For Quick Alerts
ALLOW NOTIFICATIONS  
For Daily Alerts

ಹಿಂದಿನ ಮಾಜಿ ಸಂಗಾತಿಯ ಕನಸುಗಳೇಕೆ ಕಾಡುತ್ತವೆ? ಇಲ್ಲಿದೆ ಉತ್ತರ..

|

ಕಳೆದು ಹೋದ ದಿನಗಳು ಮತ್ತೆ ಮರಳಿ ಬರಲಾರವು. ಆದರೆ ಗತಜೀವನದ ಹಲವಾರು ನೆನಪುಗಳು ಮಾತ್ರ ಯಾವಾಗಲೂ ಮರುಕಳಿಸುತ್ತಲೇ ಇರುತ್ತವೆ. ಅದರಲ್ಲೂ ಹಳೆಯ ಬಾಯ್ ಫ್ರೆಂಡ್ ಅಥವಾ ಗರ್ಲ ಫ್ರೆಂಡ್, ಬಿಟ್ಟು ಹೋದ ಪತಿ ಅಥವಾ ಪತ್ನಿ ಇವರ ನೆನಪುಗಳು ಆಗಾಗ ಕಾಡುತ್ತಲೇ ಇರುತ್ತವೆ. ಇಂಥ ಹಳೆಯ ನೆನಪುಗಳು ಪದೆ ಪದೆ ಕಾಡುತ್ತಿದ್ದಲ್ಲಿ ಅವು ಈಗಿನ ಸಂಬಂಧಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಲ್ಲವು. ಗತಿಸಿದ ಜೀವನದಲ್ಲಿನ ಹಳೆಯ ಸಂಗಾತಿಯ ನೆನಪು ಈಗಿನ ಸಂಬಂಧದಲ್ಲಿ ಹುಳಿ ಹಿಂಡದಂತೆ ನೀವು ಎಚ್ಚರಿಕೆಯಿಂದ ವರ್ತಿಸಬಹುದು. ಆದರೆ ಆ ನೆನಪುಗಳೇ ಬಾರದಂತೆ ತಡೆಯಲು ಮಾತ್ರ ಆಗದು.

ಹಿಂದಿನ ಸಂಗಾತಿಯ ಬಗ್ಗೆ ವಿಚಾರ ಮಾಡುವುದನ್ನು ಬಿಟ್ಟು ಬಿಟ್ಟಿದ್ದರೂ ಆ ನೆನಪುಗಳು ಅನೇಕ ಬಾರಿ ಕನಸಿನಲ್ಲಿ ಕಾಡುತ್ತವೆ. ಬಿಟ್ಟು ಹೋದ ಸಂಗಾತಿಯ ನೆನಪುಗಳು ಕನಸಿನಲ್ಲಿ ಬಂದು ಕಾಡುವುದೇಕೆ? ಇದಕ್ಕೆ ಏನಾದರೂ ವಿಶೇಷ ಅರ್ಥವಿದೆಯಾ ಎಂಬೆಲ್ಲ ವಿಷಯಗಳ ಕುರಿತು ಚಿಂತಿಸಿದಲ್ಲಿ ಹಲವಾರು ಕುತೂಹಲಕಾರಿ ಅಂಶಗಳು ಅನಾವರಣಗೊಳ್ಳುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ನೊಯ್ಡಾದ ಮೆಟ್ರೊ ಮಲ್ಟಿಸ್ಪೆಶಲಿಟಿ ಆಸ್ಪತ್ರೆಯ ಮಾನಸಿಕ ಹಾಗೂ ಲೈಂಗಿಕ ತಜ್ಞರು ಸೂಕ್ತ ಉತ್ತರಗಳನ್ನು ನೀಡಿದ್ದಾರೆ. ಹಿಂದಿನ ಪ್ರೀತಿಯ ಸಂಗಾತಿಯ ನೆನಪು, ಕನಸಿನಲ್ಲಿ ಬಂದು ಕಾಡುವುದು ಎಲ್ಲ ವಿಷಯಗಳ ಬಗ್ಗೆ ಅವರು ವಿವರಿಸಿದ್ದು ಆ ಎಲ್ಲ ಅಂಶಗಳನ್ನು ಈ ಅಂಕಣದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನೀವೂ ತಿಳಿದುಕೊಳ್ಳಿ.

