For Quick Alerts
ALLOW NOTIFICATIONS  
For Daily Alerts

ಪ್ರೇಮಿಗಳ ದಿನಕ್ಕೆ #SayNoTovalentineDay ಹೇಳಲೇಬೇಕಾ?

|

ಫೆಬ್ರವರಿ 14, ಪ್ರೇಮಿಗಳ ದಿನ. ಈ ದಿನಕ್ಕಾಗಿ ಕಾಯುವ ಪ್ರೇಮಿಗಳೆಷ್ಟೋ ... ಎಷ್ಟೋ ದಿನಗಳಿಂದ ಬಚ್ಚಿಟ್ಟ ಪ್ರೇಮವನ್ನು ಹೇಳಬೇಕೆಂದು ಬಯಸುವ ಹೃದಯಗಳು, ಪ್ರೇಮ ಲೋಕದಲ್ಲಿ ವಿಹರಿಸುತ್ತಿರುವ ಜೋಡಿ ಹಕ್ಕಿಗಳು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ.

valentines day celebration

ಪ್ರೇಮಿಗಳ ದಿನಕ್ಕೆ ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ಕೊಡುತ್ತಾರೆ. ಒಬ್ಬರು ಇದು ಪ್ರೇಮಿಗಳ ದಿನ ಆಚರಿಸುವುದು ಖುಷಿಯ ವಿಷಯ ಅಂದ್ರೆ, ಇನ್ನೊಬ್ಬರು ಪ್ರೇಮವೆಂಬುವುದು ಒಂದು ದಿನಕ್ಕೆ ಮೀಸಲಾಗಿರಬಾರದು ಅಂತಾರೆ, ಮತ್ತೊಬ್ಬರು ಇದು ಪಾಶ್ಚಾತ್ಯ ಸಂಸ್ಕೃತಿ ಭಾರತೀಯರು ಇದನ್ನುಪಾಲಿಸಬಾರದು ಎಂತಾರೆ.

ಪರ- ವಿರೋಧದ ನಡುವೆಯೂ ಪ್ರೇಮಿಗಳ ದಿನ

ಪರ- ವಿರೋಧದ ನಡುವೆಯೂ ಪ್ರೇಮಿಗಳ ದಿನ

ಪ್ರೇಮಿಗಳ ದಿನ ಬಗ್ಗೆ ಇರುವ ಪರ-ವಿರೋಧವೇ ಈ ದಿನವನ್ನು ಮತ್ತಷ್ಟು ವಿಶೇಷ ದಿನವಾಗಿಸುತ್ತಿದೆ. ಇಂದು ಪ್ರೇಮಿಗಳ ದಿನದಷ್ಟೇ #SyNoTovalentineDay ಎಂಬುವುದು ಟ್ವಿಟರ್‌ನಲ್ಲಿ ಟ್ರೆಂಡ್‌ ಅಗುತ್ತಿದೆ. ಪ್ರೇಮಿಗಳ ದಿನ ಎನ್ನುವುದು ಸ್ವೇಚ್ಛಾಚಾರ, ಅದು ನಮ್ಮ ಸಂಸ್ಕೃತಿಯಲ್ಲ, ಪಾಶ್ಚಾತ್ಯ ಸಂಸ್ಕೃತಿ ಎಂಬುವುದೇ ಪ್ರೇಮಿಗಳ ದಿನ ವಿರೋಧಿಸುವವರ ವಾದವಾಗಿದೆ.

ಪ್ರೇಮಿಗಳದ ದಿನದ ಹಿಂದಿದೆ ತ್ಯಾಗದ ಕತೆ

ಪ್ರೇಮಿಗಳದ ದಿನದ ಹಿಂದಿದೆ ತ್ಯಾಗದ ಕತೆ

ಪ್ರೇಮಿಗಳ ದಿನ ಆಚರಿಸಬೇಕೋ, ಬೇಡ್ವೋ ಎನ್ನುವುದು ಅವರವರ ವೈಯಕ್ತಿಕ ವಿಷಯ, ಆದರೆ ಪ್ರೇಮಿಗಳ ದಿನದ ಆಚರಣೆ ಸ್ವೇಚ್ಛಾಚಾರದ ಆಚರಣೆಗಾಗಿ ಬಂದಿದ್ದು ಅಂತೂ ಖಂಡಿತ ಅಲ್ಲ. ಪ್ರೇಮಿಗಳ ಆಚರಣೆ ಹಿಂದೆ ಒಂದು ತ್ಯಾಗದ ಕತೆ ಇದೆ.

