For Quick Alerts
ALLOW NOTIFICATIONS  
For Daily Alerts

  ಅತಿ ಹೆಚ್ಚು ಮುಜುಗರ ತರಿಸುವ ಪ್ರಿಯಕರನ ಅವಾಂತರಗಳು!

  |

  ಸಾರ್ವಜನಿಕ ಸ್ಥಳದಲ್ಲಿದ್ದಾಗ ಕೆಲವೊಮ್ಮೆ ನಿಮ್ಮ ಪ್ರಿಯಕರರು ಯಾವುದೋ ಕಾರಣಕ್ಕೆ ತಮ್ಮ ಮಂಗಾಟಗಳನ್ನು ಪ್ರಯೋಗಿಸಿದ್ದುದನ್ನು ನೆನಪಿಸಿಕೊಂಡರೆ ಈಗಲೂ ನಿಮಗೆ ನಗು ಬರದೇ ಇರಲಾರದು. ಈ ವಿಷಯವನ್ನೇ ಇಂದಿನ ಲೇಖನದಲ್ಲಿ ಆಯ್ದುಕೊಳ್ಳಲಾಗಿದ್ದು ಇಂತಹ ನಗು ಬರಿಸುವ ಹಾಗೂ ಮುಜುಗರ ತರಿಸುವ ಸಂದರ್ಭಗಳನ್ನು ಉಲ್ಲೇಖಿಸಲಾಗಿದೆ. ನಿಮ್ಮ ನೆನಪಿನಾಳದಲ್ಲಿ ಹುದುಗಿರುವ ಇಂತಹ ಯಾವುದಾದರೊಂದು ಪ್ರಸಂಗ ಕೆಳಗೆ ವಿವರಿಸಿರುವುದಕ್ಕಿಂತ ಭಿನ್ನವಾಗಿದೆಯೇ ಅಥವಾ ಈ ಮಂಗಾಟಗಳು ಸರ್ವವಿದಿತವೇ, ನಿರ್ಧರಿಸಿ.

  ಹೊಸ ಸಂಬಂಧದಲ್ಲಿ ಇಬ್ಬರೂ ತಮ್ಮ ಸಂಗಾತಿ ಬಯಸಿದಂತೆಯೇ ವರ್ತಿಸಿದರೆ ಮಾತ್ರ ಈ ಸಂಬಂಧದಲ್ಲಿ ಯಾವುದೇ ಅಡೆತಡೆ ಇಲ್ಲದೇ ಸುಗಮವಾಗಿ, ಸುಖಮಯವಾಗಿ ಚಲಿಸ್ತುತದೆ. ತಮ್ಮ ಸಂಗಾತಿ ಮೆಚ್ಚಬೇಕೆಂದೇ ಇಬ್ಬರೂ ತಮ್ಮ ಅತ್ಯುತ್ತಮವಾದ ವರ್ತನೆಯನ್ನೇ ತೋರುವ ಮೂಲಕ ಪರಸ್ಪರರ ಅನುರಾಗ ಮತ್ತು ಪ್ರೀತಿಯನ್ನು ಪಡೆಯುತ್ತಾರೆ. ಆದರೆ ಕನ್ನಡದಲ್ಲೊಂದು ಗಾದೆ ಇದೆ, ಮಂಗ ಮುದುಕನಾದರೂ ಮಂಗಾಟವನ್ನು ಬಿಡುವುದಿಲ್ಲವಂತೆ. ಇದೇ ರೀತಿ ನಿಮ್ಮ ಪ್ರಿಯಕರನಿಗೂ ಕೆಲವು ಮಂಗಾಟಗಳು ಜನ್ಮತಃ ಬಂದಿದ್ದು ಇವು ಎಲ್ಲೋ ಸುಪ್ತವಾಗಿರುತ್ತವೆ. ಆದರೆ ಸೂಕ್ತ ಸಂದರ್ಭ, ಸಮಯಾವಕಾಶ ದೊರೆತಾದ ಇವುಗಳಲ್ಲಿ ಕೆಲವು ಪ್ರಕಟಗೊಳ್ಳುವುದುಂಟು, ಇವು ಪ್ರಿಯತಮೆಯ ಭಾರೀ ಮುಜುಗರಕ್ಕೆ ಕಾರಣವಾಗಬಹುದು. ಪ್ರತಿಯೊಬ್ಬ ಪ್ರಿಯತಮೆಯೂ ತನ್ನ ಸಂಗಾತಿಯ ಕೆಲವು ಮಂಗಾಟಗಳು ಜೀವಮಾನವಿಡೀ ನೆನಪಿಡಬಹುದಾದಷ್ಟು ನಗು ಬರಿಸುವಂತಹದ್ದಾಗಿದ್ದುದು ಇದ್ದೇ ಇರುತ್ತದೆ.

