Latest Updates
-
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು!
ಖಂಡಿತವಾಗಿಯೂ ಆಕೆಗೆ ನಿಮ್ಮ ಮೇಲೆ ಲವ್ ಆಗಿರಬೇಕು!!
ಆಕೆಯ ಒಂದು ನೋಟ, ನಗು ಮತ್ತು ಮಾತಿಗೆ ನೀವು ಕ್ಲೀನ್ ಬೌಲ್ಡ್ ಆಗಿ ಬಿಟ್ಟಿದ್ದೀರಾ? ಯಾವಾಗಲೂ ನಿಮಗೆ ಆಕೆಯ ಕನಸು ಬೀಳುತ್ತಾ ಇರುತ್ತದೆಯಾ? ಹಾಗಾದರೆ ನಿಮಗೆ ಅಕೆಯ ಮೇಲೆ ಪ್ರೀತಿ ಮೂಡಿದೆ ಎಂದು ಹೇಳಬಹುದು. ಆದರೆ ಆಕೆಯ ಭಾವನೆ ಏನು ಎನ್ನುವುದು ನಿಮಗೆ ತಿಳಿದಿಲ್ಲವೇ? ಹುಡುಗಿಯರೇ ಹಾಗೆ ಬಿಡಿ.
ಅವರು ತಮ್ಮ ಮನಸ್ಸಿನ ಭಾವನೆಗಳನ್ನು ಅಷ್ಟು ಸುಲಭವಾಗಿ ಹೇಳಿಬಿಡಲ್ಲ. ನೀವಾಗಿ ನೀವೇ ಕೆಲವೊಂದು ಸಂಜ್ಞೆಗಳನ್ನು ಅರ್ಥ ಮಾಡಿಕೊಂಡರೆ ಆಕೆ ಕೂಡ ನಿಮ್ಮನ್ನು ಪ್ರೀತಿಸುತ್ತಿರುವಳು ಎನ್ನುವುದು ತಿಳಿಯಲಿದೆ. ಇದನ್ನು ನೀವು ಆಕೆಯ ವರ್ತನೆಯಿಂದ ತಿಳಿಯಬಹುದು. ಅದು ಯಾವುದೆಂದು ನೀವು ಲೇಖನ ಓದುತ್ತಾ ತಿಳಿಯಿರಿ....

ಆಗಾಗ ಮಾತನಾಡುವುದು
ಆಕೆ ಯಾವುದೇ ಹೊಸ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಹಿಂಜರಿಯಲ್ಲ. ಇದು ಅಕೆಯ ಪ್ರಮೋಷನ್, ಹೊಸ ಪ್ರಾಜೆಕ್ಟ್, ಆಕೆಯ ಸ್ನೇಹಿತೆಯ ಮದುವೆ ಅಥವಾ ಏನೇ ಆಗಿರಬಹುದು. ಆಕೆಗೆ ಇಂತಹ ವಿಷಯಗಳ ಬಗ್ಗೆ ಏನಾದರೂ ಹೆಚ್ಚಿನ ಮಾಹಿತಿ ಸಿಕ್ಕಿದರೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಳು. ವಾರಾಂತ್ಯದ ಯೋಜನೆ ಬಗ್ಗೆ ಕೇಳಿದರೆ ಆಕೆ ಉತ್ತರಿಸಲು ಮತ್ತು ನಿಮ್ಮನ್ನು ಭೇಟಿಯಾಗಲು ಹಿಂಜರಿಯಲ್ಲ. ಆಕೆಗೆ ನೀವು ತುಂಬಾ ವಿಶೇಷವಾಗಿದ್ದೀರಿ ಮತ್ತು ಬೇಗನೆ ಆಕೆ ನಿಮಗೆ ಐ ಲವ್ ಯೂ ಹೇಳುವಳು.

