ನಿರ್ಮಲ ಪ್ರೀತಿಯ ಸುಮಧುರ ಅನುಭವ

By Divya Pandith
Subscribe to Boldsky

ಪ್ರೀತಿಯೇ ಹಾಗೆ... ಹೇಳಲು ಸಾಧ್ಯವಾಗದಂತಹ ಸುಂದರ ಅನುಭವವನ್ನು ನೀಡುತ್ತದೆ. ನಮ್ಮವರು ಅಥವಾ ನಾವು ಪ್ರೀತಿಸಿದವರು ನಮ್ಮೆದುರು ನಿಂತರೆ ಸಾಕು ಅದೊಂದು ಬಗೆಯ ಸಂತೋಷ ಹಾಗೂ ರೋಮಾಂಚನವು ನಮ್ಮನ್ನು ಆವರಿಸುತ್ತದೆ. ನಾವು ಪ್ರೀತಿಸಿದ ವ್ಯಕ್ತಿಯೊಡನೆ ಇರುವುದು. ಅವರೊಂದಿಗೆ ಒಂದಿಷ್ಟು ಸಮಯ ಕಳೆಯುವುದು ಎಂದರೆ ಪ್ರಪಂಚದಲ್ಲಿರುವ ಎಲ್ಲಾ ಸಂತೋಷಕ್ಕಿಂತ ಹೆಚ್ಚಿನ ಉತ್ಸಾಹವನ್ನು ಕೊಡುತ್ತದೆ.

ಪ್ರೀತಿಯಿಂದ ನೋಡುವ ಒಂದು ನೋಟವು ಅನೇಕ ವಿಚಾರವನ್ನು ಬಿಚ್ಚಿಡುತ್ತದೆ. ನನ್ನವರು ಎಂದವರು ಕಾಣದಿರುವಾಗ ಅನುಭವಿಸುವ ಆ ವಿರಹ ವೇದನೆಯೂ ಜೀವನದಲ್ಲಿ ಪ್ರೀತಿ ಎನ್ನುವುದು ಎಷ್ಟು ಮುಖ್ಯ ಎಂದು ತಿಳಿಸಿಕೊಡುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರು ಬಹುಬೇಗ ದಾಂಪತ್ಯದ ಜೀವನಕ್ಕೆ ಕಾಲಿಡುತ್ತಾರೆ. ತಮ್ಮ ಪೀಳಿಗೆಯ ವರ್ಧಕರಾಗುವ ತಮ್ಮ ಮಕ್ಕಳಿಗೂ ಪ್ರೀತಿಯನ್ನು ಎರೆಯುತ್ತಾರೆ. ತಮ್ಮ ಹೆತ್ತವರು ನಮ್ಮ ಮಕ್ಕಳಿಗೆ ಅಜ್ಜ-ಅಜ್ಜಿಯಾಗಿ ಪ್ರೀತಿ ಎರೆಯಲಿ ಎಂದು ಬಯಸುತ್ತಾರೆ. ಇಂತಹ ಒಂದು ಅಮೂಲ್ಯವಾದ ಭಾವನೆಗಳು ಪ್ರೀತಿ ಎನ್ನುವ ಪದಕ್ಕೆ ಸುಂದರ ಅರ್ಥವನ್ನು ನೀಡುತ್ತದೆ. ಜೀವನದ ಪ್ರತಿಯೊಂದು ಹಂತದಲ್ಲೂ ನಾವು ಪ್ರೀತಿಯನ್ನು ಬಯಸುತ್ತೇವೆ. ಅದರಂತೆಯೇ ಪ್ರೀತಿ ದೊರೆತರೆ ನಮ್ಮ ಜೀವನ ಪಾವನ ಎನಿಸಿಕೊಳ್ಳುತ್ತದೆ.

