For Quick Alerts
ALLOW NOTIFICATIONS  
For Daily Alerts

  ವಿವಾಹದ ವಿಚಾರದಲ್ಲಿ ಸ್ವಂತಿಕೆಯಿರಲಿ, ಅವರಿವರ ಮಾತು ಕೇಳಬೇಡಿ...

  By Arshad
  |

  ನೀವು ವಿಚ್ಛೇದಿತ ವ್ಯಕ್ತಿಯೊಬ್ಬರನ್ನು ವಿವಾಹವಾಗಬಯಸಿದ್ದೀರೇ? ಹಾಗಾದರೆ ಇದರಿಂದ ನಿಮ್ಮನ್ನು ಏನು ತಡೆಯುತ್ತಿದೆ? ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರು ತಮ್ಮ ಅಭಿಪ್ರಾಯವನ್ನು ನಿಮ್ಮ ಮೇಲೆ ಬಲವಂತವಾಗಿ ಹೇರುವ ಮೂಲಕ ನಿಮ್ಮ ನಿರ್ಧಾರ ತಪ್ಪು ಎಂದು ತಿಳಿಸುತ್ತಿದ್ದಾರೆಯೇ? "ಅಷ್ಟಕ್ಕೂ ನೀವು ಇನ್ನೂ ಅವಿವಾಹಿತರಾಗಿರುವವರನ್ನೇ ವಿವಾಹವಾಗುವ ಆಯ್ಕೆ ಹೊಂದಿರುವಾಗ ವಿಚ್ಛೇದಿತ ವ್ಯಕ್ತಿಯನ್ನು ಏಕೆ ವಿವಾಹವಾಗಬಯಸುತ್ತೀರಿ" ಎಂದೇ ಹೆಚ್ಚಿನವರು ಪ್ರಕಟಿಸುವ ಪ್ರಥಮ ಪ್ರತಿಕ್ರಿಯೆಯಾಗಿದೆ.

  ಆದರೆ ಪ್ರೇಮಕ್ಕೆ ಈ ಪ್ರಶ್ನೆಗಳೆಲ್ಲಾ ಅಸಂಗತವಾಗಿವೆ. ಈ ನಿರ್ಧಾರಕ್ಕೆ ಪರಸ್ಪರ ಹೊಂದಾಣಿಕೆ, ನಿಃಸ್ವಾರ್ಥ ಪ್ರೇಮ ಹಾಗೂ ಪರಸ್ಪರ ಆಕರ್ಷಣೆಗಳು ಪ್ರಥಮ ಪ್ರಾಶಸ್ತ್ಯ ಪಡೆಯುತ್ತವೆಯೇ ಹೊರತು ವಿವಾಹವಾಗುತ್ತಿರುವ ವ್ಯಕ್ತಿಯ ಹಿಂದಿನ ಇತಿಹಾಸವಲ್ಲ. ಮುಂದೆ ಇಬ್ಬರೂ ಪರಸ್ಪರ ವಿಶ್ವಾಸದಿಂದ ಬಾಳುವ ಬದ್ಧತೆ ಪ್ರಕಟಿಸಿದರೆ ಮುಂದಿನ ದಿನಗಳಲ್ಲಿ ಹಿಂದಿನ ದಿನಗಳ ನೆನಪೇ ಬಾರದು.

  ಈ ಮನಸ್ಸಿದ್ದರೆ ವಿಚ್ಛೇದನ ತಡೆಯಬಹುದು

  ವಾಸ್ತವದಲ್ಲಿ ಈ ವಿವಾಹಕ್ಕೆ ಸಮಾಜದಲ್ಲಿ ಬೇರು ಬಿಟ್ಟಿರುವ ಹಲವಾರು ಮಿಥ್ಯೆಗಳೇ ಪ್ರಮುಖ ಅಡ್ಡಿಯಾಗಿದ್ದು ಹೆಚ್ಚಿನವು ನಿರಾಧಾರವಾಗಿವೆ. ಬನ್ನಿ, ಇವುಗಳಿಗೆ ಎಡವಿ ಎಡವಟ್ಟು ಮಾಡಿಕೊಳ್ಳುವ ಮುನ್ನ ಇವುಗಳ ಬಗ್ಗೆ ಅರಿತುಕೊಂಡು ಎಚ್ಚರಗೊಳ್ಳುವುದು ಉತ್ತಮವಲ್ಲವೇ?