  public

  ಈ ಸಂದರ್ಭಗಳ ಬಗ್ಗೆ ಅವಲೋಕನ ನಡೆಸಿದರೆ ಕೆಲವು ಅತಿ ಮುಜುಗರ ತರಿಸುವ ಸಾಮಾನ್ಯ ಸಂಗತಿಗಳಲ್ಲಿ ನನ್ನ ಗೆಳತಿಯೊಬ್ಬಳ ಸಂಗಾತಿಯ ಕೆಲವು ಸಂದರ್ಭಗಳು ನೆನಪಿಗೆ ಬರುತ್ತವೆ. ಈ ಸಂದರ್ಭ ನಿಮಗೂ ಎದುರಾಗಿರಬಹುದು ಎಂದು ನನಗೆ ಭರವಸೆ ಇದೆ. ಸಾಮಾನ್ಯವಾಗಿ ಪುರುಷರು ಸಾರ್ವಜನಿಕ ಸ್ಥಳಗಳಲ್ಲಿ ಅಗತ್ಯಕ್ಕೂ ಹೆಚ್ಚೇ ತೆರೆದ ಮನಸ್ಸಿನವರಾಗುತ್ತಾರೆ ಹಾಗೂ ಇದೇ ಮುಜುಗರ ತರಿಸುವ ಸಂದರ್ಭಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಕೆಲವು ಕ್ರಿಯೆಗಳನ್ನು ಉತ್ಪ್ರೇಕ್ಷಿಸುವ ಮೂಲಕವೂ ಸ್ವತಃ ಮುಜುಗರ ಅನುಭವಿಸುತ್ತಾರೆ. ಅಷ್ಟಕ್ಕೂ, ನಾವೇನೂ ಅರಿಷಡ್ವರ್ಗಗಳನ್ನು ಜಯಿಸಿದವರಲ್ಲವಲ್ಲ, ನಾವು ಸಾಮಾನ್ಯ ಮನುಷ್ಯರು, ಮತ್ತು ಎಲ್ಲಾ ಸಾಮಾನ್ಯರಿಂದಲೂ ಚಿಕ್ಕ ಪುಟ್ಟ ತಪ್ಪುಗಳು ಆಗುತ್ತಲೇ ಇರುತ್ತವೆ. ನಗು ಬರಿಸುವ ಕೆಲವು ಸಾಮಾನ್ಯ ಸಂದರ್ಭಗಳನ್ನು ಸುಮ್ಮನೇ ಓದುವ ಬದಲು ನಾಲ್ಕು ಜನರಿಗೆ ಕೇಳುವಂತೆ ಗಟ್ಟಿಯಾಗಿ ಓದಿ ಹೇಳಿದರೆ ಇದರ ಸ್ವಾರಸ್ಯ ಇನ್ನಷ್ಟು ಹೆಚ್ಚುತ್ತದೆ.

