For Quick Alerts
ALLOW NOTIFICATIONS  
For Daily Alerts

ಮುಂದಿನ ಜನ್ಮದಲ್ಲಾದರೂ ನೀನು ನನ್ನವಳೆ

By * ವಿಜಯ್ ಕುಮಾರ್ ಎಂ. ಬೆಂಗಳೂರು
|
Kannada poem by Vijay Kumar
ನಾ ಹ್ಯಾಂಗ ಮರೆಯಲೇ ಗೆಳತಿ ನಿನ್ನ ಜನುಮ ದಿನದಂದು
ಮರೆತಷ್ಟು ಮರುಕಳಿಸುವವು ಆ ಸವಿನೆನಪುಗಳು ಮರೆಯಾದಾದೆನು ನಾ ಎಂದೆಂದೂ.

ಗಣಪಂಗೆ ಕೈ ಮುಗಿದು ವರವ ಬೇಡುವ ದಿನವಂದು
ನೀನೊಲಿದು ಬಂದೆ ನನ್ನೀ ಕತ್ತಲಾ ಬಾಳಿಗೆ ಜ್ಯೋತಿ ಕಿರಣವೆಂದು.

ಈ ಜೀವನ ಮುದುಡಿತೆಂದು ತಲೆ ಮೇಲೆ ಕೈಹೊತ್ತು ಕುಳಿತಾಗ ನೀ ಬಂದೆ
ಕದಡಿದಾ ಮನಕೆ ಆನಂದಾ ನೀತಂದೆ.

ನೀನಿತ್ತ ವಚನಗಳು ತುಂಬಿದವು ಮನಸನ್ನ
ನಿನ್ನ ಹೊರತು ಇನ್ನಾರು ತುಂಬಲಾರರು ಆ ನಿಸ್ವಾರ್ಥ ಪ್ರೇಮವನ್ನ.

ಕೈ ಹಿಡಿದು ನಡೆವಾಗ ಕಂಡೆ ಬಾಳಿನ ಕನಸೊಂದು
ನಡೆಯಲಾರದೆ ಹೋದೆ ನಿನ್ನ ಸೇರದೆ ಹೋದೆ ಇನ್ನೆಂದೂ.

ಮನದಲ್ಲೆ ಕೆತ್ತಿಸಿದ ಆ ನಿನ್ನ ಭಾವಚಿತ್ರವಿಹುದು
ಕಣ್ತುಂಬಿ ಬಂದಾಗ ನೆನೆಯುವ ಚಿತ್ತವಿಹುದು.

ನೀನಂದು ಬಿಗಿದಪ್ಪಿ ನೀಡಿದ ಸಿಹಿ ಮುತ್ತು
ಮರೆಸಿತ್ತು ಜಗವನ್ನೇ ಆ ಹೊತ್ತು.

ಕಡಲ ಅಂಚಿಂದ ಕಳಿಸಿದ ಮೇಘ ಸಂದೇಶಗಳೇನು
ಆ ನಿನ್ನ ಸವಿ ನುಡಿಗಳು ನೀಡಿದ ಮನಶಾಂತಿಗೆ ಸರಿಸಾಟಿಯೇನು.

ಕ್ಷಮೆಯಿರಲಿ ಗೆಳತಿ ನಾನಿನ್ನ ನೋಯಿಸಿದ್ದೇ ಆದರೆ
ಈ ಜೀವನ ಸಾರ್ಥಕ ಇಂದಿಗೂ ನೀನನ್ನ ನೆನೆಯುವೆಯಾದರೆ.

ನೆನೆದಷ್ಟು ಮನಕಲಕುವುದು
ಇನ್ನಾರಿಗೇಳಲಿ ನೋವೆಲ್ಲ ನನ್ನಲ್ಲೇ ಹುದುಗಿಹುದು.

ಎಂದೆಂದಿಗೂ ನಾನಿನ್ನ ಮರೆಯಲಾರೆ
ಈ ಪುಟ್ಟ ಮನಸ್ಸಿನಿಂದಾಚೆಗೆ ನೀದೂರ ಹೋಗಲಾರೆ.

ನೂರ್ ಕಾಲ ಬಾಳು ಓ ನನ್ನ ನಲ್ಲೆ
ಈ ನಿನ್ನ ಸವಿನೆನಪುಗಳು ಇರಲಿರಲಿ ನನ್ನಲ್ಲೆ.

ಪ್ರೀತಿ ಕುರುಡಂತೆ ಪ್ರೀತಿಸಿದ್ದು ಕಾಣಲಿಲ್ಲವೇ
ಪ್ರೀತಿಸಿದವಳೆ ಅರಿಯದಾದರೆ ಆ ಪ್ರೀತಿಯೆ ನಿಸ್ವಾರ್ಥವೇ.

ಭಗ್ನ ಪ್ರೇಮಿಯಗಲಾರೆ ಗೆಳತಿ ಈ ನನ್ನ ಪ್ರೇಮ ಅಚಲ, ನವ ನವೀನ, ನಿತ್ಯ ನೂತನ.

ನುಡಿದಂತೆ ನಡೆಯುವೆ ಸದಾ ನಿನ್ನ ನೆನೆಯುವೆ
ಕೊನೆಯ ಉಸಿರಿರುವರೆಗೂ ನಿನಗಾಗಿ ಕಾಯುವೆ.

ಪ್ರೇಮಿಗಳ ದಿನದಂದು ನನ್ನ ಶುಭ ಹಾರೈಕೆಯೊಂದೆ ಮುಂದಿನ ಜನ್ಮದಲ್ಲಾದರು ನೀನು ನನ್ನವಳೆ.

English summary

Valentine's day poem | Kannada poem by Vijay Kumar | ನಾ ಹ್ಯಾಂಗ ಮರೆಯಲೇ ಗೆಳತಿ ನಿನ್ನ | ವಿಜಯ್ ಕುಮಾರ್ ಪ್ರೇಮ ಕವನ

Love poem by Vijay Kumar M from Bangalore.
Story first published: Tuesday, February 14, 2012, 12:08 [IST]
X
Desktop Bottom Promotion