  ಈ ವ್ಯಕ್ತಿ ಸಂಬಂಧ ಉಳಿಸಿಕೊಳ್ಳಲು ವಿಫಲನಾಗಿದ್ದಾನೆ/ಳೆ

  ಈ ವ್ಯಕ್ತಿ ಸಂಬಂಧ ಉಳಿಸಿಕೊಳ್ಳಲು ವಿಫಲನಾಗಿದ್ದಾನೆ/ಳೆ

  ತಪ್ಪು! ಸಾಮಾನ್ಯವಾಗಿ ನಾವೆಲ್ಲಾ ಸಂಬಂಧವನ್ನು ಒಂದೇ ದೃಷ್ಟಿಕೋಣದಿಂದ ನೋಡುತ್ತೇವೆ. ಈ ವ್ಯಕ್ತಿ ಆ ಸಂಬಂಧದಿಂದ ಹೊರಬಂದಿರಬೇಕಾದರೆ ಅವರಿಗೆ ಈ ಬಗ್ಗೆ ದೈರ್ಯವಾಗಿ ಮಾತನಾಡಿ ವಿಫಲವಾದ ಮದುವೆಯಿಂದ ಹೊರಬರುವ ಸ್ಥೈರ್ಯವಿದೆ ಎಂದು ಸ್ಪಷ್ಟವಾಗಿ ಹೇಳಬಹುದು. ಸಾಮಾನ್ಯವಾಗಿ ಎಷ್ಟೋ ವಿವಾಹಗಳು ಹೊರಗಿನಿಂದ ಸುಖಮಯವೆಂದು ಕಂಡುಬಂದರೂ ಇವರಲ್ಲಿ ಒಬ್ಬರಾದರೂ ಒಳಗಿನಿಂದಲೇ ಅಸುಖಿಯಾಗಿರಬಹುದು, ಆದರೆ ಇದರಿಂದ ಹೊರಬರುವ ಧೈರ್ಯ ತೋರದೇ ಇರಬಹುದು. ಯಾವುದೇ ಸಂಬಂಧ ಸರಿಹೋಗದಿದ್ದರೆ ಇದನ್ನು ಮುಂದುವರೆಸುವುದೂ ಅಪಾಯಕಾರಿ! ಆದ್ದರಿಂದ ಒಂದು ವೇಳೆ ನೀವು ವಿವಾಹವಾಗಬಯಸುವ ವ್ಯಕ್ತಿ ವಿಚ್ಛೇದಿತನಾ/ಳಾಗಿದ್ದರೂ ಸರಿ, ಆದರೆ ಇವರು ವಿಫಲ ವ್ಯಕ್ತಿಗಳಲ್ಲ. ಇವರು ತಮ್ಮ ಮುಂದಿನ ಜೀವನದಲ್ಲಿ ಸೂಕ್ತ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಲು ಉತ್ಸುಕರಾಗುತ್ತಿರಬಹುದು.

  ಮಹಿಳೆಯರು ಮಕ್ಕಳಿಗಾಗಿ ವಿಚ್ಛೇದನಕ್ಕೆ ಹಿಂದೇಟು ಹಾಕುತ್ತಾರಂತೆ!

  ಇವರಿಗೆ ಮಕ್ಕಳಿದ್ದಾರೆ!

  ಇವರಿಗೆ ಮಕ್ಕಳಿದ್ದಾರೆ!

