ಹೆಂಗಸು ಕೇಳುವ 6 ಚಾಲಾಕಿನ ಪ್ರಶ್ನೆಗಳು

By Deepak M

ಮನುಷ್ಯನ ಮನಸ್ಸು ಅತ್ಯಂತ ನಿಗೂಢವಾದ ರೀತಿಯಲ್ಲಿ ವರ್ತಿಸುತ್ತಿರುತ್ತದೆ. ಪ್ರತಿ ದಿನವು ನಿಮ್ಮಾಕೆ ನಿಮ್ಮ ಬಳಿ " ಇಂದು ಏನು ಮಾಡುವಿರಿ" ಎಂಬ ಪ್ರಶ್ನೆಯನ್ನು ಹಿಡಿದುಕೊಂಡು ಎದುರು ನಿಂತಾಗ ನೀವು ಕುಂಟು ನೆವಗಳನ್ನೊ ಅಥವಾ ಕಾರಣಗಳನ್ನೊ ಹುಡುಕುತ್ತೀರಿ. ಕಾರಣ ಆ ಪ್ರಶ್ನೆಗಳಲ್ಲಿ ನಿಮಗೆ ಕೆಲವು ಅಪಾಯಕಾರಿ ಅಂಶಗಳು ಕಂಡು ಬರುತ್ತವೆ.

ಅದೇ ಆಕೆ ಇಂದು ನಿಮ್ಮ ಸ್ನೇಹಿತರ ಜೊತೆಯಲ್ಲಿ ಬೀರ್ ಕುಡಿಯುವ ಕಾರ್ಯಕ್ರಮ ಇದೆಯೋ, ಎಂದು ಕೇಳಿದಾಗ ನೀವು ಅದಕ್ಕೆ ಆ ದಿನ ಮಾಡಬೇಕೆಂದಿರುವ ಸಾಹಸ ಕಾರ್ಯಗಳ ಪಟ್ಟಿ ನೀಡುತ್ತೀರಿ.
ಇಲ್ಲವಾದಲ್ಲಿ ಈ ಮಾತಿನಲ್ಲಿ ವ್ಯಂಗ್ಯ ಅಥವಾ ಪತ್ತೆದಾರಿಕೆಯ ವಾಸನೆಯಿದ್ದಲ್ಲಿ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತೀರಿ.

ಏನೇ ಇರಲಿ ಬಿಡಿ ಈ ಪಾಟಿ ಸವಾಲನ್ನು ಎದುರಿಸಲು ಕಾನೂನು ಪರಿಣತರು ಸಹ ತಿಣುಕಾಡಿ ಬಿಡುತ್ತಾರೆ. ಅದರಲ್ಲಿ ನಾವು ಯಾವ ಮಹಾ ಹಾಗೆಂದು ಯುದ್ಧಕ್ಕೆ ಮೊದಲೆ ಸೋಲೊಪ್ಪುವುದು ಗಂಡಸರಿಗೆ ತರವಲ್ಲ.
ನಮ್ಮಲ್ಲಿರುವ ಹುಟ್ಟಾ ಕ್ರೀಡಾಪಟುವನ್ನು ಸಿದ್ಧಗೊಳಿಸಿ, ಆಕೆಯ ಪ್ರಶ್ನೋತ್ತರ ಕಲಾಪವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಗೆಲ್ಲುವ ಕೆಲವೊಂದು ಸಲಹೆಗಳನ್ನು ನಾವಿಲ್ಲಿ ನೀಡಿದ್ದೇವೆ ಓದಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಗಂಡು ಹೆಣ್ಣಿನ ನಡುವಿನ ಪ್ರೀತಿ ಎಂತಹದು ಗೊತ್ತಾ?

1) ನೀವು ನನ್ನ ಪ್ರೀತಿಸುತ್ತೀರಾ?:

1) ನೀವು ನನ್ನ ಪ್ರೀತಿಸುತ್ತೀರಾ?:

ಆಕೆ ಯಾಕೆ ಹೀಗೆ ಕೇಳುತ್ತಾಳೆ? ಏಕೆಂದರೆ ಆಕೆಯ ದೇಹವೇ ಆ ರೀತಿ ನಿರ್ಮಿತವಾಗಿರುತ್ತದೆ. ಆಕೆಯನ್ನು ನೀವು ಎಷ್ಟು ಪ್ರೀತಿಸಿದರು, ಅದನ್ನು ಆಕೆಗೆ ನೀವು ಮೌಖಿಕವಾಗಿ ಪ್ರಮಾಣೀಕರಿಸಬೇಕು. ಅದಕ್ಕಾಗಿಯೇ ಆಕೆ ಈ ಬಗೆಯ ಪ್ರಮಾಣೀಕರಣವನ್ನು ನಿಮ್ಮ ಮುಂದೆ ಇಡುತ್ತಾಳೆ. ಇದು ಸಹಜ ಬಿಡಿ ಆಕೆ ತನ್ನ ಸಂಬಂಧದ ಸುರಕ್ಷತೆಯನ್ನು ಆಗಾಗ ಖಾತ್ರಿಪಡಿಸಿಕೊಳ್ಳಲು ಹೀಗೆ ಕೇಳುತ್ತಾಳೆ.