ನಮ್ಮ ಗುರಿ ಮತ್ತು ಸಾಧನೆಯ ಹೆಸರಿನಲ್ಲಿ ಸಂಸಾರ ಸಮೇತ ಪಾಲಕರಿಂದ ಬೇರ್ಪಡುವುದು ಇತ್ತೀಚೆಗೆ ಸಾಮಾನ್ಯವಾದ ಸಂಗತಿಯಾಗಿದೆ. ನಮ್ಮ ಪ್ರೀತಿಯ ಪ್ರತೀಕವಾಗಿ ಬೆಳೆಯುವ ನಮ್ಮ ಮಕ್ಕಳಿಗೆ ಹಿರಿಯವರ ಅಂದರೆ ಅಜ್ಜ ಅಜ್ಜಿಯ ಪ್ರೀತಿಯು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎನ್ನುವುದನ್ನು ನಾವು ತಿಳಿಯಬೇಕು. ಮಕ್ಕಳ ಪ್ರೀತಿಯಿಂದ ವಂಚಿತರಾಗಿ, ಒಂಟಿಯಾಗಿ ಬದುಕುವ ವೃದ್ಧರು ನಮ್ಮ ನಡುವೆ ಇದ್ದಾರೆ. ಇಂತಹ ಒಬ್ಬ ವೃದ್ಧ ತನ್ನ ಪ್ರೀತಿಯ ಮಗ ದೂರವಾದಾಗ ಇನ್ನೊಂದು ಮಹಿಳೆಯಿಂದ ಪ್ರೀತಿ ಪಡೆದ ಕಥೆ ಇಲ್ಲಿದೆ... ಹೌದು, ಸುಮಾರು 60 ವರ್ಷದ ಶ್ರೀ ಕೈಲಾಸ್ ಸೇನ್ ಮತ್ತು ಯೌವನದಲ್ಲಿರುವ ಡಾ. ಸುನಿನಾ ಪಾಠಕ್ರ ಅವರ ಕಥೆಯನ್ನು ನೀವು ಓದಿ ಆ ಪ್ರೀತಿಯ ಪರಿ ತಿಳಿಯಿರಿ...

ಕೈಲಾಶ್ ಕಥೆ

ಕೈಲಾಶ್ ಕಥೆ

ಕೈಲಾಶ್ ಸೇನ್ ದೆಹಲಿಯ ಸಿಆರ್‍ಪಾರ್ಕ್ ಪ್ರದೇಶ ನೆಲೆಸಿ ಒಂದು ವರ್ಷವಾಗಿತ್ತು. ಅವರ ಏಕೈಕ ಪುತ್ರ, ಅನೂಪ್ ದುಬಾರಿ ಬೆಲೆಯ ಫ್ಲಾಟ್ ಖರೀದಿಸಿದ್ದರು. ನಂತರ ಅನೂಪ್ ತನ್ನ ಹೆಂಡತಿ ಮತ್ತು ಮಗಳ ಜೊತೆ ಯು.ಎಸ್ ತೆರಳಿದರು. ದೆಹಲಿಯಲ್ಲಿಯೇ ಇದ್ದ ತಂದೆ ಮಗನಿಂದ ಸುಮಾರು ಒಂದು ದಶಕಗಳ ಕಾಲ ದೂರವಾದ ಅನುಭವವನ್ನು ಅನುಭವಿಸುತ್ತಿದ್ದರು.

ಭಾವನೆಗಳಿಗಾಗಿ

ಭಾವನೆಗಳಿಗಾಗಿ

ಒಬ್ಬಂಟಿಯಾಗಿ ನೆಲೆಸಿರುವ ಕೈಲಾಶ್ ಸೇನ್ 4000 ಚದರ ಅಡಿ ಬಂಗಲೆಯಿಂದ ಸ್ಥಳಾಂತರಗೊಂಡರು. ಮೊದಲ ಮನೆಯನ್ನು ಮಗನಿಗೆ ನೀಡಿದ್ದರು. ಆನುವಂಶಿಕವಾಗಿದ್ದ ಆ ಮನೆಯು ಮಗನಿಗೆ ಸೇರಬೇಕು ಎಂಬ ಕನಸು ಅವರದ್ದಾಗಿತ್ತು.

