For Quick Alerts
ALLOW NOTIFICATIONS  
For Daily Alerts

ಪ್ರೀತಿ ನಿವೇದನೆ ವೇಳೆ ಈ ಮಿಸ್ಟೇಕ್ಸ್‌ ಮಾಡಲೇಬೇಡಿ

|

ಒಂದು ಗಂಡಿಗೆ ಒಂದು ಹೆಣ್ಣು, ಒಂದು ಹೆಣ್ಣಿಗೆ ಒಂದು ಗಂಡು ಅಂತ ಆ ಭಗವಂತ ಮೊದಲೇ ಫಿಕ್ಸ್ ಮಾಡಿರುತ್ತಾನಂತೆ, ನಾವು ನಮ್ಮ ಜೋಡಿನ ಹುಡುಕಿಕೊಳ್ಳಬೇಕು ಅಷ್ಟೇ! ಅರೇ, ಹುಡುಕಿಕೊಳ್ಳೊದು ಅಂದ್ರೆ ಹೇಗೆ? ಏನು ದಿನ ಪೂರ್ತಿ ಅದೇ ಕೆಲಸ ಮಾಡಕ್ಕಾಗತ್ತಾ ಅಂತೀರಾ?? ಖಂಡಿತ ಬೇಡ, ಜೀವನದ ಯಾವುದೋ ಒಂದು ಹಂತದಲ್ಲಿ ನಿಮ್ಮ ಸಂಗಾತಿ ನಿಮ್ಮ ಎದುರು ಬಂದೇ ಬರ್ತಾರೆ. ಅವರನ್ನ ಸರಿಯಾಗಿ ಗುರುತಿಸಿ, ಪ್ರೀತಿ ನಿವೇದನೆ ಮಾಡಿಕೊಂಡು, ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳೋದು ನಿಮ್ಮ ಬುದ್ಧಿವಂತಿಕೆಗೆ ಬಿಟ್ಟದ್ದು!

ಪ್ರೀತಿ ಮಾಡೋದು, ಪ್ರೀತಿಯಲ್ಲಿ ಬೀಳೋದು ಅಂದ್ರೆ ಅಷ್ಟು ಸುಲಭವೇನಲ್ಲ ಬಿಡಿ. ಅದರಲ್ಲೂ ಒಬ್ಬರನ್ನ ನೀವೇ ನನ್ನ ಪ್ರೀತಿ ಅಂತ ಅವರ ಮುಂದೆ ಪ್ರೀತಿ ನಿವೇದನೆ ಮಾಡಿಕೊಳ್ಳೊದಂತೂ ಇನ್ನೂ ಕಷ್ಟ. ಹೆಚ್ಚಾಗಿ ನಾವೆಲ್ಲ ರೋಮ್ಯಾಂಟಿಕ್ ಚಲನಚಿತ್ರಗಳನ್ನ ನೋಡಿಕೊಂಡು, ಪ್ರಣಯ ಕಾದಂಬರಿಗಳನ್ನು ಓದಿಕೊಂಡೆ ಬೆಳೆದವರು. ಅದರಲ್ಲಿ ಹುಡುಗ ಹುಡುಗಿ ಪರಸ್ಪರ ಪ್ರೀತಿ ನಿವೇದನೆ ಮಾಡಿಕೊಳ್ಳೋದನ್ನ ನೋಡಿ ರೋಮಾಂಚನಗೊಂಡಿದ್ದೇವೆ.