ನಿಮ್ಮ ಅಭಿಪ್ರಾಯ - ಆಕೆಯ ಅಂದ- ಚಂದವನ್ನು ಹೊಗಳಲು ಹೋಗಬೇಡಿ. ಇದರಿಂದ ಆಕೆಯ ದುಗುಡ ಮತ್ತಷ್ಟು ಹೆಚ್ಚಾಗುತ್ತದೆ. ಅದರ ಬದಲಿಗೆ ಆಕೆಯ ನಿಲುವುಗಳನ್ನು ಮತ್ತು ಆಕೆಯ ದೃಷ್ಟಿಕೋನವನ್ನು ಬದಲಾಯಿಸದ ವಿಷಯಗಳಿಗೆ ಆಧ್ಯತೆ ನೀಡಿ ಮಾತನಾಡಿ. ಅಂದರೆ ಆಕೆ ಒಂದು ಅದ್ಭುತವಾದ ವ್ಯಕ್ತಿ, ಆಕೆಯ ವಿನೋದ ಪ್ರವೃತ್ತಿ ಮತ್ತು ಬುದ್ಧಿವಂತಿಕೆ ಅದ್ಭುತ ಎಂದು ಹೇಳಿ, ಇದರಿಂದ ಬರುವ ಫಲಿತಾಂಶವು ನಿಮ್ಮನ್ನು ಮೋಡಿ ಮಾಡುತ್ತದೆ ಕಾಯಿರಿ.

2) ನೀವು ಏನು ಯೋಚನೆ ಮಾಡುತ್ತಿದ್ದೀರಿ?:

2) ನೀವು ಏನು ಯೋಚನೆ ಮಾಡುತ್ತಿದ್ದೀರಿ?:

ಆಕೆ ಏಕೆ ಹಾಗೆ ಕೇಳುತ್ತಾಳೆ.- ಏಕೆಂದರೆ ಮಹಿಳೆಯರು ಯಾವಾಗಲು ಚರ್ಚೆಯನ್ನು ಹುಟ್ಟುಹಾಕುವಂತಹ ಪ್ರಶ್ನೆಗಳನ್ನೇ ಕೇಳುತ್ತಾರೆ. ಅಷ್ಟೇ ಅಲ್ಲ ಮಹಿಳೆಯರು ಈ ಪ್ರಶ್ನೆ ಕೇಳಿ ತಮಗೆ ಬೇಕಾಗುವ ವಿಷಯದ ಪ್ರಸ್ತಾಪವನ್ನು ನಿಮ್ಮ ಮುಂದೆ ಇಡುತ್ತಾರೆ.

ನಿಮ್ಮ ಅಭಿಪ್ರಾಯ - ಮೊದಲು ಆಕೆಗೆ ಸ್ವಲ್ಪ ಹಿತವನ್ನುಂಟು ಮಾಡಿ. ಆಕೆಯಲ್ಲಿರುವ ಗೊಂದಲಗಳನ್ನು ಪರಿಹರಿಸುವ ವಾತಾವರಣ ನಿರ್ಮಿಸಿ. ಆಕೆಯ ಪ್ರಶ್ನೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿ. ಇದರಿಂದ ಆಕೆಯು ತಾನು ಕೇಳಬೇಕೆಂದಿರುವ ಪ್ರಶ್ನೆಯನ್ನು ಬೇಗ ಕೇಳಲು ಸಹಾಯವಾಗುತ್ತದೆ.

3) ಆ ಡೈಮಂಡ್ ಪೆಂಡೆಂಟ್ ತುಂಬಾ ಚೆನ್ನಾಗಿದೆಯಲ್ಲವೇ?;

3) ಆ ಡೈಮಂಡ್ ಪೆಂಡೆಂಟ್ ತುಂಬಾ ಚೆನ್ನಾಗಿದೆಯಲ್ಲವೇ?;

ಆಕೆ ಏಕೆ ಹಾಗೆ ಕೇಳಿದಳು - ನಿಜಕ್ಕು ಆಕೆ ತೋರಿಸಿದ್ದು ಡೈಮಂಡ್ ಪೆಂಡೆಂಟ್ ಅಲ್ಲವೇ ಅಲ್ಲ. ಬದಲಿಗೆ ಆಕೆ ಪ್ರೀತಿಯ ಧ್ಯೋತಕವಾಗಿ ಕೆಲವು ಉಡುಗೊರೆಗಳನ್ನು ಅಪೇಕ್ಷೆಪಡುತ್ತಿದ್ದಾಳೆ ಎಂದು ಅರ್ಥ. ನೀವು ಆಕೆ ತುಂಬಾ ದುಬಾರಿ ಉಡುಗೊರೆಯನ್ನು ಬಯಸುತ್ತಿದ್ದಾಳೆ ಎಂದು ಭಯಪಡಬೇಡಿ. ಆಕೆಗು ಅದು ಗೊತ್ತು.