  ಒಂದು ವೇಳೆ ನೀವು ವಿವಾಹವಾಗಬಯಸುವ ವ್ಯಕ್ತಿ ಹಿಂದಿನ ಸಂಬಂಧದಿಂದ ಮಕ್ಕಳನ್ನು ಪಡೆಯದೇ ಇದ್ದರೆ ಈ ಮಿಥ್ಯೆ ಅನ್ವಯವಾಗುವುದಿಲ್ಲ. ಆದರೆ ಒಂದು ವೇಳೆ ಹಿಂದಿನ ಸಂಬಂಧದಿಂದ ಮಕ್ಕಳಾಗಿದ್ದು ಇವುಗಳ ಒಡೆತನವನ್ನು ನೀವು ವಿವಾಹವಾಗುವ ವ್ಯಕ್ತಿ ಪಡೆದಿದ್ದರೆ ಮಾತ್ರ ಒಂದು ಪ್ರಶ್ನೆ ಎದುರಾಗುತ್ತದೆ. ಈ ಪ್ರಶ್ನೆ ಯಾವುದೆಂದರೆ ಈ ವ್ಯಕ್ತಿಯನ್ನು ವಿವಾಹವಾದ ಬಳಿಕ ನಿಮ್ಮ ಪಿತೃತ್ವ/ಮಾತೃತ್ವವನ್ನು ಈ ಮಕ್ಕಳು ಒಪ್ಪಿಕೊಳ್ಳುತ್ತಾರೆಯೇ ಎಂಬುದು. ಒಂದು ವೇಳೆ ಮಕ್ಕಳು ನಿಮ್ಮನ್ನು ಒಪ್ಪಿಕೊಂಡರೆ ಯಾವುದೇ ತೊಂದರೆ ಇಲ್ಲ.

  ಇವರು ಮತ್ತೊಮ್ಮೆ ವಿಚ್ಛೇದನಕ್ಕೆ ಅರ್ಜಿ ಹಾಕಲು ಎರಡನೇ ಬಾರಿ ಯೋಚಿಸುವುದಿಲ್ಲ

  ಇವರು ಮತ್ತೊಮ್ಮೆ ವಿಚ್ಛೇದನಕ್ಕೆ ಅರ್ಜಿ ಹಾಕಲು ಎರಡನೇ ಬಾರಿ ಯೋಚಿಸುವುದಿಲ್ಲ

  ಇದು ಒಂದು ಮಿಥ್ಯೆಯಾಗಿದ್ದು ಒಂದು ಬಾರಿ ವ್ಯಕ್ತಿ ವಿಚ್ಛೇದನ ಪಡೆದರೆ ಸಾಕು ಇದು ಒಂದು ವಿಚ್ಛೇದನಕ್ಕೆ ಮುಗಿಯುವುದಿಲ್ಲ, ಈ ವ್ಯಕ್ತಿ ಎಷ್ಟೇ ಮದುವೆಯಾದರೂ ಪದೇ ಪದೇ ವಿಚ್ಛೇದನಕ್ಕೆ ಅಣಿಯಾಗುತ್ತಾರೆ, ಚಿಕ್ಕ ಪುಟ್ಟ ವಿಷಯಗಳಿಗೂ ನ್ಯಾಯಾಲಯದ ಮೆಟ್ಟಿಲು ಹತ್ತುವವರಾಗಿರುತ್ತಾರೆ ಎಂದು ಹೆಚ್ಚಿನವರ ಅಭಿಪ್ರಾಯವಾಗಿದೆ. ವಿಚ್ಛೇದನದಂತಹ ದೊಡ್ಡ ನಿರ್ಧಾರವನ್ನು ಕೈಗೊಳ್ಳಲು ಕಾರಣವೆಷ್ಟು ಗಹನವಿರಬಹುದು ಎಂದು ಇವರಾರು ಯೋಚಿಸುವುದೇ ಇಲ್ಲ. ಒಂದು ವೇಳೆ ಇವರ ಸಂಬಂಧದಲ್ಲಿ ಪ್ರೀತಿ ಗಟ್ಟಿಯಾಗಿದ್ದೇ ಆಗಿದ್ದರೆ ಇವರಿಗೆ ನ್ಯಾಯಾಲಯಕ್ಕೆ ಬಂದು ತಮ್ಮ ಅಮೂಲ್ಯ ಸಮಯವನ್ನು ವ್ಯಯಿಸುವ ಅಗತ್ಯವಿರಲಿಲ್ಲ.