ಆಕೆ ವ್ಯಸ್ತಳಾಗಿದ್ದಳೂ ನಿಮಗಾಗಿ ಸಮಯ ನೀಡುವಳು
ಹಿಂದೆ ಮಹಿಳೆಯೆಂದರೆ ಮನೆಯ ನಾಲ್ಕು ಮೂಲೆಗಳ ಮಧ್ಯೆ ಕುಳಿತುಕೊಂಡಿರುತ್ತಿದ್ದರು. ಆದರೆ ಇಂದು ಹಾಗಲ್ಲ, ಅವರು ಸ್ವತಂತ್ರರಾಗಿರುವರು, ಶೈಕ್ಷಣಿಕವಾಗಿಯು ಬಲಿಷ್ಠರಾಗಿರುವರು ಮತ್ತು ಹಿಂದಿಗಿಂತ ತುಂಬಾ ವ್ಯಸ್ತರಾಗಿರುವರು. ಅವರು ಪುರುಷರಂತೆ ತಮ್ಮ ಕೆಲಸದಲ್ಲಿ ಎಷ್ಟು ವ್ಯಸ್ತರಾಗಿರುವರು ಎಂದು ಅವರ ಮಾತಿನಿಂದ ತಿಳಿದುಬರುವುದು. ಆಕೆ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿರುವಳು ಎಂದಾದರೆ ಖಂಡಿತವಾಗಿಯೂ ಆಕೆ ತನ್ನ ವ್ಯಸ್ತ ಕೆಲಸದಿಂದ ಸಮಯ ತೆಗೆದು ನಿಮ್ಮನ್ನು ಭೇಟಿಯಾಗುವಳು. ಆಕೆ ವಾರಾಂತ್ಯದಲ್ಲಿ ವಿಶ್ರಾಂತಿಗೆ ಬದಲಿಗೆ ನಿಮ್ಮೊಂದಿಗೆ ಕಾಲ ಕಳೆಯಲು ಇಷ್ಟಪಡುವಳು. ಆಕೆ ಬೇಗನೆ `ಐ ಲವ್ ಯೂ' ಹೇಳುವ ಲಕ್ಷಣಗಳಲ್ಲಿ ಇದು ಒಂದು.

ಸ್ನೇಹಿತರು ಮತ್ತು ಕುಟುಂಬ
ತನ್ನ ಕುಟುಂಬದವರನ್ನು ಭೇಟಿಯಾಗಲು ಆಕೆ ಯೋಜನೆ ಹಾಕಿಕೊಳ್ಳಬಹುದು ಮತ್ತು ಕೆಲವೊಂದು ಸಲ ಅಕೆಯ ಸ್ನೇಹಿತೆಯರನ್ನು ಪರಿಚಯ ಮಾಡಿಕೊಡಬಹುದು. ಆಕೆಯ ಕುಟುಂಬ ಮತ್ತು ಸ್ನೇಹಿತೆಯರನ್ನು ಭೇಟಿಯಾದಾಗ ನಿಮ್ಮ ಬಗ್ಗೆ ಅವರಿಗೆ ತುಂಬಾ ತಿಳಿದಿರುವುದನ್ನು ನೋಡಿ ನಿಮಗೇ ಅಚ್ಚರಿಯಾಗಬಹುದು. ಆದರೆ ನಿಮ್ಮ ಬಗ್ಗೆ ಎಲ್ಲವನ್ನೂ ಆಕೆ ಹೇಳಿರುವಳು. ಇದು ಕೂಡ ಆಕೆ ನಿಮ್ಮನ್ನು ಪ್ರೀತಿಸುವ ಒಂದು ಲಕ್ಷಣ.

ಬೇರೆ ಹುಡುಗಿಯರ ಜತೆ ಸಮಯ ಕಳೆದರೆ ದ್ವೇಷಿಸುವಳು
ಅಸೂಯೆ ಎನ್ನುವುದು ಮಹಿಳೆಯ ಅತಿದೊಡ್ಡ ಭಾವನೆಯೆನ್ನಬಹುದು. ನೀವು ಬೇರೆ ಮಹಿಳೆಯ ಜತೆಗೆ ಅಥವಾ ನಿಮ್ಮ ಸ್ನೇಹಿತೆಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿರುವುದನ್ನು ನೋಡಿ ಆಕೆಗೆ ತುಂಬಾ ಅಸೂಯೆಯಾಗುತ್ತಾ ಇದ್ದರೆ ಆಗ ಆಕೆ ನಿಮ್ಮ ಪ್ರೀತಿಸುತ್ತಿರುವುದು ನೂರಕ್ಕೆ ನೂರರಷ್ಟು ಖಚಿತ.