ಒಬ್ಬಂಟಿ ಹುಡುಗಿ

ಒಬ್ಬಂಟಿ ಹುಡುಗಿ

ಸುನಿನಾ ಎನ್ನುವ ಹುಡುಗಿ ಪವಿತ್ರ ಯಾತ್ರಾಸ್ಥಳದ ಕ್ಷೇತ್ರದಲ್ಲಿ, ಉತ್ತಮ ಕುಟುಂಬದಲ್ಲಿ ಜನಿಸಿದ ಹುಡುಗಿಯಾಗಿದ್ದಳು. ಇವಳು ಹುಟ್ಟುವ ಮುಂಚೆ ಅವಳ ತಂದೆ ತಾಯಿಯು ಗಂಡು ಮಗುವಿನ ಜನನವನ್ನು ಬಯಸಿದ್ದರು. ಇವಳ ಪಾಲಕರಿಗೆ ಗಂಡುಮಗುವನ್ನು ಪಡೆಯಬೇಕೆಂಬ ಕನಸನ್ನು ಹೊಂದಿದ್ದರು. ಆದರೆ ಮಗಳು ಹುಟ್ಟುವ ಸಮಯದಲ್ಲಿ ಕೆಲವು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉದ್ಭವವಾಗಿದ್ದವು. ಈ ಕಾರಣದಿಂದ ಆಕೆಯ ತಾಯಿ ಮತ್ತೆ ಗರ್ಭಧಾರಣೆ ಮಾಡುವ ಶಕ್ತಿಯನ್ನು ಕಳೆದು ಕೊಂಡಿದ್ದಳು. ಈ ಎಲ್ಲಾ ಕಾರಣದಿಂದ ಆಕೆಯ ತಂದೆ ತಾಯಿ ಅವಳನ್ನು ದ್ವೇಷಿಸುತ್ತಿದ್ದರು. ಇವಳು ವೈದ್ಯಕೀಯ ಶಿಕ್ಷಣ ಪಡೆದು ವೃತ್ತಿ ಕ್ಷೇತ್ರಕ್ಕೆ ಸಜ್ಜಾದಳು. ಆ ಸಂದರ್ಭದಲ್ಲಿ ಅವಳಿಗೆ ಒಂದು ಒಳ್ಳೆಯ ಆಧುನಿಕತೆಯಿಂದ ಕೂಡಿರುವ ಸ್ಥಳದಲ್ಲಿ ಒಂದು ಬಂಗಲೆಯಂತಹ ಮನೆಯನ್ನು ಪಡೆಯಬೇಕು ಎನ್ನುವ ಕನಸನ್ನು ಹೊಂದಿದ್ದಳು.

ಕನಸು ನನಸಾಯಿತು

ಕನಸು ನನಸಾಯಿತು

ಎಂಟು ವರ್ಷದ ನಂತರ ಅತ್ಯಂತ ಜನಪ್ರಿಯ ಆಸ್ಪತ್ರೆಯೊಂದರಲ್ಲಿ ಸೇವೆಯನ್ನು ಸಲ್ಲಿಸುವುದರ ಮೂಲಕ ಹಣವನ್ನು ಮಾಡಿದಳು. ಜೊತೆಗೆ ಆಕೆಯ ಕನಸಂತೆ 4000ಅಡಿ ಅಳತೆಯಲ್ಲಿ ನಿರ್ಮಿಸಲಾದ ಬಂಗಲೆಯನ್ನು ಪಡೆದುಕೊಂಡಳು. ಇವಳ ಕನಸಂತೆ ಎಲ್ಲವೂ ನಡೆಯಿತಾದರೂ ಅವಳಿಗೆ ಒಂಟಿತನ ಎನ್ನುವುದು ಕಾಡುತ್ತಿತ್ತು. ಅಲ್ಲದೆ ಇವಳನ್ನು ಜನರು ಸಲಿಂಗಕಾಮಿ ಎಂತಲೂ ಕರೆಯಲು ಪ್ರಾರಂಭಿಸಿದರು.

ಒಂದು ದಿನ

ಒಂದು ದಿನ

ಒಂದು ದಿನ ಬೆಳಿಗ್ಗೆ ಸುನೈನಾ ಕೆಲಸಕ್ಕೆ ತೆರಳಲು ಸಿದ್ಧರಾಗುತ್ತಿದ್ದರು. ಆ ಸಂದರ್ಭದಲ್ಲಿ ಅವಳ ಮನೆಯ ಕರೆಗಂಟೆ ಬಾರಿಸಿತು. ಯಾರೆಂದು ಬಂದು ನೋಡಿದ ಸುನೈನಾಳಿಗೆ ಒಂದು ಆಶ್ಚರ್ಯಕರವಾದ ಸಂದೇಹ ಕಾದಿತ್ತು. "ವರ್ಷಗಳ ಹಿಂದ ಜಮೀನು ಖರೀದಿಯ ತೆರಿಗೆ ಪಾವತಿಸಿಲ್ಲ. ಒಂದು ತಿಂಗಳೊಳಗೆ ಅದನ್ನು ಪಾವತಿಸದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳುತ್ತಿದ್ದರು.