  ಈ ವ್ಯಕ್ತಿಗಳು ಸ್ವಾರ್ಥಿಗಳು!

  ಈ ವ್ಯಕ್ತಿಗಳು ಸ್ವಾರ್ಥಿಗಳು!

  ಶಾಂತಿಯನ್ನು ಬಯಸುವ ಪ್ರಯತ್ನವನ್ನು ಸ್ವಾರ್ಥವೆಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ನಿಮ್ಮ ಸಂಬಂಧ ಸರಿಹೊಂದದೇ ಇದ್ದರೆ ನೀವು ಸಹಾ ಇದರಿಂದ ಓಡಿಹೋಗಬಯಸುತ್ತೀರಿ. ಆಗ ನಿಮ್ಮನ್ನು ನೀವು ಸ್ವತಃ ಸ್ವಾರ್ಥಿ ಎಂದು ಕರೆಯಬಯಸುತ್ತೀರೋ ಅಥವಾ ಮನೆಯಲ್ಲಿ ಶಾಂತಿ ಬಯಸುತ್ತೀರೋ? ಆದ್ದರಿಂದ ವ್ಯಕ್ತಿಯೊಬ್ಬರು ತಮ್ಮ ಜೀವನದಲ್ಲಿ ಶಾಂತಿ ನೆಮ್ಮದಿ ಪಡೆಯಲು ನಡೆಸಿದ ಈ ಪ್ರಯತ್ನವನ್ನು ಸ್ವಾರ್ಥ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ನೆಮ್ಮದಿ, ಶಾಂತಿ ಪಡೆಯುವ ಹಕ್ಕು ಎಲ್ಲರಿಗೂ ಇದೆ. ಯಾವುದಕ್ಕೂ ಪ್ರತಿ ವ್ಯಕ್ತಿಯ ಆದ್ಯತೆಗಳು ಬೇರೆ ಬೇರೆ ತೆರನಾಗಿದ್ದು ಇವರಿಗೆ ವಿಚ್ಛೇದನ ನೀಡಲು ಇವರ ಒಟ್ಟಾರೆ ನಡವಳಿಕೆಯನ್ನು ಅಭ್ಯಸಿಸದ ಹೊರತು ಸ್ವಾರ್ಥಿಗಳು ಎಂದು ಹೇಳಲು ಸಾಧ್ಯವಿಲ್ಲ.

  ಇವರು ಜಗಳಗಂಟರಾಗಿರುತ್ತಾರೆ

  ಇವರು ಜಗಳಗಂಟರಾಗಿರುತ್ತಾರೆ

  ಯಾವುದೇ ಆರೋಗ್ಯಕರ ವ್ಯಕ್ತಿ ದಿನವೂ ಜಗಳವನ್ನು ಬಯಸುವುದಿಲ್ಲ. ಒಂದು ವೇಳೆ ನೀವು ವಿವಾಹವಾಗುವ ವ್ಯಕ್ತಿ ಹಿಂದಿನ ಸಂಬಂಧದಲ್ಲಿ ಜಗಳಗಂಟರಾಗಿದ್ದರು ಎಂದ ಮಾತ್ರಕ್ಕೇ ವಿವಾಹದ ಬಳಿಕ ನಿಮ್ಮೊಂದಿಗೂ ಜಗಳ ಕಾಯುತ್ತಾರೆ ಎಂದು ಅರ್ಥೈಸಿಕೊಳ್ಳಲಾಗದು. ಇವರ ವ್ಯಕ್ತಿತ್ವವೇ ಹೀಗೆ ಎಂದು ಸ್ಪಷ್ಟವಾಗಿ ಅರಿತುಕೊಳ್ಳದ ಹೊರತು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ.

