For Quick Alerts
ALLOW NOTIFICATIONS  
For Daily Alerts

ಪ್ರೀತಿಯ ಅಪ್ಪಂದಿರೇ ಮಗಳ ಮದುವೆ ವಿಷಯದಲ್ಲಿ ನೀವು ಈ ತಪ್ಪನ್ನು ಮಾಡದಿರಿ!

|

ಹೆಣ್ಣು ಸಂಸಾರದ ಕಣ್ಣು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಕಲಿತ ಹೆಣ್ಣು ಮನೆಯ ಕಣ್ಣು ಹೀಗೆ ಸಾಕಷ್ಟು ನಾಣ್ಣುಡಿಗಳು ಹೆಣ್ಣಿನ ಮೌಲ್ಯ ತಿಳಿಸುತ್ತದೆ, ಆಕೆಯ ಸಾಮರ್ಥ್ಯವನ್ನು ಸಾರುತ್ತಿದೆ. ಆದರೆ ಹೆಣ್ಣು ಎಷ್ಟೇ ಓದಿದರೂ, ಎಂತಹ ಸ್ಥಾನಮಾನದಲ್ಲಿದ್ದರೂ ಅಂದಿಗೂ ಇಂದಿಗೂ ಹೆತ್ತವರಿಗೆ ಭಾರವೇ ಎಂಬುದು ಮಾತ್ರ ವಿಷಾದನೀಯ!.

ಅದರಲ್ಲೂ ಭಾರತದಲ್ಲಿ ಮಧ್ಯಮ ವರ್ಗದ ಜನರು ಸಮಾಜದಲ್ಲಿ ಗೌರವ-ಸ್ಥಾನಮಾನಗಳಿಗೆ ಅಂಜುತ್ತಾರೆ. ಹೆಣ್ಣು ಮಕ್ಕಳಿದ್ದರೆ ಮಗಳ ವಿವಾಹ ಮಾಡುವುದೇ ಇವರ ಜೀವನದ ಬಹುದೊಡ್ಡ ಸಾಧನೆ ಎಂಬಂತೆ ತಮ್ಮೆಲ್ಲಾ ಆಸೆಗಳನ್ನು ಬದಿಗೊತ್ತಿ ಕಾಸಿಗೆ ಕಾಸು ಕೂಡಿಸುತ್ತಾರೆ. ಮಗಳಿಗೆ ಹೊಂದುವಂಥ ಪರಿಪೂರ್ಣ ಹುಡುಗನನ್ನು ಪತ್ತೆ ಮಾಡಲು, ವರನ ಎಲ್ಲಾ ಬೇಡಿಕೆಗಳನ್ನು ಪೂರೈಸಲು, ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಅದ್ಧೂರಿ ವಿವಾಹ ಮಾಡಲು ತಮ್ಮ ಅರ್ಧ ಜೀವನವನ್ನೇ ಮುಡಿಪಾಗಿಡುತ್ತಾರೆ.

ಆದರೆ ಪ್ರೀತಿಯ ಅಪ್ಪಂದಿರೇ ನೆನಪಿರಲಿ ನಿಮ್ಮ ಎಲ್ಲಾ ಆಸೆಗಳನ್ನು ಬದಿಗೊತ್ತಿ, ಮಗಳಿಗೆ ಮದುವೆ ಎನ್ನುವ ಪದದ ಅರ್ಥವೇ ಗೊತ್ತಿರದ ಸಮಯದಿಂದಲೇ ಹಣ ಕೂಡಿಡುವುದನ್ನು ಆರಂಭಿಸಿ ಮದುವೆ ಮಾಡುವುದು ಯಾವ ಹೆಣ್ಣು ಮಕ್ಕಳೂ ಒಪ್ಪುವುದಿಲ್ಲ. ನಿಮ್ಮ ಮಗಳ ಮದುವೆ ವಿಚಾರದಲ್ಲಿ ನೀವು ಇಂಥಾ ಯಾವುದೇ ತ್ಯಾಗ ಅಥವಾ ಸಮಾಜಕ್ಕೆ ಹೆದರಿ ನಿರ್ಧಾರ ತೆಗೆದುಕೊಳ್ಳುವುದನ್ನು ನಿಮ್ಮ ಮಗಳು ಎಂದಿಗೂ ಬಯಸುವುದಿಲ್ಲ.

ನಲ್ಮೆಯ ಅಪ್ಪಂದಿರೇ ನಿಮ್ಮ ಮಗಳ ಮದುವೆಗೆ ನೀವು ಇಂಥಾ ತ್ಯಾಗ, ನಿರ್ಧಾರಗಳನ್ನು ಮಾಡದಿರಿ.....