ಪ್ರೇಮಿಗಳ ದಿನ ಅರ್ಥಾತ್ ವ್ಯಾಲೆಂಟೈನ್ ಡೇ ಹೇಗೆ ಬಂತು ಎಂದು ಹುಡುಕುತ್ತಾ ಹೋದರೆ ಹಲವು ಶತಮಾನಗಳ ಹಿಂದೆ ನಡೆದ ಘಟನೆಯೊಂದು ಆಚರಣೆಯಾಗಿ ಮುಂದುವರೆಯಿತು ಎಂಬ ಪುರಾವೆ ಲಭಿಸುತ್ತದೆ. ಅದು ಕ್ರಿ.ಶ.269ನೇ ಇಸವಿಯ ದಿನಗಳು... ಆಗ ರೋಮ್ ಸಾಮ್ರಾಜ್ಯವನ್ನು ಕ್ಲಾಡಿಯಸ್ ಎಂಬ ದೊರೆಯು ಆಳುತ್ತಿದ್ದನಂತೆ. ಆತ ಮಹಾಕಟುಕನಾಗಿದ್ದನಂತೆ ಅಷ್ಟೇ ಅಲ್ಲ ಮದುವೆಯನ್ನು ಕೂಡ ದ್ವೇಷಿಸುತ್ತಿದ್ದನಂತೆ. ಅವನ ಪ್ರಕಾರ ಮದುವೆಯಾಗುವುದು ಮಹಾಅಪರಾಧವಾಗಿತ್ತು. ವ್ಯಕ್ತಿಯೊಬ್ಬ ಮದುವೆ ಎಂಬ ಬಂಧನದಲ್ಲಿ ಸಿಕ್ಕಿಬಿದ್ದರೆ ಸಂಸಾರದ ಜಂಜಾಟದಲ್ಲಿ ತನ್ನ ಕ್ರಿಯಾಶೀಲತೆ ಹಾಗೂ ಬುದ್ದಿಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಎಂಬುವುದು ಕ್ಲಾಡಿಯಸ್‌ನ ಅಭಿಪ್ರಾಯವಾಗಿತ್ತು. ಹಾಗಾಗಿ ಆತ ಮದುವೆ ಎಂದರೆ ಕೆಂಡಮಂಡಲವಾಗುತ್ತಿದ್ದನು.

ಪ್ರೇಮಿಗಳನ್ನು ಒಂದುಗೂಡಿಸುತ್ತಿದ್ದ ವ್ಯಾಲೆಂಟೈನ್

ಪ್ರೇಮಿಗಳನ್ನು ಒಂದುಗೂಡಿಸುತ್ತಿದ್ದ ವ್ಯಾಲೆಂಟೈನ್

ಒಂದು ವೇಳೆ ರಾಜಾಜ್ಞೆಯನ್ನು ಮೀರಿ ಮದುವೆಯಾಗಿದ್ದೇ ಆದಲ್ಲಿ ಮದುವೆಯಾದವರನ್ನು ಮತ್ತು ಅದಕ್ಕೆ ಪ್ರೋತ್ಸಾಹಿಸಿದವರನ್ನು ಗಲ್ಲಿಗೇರಿಸುತ್ತಿದ್ದನು. ದೊರೆ ಕ್ಲಾಡಿಯಸ್‌ನ ಈ ಹುಚ್ಚಾಟ ಪಾದ್ರಿ ವ್ಯಾಲೆಂಟೈನನ್ನು ಕೆರಳಿಸಿತ್ತು. ಹಾಗಾಗಿ ದೊರೆಯ ನೀತಿಯನ್ನು ಖಂಡಿಸುತ್ತಾ ದೊರೆ ಕ್ಲಾಡಿಯಸ್‌ನಿಗೆ ತಿಳಿಯದಂತೆ ಪ್ರೇಮಿಗಳನ್ನು ಒಗ್ಗೂಡಿಸಿ ಅವರಿಗೆ ಮದುವೆ ಮಾಡತೊಡಗಿದ್ದನು.

