For Quick Alerts
ALLOW NOTIFICATIONS  
For Daily Alerts

ಪ್ರಪೋಸ್ ಮಾಡುವಾಗ ಈ ಎಡವಟ್ಟು ಆಗದಿರಲಿ

|

ಹೇಳಿ ಕೇಳಿ ಇದು ಫೆಬ್ರವರಿ ತಿಂಗಳ ಪ್ರೇಮಿಗಳ ವಾರ. ಯುವ ಮನಸ್ಸುಗಳಲ್ಲಿ ಪ್ರೇಮ ಜ್ವರ ಶುರುವಾಗಿದೆ. ಇಷ್ಟು ದಿನ ತಮ್ಮ ಪ್ರೀತಿಯನ್ನು ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಂಡವರು ಪ್ರೇಮಿಗಳ ದಿನದಂದು ಹೇಳಿ ಬಿಡಬೇಕು ಎಂದು ಬಯಸುತ್ತಿರುತ್ತಾರೆ. 'ಈ ದಿನ ತಪ್ಪಿ ಹೋದರೆ ನಿನಗೆ ಸಿಕ್ಕಿರುವ ಅವಕಾಶ ಮಿಸ್‌ ಮಾಡಿ ಕೊಂಡಂತೆ' ಎಂದು ಮನಸ್ಸು ಹೇಳುತ್ತಿರುತ್ತದೆ.

Propose Day

ಪ್ರೇಮಿಗಳ ನೆಚ್ಚಿನ ದಿನವೇ ಪ್ರೇಮಿಗಳ ದಿನ. ಆ ದಿನ ನೀವೂ ಪ್ರೇಮಿಯಾಗಿ ಸಂಭ್ರಮಿಸಬೇಕೆಂಬ ಆಸೆ ಮನಸ್ಸಿನಲ್ಲಿರಬಹುದು. ಆದರೆ ನಿಮಗೆ ಯಾರ ಮೇಲಾದರೂ ಇಷ್ಟವಾಗಿದ್ದರೆ ಪ್ರಪೋಸ್ ಮಾಡುವ ಮುನ್ನ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು ಎಂಬುವುದು ನಮ್ಮ ಸಲಹೆ ಅಷ್ಟೇ.

ಒಬ್ಬ ವ್ಯಕ್ತಿ ನಮಗೆ ಇಷ್ಟವಾಗಲು ನಾನಾ ಕಾರಣಗಳಿರಬಹುದು, ಆದರೆ ಅವರನ್ನು ನೀವು ನಿಮ್ಮ ಜೀವನದಲ್ಲಿ ಬರಮಾಡಿಕೊಳ್ಳಲು ಯೋಚಿಸುವಾಗ ಸ್ವಲ್ಪ ಆಲೋಚಿಸುವುದು ಒಳ್ಳೆಯದು. ಇಲ್ಲಿ ನಾವು ಪ್ರಪೋಸ್‌ ಮಾಡುವ ಮುನ್ನ ಏನೆಲ್ಲಾ ಅಂಶಗಳು ನಿಮ್ಮ ಗಮನದಲ್ಲಿರಬೇಕು ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

1. ಮೊದಲಿಗೆ ಗೊಂದಲವನ್ನು ಪರಿಹರಿಸಿಕೊಳ್ಳಿ

1. ಮೊದಲಿಗೆ ಗೊಂದಲವನ್ನು ಪರಿಹರಿಸಿಕೊಳ್ಳಿ

ನಿಮಗೆ ಯಾರ ಮೇಲಾದರೂ ಇಷ್ಟವಾಗಿದ್ದರೆ ಅವರಿಗೆ ಅದರ ಬಗ್ಗೆ ಒಂದು ಚಿಕ್ಕ ಕ್ಲೂ ಆದರೂ ಇದೆಯೇ? ಅವರಿಗೆ ನಿಮ್ಮ ಪ್ರೀತಿಗೆ ಬದಲಾಗಬಹುದಾದ ಭಾವನೆ ಇದೆಯೇ? ಇಲ್ಲ ನಿಮ್ಮನ್ನು ಒಬ್ಬ ಫ್ರೆಂಡ್‌ ಆಗಿಯಷ್ಟೇ ಕಾಣುತ್ತಿದ್ದಾರಾ ಎಂಬ ನಿಮ್ಮ ಗೊಂದಲ ಪರಿಹರಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ನೀವು ಪ್ರಪೋಸ್ ಮಾಡಿದಾಗ ಅದನ್ನು ಆ ವ್ಯಕ್ತಿ ನಿರೀಕ್ಷಿಸಿಯೇ ಇಲ್ಲದಿದ್ದರೆ ಇದರಿಂದ ನಿಮ್ಮ ಪ್ರೀತಿಯನ್ನು ಆ ವ್ಯಕ್ತಿ ಒಪ್ಪಿಕೊಳ್ಳಲು ಸಿದ್ಧವಾಗುವುದಿಲ್ಲ, ಇದರಿಂದಾಗಿ ನಿಮ್ಮಿಬ್ಬರ ಗೆಳೆತನವೂ ಮುರಿದು ಬೀಳುವ ಸಾಧ್ಯತೆ ಇದೆ.