ನಿನ್ನ ಆಸೆ ಬದಿಗೊತ್ತಿ ಹಣ ಉಳಿಸಬೇಡ

ನಿನ್ನ ಆಸೆ ಬದಿಗೊತ್ತಿ ಹಣ ಉಳಿಸಬೇಡ

ಭಾರತದಲ್ಲಿನ ಮಧ್ಯಮ ಹಾಗೂ ಕಳೆ ವರ್ಗದ ಬಹುತೇಕ ಪೋಷಕರು ಮಗಳು ಹುಟ್ಟಿದ ಕೂಡಲೇ ಅವಳ ಮದುವೆಗಾಗಿ ಹಣವನ್ನು ಕೂಡಿಡಲು ಆರಂಭಿಸುತ್ತಾರೆ. ತಮ್ಮ ಆರಾಮವನ್ನು ಲೆಕ್ಕಿಸದೇ, ಜಾಲಿ ಪ್ರವಾಸಗಳನ್ನು ಮಾಡದೇ, ಮನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸದೇ ಏಳಂಕಿಯ ಹಣವನ್ನು ಹೊಂದಿಸಲು ಸಾಕಷ್ಟು ಶ್ರಮಪಡುತ್ತಾರೆ. ಇಂತಹ ತ್ಯಾಗ ನೀವು ಮಾಡಬೇಡಿ. ಬದಲಾಗಿ ಈ ಹಣವನ್ನು ಅವಳ ಉನ್ನತ ಶಿಕ್ಷಣಕ್ಕೆ ಬಳಸಿ, ಆಕೆಯನ್ನು ಸ್ವಾವಲಂಬಿಯಾಗಿ ಮಾಡಿ.

ಪರಿಪೂರ್ಣ ವರನ ಹುಡುಕಾಟ ಅಗತ್ಯವಿಲ್ಲ

ಪರಿಪೂರ್ಣ ವರನ ಹುಡುಕಾಟ ಅಗತ್ಯವಿಲ್ಲ

ಮಗಳಿಗೆ ಪರಿಪೂರ್ಣನಾದ ವರನನ್ನು ಹುಡುಕಬೇಕು ಎಂಬ ಹಂಬಲ ಪ್ರತಿ ತಂದೆಯಲ್ಲೂ ಇರುತ್ತದೆ. ಆದರೆ ಪರಿಪೂರ್ಣ ಎಂಬ ಪದಕ್ಕೆ ಅರ್ಥ ತಂದೆ ಹಾಗೂ ಮಗಳಲ್ಲಿ ವಿಭಿನ್ನತೆ ಇರುತ್ತದೆ. ತಂದೆ ಪ್ರಕಾರ ಪರಿಪೂರ್ಣ ಎಂದರೆ ಆರ್ಥಿಕವಾಗಿ ಸದೃಢರಾಗಿರಬೇಕು, ಉತ್ತಮ ಕೌಟುಂಬಿಕ ಹಿನ್ನೆಲೆ ಹೊಂದಿರಬೇಕು ಮತ್ತು ಸಮಾಜ ಈ ಎಲ್ಲಾ ಗುಣಗಳನ್ನು ಒಪ್ಪುವಂತಿರಬೇಕು. ಆದರೆ ಮಗಳ ಪ್ರಕಾರ ಇದು ಭಿನ್ನವಿದೆ, ತನ್ನ ವೃತ್ತೀಯ ಜೀವನಕ್ಕೆ ಪತಿ ಬೆಂಬಲಿಸುವಂತವನಾಗಿರಬೇಕು, ಭಾವನಾತ್ಮಕವಾಗಿ ಕುಗ್ಗಿದಾಗ ನನ್ನ ಶಕ್ತಿಯ ಸ್ತಂಭವಾಗಿರಬೇಕು ಎಂದು ನಾನು ಬಯಸುತ್ತೇನೆ.