ಭವಿಷ್ಯದ ಬಗ್ಗೆ ಮಾತುಕತೆ
ಆಕೆ ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುವಾಗ ಖಂಡಿತವಾಗಿಯೂ ಅದರಲ್ಲಿ ನಿಮ್ಮನ್ನು ಸೇರಿಸಿಕೊಳ್ಳುವಳು. ಆಕೆ ಪ್ರವಾಸಕ್ಕೆ ಹೋಗುವ ಜಾಗಕ್ಕೆ ನಿಮ್ಮನ್ನು ಕರೆದುಕೊಂಡು ಹೋಗಲು ಬಯಸುವಳು. ಆಕೆ ಮಕ್ಕಳು ಮತ್ತು ಮದುವೆ ಬಗ್ಗೆ ಮಾತನಾಡಬಹುದು. ಆಕೆ ನಿಮಗೆ `ಐ ಲವ್ ಯೂ' ಹೇಳಲು ಕೆಲವೇ ದಿನ ಬಾಕಿಯಿದೆ ಎನ್ನುವುದರ ಲಕ್ಷಣವಿದು.

ನಿಮ್ಮನ್ನು ಪ್ರಶಂಸಿಸುವಳು
ನಿಮ್ಮ ಮುಂದೆ ಅಥವಾ ಬೇರೆಯವರ ಮುಂದೆ ಆಕೆ ನಿಮ್ಮನ್ನು ಹೊಗಳುತ್ತಿದ್ದಾಳೆ ಎಂದರೆ ಆಕೆಯ ನಿಮ್ಮ ಕೆಲಸದ ಪ್ರಾಮುಖ್ಯತೆ ಮತ್ತು ನಿಮ್ಮ ಕಠಿಣ ಪರಿಶ್ರಮದಿಂದ ಎಲ್ಲವನ್ನು ಸಾಧಿಸಿದ್ದೀರಿ ಎಂದು ಆಕೆಗೆ ತಿಳಿದಿರುವುದು. ಆಕೆ ನಿಮ್ಮ ಸಾಧನೆ, ನಿಮ್ಮ ಸ್ಟೈಲ್ ಮತ್ತು ನಿಮ್ಮ ಮಾತನಾಡುವ ರೀತಿಯನ್ನು ಹೊಗಳುತ್ತಿದ್ದರೆ ಆಕೆ ಖಂಡಿತವಾಗಿಯೂ ನಿಮ್ಮನ್ನು ಪ್ರೀತಿಸುತ್ತಿರುವಳು ಎಂದರ್ಥ.

ನಿಮ್ಮ ಬಗ್ಗೆ ಹೆಚ್ಚಿನ ಗಮನ
ನಿಮ್ಮ ಹವ್ಯಾಸ, ಇಷ್ಟ ಮತ್ತು ಇಷ್ಟವಿಲ್ಲದಿರುವುದು ಇತ್ಯಾದಿ ಬಗ್ಗೆ ಆಕೆ ಕೇಳಿದಾಗ ಖಂಡಿತವಾಗಿಯೂ ನಿಮ್ಮ ಹಿಂದಿನ ಪ್ರೀತಿಯ ಬಗ್ಗೆ ಕೂಡ ಕೇಳಬಹುದು. ಇಂತಹ ಸಂದರ್ಭದಲ್ಲಿ ಆಕೆ ನಿಮ್ಮ ಬಗ್ಗೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾಳೆ ಎಂದು ತಿಳಿದುಕೊಳ್ಳಿ. ಇದು ಕೂಡ ಆಕೆ ನಿಮ್ಮನ್ನು ಪ್ರೀತಿಸುತ್ತಿರುವ ಲಕ್ಷಣವಾಗಿದೆ.ಇಂತಹ ಲಕ್ಷಣಗಳು ಹುಡುಗಿಯಲ್ಲಿ ಕಂಡುಬಂದರೆ ಆಕೆ ನಿಮ್ಮನ್ನು ಪ್ರೀತಿಸುತ್ತಾ ಇದ್ದಾಳೆ ಮತ್ತು ನಿಮಗೆ ಐ ಲವ್ ಯೂ ಹೇಳಲು ಹತ್ತಿರವಾಗಿದ್ದಾಳೆ ಎಂದು ತಿಳಿದುಕೊಳ್ಳಿ.



Click it and Unblock the Notifications