Just In
Don't Miss
- News
ಮೃತದೇಹ ಸ್ವೀಕರಿಸಲು ಒಪ್ಪದ ಕುಟುಂಬದವರು: ಪೊಲೀಸರಿಂದಲೇ ಅಂತ್ಯಸಂಸ್ಕಾರ ಸಾಧ್ಯತೆ
- Movies
'ಮಾಲ್ಗುಡಿ ಡೇಸ್': ಮತ್ತೊಂದು ಹೊಸ ಪೋಸ್ಟರ್ ನಲ್ಲಿ ವಿಜಯ್ ರಾಘವೇಂದ್ರ
- Finance
ಪೋಸ್ಟ್ ಮ್ಯಾನ್ ಕೂಡ ಇನ್ಷೂರೆನ್ಸ್ ಪಾಲಿಸಿ ಮಾರುವ ದಿನ ದೂರವಿಲ್ಲ
- Technology
GOQii ನಿಂದ ಬರಲಿವೆ ಸ್ಮಾರ್ಟ್ವಾಚ್, ಸ್ಮಾರ್ಟ್ಸ್ಕೇಲ್!
- Education
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ: ಸಾಫ್ಟ್ವೇರ್ ಡೆವಲಪರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಆಯ್ದ ನಗರಗಳಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗಲಿದೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್
- Sports
ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಗೆ ಗೌತಮ್ ಗಂಭೀರ್ ಶೇರು?
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
'ಫೈರ್‌ವರ್ಕಿಂಗ್' ಡೇಟಿಂಗ್‌ಗೆ ಬಲಿಯಾಗದಿರಲು ಎಚ್ಚೆತ್ತುಕೊಳ್ಳುವುದೇ ಒಳ್ಳೆಯದು
ನೀವಿಬ್ಬರು ಡೇಟಿಂಗ್‌ನಲ್ಲಿದ್ದೀರಿ ಎನ್ನುವುದು ಅವರ ಆಪ್ತ ಸ್ನೇಹಿತರಿಗೆ ಮಾತ್ರವಲ್ಲ ಅವರ ಸೋಷಿಯಲ್ ಮೀಡಿಯಾ ಫ್ರೆಂಡ್ಸ್‌ಗೂ ಗೊತ್ತಾಗುತ್ತಿತ್ತು. ಏಕೆಂದರೆ ತುಂಬಾ ಕ್ಲೋಸ್ ಆಗಿರುವ ಫೋಟೊಗಳು, ರೊಮ್ಯಾಂಟಿಕ್ ಡೇಟಿಂಗ್‌ಗೆ ಹೋದ ಸ್ಥಳಗಳು ಎಲ್ಲವೂ ನೀವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿಯ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್‌ನಲ್ಲಿ ರಾರಾಜಿಸುತ್ತಿರುತ್ತದೆ. ಈ ಜೋಡಿ ಡೇಟಿಂಗ್‌ನಲ್ಲಿದ್ದಾರೆ, ಎಷ್ಟರ ಮಟ್ಟಿಗೆ ಕ್ಲೋಸ್ ಇದ್ದಾರೆ ಎಂಬುವುದನ್ನು ಅವರ ಫೋಟೋಗಳೇ ಹೇಳುತ್ತಿರುತ್ತವೆ.
