ಪ್ರಿಯತಮನಿಂದ ಆ ಒಂದು ವಿಷಯದಲ್ಲಿ ನಿಮಗೆ ಮೋಸ ಆಗುತ್ತಿದೆಯೇ?

Posted By: Lekhaka
Subscribe to Boldsky

ನೀವು ಕೆಲವು ತಿಂಗಳಿಂದ ಒಬ್ಬ ಹುಡುಗನನ್ನು ಪ್ರೀತಿಸುತ್ತಾ ಇದ್ದೀರಿ. ಆತನ ಮೇಲೆ ಸಂಪೂರ್ಣವಾಗಿ ನಂಬಿಕೆ ಬಂದ ಬಳಿಕ ಒಂದು ದಿನ ದೈಹಿಕವಾಗಿ ಜತೆ ಸೇರಬೇಕೆಂಬ ಬಯಕೆ ನಿಮ್ಮಲ್ಲಿ ಮೂಡುತ್ತದೆ. ನೀವಿಬ್ಬರು ಜತೆಯಾಗಿ ಎಲ್ಲಿಯೋ ಒಂದು ಜಾಗಕ್ಕೆ ಹೋಗಿ ಅಲ್ಲಿ ಮೊದಲ ಸಲ ಮಿಲನದ ಸುಖ ಬಯಸಲು ಇಚ್ಛಿಸುತ್ತೀರಿ. ಆದರೆ ನೀವು ನಗ್ನರಾದಾಗ ನಿಮ್ಮ ಪ್ರಿಯತಮನಿಂದ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬರದೇ ಇದ್ದಾಗ ನಿಮಗೆ ಆಘಾತವಾಗುವುದು ಖಚಿತ. ನಿಮ್ಮ ಪ್ರಿಯತಮ ಲೈಂಗಿಕ ಶಕ್ತಿಹೀನನೇ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡದೆ ಇರದು.

ಕೆಲವು ಪುರುಷರು ವೈದ್ಯಕೀಯವಾಗಿ ಲೈಂಗಿಕವಾಗಿ ಸಮರ್ಥರಾಗಿದ್ದರೂ ಸಹಿತ ಮಹಿಳೆಯರನ್ನು ಸಂಪೂರ್ಣವಾಗಿ ತೃಪ್ತಿಪಡಿಸಲು ಅವರಿಂದ ಸಾಧ್ಯವಾಗುವುದಿಲ್ಲ. ಆತ ನಿಮ್ಮಿಂದ ಎಲ್ಲ ರೀತಿಯ ಸುಖ ಪಡೆಯಬಹುದು. ಆದರೆ ನಿಮಗೆ ಆತ ಸುಖ ನೀಡದೆ ಇರಬಹುದು. ನಿಮ್ಮ ಸಂಬಂಧವು ತುಂಬಾ ಗಟ್ಟಿಯಾಗಿರುವುದು. ಆದರೆ ನಿಮ್ಮಿಬ್ಬರ ಲೈಂಗಿಕ ಕ್ರಿಯೆಯಿಂದ ನಿಮಗೆ ಯಾವುದೇ ರೀತಿಯ ಸುಖ ಸಿಗುವುದೇ ಇಲ್ಲ. ನೀವು ಆತನಿಂದ ದೂರವಾಗಬೇಕೇ ಅಥವಾ ಅವನೊಂದಿಗೆ ಇರಬೇಕೇ ಎನ್ನುವ ಗೊಂದಲಕ್ಕೆ ಸಿಲುಕುವುದು ಖಚಿತ. ಆತನನ್ನು ಬಿಟ್ಟು ಹೋಗುವುದು ಸ್ವಾರ್ಥವೆಂದು ನಿಮಗನಿಸಿದರೆ ಆತನೊಂದಿಗೆ ಇರುವುದು ನಿಮ್ಮಲ್ಲಿ ಖಿನ್ನತೆ ಉಂಟು ಮಾಡಬಹುದು. ನಿಮ್ಮ ಪ್ರಿಯತಮ ಲೈಂಗಿಕವಾಗಿ ವಿಫಲವಾದಾಗ ಏನು ಮಾಡಬೇಕು ಎಂದು ತಿಳಿಯಲು ಮುಂದೆ ಓದಿಕೊಳ್ಳಿ.... 

