Latest Updates
-
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ವರಮಹಾಲಕ್ಷ್ಮಿ ಹಬ್ಬದ ತಯಾರಿ: ಕುಟುಂಬದೊಂದಿಗೆ ಜಗಳವಿಲ್ಲದೆ, ಶಾಂತಿಯುತವಾಗಿ ಹಬ್ಬ ಆಚರಿಸುವುದು ಹೇಗೆ? -
ನಾಲ್ಕನೇ ಓಣಂ ಸಂಭ್ರಮ: ಪೂಕಳಂ ಸ್ಪರ್ಧೆಗೆ ಕ್ವಿಕ್ ಟಿಪ್ಸ್ ಮತ್ತು ಝೀರೋ-ವೇಸ್ಟ್ ಹ್ಯಾಕ್ಸ್! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ: ಇನ್ಮುಂದೆ ಕ್ಯಾನ್ ಮೇಲೆ ಈ ಹೆಸರು ಇರಲ್ಲ, FSSAI ಹೊಸ ರೂಲ್ಸ್! -
ರಕ್ಷಾಬಂಧನ 2026: ಚಂದ್ರಗ್ರಹಣದ ಭಯ ಬೇಡ, ರಾಖಿ ಕಟ್ಟಲು ಬೆಸ್ಟ್ ಟೈಮ್ ಇಲ್ಲಿದೆ! -
ಉರಿ ಬಿಸಿಲು, ತೇವಾಂಶದ ಕಾಟ: ಎಸಿ ಇಲ್ಲದಿದ್ದರೂ ಫಿಟ್ ಆಗಿರಲು 12 ನಿಮಿಷದ ಸರಳ ವರ್ಕೌಟ್! -
ರಕ್ಷಾಬಂಧನ ಶಾಪಿಂಗ್ ಎಚ್ಚರ: ನಿಮ್ಮ ಹಣ ಕದಿಯಲು ಕಾಯುತ್ತಿದ್ದಾರೆ ಸೈಬರ್ ವಂಚಕರು! -
ಭಾರಿ ಮಳೆ, ಬಿರುಗಾಳಿ ಎಚ್ಚರಿಕೆ: ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ 30 ನಿಮಿಷದ ಪ್ಲಾನ್ ಫಾಲೋ ಮಾಡಿ -
ಮುಂಬೈನಲ್ಲಿ ಮೋಮೋಸ್ ತಿಂದ 16 ಮಂದಿಗೆ ಫುಡ್ ಪಾಯಿಸನಿಂಗ್: ಹೊರಬಂತು ಶಾಕಿಂಗ್ ಸತ್ಯ, ಸುರಕ್ಷಿತವಾಗಿರುವುದು ಹೇಗೆ? -
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ!
ಸಂಗಾತಿಯ ಮೋಸದ ಲಕ್ಷಣಗಳನ್ನು ಹೀಗೆ ಗುರುತಿಸಿ
ಸಂಬಂಧ ಒಂದು ಸುಂದರ ಅನುಬಂಧ. ಇಲ್ಲಿ ಭಾವನೆಗಳಿಗೆ ಬೆಲೆ ತುಸು ಜಾಸ್ತಿ. ಭಾವನೆಗಳಿಗೆ ಯೋಗ್ಯ ಗೌರವ ಸಿಗಲು ಜೀವನದಲ್ಲಿ ಸಂಗಾತಿ ಅತ್ಯವಶ್ಯಕ. ನಿಮ್ಮ ಜೀವನದ ಪ್ರತಿಯೊಂದು ಅನುಭವವನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳುವುದು ಸುಖಕ್ಷಣವೇ.