proposing guidance

ಒಂದು ಬಿಡುವಿಲ್ಲದ ಪಟ್ಟಣದ ಬೀದಿ, ಅದರ ಸುತ್ತ ನಾನಾ ರೀತಿಯ ವ್ಯಾಪಾರಿಗಳು, ಹಣ್ಣು ತರಕಾರಿಗಳ ವ್ಯಾಪಾರ, ಹಲವಾರು ಅಂಗಡಿಗಳು ಇಂಥ ಸ್ಥಳದಲ್ಲಿ ನೀವು ಪ್ರೀತಿಸಿದ ಹುಡುಗಿಗೆ 'ಐ ಲವ್ ಯು' ಅಂತ ಹೇಳಲು ಹೊರಟಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ಖಂಡಿತ ನೀವು ಚಲನಚಿತ್ರ ತಾರೆಯರಾದ ಶಾರುಖ್ ಖಾನ್, ಸುದೀಪ್ ಮೊದಲಾದವರಂತೆ, ನಿಮ್ಮ ಹುಡುಗಿಯ ಎದುರು ಮಂಡಿಯೂರಿ ನಿಮ್ಮ ಇಷ್ಟವಾದ ಕವಿತೆ ಅಥವಾ ನೀವೆ ಬರೆದ ಕವಿತೆಯನ್ನು ಗುನುಗುತ್ತಾ, ಕೈಯಲ್ಲಿ ಹೂವು ಹಿಡಿದು ಪ್ರೀತಿ ನಿವೇದನೆ ಮಾಡಿಕೊಳ್ಳಲು ಹೊರಟಿರಬಹುದು. ಆದರೆ ಕೇಳಿ.. ನಿಮ್ಮ ಮುಂದಿರುವ ಹುಡುಗಿ ನಿಮ್ಮನ್ನು ಹಾಗೇ ಪರಿಗಣಿಸುತ್ತಾಳೆಯೇ? ನಿಮ್ಮನ್ನು ಸಂಗಾತಿಯಾಗಿ ಸ್ವೀಕರಿಸಲು ತಯಾರಿದ್ದಾಳೇಯೇ? ಗೊತ್ತಿಲ್ಲ. ಹಾಗಾಗಿ ಬನ್ನಿ, ನೀವು ನಿಮ್ಮ ನೆಚ್ಚಿನವರ ಎದುರು ಪ್ರೀತಿ ನಿವೇದನೆ ಮಾಡಿಕೊಳ್ಳುವ ಮೊದಲು ಮಾಡಬಾರದ ಕೆಲವು ತಪ್ಪುಗಳ ಬಗ್ಗೆ ಹೇಳುತ್ತೇವೆ.

1. ಸರ್ಪ್ರೈಸ್ ಕೊಡುವುದು!

1. ಸರ್ಪ್ರೈಸ್ ಕೊಡುವುದು!

ಸರ್ಪ್ರೈಸ್ ಕೊಡುವುದು ಅಥವಾ ಆಶ್ವರ್ಯಗೊಳಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಪ್ರೀತಿಯ ವಿಷಯದಲ್ಲಿ! ಇದು ಕೆಲವರಿಗೆ ಅತ್ಯಂತ ಖುಷಿ, ರೋಮಾಂಚನಕಾರಿಯಾಗಿದ್ದರೂ ಇನ್ನೂ ಕೆಲವರಿಗೆ ಸರ್ಪ್ರೈಸ್ ಅನ್ನುವುದು ಇಷ್ಟವಾಗುವುದಿಲ್ಲ. ಅದರಲ್ಲೂ ವಿಶೇಷವಾಗಿ ಹೃದಯದ ವಿಷಯಕ್ಕೆ ಬಂದಾಗ ಸ್ವಲ್ಪ ಮುನ್ನೆಚ್ಚರಿಕೆ ಅಗತ್ಯ. ನೀವು ಪ್ರೀತಿಯನ್ನು ಹೇಳಿಕೊಳ್ಳಲು ಹೋಗುವ ಮೊದಲು ಆ ವ್ಯಕ್ತಿ ನಿಮ್ಮನ್ನೂ ಅಷ್ಟೇ ಇಷ್ಟಪಡುತ್ತಿದ್ದಾರೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ.

2. ಶೀಘ್ರ ನಿವೇದನೆ ಒಳ್ಳೆಯದಲ್ಲ!

2. ಶೀಘ್ರ ನಿವೇದನೆ ಒಳ್ಳೆಯದಲ್ಲ!