ತಾನು ಡೇಟಿಂಗ್ ಮಾಡುತ್ತಿರುವ ವ್ಯಕ್ತಿ ನಮ್ಮಿಬ್ಬರ ಸಂಬಂಧದ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ ಈ ರೀತಿ ತೋರಿಸಿಕೊಳ್ಳುವಾಗ ಅವರು ನನ್ನನ್ನು ಇಷ್ಟಪಡುತ್ತಿದ್ದಾರೆ ಎಂದೇ ಅನಿಸುತ್ತದೆ, ಆದರೆ ಕೆಲವೊಮ್ಮೆ ನಿಮ್ಮ ಜತೆ ಅವರು ತೋರುವ ವರ್ತನೆ ನೋಡಿದಾಗ ಈ ವ್ಯಕ್ತಿ ನಿಜವಾಗಲೂ ನನ್ನನ್ನು ಇಷ್ಟಪಡುತ್ತಿದ್ದಾರೆಯೇ ಅಥವಾ ತೋರ್ಪಡಿಕೆ ಅಷ್ಟೆಯೇ ಎಂಬ ಸಂಶಯ ಬರುತ್ತಿದೆಯೇ ಹಾಗಾದರೆ ನಿಮ್ಮದು ಫೈರ್‌ವರ್ಕಿಂಗ್ ಸಂಬಂಧವಾಗಿರಬಹುದು ನೋಡಿ.
ಹೌದು ಇದು ಸ್ಟ್ಯಾಶಿಂಗ್ ಸಂಬಂಧದ ವಿರುದ್ಧ ರೂಪ, ಆದರೆ ಸ್ಟ್ಯಾಶಿಂಗ್ ಅಷ್ಟು ಅಪಾಯಕಾರಿಯಲ್ಲ, ಸ್ಟ್ಯಾಶಿಂಗ್ ಸಂಬಂಧ ಎಂದರೆ ವ್ಯಕ್ತಿ ನಿಮ್ಮ ಜತೆಗಿನ ಸಂಬಂಧವನ್ನು ಎಲ್ಲರಿಂದಲೂ ಮುಚ್ಚಿಡಲು ಪ್ರಯತ್ನಿಸುತ್ತಾನೆ/ಳೆ. ಈ ಸಂಬಂಧ ಶಾಶ್ವತವಾದದ್ದಲ್ಲ, ಈ ವ್ಯಕ್ತಿಯ ಜತೆ ಮುಂದೆ ಬ್ರೇಕಪ್ ಮಾಡಿಕೊಳ್ಳುತ್ತೇನೆ ಎಂಬ ಚಿಂತನೆ ಅವರ ತಲೆಯಲ್ಲಿರುತ್ತದೆ, ಕೇವಲ ಸೀಮಿತ ಅವಧಿಗಷ್ಟೇ ನಿಮ್ಮ ಜತೆ ಸಂಬಂಧದಲ್ಲಿರುತ್ತಾರೆ. ಈ ರೀತಿಯ ಸಂಬಂಧ ತುಂಬಾ ಅಪಾಯಕಾರಿಯಾದದ್ದು. ಆ ವ್ಯಕ್ತಿ ಸೀಮಿತ ಅವಧಿಗೆ ಪ್ರೀತಿಯ ನಾಟಕ ಆಡಿದರೂ, ಆ ನಾಟಕವನ್ನೇ ನಿಜವೆಂದು ನಂಬಿದ ವ್ಯಕ್ತಿ ಮೋಸ ಹೋಗಬೇಕಾಗುತ್ತದೆ. ಆದರೆ ನಿಮ್ಮಿಬ್ಬರ ಸಂಬಂಧದ ಕುರಿತು ಒಂದು ಸುಳಿವೂ ಯಾರಿಗೂ ಇಲ್ಲದ ಕಾರಣ ಅಸಾಯಕರಾಗುತ್ತೀರಿ. ಆದರೆ ಫೈರ್‌ವರ್ಕಿಂಗ್ ಸಂಬಂಧ ಆಗಲ್ಲ, ಇದರಲ್ಲ ನೀವು ಪ್ರೀತಿಸುವ ವ್ಯಕ್ತಿ ನಿಮ್ಮಿಬ್ಬರ ಕ್ಲೋಸ್‌ನೆಸ್ ಬಗ್ಗೆ ಎಲ್ಲಿಯೂ ಮುಚ್ಚಿಡುವುದಿಲ್ಲ, ಆದರೆ ಕೆಲವೊಮ್ಮೆ ಈ ವ್ಯಕ್ತಿ ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದಾನಾ? ಎಂಬ ಅನುಮಾನ ಬಂದರೆ ನಿಮ್ಮದು ಫೈರ್‌ವರ್ಕಿಂಗ್ ಸಂಬಂಧವಾಗಿರಬಹುದು ಎಚ್ಚರ!