ಇದರ ಬಗ್ಗೆ ಆತನೊಂದಿಗೆ ಮಾತನಾಡಿದರೆ ತಪ್ಪಿಲ್ಲ

ಇದರ ಬಗ್ಗೆ ಆತನೊಂದಿಗೆ ಮಾತನಾಡಿದರೆ ತಪ್ಪಿಲ್ಲ

ನೀವು ಸುಖದ ಪರಾಕಾಷ್ಠೆಯನ್ನು ತಲುಪಲು ಸಾಧ್ಯವಾಗುತ್ತಿಲ್ಲವೆನ್ನುವ ಬಗ್ಗೆ ನೀವು ಆತನಿಗೆ ಹೇಳಿದರೆ ಒಳ್ಳೆಯದು. ಆತ ಇದಕ್ಕೆ ಏನಾದರೂ ಮಾಡಬಹುದು. ನೀವು ಇದರ ಬಗ್ಗೆ ತಿಳಿಸದೆ ಇದ್ದರೆ ಹಾಸಿಗೆಯಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಎಂದು ಆತನಿಗೆ ಅನಿಸುವುದು.

ಇದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುವುದೇ?

ಇದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುವುದೇ?

ನಿಮಗೆ ಸರಿಯಾಗಿ ಲೈಂಗಿಕ ಸುಖ ನೀಡಲು ಸಾಧ್ಯವಾಗದೆ ಇರುವಂತಹ ಹುಡುಗನೊಂದಿಗೆ ನೀವು ಭವಿಷ್ಯದಲ್ಲಿ ಬದುಕಬಲ್ಲೀರಾ ಎನ್ನುವುದನ್ನು ನೀವು ಮೊದಲು ಯೋಚಿಸಿ. ಲೈಂಗಿಕ ಪರಾಕಾಷ್ಠೆ ತಲುಪುವುದು ದೊಡ್ಡ ವಿಷಯವಲ್ಲವೆಂದು ಮತ್ತು ಸಂಬಂಧದಲ್ಲಿ ಇತರ ಎಲ್ಲವೂ ಸರಿಯಾಗಿದೆ ಎಂದು ನಿಮಗನಿಸಿದರೆ ಆಗ ನೀವು ಮುಖದಲ್ಲಿ ಕಳ್ಳ ನಗು ಬೀರಿ ಸಂಬಂಧ ಮುಂದುವರಿಸಬಹುದು.

ಆತ ಪ್ರಯತ್ನಿಸಬಹುದೇ?

ಆತ ಪ್ರಯತ್ನಿಸಬಹುದೇ?

ನಿಮಗೆ ಲೈಂಗಿಕ ಪರಾಕಾಷ್ಠೆ ತಲುಪಲು ಸಾಧ್ಯವಿಲ್ಲವೆಂದು ಆತನಿಗೆ ನೀವು ಹೇಳಿದ ಬಳಿಕ ಆತ ಏನಾದರೂ ಮಾಡಿದ್ದಾನೆಯಾ? ನಿಮ್ಮ ತೃಪ್ತಿ ಉಂಟು ಮಾಡಲು ಅತ ಹೊಸತನ ಪ್ರಯೋಗ ಮಾಡಿದ್ದಾನೆಯಾ? ಫಲಿತಾಂಶಕ್ಕಿಂತ ಆತನ ಪ್ರಯತ್ನಗಳು ತುಂಬಾ ಮುಖ್ಯವಾಗಿರುವುದು. ನಿಮ್ಮ ಬಗ್ಗೆ ಚಿಂತೆ ಮತ್ತು ಕಾಳಜಿ ಇರುವಂತಹ ಹುಡುಗ ಬಹುಬೇಗ ಅಲ್ಲದೇ ಇದ್ದರೂ ಸ್ವಲ್ಪ ವಿಳಂಬವಾಗಿಯಾದರೂ ತನ್ನ ಗುರಿ ತಲುಪಬಲ್ಲ. ಆತ ಪ್ರಯತ್ನವನ್ನೇ ಮಾಡದೆ ಇದ್ದರೆ ಆಗ ನೀವು ಇದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವ ಅಗತ್ಯವಿದೆ.

ಲೈಂಗಿಕ ಆಟದಲ್ಲಿ ಹೆಚ್ಚು ತೊಡಗಿಕೊಳ್ಳಿ

ಲೈಂಗಿಕ ಆಟದಲ್ಲಿ ಹೆಚ್ಚು ತೊಡಗಿಕೊಳ್ಳಿ

ನಿಮ್ಮ ಸಂಬಂಧವು ತುಂಬಾ ಒಳ್ಳೆಯದಿದೆ ಮತ್ತು ಆತ ನಿಮಗಾಗಿಯೇ ಭೂಮಿ ಮೇಲೆ ಬಂದಂತಹ ಹುಡುಗ ಎಂದು ನಿಮಗೆ ಅನಿಸುತ್ತಾ ಇದ್ದರೆ ಆಗ ನೀವು ಲೈಂಗಿಕ ಆಟದಲ್ಲಿ ಹೆಚ್ಚು ತೊಡಗಿಕೊಂಡು ನಿಮ್ಮ ಲೈಂಗಿಕ ಪರಾಕಾಷ್ಠೆ ತಲುಪುವಂತಹ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಸುಳ್ಳು ಹೇಳುತ್ತಿದ್ದೀರಾ?