ಆದರೆ ಇದು ಹೆಚ್ಚು ದಿನ ಗುಪ್ತವಾಗಿ ಉಳಿಯಲಿಲ್ಲ. ಪಾದ್ರಿ ವ್ಯಾಲೆಂಟೈನ್ ಪ್ರೇಮಿಗಳನ್ನು ಒಂದುಗೂಡಿಸುತ್ತಿರುವ ವಿಚಾರ ದೊರೆ ಕ್ಲಾಡಿಯಸ್‌ನ ಕಿವಿಗೆ ಬಿತ್ತು. ತನ್ನ ಆಜ್ಞೆಯನ್ನು ಮೀರಿದ ವ್ಯಾಲೆಂಟೈನ್ ಮೇಲೆ ಕೆಂಡಾಮಂಡಲನಾದನಲ್ಲದೆ, ಅವನಿಗೆ ಮರಣದಂಡನೆಯನ್ನು ವಿಧಿಸಿದನು. ಅವನ

ತ್ಯಾಗದ ಸಂಕೇತವಾಗಿ ಪ್ರೇಮಿಗಳ ದಿನ ಆಚರಣೆಗೆ ಬಂತು. ವಿದೇಶದ ಈ ಆಚರಣೆ ಭಾರತಕ್ಕೂ ಬಂತು.

ಪ್ರೇಮ ಕುರುಡಾಗಾದಿರಲಿ

ಪ್ರೇಮ ಕುರುಡಾಗಾದಿರಲಿ

ಪ್ರತಿಯೊಬ್ಬರಿಗೆ ಜೀವನದಲ್ಲಿ ಒಂದು ಘಟ್ಟದಲ್ಲಿ ಜೀವನದಲ್ಲಿ ಸಂಗಾತಿ ಬೇಕೆಂದು ಅನಿಸಲಾರಂಭಿಸುತ್ತದೆ, ಆಗ ನಮ್ಮ ಜೀವನಕ್ಕೆ ಸರಿ ಹೊಂದುವ ವ್ಯಕ್ತಿ ಮೇಲೆ ಅನುರಾಗ ಮೂಡುವುದು. ಪ್ರೇಮ ಕುರುಡು ಅಂತಾರೆ, ಹಾಗಂತ ಪ್ರೇಮಿಯನ್ನು ಆಯ್ಕೆ ಮಾಡುವಾಗ ಸ್ವಲ್ಪ ಯೋಚಿಸಿ ಮಾಡದಿದ್ದರೆ ಅದರಿಂದ ಮುಂದೆ ನಾವೇ ದುಃಖ ಅನುಭವಿಸಬೇಕಾಗುತ್ತದೆ.

ಪ್ರೇಮಿಗಳ ದಿನದ ಮೇಲೆ ಏಕಿಷ್ಟು ದ್ವೇಷ?

ಪ್ರೇಮಿಗಳ ದಿನದ ಮೇಲೆ ಏಕಿಷ್ಟು ದ್ವೇಷ?

ಪ್ರೇಮಿಗಳ ದಿನದ ಮೇಲೆ ಇಷ್ಟೊಂದು ಆಕ್ರೋಶ ವ್ಯಕ್ತವಾಗಲು ಕೆಲವರ ಮಿತಿಮೀರಿದ ವರ್ತನೆಗಳೇ ಕಾರಣವಾಗಿದೆ. ಪ್ರೇಮಿಗಳು ದಿನವೆಂದರೆ ಅದು ಮೋಜು ಮಸ್ತಿನ ದಿನವೆಂದೇ ಭಾವಿಸುವ ಮನಸ್ಥಿತಿ ಕೆಲವರಲ್ಲಿದೆ. ಪ್ರೇಮಿಗಳ ದಿನ ಕೊಡುವ ಗಿಫ್ಟ್‌, ಆಚರಣೆಗಳು ಕೇವಲ ತೋರ್ಪಡಿಕೆ ಆಗಿರುವುದೇ ಹೆಚ್ಚು. ಈ ಮನಸ್ಥಿತಿಯವರಿಂದಲೇ ಪ್ರೇಮಿಗಳ ದಿನಕ್ಕೆ ತಪ್ಪಾದ ಅರ್ಥ ಲೇಪನವಾಗುತ್ತಿದೆ.

ಪ್ರೇಮಿಗಳ ದಿನ ಆಚರಿಸಿ, ಬಿಡಿ, ಆದರೆ ಒಳ್ಳೆಯವರನ್ನು ಪ್ರೀತಿಸಿ, ಪ್ರೀತಿಯನ್ನು ಎಂದಿಗೂ ಕೈ ಬಿಡಬೇಡಿ.... ಎಲ್ಲರಿಗೂ ಕನ್ನಡ ಬೋಲ್ಡ್‌ಸ್ಕೈ ಕಡೆಯಿಂದ ಪ್ರೇಮಿಗಳ ದಿನದ ಶುಭಾಶಯಗಳು.

English summary

Should We really Say #SayNoToValentineDay

#SayNoTovalentineDay Trending in twitter, Here why we discussed should We really Say #SayNoTovalentineDay, Take a look.
X
Desktop Bottom Promotion