ಇದರ ಬಗ್ಗೆ ನಾವು ಹೆಚ್ಚೇನೂ ಹೇಳಬೇಕಿಲ್ಲ ಅಲ್ಲವೇ? ನಿಮ್ಮ ಎದುರಿಗಿರುವ ವ್ಯಕ್ತಿ ನಿಮ್ಮನ್ನು ಪ್ರೀತಿಸುತ್ತಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳದೇ ಆತುರಾತುರವಾಗಿ ಪ್ರೀತಿ ನಿವೇದನೆ ಮಾಡಿಕೊಳ್ಳುವುದು ತಪ್ಪು. ಇದರಿಂದ ನಿಮ್ಮ ಹೃದಯ ಚೂರಾಗಬಹುದು ಎಚ್ಚರ! ಅವರ ಭಾವನೆಯನ್ನೂ ತಿಳಿದುಕೊಳ್ಳಿ ಇದಕ್ಕೆ ಸಮಯ ಹಿಡಿಯಬಹುದು, ಆದರೆ ಅವರು ನಿಮ್ಮ ಪ್ರೀತಿಯನ್ನು ಒಪ್ಪುತ್ತಾರೆ ಎಂದು ನಂಬಿಕೆ ಇಲ್ಲದೆ ಪ್ರೀತಿಯ ಪ್ರಸ್ತಾಪವನ್ನು ಅವರ ಮುಂದಿಡಬೇಡಿ.

3. ತಡವಾಗಿ ಆಗದಿರಲಿ ಪ್ರೀತಿ ನಿವೇದನೆ!

3. ತಡವಾಗಿ ಆಗದಿರಲಿ ಪ್ರೀತಿ ನಿವೇದನೆ!

ಅತ್ಯಂತ ಶೀಘ್ರವಾಗಿ ಪ್ರೀತಿಯನ್ನು ತೋರಿಸಿಕೊಳ್ಳುವುದು ಎಷ್ಟು ಸರಿಯಲ್ಲವೋ ಹಾಗೆ ಅನಗತ್ಯವಾಗಿ ತಡಮಾಡುವುದೂ ಅಷ್ಟೇ ತಪ್ಪು. ನೀವು ನಿಮ್ಮ ಭಾವನೆಯನ್ನು ವ್ಯಕ್ತಪಡಿಸಲು ಅಗತ್ಯಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದ್ದರೆ ನಿಮ್ಮ ಈ ಅಸಹಾಯಕತೆಯೇ ಇನ್ನೊಬ್ಬರಿಗೆ ಉಪಕಾರಿಯಾಗಬಹುದು. ನಿಮ್ಮ ಪ್ರೀತಿಪಾತ್ರರನ್ನು ಇನ್ಯಾರೋ ಪ್ರೀತಿಸಲು ಶುರುಮಾಡಬಹುದು. ಹೀಗಾಗಬಾರದು ಅಲ್ಲವೇ? ಪ್ರೀತಿ ಗಳಿಸುವಲ್ಲಿ ಇನ್ನೂ ತಡ ಮಾಡದಿರಿ!

4. ಸಾರ್ವಜನಿಕ ಸ್ಥಳದಲ್ಲಿ ಪ್ರೀತಿ ನಿವೇದನೆ!

4. ಸಾರ್ವಜನಿಕ ಸ್ಥಳದಲ್ಲಿ ಪ್ರೀತಿ ನಿವೇದನೆ!