ನೆನಪುಗಳ ಕಾಡುವಿಕೆಗೆ ಒಂದು ವಿಶೇಷ ಅರ್ಥವಿದೆ

ನೆನಪುಗಳ ಕಾಡುವಿಕೆಗೆ ಒಂದು ವಿಶೇಷ ಅರ್ಥವಿದೆ

ನಮಗೆ ಗೊತ್ತಿದ್ದು ಅಥವಾ ಗೊತ್ತಿಲ್ಲದಿರುವಂತೆಯೇ ಹಿಂದಿನ ವಿಷಯಗಳು ಕನಸಿನಲ್ಲಿ ಕಾಣಿಸಿಕೊಳ್ಳುತ್ತವೆ... ಈ ಕನಸುಗಳಿಗೆ ಒಂದು ನಿರ್ದಿಷ್ಟ ಅರ್ಥವಿದೆ. ಯಾವುದೋ ಒಂದು ಆಸೆ, ಆಕಾಂಕ್ಷೆಯನ್ನು ಪೂರೈಸಿಕೊಳ್ಳುವ ಸುಪ್ತ ಬಯಕೆ ಅದರಲ್ಲಿ ಅಡಗಿರುತ್ತದೆ. ಕನಸುಗಳ ಬಗ್ಗೆ ಹೇಳುವುದಾದರೆ ಕೆಲವು ವಾಸ್ತವಕ್ಕೆ ಹತ್ತಿರವಾಗಿರುತ್ತವೆ ಹಾಗೂ ಇನ್ನು ಕೆಲವು ಕೇವಲ ಸಾಂಕೇತಿಕವಾಗಿರುತ್ತವೆ. ಹಿಂದಿನ ಸಂಗಾತಿ, ಪತಿ, ಪತ್ನಿಗಳ ನೆನಪುಗಳು ಇಂಥ ಅರ್ಥವನ್ನು ಬಿಂಬಿಸುತ್ತವೆ.

ಯಾವುದೋ ಆಸೆಯ ಪೂರೈಕೆಯ ಬಯಕೆ ಇರಬಹುದು

ಯಾವುದೋ ಆಸೆಯ ಪೂರೈಕೆಯ ಬಯಕೆ ಇರಬಹುದು

ಕನಸುಗಳಲ್ಲಿ ಹಿಂದಿನ ಸಂಗಾತಿಯ ನೆನಪಿನ ಕಾಡುವಿಕೆ ಎಂದರೆ ಅದು ನೀವು ಅವರೊಂದಿಗೆ ಹೊಂದಿದ್ದ ನೇರ ಸಂಬಂಧವನ್ನು ಸೂಚಿಸುತ್ತದೆ. ಅಂದರೆ ಅವರೊಂದಿಗೆ ನೀವು ಇನ್ನೂ ಪೂರೈಸಿಕೊಳ್ಳಲಾಗದ ಯಾವುದೋ ಆಸೆಯನ್ನು ನೆರವೇರಿಸಿಕೊಳ್ಳಬೇಕೆಂಬ ಸುಪ್ತ ಭಾವನೆಯನ್ನು ಇದು ಬಿಂಬಿಸುತ್ತದೆ. ಬಯಕೆಯೇ ಇಲ್ಲಿ ಪ್ರಧಾನವಾಗಿದ್ದು, ಕಾಣುವ ಘಟನೆ ಅಥವಾ ಸಂಗಾತಿಯು ಕೇವಲ ಸಾಂಕೇತಿಕವಾಗಿರಬಹುದು.

Most Read: ದಯವಿಟ್ಟು ನವದಂಪತಿಗಳ ಬಳಿ 'ಮಗು ಯಾವಾಗ' ಎಂದು ಮಾತ್ರ ಕೇಳಬೇಡಿ!!

ಸಂಬಂಧವನ್ನು ಕಳೆದುಕೊಂಡ ನೋವಿರಬಹುದು

ಸಂಬಂಧವನ್ನು ಕಳೆದುಕೊಂಡ ನೋವಿರಬಹುದು

ಕಳೆದು ಹೋದ ಸಂಬಂಧದಿಂದ ನಿಮ್ಮ ಮನಸ್ಸಿಗೆ ಉಂಟಾಗಿರುವ ನೋವು ಅಥವಾ ನೀವಿಬ್ಬರೂ ಆಗ ಜೊತೆಯಾಗಿ ಕಳೆದ ಮಧುರ ಕ್ಷಣಗಳ ಬಗ್ಗೆ ಈ ಕನಸುಗಳು ಸಾಂಕೇತಿಕ ಅರ್ಥವನ್ನು ಸೂಚಿಸುತ್ತವೆ. ಒಂದೇ ಮಾತಲ್ಲಿ ಹೇಳಬೇಕೆಂದರೆ ನೀವು ನಿಮ್ಮ ಸಂಗಾತಿಯನ್ನು 'ಮಿಸ್' ಮಾಡಿಕೊಳ್ಳುತ್ತಿರುವಿರಿ ಎಂದರ್ಥ.