ಹೌದು ನಿಮ್ಮ ಜತೆ ಡೇಟಿಂಗ್‌ನಲ್ಲಿರುವ ಆ ವ್ಯಕ್ತಿ ತನ್ನ ವೈಯಕ್ತಿಕ ಲಾಭಕ್ಕಾಗಿ ಅಥವಾ ಮಾಜಿ ಪ್ರೇಮಿಗೆ ಹೊಟ್ಟೆಕಿಚ್ಚು ಆಗಲಿ ಇಲ್ಲಾ, ತನ್ನ ಲೈಫ್‌ಸ್ಟೈಲ್ ಎಷ್ಟೊಂದು ಲಕ್ಷುರಿಯಾಗಿದೆ ಎಂದು ತೋರಿಸಿಕೊಳ್ಳುವ ಉದ್ದೇಶದಿಂದ ನಿಮ್ಮನ್ನು ಬಳಸಿಕೊಳ್ಳುತ್ತಿರುತ್ತಾರೆ ಹೊರತು ನಿಜವಾಗಿ ಪ್ರೀತಿ ಇರುವುದಿಲ್ಲ. ಈ ರೀತಿ ತೋರ್ಪಡಿಕೆಯ ಪ್ರೀತಿ ಮಾಡುವವರು ಮುಂದೆ ಸಂಬಂಧ ಮುರಿದು ಹೋದಾಗಲೂ ತಲೆ ಕೆಡಿಸಿಕೊಳ್ಳುವುದಿಲ್ಲ, ಆದರೆ ಇದರಿಂದ ಮುಂದೆ ನೋವುಂಟಾಗಬಹುದು. ಆದ್ದರಿಂದ ನೀವು ಡೇಟಿಂಗ್‌ನಲ್ಲಿರುವ ವ್ಯಕ್ತಿ ಬೇರೆ ಯಾವುದೋ ವ್ಯಕ್ತಿಗೆ ತೋರಿಸಿಕೊಳ್ಳಲು ಅಥವಾ ತನ್ನ ಸ್ನೇಹಿತರ ಮುಂದೆ ನಾನೂ ಡೇಟಿಂಗ್‌ನಲ್ಲಿದ್ದೇನೆ ಎಂದು ತೋರಿಸಿಕೊಳ್ಳಲು ಪ್ರೀತಿ ಮಾಡುತ್ತಿದ್ದರೆ ಅವರಿಂದ ದೂರ ಸರಿಯುವುದೇ ಒಳ್ಳೆಯದು.