  1. ಪ್ರಿಯತಮನ ತಂದೆ ತಾಯಿಯರು ಬರುತ್ತಿದ್ದಂತೆಯೇ ಜಾಗ ಖಾಲಿ ಮಾಡುವುದು

  ಹೌದು, ಈಗ ನಿಮಗೂ ಥಟ್ಟನೇ ನೆನಪಾಗಿರಬಹುದು. ನಿಮಗೆ ನೆನಪಿರಬಹುದು, ನಿಮ್ಮ ಪ್ರಿಯಕರನೊಂದಿಗೆ ನೀವು ಆಪ್ತಕ್ಷಣದಲ್ಲಿ ಮಗ್ನರಾಗಿದ್ದಾಗ ಆತನ ತಂದೆ ತಾಯಿಯರು ಥಟ್ಟನೇ ಮನೆಗೆ ಆಗಮಿಸಿಬಿಡುತ್ತಾರೆ. ಅವರನ್ನು ಕಂಡಾಕ್ಷಣ ನಿಮ್ಮ ಬೆನ್ನು ಹುರಿಯಲ್ಲಿ ಚಳಕು ಮೂಡುತ್ತದೆ ಹಾಗೂ ಈ ಸಂದರ್ಭವನ್ನು ಹೇಗೆ ಎದುರಿಸಿದ್ದೀರಿ ಎಂಬುದೇ ಮುಖ್ಯವಾಗುತ್ತದೆ. ಈಗ ನೀವು ಈ ಸಂದರ್ಭಗಳನ್ನೆಲ್ಲಾ ಮೀರಿ ಮುಂದುವರೆದಿದ್ದೀರಿ. ಅಂದು ನಿಮ್ಮ ಪ್ರಿಯಕರ ಈ ಸಂದರ್ಭವನ್ನು ಎದುರಿಸುವಾಗ ಎಷ್ಟೊಂದು ಹೆದರಿಕೊಂಡಿದ್ದ ಹಾಗೂ ತಪ್ಪಿತಸ್ಥ ಭಾವನೆಯಿಂದ ಖಿನ್ನನಾಗಿದ್ದ. ಪ್ರಿಯಕರನೊಂದಿಗೆ ಆಪ್ತ ಕ್ಷಣಗಳನ್ನು ಕಳೆಯುವುದು ತಪ್ಪಲ್ಲವದರೂ ಆ ಕ್ಷಣದಲ್ಲಿ ಅವರ ಮನೆಯವರು ಏಕಾಏಕಿ ಆಗಮಿಸಿದಾಗ ಎದುರಾಗುವ ಮುಜುಗರ ಮಾತ್ರ ಜೀವಮಾನವಿಡೀ ಮರೆಯಲಾರದ್ದಂತಿರುತ್ತದೆ.

  2. ಮೌನ ಕಾಪಾಡಬೇಕಾದ ಸ್ಥಳದಲ್ಲಿ ಅಪಾನವಾಯು ಮತ್ತು ತೇಗು ಬಿಟ್ಟ ಸದ್ದು

  ಯಾವುದೋ ಗಹನವಾದ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ, ನಿಮ್ಮೊಂದಿಗೆ ಇನ್ನೂ ಹಲವು ಸ್ನೇಹಿತರು ಇದ್ದ ಸಮಯದಲ್ಲಿಯೇ ನಿಮ್ಮ ಪ್ರಿಯಕರ ಯಾರಿಗೂ ಗೊತ್ತಿಲ್ಲದಂತೆ ಅಪಾನವಾಯು ಬಿಡಲು ಯತ್ನಿಸಿದರೂ ಇದರಿಂದ ಭಾರೀ ಸದ್ದಾಗಿ ಎಲ್ಲರೂ ಕೇಳುವಂತಾದರೆ ಎಲ್ಲರೆದುರು ನೀವೂ ಮುಜುಗರಕ್ಕೆ ಒಳಗಾಗುತ್ತೀರಿ. ಇದು ನೈಸರ್ಗಿಕವೂ, ಸುಲಭವಾಗಿ ತಡೆದು ಹಿಡಿದು ನಿಲ್ಲಿಸಲು ಸಾಧ್ಯವಿಲ್ಲದ್ದಾಗಿದ್ದರೂ ಸರಿ, ಈ ಸಂದರ್ಭದಲ್ಲಿ ಗುಡುಗಿದ ಅಪಾನವಾಯುವಿನ ಸದ್ದು ಮಾತ್ರ ಉಳಿದವರನ್ನು ನಗೆಗಡಲಲ್ಲಿ ಮುಳುಗಿಸಲು ಸಾಕು. ಇದೇ ರೀತಿಯಾಗಿ ತೇಗು ಬಿಟ್ಟ ಸದ್ದು ಸಹಾ! ನೀವು ನಿಮ್ಮ ಪ್ರಿಯಕರನೊಂದಿಗೆ ಖ್ಯಾತ ಹೋಟೆಲೊಂದರಲ್ಲಿ ಊಟ ಮಾಡಲಿಕ್ಕೆ ಹೋದಾಗ ಎಲ್ಲರೆದುರು ನಿಮ್ಮ ಪ್ರಿಯಕರ ತೇಗಿದ ಸದ್ದಿನಿಂದ ಎಲ್ಲರೂ ಇತ್ತ ತಿರುಗುವಂತಾಗಿತ್ತಲ್ಲ! ಇದು ಸಹಾ ಅನೈಚ್ಛಿಕ ಕ್ರಿಯೆಯಾಗಿದ್ದು ತಡೆಯಲು ಸಾಧ್ಯವಾಗುವುದಿಲ್ಲವಾದರೂ, ಇದರಿಂದ ನೀವು ಮುಜುಗರಕ್ಕೆ ಒಳಗಾಗಿರುವುದು ಮಾತ್ರ ಖಂಡಿತ! ಈ ಸಂದರ್ಭವನ್ನು ನೆನೆಸಿಕೊಂಡಾಗಲೆಲ್ಲಾ ನಗು ಬರದೇ ಇರುವುದಿಲ್ಲ.