2. ನೀವು ಮಾಡುವ ಪ್ರಪೋಸ್‌ ಮುಜುಗರ ಉಂಟಾಗದಿರಲಿ

2. ನೀವು ಮಾಡುವ ಪ್ರಪೋಸ್‌ ಮುಜುಗರ ಉಂಟಾಗದಿರಲಿ

ನಿಮಗೆ ಅವರ ಮೇಲೆ ಆಕರ್ಷಣೆ ಇರುವಂತೆ, ಅವರಿಗೆ ನಿಮ್ಮ ಆಕರ್ಷಣೆಯಿದ್ದರೂ ನೀವೂ ಯಾವ ರೀತಿ ಪ್ರಪೋಸ್ ಮಾಡಿದರೆ ಒಳ್ಳೆಯದು ಎಂದು ತಿಳಿದುಕೊಂಡರೆ ಒಳ್ಳೆಯದು. ಒಬ್ಬೊಬ್ಬರ ಸ್ವಭಾವ ಒಂದೊಂದು ರೀತಿ ಇರುತ್ತದೆ. ಅವರಿಗೆ ನಿಮ್ಮನ್ನು ಕಂಡರೆ ಇಷ್ಟವಿರುತ್ತದೆ, ಆದರೆ ಅದು ಈಗಲೇ ಎಲ್ಲರಿಗೂ ಗೊತ್ತಾಗುವುದು ಬೇಡ, ಮೊದಲು ಜೀವನದಲ್ಲಿಗುರಿ ಮುಟ್ಟೋಣ, ನಂತರ ಮದುವೆಯಾಗೋಣ ಎಂಬ ಆಲೋಚನೆ ಇರುವವರ ಬಳಿ ಹೋಗಿ ಸಾರ್ವಜನಿಕವಾಗಿ ಪ್ರಪೋಸ್ ಮಾಡಿದರೆ ಅವರು ನಿಮ್ಮ ಬಗ್ಗೆ ಖುಷಿ ಪಡುವ ಬದಲು ಕೋಪಗೊಳ್ಳುವ ಸಾಧ್ಯತೆ ಇದೆ.

3. ಪ್ರಪೋಸ್‌ನಲ್ಲಿ ಕ್ರಿಯೇಟಿವಿಟಿ ಇರಲಿ

3. ಪ್ರಪೋಸ್‌ನಲ್ಲಿ ಕ್ರಿಯೇಟಿವಿಟಿ ಇರಲಿ

ನೀವು ಇಷ್ಟಪಡುವವರ ಸ್ವಭಾವಕ್ಕೆ ಹೊಂದುವಂತೆ ನಿಮ್ಮ ಲವ್ ಪ್ರಪೋಸ್‌ ತುಂಬಾ ಕ್ರಿಯೇಟಿವ್ ಆಗಿರಲಿ. ಏಕೆಂದರೆ ನೀವು ಇಷ್ಟಪಡುವ, ನಿಮ್ಮ ಬಾಳ ಸಂಗಾತಿ ಆಗ ಬಯಸುವ ವ್ಯಕ್ತಿಗೆ ಪ್ರಪೋಸ್‌ ಮಾಡುತ್ತಿದ್ದೀರಿ. ಆ ಪ್ರಪೋಸ್ ಸಾಯುವವರೆಗೆ ನಿಮ್ಮ ನೆನಪಿನಲ್ಲಿರುತ್ತದೆ. ಆ ಕ್ಷಣವನ್ನು ಮತ್ತಷ್ಟು ಮಧುರವಾಗಿಸಲು ಅವರಿಗೆ ಇಷ್ಟವಾಗುವ ರೀತಿಯಲ್ಲಿ ಪ್ರಪೋಸ್ ಮಾಡಿ. ಪ್ರಪೋಸ್ ಅನ್ನು ನೇರವಾಗಿ ಹೇಳಿ, ಸ್ನೇಹಿತರ ಮೂಲಕ ಹೇಳಿ ಕಳುಹಿಸುವುದು ಮಾಡಬೇಡಿ.