ಒಂದು ದಿನ

ಒಂದು ದಿನ

ಈ ಹಿಂದೆ ಅದನ್ನು ಅನೂಪ್ ಅವರು ಖರೀದಿಸಿದ್ದರು. ಎಂಬ ವಿವರಳ ಸುನೈನಾಳಿಗೆ ದೊರೆಯಿತು. ನಂತರ ಅನೂಪ್ ಅವರಿಗೆ ಕರೆ ಮಾಡಿದರು. ಆದರೆ ಆ ಸಂಖ್ಯೆ ಸ್ವಿಚ್ ಆಫ್ ಎಂದು ಹೇಳುತ್ತಿತ್ತು. ನಂತರ ಇದಕ್ಕೆ ಸಂಬಂಧಿಸಿದ ವಿಳಾಸವನ್ನು ಹುಡುಕಿದಳು. ಆಗ ಆಕೆಗೆ ಡೆಲ್ಲಿಯ ಸಿ.ಆರ್ ಪಾರ್ಕ್‍ನ ಮನೆ ವಿಳಾಸ ದೊರೆಯಿತು. ಬೇರೆ ದಾರಿಯಿಲ್ಲದೆ ಮನೆಯ ತೆರಿಗೆಯನ್ನು ತುಂಬಿದಳು. ನಂತರದ ದಿನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದಳು. ನಂತರ ಮನೆಯ ಕಾಗದ ಪತ್ರದಲ್ಲಿದ್ದ ಸಿ.ಆರ್. ಪಾರ್ಕ್ ಬಳಿ ಇದ್ದ ಮನೆಗೆ ಹೋದಳು.

ಒಂದು ದಿನ

ಒಂದು ದಿನ

ಅವಳಿಗೆ ಆಶ್ಚರ್ಯ ಕಾದಿತ್ತು. ಮನೆಯ ವಿಳಾಸಕ್ಕೆ ಹೋಗಿ ನೋಡುವಷ್ಟರಲ್ಲಿ ಅವಳು ತನ್ನ ಜೀವನದ ಗುರಿಯನ್ನು ಸಾಧಿಸಲು ಸಹಾಯಕರಾದ ಹೃದಯ ಶಸ್ತ್ರ ಚಿಕಿತ್ಸಕರ ಮನೆಯಾಗಿತ್ತು. ನಂತರ ಅವಳು ಅವಳ ಕಥೆಯನ್ನು ಹೇಳಿದಳು ಮತ್ತು ಮನೆಯ ಆಸ್ತಿ ಪತ್ರವನ್ನು ತೋರಿಸಿದಳು. ಆ ಆಸ್ತಿ ಪತ್ರವು ಸೇನ್ ಅವರಿಗೆ ಬೇಸರವನ್ನುಂಟು ಮಾಡಿತ್ತು. ಅವರಿಗೆ ಆನುವಂಶಿಕವಾಗಿ ಬಂದ ಮನೆಯ ಮಾರಾಟ ಮಾಡಿರುವ ವಿಷಯವಾಗಿತ್ತು.

ನಿರ್ಗಮನ

ನಿರ್ಗಮನ

ಸೇನ್ ಆ ವಿಚಾರವನ್ನು ತಿಳಿದ ಮೇಲೆ ಆಕೆಗೆ ಒಂದು ಚೆಕ್ ನೀಡಿ ಸಭ್ಯ ವ್ಯಕ್ತಿ ಎನಿಸಿಕೊಂಡನು. ಅದನ್ನು ಪಡೆದ ಸುನೈನಾ ಮನೆಗೆ ಹಿಂತಿರುಗಿದಳು. ಆದರೆ ಆಕೆ ಮತ್ತು ಅವನ ನಡುವೆ ಒಂದು ಸ್ನೇಹ ಬೆಳೆಯಿತು. ಈ ಸಂಬಂಧದ ಆಧಾರದ ಮೇಲೆ ನಿತ್ಯವೂ ಫೋನ್ ಕರೆಯ ಮೂಲಕ ಮಾತನಾಡುತ್ತಿದ್ದರು. ನಂತರ ಕರೆಯು ವೀಡಿಯೋ ಕಾಲ್ ಆಗಿ ಪರಿವರ್ತನೆಗೊಂಡಿತು.