ನಿಮ್ಮ ಪ್ರತಿಕ್ರಿಯೆ - ಆಕೆಗೆ ಹೇಳಿ ಆಕೆಗೆ ಅದು ಅತ್ಯಂತ ಸೂಕ್ತವಾಗಿ ಕಾಣುತ್ತದೆಯೆಂದು. ಎಂದಾದರು ನಿಮ್ಮ ಬಳಿ ಹಣವಿದ್ದಾಗ ಆಕೆಗೆ ಅದನ್ನು ಕೊಡಿಸಿ. ಆಕೆ ಇಷ್ಟಾನಿಷ್ಟಕ್ಕೆ ನೀವು ಸ್ಪಂದಿಸುತ್ತಿದ್ದೀರಿ ಎಂಬ ಭಾವನೆಯೇ ಆಕೆಗೆ ಸಮಾಧಾನ ನೀಡುತ್ತದೆ ಎಂಬುದನ್ನು ಮರೆಯಬೇಡಿ.

4) ನಮ್ಮ ಬಗ್ಗೆ ಏನು ಯೋಚನೆ ಮಾಡುತ್ತೀರಿ?;

4) ನಮ್ಮ ಬಗ್ಗೆ ಏನು ಯೋಚನೆ ಮಾಡುತ್ತೀರಿ?;

ಆಕೆ ಏಕೆ ಹಾಗೆ ಕೇಳುತ್ತಾಳೆ - ಆಕೆಗೆ ಏನಾದರು ಮಾತನಾಡಬೇಕು ಎಂದೆನಿಸುತ್ತಿದೆ ಅದಕ್ಕೆ ಹಾಗೆ ಕೇಳುತ್ತಾಳೆ ಅಷ್ಟೇ.

ನಿಮ್ಮ ಪ್ರತಿಕ್ರಿಯೆ- ಈ ಪ್ರಶ್ನೆಯೇ ಒಂದು ಧಿಡೀರ್ ಪರೀಕ್ಷೆಯಂತಿರುತ್ತದೆ. ಇದಕ್ಕೆ ಉತ್ತರ ತುಂಬಾ ಸುಲಭ ಬಿಡಿ. ಆಕೆಯ ಕೈಯನ್ನು ನಿಮ್ಮ ಕೈಗಳಲ್ಲಿ ಬೆಚ್ಚಗೆ ಹಿಡಿದು ಕಣ್ಣಿನಲ್ಲಿ ಕಣ್ಣಿಟ್ಟು ಮೆದುವಾಗಿ ಮುಗುಳ್ನಗೆಯೊಂದಿಗೆ ಕೇಳಿ. ಆಕೆಯ ಭಾವನೆಗಳೇನು? ಆಕೆಗೆ ಉಂಟಾಗಿರುವ ಗೊಂದಲಗಳೇನು? ಎಲ್ಲೂ ನಿಮ್ಮ ಮಾನಸಿಕ ನಿಯಂತ್ರಣವನ್ನು ಕಳೆದುಕೊಳ್ಳಲು ಹೋಗಬೇಡಿ.

5). ಯಾವಾಗ ನಾವು ಮಕ್ಕಳನ್ನು ಹೊಂದುವ ಬಗ್ಗೆ ತೀರ್ಮಾನಿಸೋಣ?;

5). ಯಾವಾಗ ನಾವು ಮಕ್ಕಳನ್ನು ಹೊಂದುವ ಬಗ್ಗೆ ತೀರ್ಮಾನಿಸೋಣ?;

ಆಕೆ ಏಕೆ ಹಾಗೆ ಕೇಳಿದಳು - ಮಹಿಳೆಯರು ಪುರುಷರಿಗಿಂತ ಎಲ್ಲದರಲ್ಲೂ ಮುಂದಿರುತ್ತಾರೆ. ಜೊತೆಗೆ ಅವರ ಗಂಡಂದಿರು ಸಹ ಅವರ ರೀತಿಯೇ ಯೋಚಿಸಬೇಕೆಂದು ಬಯಸುತ್ತಾರೆ.