4. ಬೇರೆಯವರ ಐಡಿಯಾ ನಕಲಿ ಬೇಡ

4. ಬೇರೆಯವರ ಐಡಿಯಾ ನಕಲಿ ಬೇಡ

ನಿಮ್ಮ ಫ್ರೆಂಡ್‌ ಪ್ರಪೋಸ್ ಮಾಡಿದ ರೀತಿ ಅಥವಾ ಯಾವುದೋ ಸೆಲೆಬ್ರಿಟಿ ಲವ್‌ ಸ್ಟೋರಿ ಕೇಳಿ ಅದರಂತೆ ಪ್ರಪೋಸ್ ಮಾಡುವುದು ಮಾಡಬೇಡಿ. ನಕಲಿ ಮಾಡಲು ಹೋದರೆ ಅದರಲ್ಲಿ ಥ್ರಿಲ್ ಇರುವುದಿಲ್ಲ. ಲವ್‌ ಲೆಟರ್ ಮೂಲಕ ಪ್ರಪೋಸ್‌ ಮಾಡುತ್ತೀರಾ? ಹಾಗಾದರೆ ಪದಗಳು ನಿಮ್ಮ ಮನಸ್ಸಿನಿಂದ ಮೂಡಲಿ, ಹಾಡಿನ ಮೂಲಕ ಹೇಳುತ್ತೀರಾ, ಅದು ಅವರ ಮನಸ್ಸನ್ನು ತಟ್ಟುವಂತೆ ಇರಲಿ. ಒಟ್ಟಿನಲ್ಲಿ ಪ್ರಪೋಸ್ ಮಾಡುವಾಗ ನಿಮ್ಮ ಮನಸ್ಸಿನ ಭಾವನೆಗಳು ಅವರಿಗೆ ಮುಟ್ಟುವಂತಿರಲಿ, ಬದಲಿಗೆ ನಾಟಕೀಯ, ಸಿನಿಮಾ ದೃಶ್ಯಗಳ ನಕಲಿ ಮಾಡಲು ಹೋಗಬೇಡಿ.

5. ತುಂಬಾ ನಿರೀಕ್ಷೆ ಬೇಡ

5. ತುಂಬಾ ನಿರೀಕ್ಷೆ ಬೇಡ

ನೀವು ನಿಮ್ಮ ಪ್ರೇಮ ನಿವೇದನೆ ಮಾಡಿದ ತಕ್ಷಣ ಆ ವ್ಯಕ್ತಿ ಒಪ್ಪಿಕೊಳ್ಳಲೇಬೇಕು ಎಂಬ ನಿರೀಕ್ಷೆ ಇಟ್ಟುಕೊಳ್ಳದಿರಿ. ಅವರಿಗೂ ನೀವು ಇಷ್ಟವಾದರೆ ಖುಷಿಯ ವಿಚಾರ. ಅವರು ನಿಮ್ಮನ್ನು ಒಪ್ಪಿಕೊಳ್ಳದಿದ್ದರೆ ಅದಕ್ಕಾಗಿ ತುಂಬಾ ಬೇಸರ ಪಟ್ಟುಕೊಳ್ಳುವುದು ಅಥವಾ ನನ್ನ ಲವ್ ಪ್ರಪೋಸ್ ಒಪ್ಪಿಕೊಳ್ಳದ ವ್ಯಕ್ತಿಗೆ ಕೆಡಕು ಉಂಟಾಗಬೇಕೆಮದು ಬಯಸುವುದು ಬೇಡ. ಪ್ರೀತಿ ಎನ್ನುವುದು ಇಬ್ಬರ ಹೃದಯಲ್ಲಿ ಮೂಡಬೇಕು, ಬಲವಂತದಿಂದ ಪ್ರೀತಿ ಪಡೆಯಲು ಸಾಧ್ಯವಿಲ್ಲ, ಪಡೆದರೂ ಅದರಲ್ಲಿ ಪ್ರೀತಿಯ ಭಾವ ಕಾಣಲು ಸಾಧ್ಯವೇ ಇಲ್ಲ.

English summary

Do Not Do These Mistakes While Proposing

This valentines day if you want to propose love, here are some tips what mistakes you must do while proposing, Have a look.
X
Desktop Bottom Promotion