ಮಾಡಿ'

ಇಬ್ಬರು ಜೊತೆಗೂಡಿ ಕೆಲವೊಂದಿಷ್ಟು ಕೆಲಸ ಮಾಡಿ'

ಮನೆಯಲ್ಲಿಯೇ ಇದ್ದು ಬೋರಾಯ್ತು ಅನ್ನುವ ಬದಲು ಗಾರ್ಡಿನಿಂಗ್ ಮಾಡುವುದು ಅಥವಾ ಹಪ್ಪಳ ಸಂಡಿಗೆ ಮಾಡುವುದು, ಅಥವಾ ಏನಾದರೂ ಕ್ರಿಯೇಟಿವ್ ವರ್ಕ್ ಮಾಡುವುದು ಮಾಡಿ. ಇದರಿಂದ ಇಬ್ಬರು ಜೊತೆಗೂಡಿ ಖುಷಿ ಖುಷಿಯಾಗಿ ಮಾಡುವುದರ ಜೊತೆಗೆ ಮನಸ್ಸಿನ ಬೇಸರ ಕೂಡ ಕಡಿಮೆಯಾಗುವುದು. ಈ ಸಮಯವನ್ನು ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಿಸಲು ಗಮನ ಹರಿಸಿ... ಅನಗ್ಯತ ವಿಷಯಗಳನ್ನು ಮನಸ್ಸಿನಿಂದ ತೆಗೆದು ಹಾಕಿ ಇಬ್ಬರು ಖುಷಿಯಾಗಿರಲು ಪ್ರಯತ್ನಿಸಿ.

English summary

Coronavirus : Tips to Keep from Destroying Your Relationship during Quarantine

Research has shown that natural disasters can highlight strengths in intimate relationships, but it will also expose problems.So many Report came like this lock
Story first published: Saturday, April 18, 2020, 19:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X