  3. ಅತ್ತೆ-ಮಾವನ ಎದುರು ಮಂದಬುದ್ದಿಯಂತೆ ವರ್ತಿಸುವುದು

  ಸಾಮಾನ್ಯವಾಗಿ ಪ್ರಿಯಕರರು ತಮ್ಮಲ್ಲಿ ವಿಶೇಷವಾದದ್ದೇನೋ ಇದೆ ಎಂಬುದನ್ನು ತೋರ್ಪಡಿಸಿಕೊಳ್ಳಲು ಹವಣಿಸುತ್ತಿರುವಂತೆ ವರ್ತಿಸುತ್ತಾರೆ. ಸಮಾಲೋಚನೆಯ ಸಮಯದಲ್ಲಿ ತಮ್ಮ ಪಾಲಿನ ಯೋಚನೆಗಳನ್ನೂ ಇವರು ಮಂಡಿಸುತ್ತಾರೆ. ಆದರೆ ಮೊದಲ ಬಾರಿಗೆ ಪ್ರಿಯತಮೆಯ ತಂದೆ-ತಾಯಿಯರನ್ನು ಭೇಟಿಯಾಗುವ ಸಂದರ್ಭ ಎದುರಾದಾಗ ಮಾತ್ರ ಮಂಕುಕವಿದಂತೆ ವರ್ತಿಸಿ ತಮ್ಮ ಜೊತೆಗೆ ನಿಮ್ಮನ್ನೂ ಮುಜುಗರಕ್ಕೀಡು ಮಾಡುತ್ತಾರೆ. ಈ ಸಂದರ್ಭವನ್ನು ಸಮರ್ಥವಾಗಿ ಎದುರಿಸಿ ತಂದೆ ತಾಯಿಯರ ಮೆಚ್ಚುಗೆ ಮತ್ತು ಒಪ್ಪಿಗೆಯನ್ನು ಪಡೆದ ವ್ಯಕ್ತಿಗಳು ಮಾತ್ರ ಈ ಜಗತ್ತಿನಲ್ಲಿ ಕೆಲವರು ಮಾತ್ರವೇ ಇರಬಹುದು.