  ಸಮಾಜದಲ್ಲಿ ಮನ್ನಣೆ ಕಡಿಮೆಯಾಗುತ್ತದೆ

  ಸಮಾಜದಲ್ಲಿ ಮನ್ನಣೆ ಕಡಿಮೆಯಾಗುತ್ತದೆ

  ಆ ದಿನಗಳು ಎಂದೋ ಹಿಂದೆ ಹೋಗಿವೆ. ನಮ್ಮ ಸಮಾಜದಲ್ಲಿರುವ ಉನ್ನತ ದರ್ಜೆಯ, ಗೌರವಾನ್ವಿತ ವ್ಯಕ್ತಿಗಳ ಬಗ್ಗೆ ಕೊಂಚ ಕೆದಕಿದರೆ ಸಾಕು, ಎಷ್ಟೂ ವ್ಯಕ್ತಿಗಳು ವಿಚ್ಛೇದಿತರನ್ನು ವಿವಾಹವಾಗಿ ಸುಖಸಂಸಾರ ನಡೆಸುತ್ತಿದ್ದಾರೆ. ಆದ್ದರಿಂದ ಸಮಾಜ ಏನು ಹೇಳುತ್ತದೆ ಎಂದು ನೀವು ಚಿಂತಿಸಬೇಕಾಗಿಲ್ಲ. ಒಟ್ಟಾರೆ ನೀವಿಬ್ಬರೂ ವಿವಾಹವಾದ ಬಳಿಕ ಸುಖವಾಗಿ ಬಾಳುವ ಭರವಸೆ ನಿಮಗಿದ್ದರೆ ಸಾಕು.

  ಎರಡನೇ ಪ್ರೇಮ ಸಾಧ್ಯವಿಲ್ಲ

  ಎರಡನೇ ಪ್ರೇಮ ಸಾಧ್ಯವಿಲ್ಲ

  ಪ್ರಥಮ ಪ್ರೇಮವನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಮಹಿಳೆಯರ ವಿಷಯದಲ್ಲಂತೂ ಇದು ನಿಜ. ಪ್ರತಿ ಮಹಿಳೆಯೂ ಚಿಕ್ಕಂದಿನಿಂದಲೇ ತನ್ನ ಕನಸಿನ ರಾಜಕುಮಾರನನ್ನು ಮನಸ್ಸಿನಲ್ಲಿಯೇ ವರಿಸಿರುತ್ತಾಳೆ. ತನ್ನ ಪತಿಯಲ್ಲಿ ಈ ರಾಜಕುಮಾರನನ್ನು ಕಾಣಬಯಸುತ್ತಾಳೆ. ಆದರೆ ಸಂಬಂಧ ಸರಿಬರಲಿಲ್ಲ ಎಂದರೆ ಈ ರಾಜಕುಮಾರರನ್ನು ಪತಿಯ ರೂಪದಲ್ಲಿ ಕಾಣಲು ಸಾಧ್ಯವಾಗಿರದೇ ಹೋಗಿರಬಹುದು. ಅಥವಾ ಇಬ್ಬರ ನಡುವಣ ಪ್ರೇಮ ಪರಸ್ಪರರ ಹೃದಯವನ್ನು ಗೆಲ್ಲುವಷ್ಟು ಗಾಢವಾಗಿರಲಿಲ್ಲ ಎಂದೂ ಹೇಳಬಹುದು. ಆದರೆ ಇದು ಮಿಥ್ಯೆಯಾಗಿದ್ದು ಯಾವುದೇ ವ್ಯಕ್ತಿ ನಿಮ್ಮ ಹೃದಯ ಗೆಲ್ಲುವ ಮೂಲಕ ಹಿಂದಿನ ಎಲ್ಲಾ ನೆನಪುಗಳನ್ನು ಮಸುಕಾಗಿಸಬಹುದು.

  English summary

  Myths About Marrying A Divorcee!

  Are you marrying a divorced woman or a man? Then what is stopping you? Are your friends and family members stopping you because they have their own belief systems which tell them it's a bad decision? They may ask "why marry a divorced woman when you can go for someone who is single?" Well, the only things that should be the deciding factors are compatibility, love and chemistry. If the right things are in place and if you two click together, the past can be put aside. If taboos or myths are stopping you then read on to get liberated from such myths.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more