ಅರ್ಧ ತೀರಿದ ಬಯಕೆಗಳು ಕಾಡುತ್ತವೆ

ಅರ್ಧ ತೀರಿದ ಬಯಕೆಗಳು ಕಾಡುತ್ತವೆ

ಹಿಂದಿನ ಸಂಗಾತಿಯೊಂದಿಗೆ ಇರುವಾಗ ಅದೆಷ್ಟೋ ಸಮಯ ಜೊತೆಯಾಗಿ ಕಳೆದಿರುತ್ತೀರಿ. ಆಗ ಜೊತೆಯಾಗಿ ಮಾಡಿದ ಕ್ರಿಯೆಗಳು ಅಥವಾ ಅವನ್ನು ಇನ್ನಷ್ಟು ಅನುಭವಿಸಬೇಕಿತ್ತು ಎಂಬ ಸುಪ್ತ ಭಾವನೆಗಳು ಸಹ ಕನಸಿನಲ್ಲಿ ಸಂಗಾತಿಯ ನೆನಪಾಗಲು ಕಾರಣವಾಗುತ್ತವೆ. ಭಾವನಾತ್ಮಕ, ಲೈಂಗಿಕ, ದೈಹಿಕ ಅಥವಾ ಪೋಷಣಾತ್ಮಕ ಅಂಶಗಳು ಇದರಲ್ಲಿ ಪ್ರಧಾನವಾಗಿರುತ್ತವೆ. ಇವು ನೇರವಾಗಿ ಅಥವಾ ಸಾಂಕೇತಿಕವಾಗಿ ನೆನಪುಗಳ ರೂಪದಲ್ಲಿ ಮರುಕಳಿಸುತ್ತವೆ.