ಫೋನ್, ಗ್ಯಾಜೆಟ್‌ಗಳಲ್ಲಿ ಹರಟದೇ ಸಮೀಪ ಕುಳಿತು ಮನದ ಭಾವನೆಗಳನ್ನು ಹೊರಹಾಕುವುದು ಉತ್ತಮ ವಿಚಾರವೇ ನೀವಿಬ್ಬರೂ ಸಮಯ ಕಳೆಯುತ್ತಿರವಾಗ ಸ್ವಲ್ಪ ಕಾಫಿ ಹೀರುತ್ತಾ ರೊಮ್ಯಾಂಟಿಕ್ ಆಗಿರುವುದೂ ಕೂಡ ಇದರ ಒಂದು ಭಾಗವೇ.
ವಿವಾಹಿತ ಸಂಗಾತಿಗಳಿಗಂತೂ ಈ ರೀತಿ ಸಮಯ ಕಳೆಯುವುದು ತುಂಬಾ ಆವಶ್ಯಕವಾಗಿರುತ್ತದೆ. ಆದರೆ ಈ ಸಮಯ ಕಳೆಯುವ ವೇಳೆಯಲ್ಲಿ ಭಾವನೆಗಳನ್ನು ಹಂಚಿಕೊಳ್ಳುವ ಸಮಯದಲ್ಲಿ ನಿಮ್ಮ ಸಂಗಾತಿ ನಿಮ್ಮೊಂದಿಗೆ ಸಮಯ ಕಳೆಯದಿದ್ದರೆ ಆಸಕ್ತಿ ತೋರದಿದ್ದರೆ ಏನು ಸಂಭವಿಸಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಈ ಸ್ಥಳಗಳಲ್ಲಿ ಸಂಗಾತಿಯೊಂದಿಗೆ ಉತ್ತೇಜಿತವಾಗಿ ಮಾತನಾಡಿ!
ಸಂಗಾತಿ ಏನನ್ನೋ ಮುಚ್ಚಿಡುತ್ತಿದ್ದಾರೆ ಎಂಬುದು ತಿಳಿದು ಬಂದಲ್ಲಿ ಆ ನೋವು ಹೇಗಿರಬಹುದು. ನಿಮ್ಮ ಸಂಗಾತಿ ನಿಮ್ಮೊಂದಿಗೆ ಏನನ್ನೋ ಮುಚ್ಚಿಡುತ್ತಿದ್ದಾರೆ ಎಂಬುದು ನಿಮಗೆ ತಿಳಿದು ಬಂದಲ್ಲಿ ಬಾಂಧವ್ಯ ಅಲ್ಲಿಗೆ ಕೊನೆಯಾಗುತ್ತದೆ. ಬದುಕು ಸೂತ್ರವಿಲ್ಲದ ಗಾಳಿಪಟವಾಗುವುದು ಖಂಡಿತ.
ಈ ರೀತಿಯ ಸಂದೇಹ ನಿಮಗುಂಟಾದಲ್ಲಿ ಅದನ್ನು ಕಂಡುಹಿಡಿಯುವುದು ಹೇಗೆ ಎಂಬುದು ನಿಮ್ಮ ಸಮಸ್ಯೆಯಾಗುತ್ತದೆ. ಸಂಗಾತಿಯ ತೆರೆ ಮರೆಯ ಆಟವನ್ನು ಕಂಡುಹಿಡಿಯಲು ಈ ಲೇಖನ ನಿಮಗೆ ನೆರವಾಗುತ್ತದೆ.
ಹೌದು ನಾವಿಲ್ಲಿ ನೀಡಿರುವ ಕೆಲವೊಂದು ವಿಧಾನಗಳನ್ನು ಅನುಸರಿಸಿ ನಿಮ್ಮ ಸಂಗಾತಿ ನಿಮ್ಮಿಂದ ಏನಾದರೂ ಮುಚ್ಚಿಡುತ್ತಿದ್ದಾರೆಯೇ ಅಥವಾ ಬೇರೆ ಸಂಗಾತಿಗೆ ಮನಸೋತಿದ್ದಾರೆಯೇ ಎಂಬುದನ್ನು ಅರಿತುಕೊಳ್ಳಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಈ ವಿಷಯಗಳನ್ನು ಸಹೋದ್ಯೋಗಿಗಳೊಂದಿಗೆ ಚರ್ಚಿಸಬೇಡಿ!