ವಿವಾಹಕ್ಕೆ ಗಡುವು ನೀಡಬೇಡಿ

ವಿವಾಹಕ್ಕೆ ಗಡುವು ನೀಡಬೇಡಿ

ಭಾರತದಲ್ಲಿರುವ ಮತ್ತೊಂದು ಸಾಮಾಜಿಕ ಪರಿಸ್ಥಿತಿ ಎಂದರೆ, ಹೆಣ್ಣಿಗೆ 30 ವರ್ಷವಾಗಿದ್ದು ಇನ್ನೂ ಮದುವೆ ಆಗಿಲ್ಲ ಎಂದಾದರೆ ವೃದ್ಧಕನ್ಯೆ ಎಂಬಂತೆ ಬಿಂಬಿಸುತ್ತಾರೆ. ಸಮಾಜ ನಿಗದಿ ಮಾಡಿರುವ ವಯಸ್ಸಿಗೆ ಹೆಣ್ಣಿಗೆ ಮದುವೆ ಮಾಡಬೇಕೆಂಬ ಒತ್ತಡ ಪೋಷಕರಿಗೆ ಸಮಾನವಾದಂತೆ ಹೆಣ್ಣಿಗೂ ಇರುತ್ತದೆ. ಮಗಳಿಗೆ ಗೊತ್ತಿದೆ ಸಮಾಜದ ಕಟ್ಟುಪಾಡುಗಳಿಗೆ ತಕ್ಕಂತೆ ಮಗಳ ವಿವಾಹ ಮಾಡಬೇಕೆಂಬ ಬಯಕೆ ನಿಮಗಿದೆ ಹಾಗೂ ಇದು ಸಾಧ್ಯವಾಗದಿದ್ದಾಗ ನೀವು ಸಮಾಜದಲ್ಲಿ ಜನರನ್ನು ಎದುರಿಸಬೇಕು ಎಂದು. ಆದರೆ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ, ಮದುವೆ ಆಗಲು ನನಗೆ ನನ್ನದೇ ಆಸಕ್ತಿ ಬೇಕಿದೆ, ಕೇವಲ ವಯಸ್ಸಾಗುತ್ತಿದೆ ಎಂಬ ಕಾರಣಕ್ಕೆ ವಿವಾಹವಾಗುವುದು ಸರಿಯಲ್ಲ.

ವರನ ಕಡೆಯವರ ಬೇಡಿಕೆಗಳಿಗೆ ಬೆಂಬಲಿಸಬೇಡಿ

ವರನ ಕಡೆಯವರ ಬೇಡಿಕೆಗಳಿಗೆ ಬೆಂಬಲಿಸಬೇಡಿ

ನಮಗೆಲ್ಲರಿಗೂ ಗೊತ್ತಿದೆ ವರದಕ್ಷಿಣೆ ಕೇಳುವುದು ಕಾನೂನಾತ್ಮಕ ಅಪರಾಧ ಹಾಗೂ ಕೆಟ್ಟ ಪ್ರವೃತ್ತಿ ಎಂದು. ಆದರೆ ಭಾರತದಲ್ಲಿ ಇಂದಿಗೂ ಈ ಹಾವಳಿ ತಪ್ಪಿಲ್ಲ. ಅದರಲ್ಲೂ ಸುಶಿಕ್ಷಿತ ಕುಟುಂಬದವರೇ ವರದಕ್ಷಿಣೆ ಬೇಡ ಎನ್ನುತ್ತಾರೆ, ಹಾಗೆಯೇ ಹೆಣ್ಣಿನ ಕಡೆಯವರಿಂದ ಕಾರು, ಮನೆ , ಸೈಟು, ಐಷಾರಾಮಿ ಮನೆಯ ವಸ್ತುಗಳನ್ನು ಅಂಜಿಕೆ ಇಲ್ಲದೆ ಪರೋಕ್ಷವಾಗಿ ಕೇಳುತ್ತಾರೆ. ಇದು ಇಂದಿಗೂ ಎಲ್ಲಾ ಕುಟುಂಬಗಳಲ್ಲೂ ನಡೆಯುತ್ತಿರುವ ಸತ್ಯ ಸಂಗತಿಯೂ ಹೌದು. ಆದರೆ ನೀವು ಸಹ ಇದೇ ತಪ್ಪನ್ನು ಮಾಡಬೇಡಿ. ಮನುಷ್ಯನಿಗೆ ಆಸೆ ಎಂದಿಗೂ ಅಂತ್ಯವಾಗುವುದಿಲ್ಲ. ನೀವು ನಿಮ್ಮ ಮಗಳಿಗೆ ಅತ್ಯುತ್ತಮವಾದ ಶಿಕ್ಷಣದ ಉಡುಗೊರೆಯನ್ನು ನೀಡಿದ್ದೀರಿ, ಇದು ಪತಿಯ ಕುಟುಂಬದವರಿಗೆ ಸಾಕಾಗುವಷ್ಟಾಗುತ್ತದೆ, ಇಷ್ಟಕ್ಕೆ ಅಂತ್ಯವಾಗಲಿ.