  4. ಕುಣಿಯಲು ಬಾರದ ಪ್ರಿಯಕರನಿಗೆ ಅಂಗಳ ಡೊಂಕು

  ಸಾಮಾನ್ಯವಾಗಿ ಮಹಿಳೆಯರು ಸ್ವಭಾವತಃ ನರ್ತನ ಕಲೆಯನ್ನು ಕಲಿತಿರುತ್ತಾರೆ. ಆದರೆ ಇವರಿಗೆ ಸಮಾನವಾಗಿ ನರ್ತಿಸಲು ಸಾಧ್ಯವಿಲ್ಲದ ತಮ್ಮ ಪ್ರಿಯಕರನ ಬಗ್ಗೆ ಇವರಿಗೆ ಸದಾ ಅಸಮಾಧಾನವಿರುತ್ತದೆ. ಆದರೆ ಎಂದಾದರೊಮ್ಮೆ ಪ್ರಿಯಕರ ಮದ್ಯದ ಅಮಲಿನಲ್ಲಿ ತನಗೆ ಗೊತ್ತಿಲ್ಲದ ನರ್ತನ ಪಟುತ್ವವನ್ನು ಇದೆ ಎಂಬು ಬಿಂಬಿಸಲು ಯತ್ನಿಸಿದಾಗ ಮಾತ್ರ ಇವರ ನಡೆ ನಗು ಬರುಸುತ್ತದೆ ಹಾಗೂ ಭಾರೀ ಮುಜುಗರಕ್ಕೂ ಕಾರಣವಾಗುತ್ತದೆ. ನನ್ನ ಗೆಳತಿಯೊಬ್ಬಳ ಪ್ರಿಯಕರ ನರ್ತನದ ಭರದಲ್ಲಿ ತನ್ನ ಮೊಣಕೈಯನ್ನು ಅಕಸ್ಮಾತ್ತಾಗಿ ಆಕೆಯ ಮೂಗಿಗೆ ಹೊಡೆದು ಮೂಗಿನಿಂದ ರಕ್ತ ಬರುವಂತೆ ಮಾಡಿದ್ದನಂತೆ! ಭೂಪ!

  5. ತನ್ನನ್ನು ತಾನೇ ಮೂರ್ಖನಾಗಿಸಿಕೊಳ್ಳುವುದು

  ಕೆಲವೊಮ್ಮೆ ಪ್ರಿಯಕರರು ಏನೋ ಸಾಧಿಸಲು ಪ್ರಯತ್ನಿಸಿ ವಿಷಯಕ್ಕೆ ತಾಳ ಮೇಳ ಸಿಗದೇ ತಾವೇ ಮೂರ್ಖರಾಗುವ ಸಂದರ್ಭಕ್ಕೆ ಒಳಗಾಗುತ್ತಾರೆ. ಇದರಿಂದ ಇವರ ಪ್ರಿಯತಮೆಯರೂ ಮೂರ್ಖರಾದ ಭಾವನೆಗೆ ಒಳಗಾಗುತ್ತಾರೆ. ವಿಚಿತ್ರ ನಡವಳಿಕೆ, ಅಸಂಬದ್ದ ಪ್ರಶ್ನೆಗಳು, ಸಾರ್ವಜನಿಕ ಸ್ಥಳದಲ್ಲಿ ಮುಖವನ್ನು ವಿಚಿತ್ರವಾಗಿ ತಿರಿಚುವುದು ಮೊದಲಾದವು ತಮ್ಮನ್ನು ತಾವೇ ಮೂರ್ಖರಾಗಿಸುವ ಕೆಲವು ಉದಾಹರಣೆಗಳಾಗಿವೆ.

  ಇಂತಹ ಇನ್ನೂ ಹಲವಾರು ಸಂದರ್ಭಗಳಿದ್ದರೂ ಮೇಲೆ ವಿವರಿಸಿದ ಐದು ಸಂದರ್ಭಗಳು ಸಾಮಾನ್ಯವಾಗಿ ಎಲ್ಲಾ ಪ್ರಿಯತಮೆಯರು ಅನುಭವಿಸಿದ ಸಂದರ್ಭಗಳೇ ಆಗಿವೆ. ಆದರೆ ಯಾವಾಗ ಈ ಸಂದರ್ಭಗಳನ್ನು ನೆನೆಸಿಕೊಳ್ಳುತ್ತೀರೋ, ಅಗ ನಗದಿರದೇ ಇರಲು ಸಾಧ್ಯವೇ ಇಲ್ಲ! ಈ ಲೇಖನ ನಿಮಗೆ ಇಷ್ಟವಾಯಿತೆಂದು ಭಾವಿಸುತ್ತೇವೆ, ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

  English summary

  Most Embarrassing Acts Done By Your Boyfriend

  There will be some definite and most embarrassing acts done by your boyfriend in public that you can always remember and laugh about. This article portrays some of the most common embarrassing acts. Sit tight and walk into your memory path and think how it had affected you then and have a laugh about it.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more