ಸುಳ್ಳು ಹೇಳುತ್ತಿದ್ದೀರಾ?

ಒಂದು ಒಂದು ಅಥವಾ ಎರಡು ದಿನ ಲೈಂಗಿಕ ಪರಾಕಾಷ್ಠೆ ತಲುಪಿದ ಬಗ್ಗೆ ಸುಳ್ಳು ಹೇಳಬಹುದು. ಅದರೆ ಇದರ ಬಳಿಕ ನಿಮಗೆ ತುಂಬಾ ಬೋರ್ ಆಗುತ್ತದೆ.

ಆತನಿಗೆ ಸಮಯ ನೀಡಲು ನಿರ್ಧರಿಸಿದ್ದೀರಾ?

ಆತನಿಗೆ ಸಮಯ ನೀಡಲು ನಿರ್ಧರಿಸಿದ್ದೀರಾ?

ನಿಮ್ಮ ದೇಹದ ಯಾವ ಭಾಗದಿಂದ ಸುಖ ಸಿಗುತ್ತದೆ ಎಂದು ಆತನಿಗೆ ಹೇಳಿ ಮತ್ತು ನಿಮ್ಮ ದೇಹವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆತನಿಗೆ ಹೆಚ್ಚಿನ ಸಮಯ ನೀಡಿ. ಸ್ವಲ್ಪ ಸಮಯದ ಬಳಿಕ ಆತ ಒಳ್ಳೆಯ ಪ್ರದರ್ಶನ ನೀಡಬಹುದು. ನೀವು ಕಾಯಬೇಕಷ್ಟೆ.

ನೀವು ಸ್ನೇಹಿತರಾಗಿದ್ದೀರಾ?

ನೀವು ಸ್ನೇಹಿತರಾಗಿದ್ದೀರಾ?

ಪ್ರಿಯತಮ ಮತ್ತು ಸ್ನೇಹಿತನ ಮಧ್ಯೆ ಇರುವ ವ್ಯತ್ಯಾಸವೇ ರೋಮ್ಯಾನ್ಸ್. ನಿಮ್ಮ ಪ್ರಿಯತಮನ ಜತೆಗೆ ನೀವು ಎಲ್ಲಾ ರೀತಿಯ ಲೈಂಗಿಕ ಸುಖ ಅನುಭವಿಸಬಹುದು. ಆದರೆ ಸ್ನೇಹಿತನೊಂದಿಗಲ್ಲ. ನಿಮಗೆ ಪ್ರಿಯತಮ ಲೈಂಗಿಕ ಪರಾಕಾಷ್ಠೆ ನೀಡಲು ಸಾಧ್ಯವಿಲ್ಲದೆ ಇದ್ದರೆ ಆತನೊಂದಿಗೆ ಇರಲು ಬಯಸುತ್ತೀರಾ ಅಥವಾ ಆತನನ್ನು ಸ್ನೇಹಿತನಾಗಿ ನೋಡುತ್ತೀರಾ ಎಂದು ಮೊದಲು ನಿರ್ಧರಿಸಿ. ಆ ಸುಖವಿಲ್ಲದೆ ಬದುಕುವುದು ತುಂಬಾ ನಿರಾಶೆ ಉಂಟು ಮಾಡಬಹುದು. ಆದರೆ ನಿಮಗೆ ಅದನ್ನು ನಿಭಾಯಿಸಲು ಸಾಧ್ಯವೆಂದಾದರೆ ನೀವು ಆತನೊಂದಿಗೆ ಇರಬಹುದು.

English summary

What To Do When Your Boyfriend Fails In Bed?

What to do when your boyfriend fails in bed? Imagine this: You have dated him since long and have finally decided to get physically intimate with him. But soon after getting naked in the bedroom, you realise that he is not good enough in stimulating you. What would you do?Is my boyfriend impotent? This is the first question that might hit you. But wait! There are many men who don't have any medical issues or impotency. But they could still fail to make a woman reach orgasm! The thought of sticking to him could be depressing as you might be deprived of the real pleasure forever. So, what to do when your boyfriend fails? Read on.
Please Wait while comments are loading...
Subscribe Newsletter