ಎಲ್ಲರಂತೆ ಅದ್ಧೂರಿ ಮದುವೆಗೆ ಯೋಜಿಸಬೇಡಿ

ಎಲ್ಲರಂತೆ ಅದ್ಧೂರಿ ಮದುವೆಗೆ ಯೋಜಿಸಬೇಡಿ

ಇತ್ತೀಚಿನ ದಿನಗಳಲ್ಲಿ ಅದ್ಧೂರಿ ಮದುವೆಗಳು ಸಾಮಾನ್ಯವಾಗಿದೆ, ಎಲ್ಲರೂ ಇಷ್ಟಪಡುತ್ತಾರೆ ಸಹ. ಅಲ್ಲದೆ ಮದುವೆ ಪ್ರತಿಷ್ಠೆಯ ಸಂಕೇತವಾಗಿದೆ. ಅದ್ಧೂರಿ ಮದುವೆ ಆಮಂತ್ರಣ ಪತ್ರ, ಧಿರುಸುಗಳು, ಒಡವೆ, ಊಟ ಅಬ್ಬಬ್ಬಾ ಹಣ ನೀರಿನಂತೆ ಹರಿಯುತ್ತಿರುತ್ತದೆ. ನೀವು ಹೀಗೆ ಹಣವನ್ನು ಪೋಲು ಮಾಡುವುದು ಅನವಶ್ಯ. ಇಲ್ಲಿ ಎರಡು ಮನಸ್ಸುಗಳು ಒಂದಾಗುವ ಸಮಯ, ಇದಕ್ಕೆ ಆತ್ಮೀಯ ಸ್ನೇಹಿತರು, ಕುಟುಂಬಸ್ಥರು ಇದ್ದರೆ ಸಾಕು. ಸರಳ ವಿವಾಹವಾದರೂ ನೆಮ್ಮದಿ ಇರುತ್ತದೆ. ವಿವಾಹ ಹೇಗೆ ಆಗಿದ್ದೇವೆ ಎನ್ನುವುದಕ್ಕಿಂತ ಹೇಗೆ ಜೀವನ ನಡೆಸುತ್ತೇವೆ ಎಂಬುದು ಮಾತ್ರ ಎಣಿಕೆಗೆ ಬರುವುದು. ಹಣವನ್ನು ವ್ಯರ್ಥ ಮಾಡುವ ಬದಲು ಮಗಳ ಮುಂದಿನ ಜೀವನದ ಅವಶ್ಯಕತೆಗಳಿಗೆ ಮೀಸಲಿಡಿ.

ಮದುವೆಯ ನಂತರ ನನ್ನನ್ನು ಅತಿಥಿಯೆಂದು ಭಾವಿಸಬೇಡಿ

ಮದುವೆಯ ನಂತರ ನನ್ನನ್ನು ಅತಿಥಿಯೆಂದು ಭಾವಿಸಬೇಡಿ

ಹಲವು ಕುಟುಂಬಗಳಲ್ಲಿ ಮದುವೆಯ ನಂತರ ಮಗಳು ಮನೆಗೆ ಬಂದರೆ ಅತಿಥಿಯಂತೆ ಆಧರಿಸುತ್ತಾರೆ. ಮಗಳ ಮನೆಗೆ ಆಗಾಗ್ಗೆ ಬರಲು ಸಹ ಹಿಂದೇಟು ಹಾಕುತ್ತಾರೆ. ಆದರೆ ನೀವು ಈ ತಪ್ಪನ್ನು ಮಾಡದಿರಿ. ಅವಳು ನಿಮ್ಮ ಮಗಳು, ಎಂದಿಗೂ ಮಗಳಾಗಿಯೇ ಉಳಿಯುತ್ತಾರೆ. ಮದುವೆ ಎನ್ನುವ ಸಂಬಂಧ ತಂದೆ-ತಾಯಿಯ ಸ್ಥಾನವನ್ನು ಕಸಿಯುವಂತೆ ಅಥವಾ ಬದಲಾಯಿಸುವಂತೆ ಇರಬಾರದು.

English summary

Dear Fathers Don’t Do These Things For Daughter Marriage

For a girl born and raised in an Indian middle-class family, it’s not surprising to watch her parents prepare for her wedding even before she could fully understand the meaning of marriage. And I am no different. I saw my parents prepare for my elder sister’s marriage like their life depended on it. And on the day of the wedding, they were on their toes attending to guests, making sure everyone were happy and fulfilling all the duties of being the bride's parents.
Story first published: Friday, September 20, 2019, 15:10 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more