ಹುಟ್ಟು ಹಬ್ಬದ ದಿನ

ಹುಟ್ಟು ಹಬ್ಬದ ದಿನ

ಅಂದು ಅವಳ ಹುಟ್ಟಿದ ಹಬ್ಬದ ದಿನ. ಮುಂಜಾನೆ ಸೇನ್ ಆಕೆಯ ಮನೆಯ ಮೆಟ್ಟಿಲಲ್ಲಿ ನಿಂತು ಬೆಲ್ ಮಾಡಿದನು. ಸುನೈನಾಳಿಗೆ ಶುಭ ಹಾರೈಕೆ ಕೋರುವುದರ ಮೂಲಕ ಅವಳ ಮನೆ ಪ್ರವೇಶ ಮಾಡಿದನು. ಎರಡು ದಿನದ ಬಳಿಕ ಇದ್ದ ವಿಮಾನ ಯಾನದ ವರೆಗೂ ಆಕೆಯ ಮನೆಯಲ್ಲಿಯೇ ವಾಸವಿದ್ದನು. ಸುನೈನಾಳಿಗೂ ಆ ಎರಡು ದಿನವು ಜೀವನದಲ್ಲಿ ಅನುಭವಿಸಿದ್ದಕ್ಕಿಂತ ಹೆಚ್ಚಿನ ಸಂತೋಷವನ್ನು ಅನುಭವಿಸಿದ್ದಳು. ಉತ್ತಮ ನೆನಪುಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದಳು.

ಇಬ್ಬರ ನಡುವೆ

ಇಬ್ಬರ ನಡುವೆ

ಇವರಿಬ್ಬರ ನಡುವೆ ಸುಂದರವಾದ ಬಾಂಧವ್ಯ ಬೆಳೆಯಿತು. ಪರಸ್ಪರ ಭಾವನೆಯನ್ನು ಹಂಚಿಕೊಂಡರು. ಬಾಲ್ಯದಿಂದಲೂ ತಿರಸ್ಕಾರಕ್ಕೆ ಒಳಗಾದ ಸುನೈನಾ ಸೇನ್ ಅವರ ಪ್ರೀತಿಯಲ್ಲಿ ಮುಳುಗಿದಳು. ಇಬ್ಬರೂ ಪರಸ್ಪರ ಮನಃಪೂರ್ವಕವಾಗಿ ಒಬ್ಬರನ್ನೊಬ್ಬರು ಅರಿತುಕೊಂಡರು. ಇದೀಗ ಇಬ್ಬರೂ ಒಂದೇ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಕೈಲಾಶ್ ಸೇನ್ ತನ್ನ ಯೌವನದ ದಿನಗಳನ್ನು ಪುನಃ ಪಡೆದುಕೊಂಡಿದ್ದಾರೆ. ಸುನೈನಾ ತನ್ನ ವೃತ್ತಿ ಜೀವನದಲ್ಲಿ ಉತ್ತಮ ಕೆಲಸವನ್ನು ನಿರ್ವಹಿಸುತ್ತಿದ್ದಾಳೆ. ಒಟ್ಟಿನಲ್ಲಿ ಏಕಾಂತದಲ್ಲಿ ಕಳೆದುಕೊಂಡ ಮುಗ್ಧ ಪ್ರೀತಿಯನ್ನು ಇವರು ಪಡೆದುಕೊಂಡಿದ್ದಾರೆ ಎನ್ನಬಹುದು.

For Quick Alerts
ALLOW NOTIFICATIONS
For Daily Alerts

    English summary

    Love Story: For Love That Is Pure

    It is one of the stereotypes that our generation associates with itself and goes on to think that love can only be found in that of a couple. However, this is far from being true. The purest form of love is that between a child and his or her parent. Now, not everyone is blessed to have the good fortune of receiving the love of their parents from a young age and some of them end up craving the same in every relationship that they build later on in life.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more