ನಿಮ್ಮ ಪ್ರತಿಕ್ರಿಯೆ - ಆಕೆಗೆ ಹೇಳಿ ನೀವು ಬೇರೆ ಮಹಿಳೆಯರಿಂದ ಮಕ್ಕಳನ್ನು ಪಡೆದಿಲ್ಲವೆಂದು. ನಿಮ್ಮ ಮಗುವಿಗೆ ಆಕೆಯೇ ತಾಯಿಯಾಗುತ್ತಾಳೆ, ಅದರಲ್ಲಿ ಯಾವ ಅನುಮಾನವು ಇಲ್ಲ. ಆದರೆ ಅದಕ್ಕಾಗಿ ಸ್ವಲ್ಪ ತಾಳಲು ಆಕೆಗೆ ಸಲಹೆ ನೀಡಿ. ಮಕ್ಕಳು ಮಾಡುವ ಮೊದಲು ಜೀವನವನ್ನು ಸಂತೃಪ್ತಿಯಾಗಿ ಆನಂದಿಸಲು ಆಕೆಗೆ ಸಲಹೆ ನೀಡಿ. ಬೇಡವೇ ಬೇಡ ಎಂಬುದರ ಬದಲು ಆಕೆಯನ್ನು ನಾಜೂಕಿನಿಂದ ಈ ವಿಷಯದ ಹೊರಗೆ ಕರೆದೊಯ್ಯಿ, ನಿಮ್ಮ ಯೋಜನೆಗಳನ್ನು ಸಮರ್ಥವಾಗಿ ಆಕೆಯ ಮುಂದಿಡಿ. ಮಕ್ಕಳ ಕುರಿತಾಗಿ ನಿಮಗು ಕನಸುಗಳಿವೆ ಎಂದು ಆಕೆಗು ತಿಳಿಯಲಿ.

6) ನನ್ನ ಹೊಸ ಬಟ್ಟೆ ನಿಮಗೆ ಹಿಡಿಸಿತೇ?

6) ನನ್ನ ಹೊಸ ಬಟ್ಟೆ ನಿಮಗೆ ಹಿಡಿಸಿತೇ?

ಆಕೆ ಏಕೆ ಹಾಗೆ ಕೇಳಿದಳು - ಏಕೆಂದರೆ ನೀವು ಇತ್ತೀಚೆಗೆ ಆಕೆಯನ್ನು ಹೊಗಳುವುದನ್ನು ಮತ್ತು ಪ್ರಶಂಸಿಸುವುದನ್ನು ಮಾಡಿಲ್ಲ. ಇದು ಹಲವು ಬಾರಿಯಾಗಿದೆ. ಅದಕ್ಕಾಗಿ ಆಕೆ ನಿಮಗೆ ಈ ಪರೋಕ್ಷವಾದ ಸಂದೇಶವನ್ನು ನೀಡುತ್ತಿದ್ದಾಳೆ.

ನಿಮ್ಮ ಪ್ರತಿಕ್ರಿಯೆ - ಸಿದ್ಧವಾಗಿ ಆಕೆಯ ಊಹೆಗು ನಿಲುಕದ ಉತ್ತರವನ್ನು ನೀಡಿ. ಆಕೆಯ ಡ್ರೆಸ್, ಅದರ ಬಣ್ಣ, ಅದು ಹೇಗೆ ನಿಮ್ಮಾಕೆಯ ಅಂದವನ್ನು ಹಿಮ್ಮಡಿಗೊಳಿಸಿದೆ, ಅದು ಹೇಗೆ ಆ ಡ್ರೆಸ್ ಆಕೆಯ ಆಯಕಟ್ಟಿನ ಸ್ಥಳಗಳನ್ನು ಬಿಗಿದಪ್ಪಿದೆ ಎಂಬುದನ್ನು ಗುರುತಿಸಿ ಹೊಗಳಿ. ಇದರಿಂದ ಆಕೆಗು ಸಮಾಧಾನ ತಾನು ಇನ್ನೂ ಗುರುತಿಸಲ್ಪಡುತ್ತಿದ್ದೇನೆ ಎಂಬ ಭಾವನೆ ದೊರೆಯುತ್ತದೆ. ಜೊತೆಗೆ ನಿಮಗೂ ಇದರಿಂದ ಒಳ್ಳೆಯ ಪ್ರತಿಫಲ ದೊರೆಯುತ್ತದೆ. ಆಕೆ ನಕ್ಕರೆ ತಡಮಾಡಬೇಡಿ, ಕನಿಷ್ಟ ನಿಮ್ಮ ಮೊಬೈಲ್‍ನಿಂದ ಒಂದು ಫೋಟೊ ಕ್ಲಿಕ್ಕಿಸಿ, ಮುಂದೆ ಆಕೆಯೇ ನಿಮ್ಮೊಂದಿಗೆ ನಿಂತು ಒಂದು ಸೆಲ್ಫೀ ಕ್ಲಿಕ್ಕಿಸುತ್ತಾಳೆ.

Story first published: Thursday, April 10, 2014, 14:03 [IST]
X
Desktop Bottom Promotion