ನೀವು ಫೈರ್‌ವರ್ಕಿಂಗ್ ಸಂಬಂಧಲ್ಲಿದ್ದೀರಿ ಎಂಬುವುದನ್ನು ಹೀಗೆ ಕಂಡು ಹಿಡಿಯಬಹುದು ನೋಡಿ:
ನಿಮ್ಮನ್ನು ಶೋಆಫ್ ಮಾಡುತ್ತಿದ್ದರೆ
ನೀವು ನೋಡುವುದಕ್ಕೆ ಸುಂದರವಾಗಿದ್ದೀರಿ ಅಥವಾ ನಿಮ್ಮ ಬಳಿ ಹಣವಿದೆ ಎಂಬ ಕಾರಣಕ್ಕೆ ಅವರು ನಿಮ್ಮಲ್ಲಿ ಡೇಟಿಂಗ್ ಅಥವಾ ಪ್ರೀತಿಯ ನಾಟಕವಾಡುತ್ತಿದ್ದರೆ ಅವರಿಂದ ದೂರ ಸರಿಯುವುದೇ ಒಳ್ಳೆಯದು. ಏಕೆಂದರೆ ಅವರಿಗೆ ನಿಮ್ಮ ಮೇಲೆ ಪ್ರೀತಿಗಿಂತ ಬೇರೆಯವರು ನನ್ನ ಆಯ್ಕೆ ಬಗ್ಗೆ ಏನೂ ಹೇಳುವಂತಿರಬಾರದು ಎಂಬ ಭಯ ಇರುತ್ತದೆ. ಇಂಥ ವ್ಯಕ್ತಿಯನ್ನು ಇಷ್ಟಪಟ್ಟರೆ ನಿಮಗಿಂತ ಸುಂದರವಾಗಿರುವ ಅಥವಾ ನಿಮಗಿಂತ ಹಣವಿರುವ ವ್ಯಕ್ತಿ ಸಿಕ್ಕರೆ ನಿಮ್ಮ ಜತೆ ಬ್ರೇಕಪ್ ಮಾಡಿಕೊಳ್ಳುತ್ತಾರೆ. ಆದ್ದರಿಂದ ಇಂಥವರ ಬಳಿ ನಿಜವಾದ ಪ್ರೀತಿ ಬಯಸಿ ಮೋಸ ಹೋಬೇಡಿ, ಅದರಲ್ಲೂ ಶೋಆಫ್ ಪ್ರೀತಿಗೆ ಪುರುಷರು ಮೋಸ ಹೋಗುವುದು ಜಾಸ್ತಿ.
ಅವರ ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ನಿಮ್ಮ ಹಾಗೂ ಅವಳ ಫೋಟೊಗಲೇ ತುಂಬಿದ್ದರೆ
ನೀವು ರೇಸ್ಟೋರೆಂಟ್ ಹೋಗಿದ್ದು, ಜಾಲಿ ರೈಡ್ ಹೋಗಿದ್ದು ಹೀಗೆ ಅವರ ಸಾಮಾಜಿಕ ತಾಣದಲ್ಲಿ ನಿಮ್ಮಿಬ್ಬರ ಫೋಟೋಗಳ ಜತೆ ರೊಮ್ಯಾಂಟಿಕ್ ಸಾಲುಗಳಲ್ಲಿ ನಿಮ್ಮಿಬ್ಬರ ಪ್ರೀತಿಯ ಬಗ್ಗೆ ಬರೆದಿದ್ದರೆ, ಬೇರೆಯವರ ಗಮನ ಸೆಳೆಯಲು ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಬಹುದು.
ಕ್ಯಾಮರಾ ಕಂಡ ತಕ್ಷಣ ತುಂಬಾ ಕ್ಲೋಸ್ ಪೋಸ್ ನೀಡುವುದು
ಫ್ರೆಂಡ್ಸ್ ಜತೆಗಿರುವಾಗ, ಕ್ಯಾಮರಾ ಕಂಡಾಗ ಮಾತ್ರ ನಿಮ್ಮ ಜತೆ ತುಂಬಾ ಕ್ಲೋಸ್ ಆಗಿರುವಂತೆ ನಡೆದುಕೊಳ್ಳುತ್ತಿದ್ದರೆ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ನೀವು ಅವರು ಒಬ್ಬರೇ ಸಿಕ್ಕಾಗ ಅಷ್ಟೇ ಕ್ಲೋಸ್ ಆಗಿ ಹೆಗಲ ಮೇಲೆ ಕೈಹಾಕುವುದು ಅಥವಾ ತುಂಬಾ ಸಮೀಪ ಕೂರುವುದು ಮಾಡಿ ನೋಡಿ, ಆಗ ಅವರು ಏಕೋ ಸ್ವಲ್ಪ ಭಿನ್ನವಾಗಿ ನಡೆದುಕೊಂಡರೆ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.