ಹೆಚ್ಚು ಹೊರಗೆ ಸಮಯ ವ್ಯಯಿಸುವುದು:
ನಿಮ್ಮ ಸಂಗಾತಿಯೊಂದಿಗೆ ಬೇರೆ ಯಾರಾದರೂ ನಿಮಗೆ ಕಂಡುಬಂದಿದ್ದಾರೆಯೇ? ತಮ್ಮ ಡ್ರೆಸ್ ಬಗ್ಗೆ ಅಷ್ಟೊಂದು ಕಾಳಜಿ ವಹಿಸದಿರುವವರು ವಿಶೇಷವಾಗಿ ಧಿರಿಸು ಧರಿಸಿಕೊಂಡು ಹೋದಲ್ಲಿ ವರ್ತನೆಯ ಬಗೆಗೆ
ಸಂದೇಹವುಂಟಾಗುವುದು ಸಹಜವೇ. ತಲೆಕೂದಲನ್ನು ಸ್ಟೈಲಿಶ್ ಆಗಿ ಬಾಚಿಕೊಂಡಿದ್ದರೆ, ವಿಭಿನ್ನವಾಗಿ ಡ್ರೆಸ್ ಮಾಡಿಕೊಂಡಿದ್ದರೆ ಹೆಚ್ಚು ಕಾಲ ಕನ್ನಡಿಯ ಎದುರು ಸಿದ್ಧಗೊಳ್ಳಲು ವ್ಯಯಿಸಿದರೆ ಇದನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಳ್ಳಿ. ನಿಮ್ಮ ಸಂಗಾತಿ ನಿಮಗೆ ತಲೆನೋವಾಗುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಹೆಚ್ಚು ಬಾರಿ ಕ್ಷಮಾಪಣೆಗಳು:
ಹೌದು ನಿಮ್ಮ ಸಂಗಾತಿ ಆತ/ಆಕೆ ನಿಮಗೆ ಫೋನಾಯಿಸಿ ಓವರ್‌ಟೈಮ್ ಮಾಡುತ್ತಿದ್ದೇನೆ ಎಂದು ಹೇಳಿದ್ದಲ್ಲಿ ಆ ಕಡೆ ಸ್ವಲ್ಪ ಗಮನ ನೀಡಿ. ಮನೆಯ ಖರ್ಚುಗಳನ್ನು ನಿಭಾಯಿಸಲು ಓವರ್‌ಟೈಮ್ ಮಾಡುತ್ತಿದ್ದೇನೆ ಎಂಬ ಸಮಜಾಯಿಷಿಕೆಗಳು ಅವರಿಂದ ಬರಬಹುದು. ಸಂಬಂಧದಲ್ಲಿ ಬಿರುಕುಂಟಾಗಲು ಈ ರೀತಿಯ ಕಾರಣಗಳೂ ಕೂಡ ಸಾಕಾಗುತ್ತದೆ.
ಯಾವಾಗಲೂ ಇದೇ ಕಾರಣ ನಿಮ್ಮ ಸಂಗಾತಿ ನಿಮ್ಮನ್ನು ಮೋಸಗೊಳಿಸುತ್ತಿದ್ದಾರೆ ಎಂಬುದಕ್ಕೆ ಉದಾಹರಣೆಗಳಲ್ಲ. ಅವರು ರೀಚೆಬಲ್ ಆಗಿರದಿದ್ದರೆ ಅಥವಾ ದೂರಪ್ರದೇಶದ ಟೂರ್ ಹೋಗಿದ್ದರೆ, ನೀವು ಎಚ್ಚರದಿಂದಿರಬೇಕು. ನಿಮ್ಮನ್ನು ಆಕೆ/ಆತ ಮೋಸ ಮಾಡುವ ಸಾಧ್ಯತೆ ಇಲ್ಲಿ ಹೆಚ್ಚಿರುತ್ತದೆ. ಸಂಬಂಧದಲ್ಲಿ ಮೋಸ ಮಾಡುವ ಸಂಗಾತಿಯನ್ನು ಕಂಡುಹಿಡಿಯುವ ಒಂದು ವಿಧಾನವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಚುಂಬಿಸುವಾಗ ನಿಮ್ಮ ಸಂಗಾತಿಯನ್ನು ಹೀಗೆ ಬಂಧಿಸಿ!