Most Read: ಸೆಕ್ಸ್‌ಗೆ ಮುಂದಾಗುವ ಮುನ್ನ ಇರಲಿ ಜಾಗೃತಿ ; ಮಗಳಿಗೆ ತಾಯಿಯ ಭಾವುಕ ಪತ್ರ

ಹಿಂದಿನ ಸಂಗಾತಿಯನ್ನು ಈಗಿನ ಸಂಗಾತಿಯಲ್ಲಿ ಕಾಣಬಯಸುವುದು

ಹಿಂದಿನ ಸಂಗಾತಿಯನ್ನು ಈಗಿನ ಸಂಗಾತಿಯಲ್ಲಿ ಕಾಣಬಯಸುವುದು

ಹಿಂದಿನ ಸಂಗಾತಿಯ ಯಾವುದೋ ಗುಣವನ್ನು ಈಗಿನ ಸಂಗಾತಿಯಲ್ಲಿ ಬಯಸುತ್ತಿರಬಹುದು ಅಥವಾ ಆ ಸಂಗಾತಿಯೊಂದಿಗೆ ನಡೆಸಿದ ರೀತಿಯ ಕ್ರಿಯೆಯನ್ನು ಈಗಿನ ಸಂಗಾತಿಯೊಂದಿಗೆ ನಡೆಸುವ ಭಾವನೆ ಒಳಗೆ ಇದ್ದಾಗ ಹಾಗೂ ಅದನ್ನು ಹೇಳಿಕೊಳ್ಳಲು ಸಾಧ್ಯವಾಗದಿದ್ದಾಗ ಅಥವಾ ನಿಮಗೆ ನೀವೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿರುವಾಗ ಇಂಥ ಕನಸುಗಳು ಪದೆ ಪದೆ ಕಾಡುತ್ತವೆ. ಈಗಿನ ಸಂಗಾತಿಯು ಎಲ್ಲ ರೀತಿಯಲ್ಲಿ ಸರಿಯಾಗಿದ್ದರೂ ಹಿಂದಿನ ಸಂಗಾತಿಯೊಂದಿಗೆ ನಡೆಸಿದ ಮಿಲನ ಕ್ರಿಯೆ ಅಥವಾ ಆತ ನೀಡುತ್ತಿದ್ದ ಪ್ರೀತಿಯ ಬಗ್ಗೆ ಕೆಲ ಸುಪ್ತ ಭಾವನೆಗಳು ಆಗಾಗ ಮೇಲೆದ್ದು ನೆನಪಗಳ ರೂಪದಲ್ಲಿ ಬರುತ್ತಿರುತ್ತವೆ. ಬಿಟ್ಟು ಹೋದ ಸಂಗಾತಿಯ ಕಾರಣದಿಂದ ಅದಾವುದೋ ಭರಿಸಲಾಗದ ಕೊರತೆ ಎಲ್ಲೋ ಒಂದು ಕಡೆ ಕಾಡಿಸುತ್ತಲೇ ಇರುತ್ತದೆ. ಉದಾಹರಣೆಗೆ ನೋಡುವುದಾದರೆ ಹಿಂದಿನ ಸಂಗಾತಿಯೊಂದಿಗೆ ನೀವು ಆಗಾಗ ಸಾಹಸ ಪ್ರಯಾಣ ಮಾಡುತ್ತಿದ್ದರಿ ಎಂದುಕೊಳ್ಳೋಣ. ಆದರೆ ಈಗಿನ ಸಂಗಾತಿಗೆ ಅದು ಇಷ್ಟವಿಲ್ಲದಿರಬಹುದು ಅಥವಾ ಸಾಹಸ ಪ್ರಯಾಣಕ್ಕೆ ಸಮರ್ಥರಾಗಿಲ್ಲದಿರಬಹುದು. ಇಂಥ ಸಂದರ್ಭಗಳಲ್ಲಿ ಆ ಕಳೆದು ಹೋದ ಕ್ಷಣಗಳು ಮತ್ತೆ ಬಾರವು ಎಂಬ ನೋವು ಕಾಡಿಸಿ ಅದು ಕನಸಿನ ರೂಪದಲ್ಲಿ ಪ್ರಕಟವಾಗುತ್ತದೆ.

ಅನುಭವಿಸಿದ ಯಾತನೆಗಳೂ ಆಗಾಗ ನೆನಪಾಗಿ ಕಾಡುತ್ತವೆ

ಅನುಭವಿಸಿದ ಯಾತನೆಗಳೂ ಆಗಾಗ ನೆನಪಾಗಿ ಕಾಡುತ್ತವೆ

ಕೇವಲ ಸುಂದರ ಕ್ಷಣಗಳು ಮಾತ್ರವಲ್ಲದೆ ಹಿಂದಿನ ಸಂಗಾತಿಯಿಂದ ಅನುಭವಿಸಿದ ದೌರ್ಜನ್ಯ, ನೋವುಗಳು ಸಹ ಕನಸಿನ ರೂಪದಲ್ಲಿ ಕಾಡಿಸಬಹುದು. ಹಿಂದಿನ ಗಂಡನೊಂದಿಗೆ ಚಿಕ್ಕ ರೂಮಿನಲ್ಲಿ ಕೂಡಿ ಹಾಕಿರುವ ಹಾಗೆ ಕನಸುಗಳು ಬೀಳಬಹುದು. ಇದೆಲ್ಲ ಆ ಸಮಯದಲ್ಲಿ ಅನುಭವಿಸಿದ ಯಾತನೆಯ ನೆನಪುಗಳಾಗಳಾಗಿರುತ್ತದೆ. ಅಂದರೆ ಕೆಟ್ಟ ಸಂಗಾತಿಯ ನೆನಪುಗಳು ಸಹ ಬಿಡದೆ ಕಾಡುವುದು ಮಾತ್ರ ಸತ್ಯ.

English summary

What does it mean when you keep having dreams about your ex?

Even if your past doesn't stay 'real', the memories can re-appear to haunt. Projecting those experiences onto a new relationship not only affects your own sanity but also could be devastating for your current relationship. You could do a lot not to impose the memories on your current life but dreaming about your ex is something you cannot avoid. Even if you have stopped thinking about your past relationship, the chances of dreaming about them are not in your control.
Story first published: Friday, February 8, 2019, 15:58 [IST]
X
Desktop Bottom Promotion