ಹೌದು, ಸಾಕಷ್ಟು ಹಾಲಿವುಡ್, ಬಾಲಿವುಡ್ ಚಿತ್ರಗಳಲ್ಲಿ ನೋಡಿದ್ದೇವೆ, ನಾಯಕನೊಬ್ಬ ತನ್ನ ಪ್ರೀತಿಯ ಹುಡುಗಿಯನ್ನು ಪಡೆಯಲು ಅವಳ ಹಿಂದೆಯೇ ಸುತ್ತುತ್ತಾನೆ ಮತ್ತು ಜನ ಕಿಕ್ಕಿರಿದ ರೆಸ್ಟೋರೆಂಟ್ ನಂತಹ ಜಾಗದಲ್ಲಿ ಕೈಯಲ್ಲೊಂದು ವಜ್ರದ ಉಂಗುರದ ಪೆಟ್ಟೆಗೆಯನ್ನು ಹಿಡಿದು ಅವಳ ಮುಂದೆ ಪ್ರೀತಿ ನಿವೇದನೆ ಮಾಡಿಕೊಳ್ಳುತ್ತಾನೆ. ಆದರೆ ಸಾಕಷ್ಟು ಜನ ಇದನ್ನು ವಜ್ರದ ಆಭರಣಗಳ ಮಾರಾಟ ಜಾಹೀರಾತು ಎಂದೇ ವಿಮರ್ಶಿಸುತ್ತಾರೆ. ಏನೇ ಇರಲಿ ನಾವು ಮಾತನಾಡುತ್ತಿರುವ ವಿಷಯ ಅದಲ್ಲ. ನೀವು ಸಾರ್ವಜನಿಕ ಸ್ಥಳದಲ್ಲಿ ಏನು ಮಾಡುತ್ತಿದ್ದೀರೆಂದು ನಿಮಗೆ ಅರಿವಿರಬಹುದು, ಹಾಗೆ ಮಾಡುವುದೇ ನಿಮಗಿಷ್ಟವಾಗಿರಬಹುದು. ಆದರೆ ಆ ಸ್ಥಳದಲ್ಲಿ ಕುಳಿತ ಜನರಿಗೆ ಇದರ ಬಗ್ಗೆ ಆಸಕ್ತಿ ಇಲ್ಲದಿರಬಹುದು. ಆದ್ದರಿಂದ ಇಂತಹ ಪ್ರೀತಿ ನಿವೇದನೆಗಳನ್ನು ಮಾಡದಿರಿ. ಸಾರ್ವಜನಿಕರನ್ನು ಗೌರವಿಸುವುದು ನಮ್ಮ ಕರ್ತವ್ಯ.

5. ಪ್ರೀತಿ ನಿವೇದನೆಯ ವೇಳೆ ಚುಂಬಿಸುವುದು

5. ಪ್ರೀತಿ ನಿವೇದನೆಯ ವೇಳೆ ಚುಂಬಿಸುವುದು

ನೀವು ಪ್ರೀತಿಸುತ್ತಿರುವ ವ್ಯಕ್ತಿಗೆ ಪ್ರೀತಿ ನಿವೇದನೆಯನ್ನು ಮಾಡಿಕೊಳ್ಳುವಾಗ ಅವಶ್ಯವಾಗಿ ತಡೆಯಬೇಕಾದ ವಿಷಯ ಇದು. ಪ್ರೀತಿ ಎನ್ನುವುದು ಭಾವನೆಗಳಿಗೆ ಸಂಬಂಧಿಸಿದ್ದು. ನೀವು ನಿಮ್ಮ ಆಳವಾದ ಭಾವನೆಯನ್ನು ವ್ಯಕ್ತಪಡಿಸುವಾಗ ದೈಹಿಕ ಆಕರ್ಷಣೆಯನ್ನು ಪಕ್ಕಕ್ಕಿಡಿ. ನಿಮ್ಮ ಸಂಗಾತಿಯಾಗುವ ಅವಳು/ ಅವನ ಒಪ್ಪಿಗೆಯನ್ನು ಪಡೆದ ನಂತರವಷ್ಟೇ ಚುಂಬನ, ಅಪ್ಪುಗೆಯನ್ನು ಮಾಡಿ.

ಅಂದ ಹಾಗೇ ಫೆಬ್ರವರಿ 14, ಪ್ರೇಮಿಗಳ ದಿನ ಬಂದೇ ಬಿಡ್ತು. ನಿಮ್ಮ ಸರಿಯಾದ ಸಂಗಾತಿಯನ್ನು ಆಯ್ಕೆಮಾಡಿ ಸರಿಯಾದ ಸಮಯಕ್ಕೆ, ವಿಳಂಬ, ಆತುರ ಎರಡನ್ನೂ ಮಾಡದೆ ನಿಮ್ಮ ಪ್ರೀತಿ ನಿವೇದನೆಯನ್ನು ಮಾಡಿ. ಆಲ್ ದಿ ಬೆಸ್ಟ್!

English summary

Avoid These Mistakes While Proposing The Person You Love

Here we are discussing about avoid these five mistakes while proposing the person you love. If falling in love is difficult, proposing the person you are in love with is even more difficult. Most people grow up watching romantic movies or reading novels where they learn about the way a man proposes the woman he loves, or vice versa.
Story first published: Monday, February 3, 2020, 13:45 [IST]
X
Desktop Bottom Promotion