ಶರ್ಟ್‌ಲೆಸ್ ಆಗದಿರುವುದು:
ನಿಮ್ಮೆದುರಿಗೆ ನಿಮ್ಮ ಸಂಗಾತಿ ಶರ್ಟ್ ಲೆಸ್ ಆಗಿರಲು ಹಿಂಜರಿಯುವುದು! ಇದು ಕೂಡ ಸಂದೇಹಕ್ಕೆ ಎಡೆ ಮಾಡಿಕೊಡುತ್ತದೆ. ಆತ ಒಂಟಿಯಾಗಿ ಸ್ನಾನ ಮಾಡಿಕೊಳ್ಳುವುದು ಅಥವಾ ನಿಮ್ಮೆದುರಿಗೆ ಶರ್ಟ್ ಲೆಸ್ ಆಗಿ ಸೆಕ್ಸ್ ಅನುಭವಿಸಲು ಹಿಂಜರಿಯುವುದು ಆತನ ಬೇರೆ ಚಾಳಿಯನ್ನು ತೋರಿಸುತ್ತದೆ. ಆತನ ದೇಹದಲ್ಲಿ ಏನಾದರೂ ಗುರುತು ಇದ್ದು ನಿಮಗೆ ಅದನ್ನು ತೋರಿಸಬಾರದೆಂದು ಮುಚ್ಚಿಡಲು ಈ ರೀತಿಯಾಗಿ ಆತ ವರ್ತಿಸುವುದಾಗಿರಬಹುದು.
ಮೊಬೈಲ್ ಸಂವಾದಗಳು:
ನಿಮ್ಮಿಂದ ಸ್ವಲ್ಪ ದೂರ ಹೋಗಿ ಆತ ಮೊಬೈಲ್‌ನಲ್ಲಿ ಸಂಭಾಷಿಸುವುದು, ಅಥವಾ ನಿಮ್ಮ ಕಣ್ತಪ್ಪಿಸಿ ಸಂದೇಶ ರವಾನಿಸುವುದು ಇದೆಲ್ಲವೂ ನಿಮ್ಮ ಪುರುಷನ ಸಂದೇಹಾಸ್ಪದ ನಡವಳಿಕೆಗಳಾಗಿವೆ. ಆತ ನಿಮ್ಮಲ್ಲಿ ಇದು ವ್ಯಾವಾಹಾರಿಕ ಸಂಭಾಷಣೆ ಎಂದು ಹೇಳಬಹುದು ಆದರೆ ಇದು ಈ ರೀತಿಯಾಗಿ ಇರುವುದಿಲ್ಲ.
ದೇಹದ ತೂಕದ ಬಗೆಗೆ ಗಮನ ಕೊಡುವುದು:
ಇಷ್ಟಲ್ಲದೆ ನಿಮ್ಮ ಸಂಗಾತಿ ಜಿಮ್ ಸೇರಲು ಸಲಹೆ ನೀಡುವುದು. ಆತ ಅಥವಾ ಆಕೆ ತಾವು ತಿನ್ನುವುದರ ಮೇಲೆ ಗಮನ ಕೊಡುವುದೂ ಕೂಡ ಸಂದೇಹಕ್ಕೆ ದಾರಿ ಮಾಡಿದಂತೆ. ಸಮಯ ಕಳೆದಂತೆ ನಿಮ್ಮ ಸಂಗಾತಿಯ ಈ ತೂಕ ಇಳಿಸುವ ಉಪಾಯ ನಿಮಗೆ ಆಶ್ಚರ್ಯ ಉಂಟುಮಾಡಬಹುದು.



Click it and Unblock the Notifications