Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ರಾಮನವಮಿಗೆ ಬೇಲದ ಹಣ್ಣಿನ ಪಾನಕ ಮಾಡುವುದೇಕೆ: ರೆಸಿಪಿ ಹಾಗೂ ಯಾವೆಲ್ಲ ಆರೋಗ್ ಸಮಸ್ಯೆಗೆ ಅತ್ಯುತ್ತಮ ಮನೆಮದ್ದು
ಏಪ್ರಿಲ್ 17ಕ್ಕೆ ರಾಮ ನವಮಿ. ರಾಮ ನವಮಿಗೆ ಪಾನಕ ಮಾಡಲಾಗುವುದು, ಅದರಲ್ಲೂ ಬೇಲದ ಪಾನಕ ಹೆಚ್ಚಾಗಿ ಮಾಡಲಾಗುವುದು. ಬೇಲದ ಪಾನಕ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದರಲ್ಲೂ ಬೇಸಿಗೆಯಲ್ಲಿ ಬೇಲದ ಪಾನಕ ಕುಡಿದರೆ ಸುಸ್ತು ದೂರಾಗುವುದು.
ಆದ್ದರಿಂದಲೇ ಬಿಸಿಲಿನಲ್ಲಿ ಮೆರವಣಿಗೆ ಮಾಡುವಾಗ ಬೇಲದ ಪಾನಕ ಮಾಡಿ ನೀಡಲಾಗುವುದು. ಈ ಪಾನಕ ಮಾಡುವುದು ಸುಲಭ, ಬೇಲದ ತಿರುಳು ಒಣಗಿಸಿಟ್ಟು ಇದನ್ನು ಈ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಬಹುದು.

ಬೇಕಾಗುವ ಸಾಮಗ್ರಿ
ನೀರು 4-5 ಲೀಟರ್
ಬೆಲ್ಲ 2 ಕಪ್ (ಸಿಹಿ ಸಾಕಾಗಿಲ್ಲ ಅಂದರೆ ಇನ್ನೂ
ಹಾಕಬಹುದು
ಬೇಲದ ಹಣ್ಣು 3
1 ಚಮಚ ಕಾಳು ಮೆಣಸಿನ ಪುಡಿ
ಪಾನಕ ಮಾಡುವ ವಿಧಾನ
ಬೇಲದ ಹಣ್ಣಿನ ತೊಗಟೆ ಒಡೆದು ಹಣ್ಣಿನ ತಿರುಳು ತೆಗೆದು ಪಾತ್ರೆಯಲ್ಲಿ ಹಾಕಬೇಕು. ನಂತರ ಆ ಹಣ್ಣಿಗೆ ಸ್ವಲ್ಪ ನೀರುಹಾಕಿಡಿ. ಸ್ವಲ್ಪ ಹೊತ್ತಿನ ಬಳಿಕ ಹುಣಸೆ ಹಣ್ಣಿನ ರಸ ಕಿವಿಚುವಂತೆ ನೀವು ಈ ಬೇಲದ ಹಣ್ಣಿನ ತಿರುಳನ್ನು ಕಿವುಚಬೇಕು. ನಂತರ ಆ ರಸವನ್ನು ಜ್ಯೂಸ್ ಕಲಿಸುವ ಪಾತ್ರೆಗೆ ಹಾಕಿ, ನೀವು ಈ ತಿರುಳಿನ ರಸವನ್ನು ಎರಡರಿಮದ ಮೂರು ಬಾರಿ ಕಿವುಚಿ.
ಆ ಬಳಿಕ ನೀರನ್ನು ನೀರಿಸಿ, ನಂತರ ಬೆಲ್ಲವನ್ನು ಪುಡಿ ಮಾಡಿ ಹಾಕಿ, ನಂತರ ಬೇಕಿದ್ದರೆ ಸ್ವಲ್ಪ ಏಲಕ್ಕಿ ಕೂಡ ಸೇರಿಸಬಹುದು. ಇದನ್ನು ಮಿಕ್ಸ್ ಮಾಡಿದರೆ ರಾಮ ನವಮಿ ಪಾನಕ ರೆಡಿ.
ಬೇಲದ ಹಣ್ಣು
ಬೇಲದ ಹಣ್ಣು ಸಾಮಾನ್ಯವಾಗಿ ಹಣ್ಣು-ತರಕಾರಿ ಮಾರುವಲ್ಲಿ ಸಿಗುತ್ತದೆ. ಇದು ನೋಡಲು
ಬಿಲ್ವೆ ಮರದ ಕಾಯಿಯಂತೆ ಕಂಡು ಬರುವುದು. ಇದರ ತೊಗಟೆ ಹೊಡೆದಾಗ ಒಳಗಡೆ ತಿರುಳು
ಸಿಗುವುದು.
100ಗ್ರಾಂ ಬೇಲದ ಹಣ್ಣಿನಲ್ಲಿ ಇಷ್ಟೆಲ್ಲಾ
ಪೋಷಕಾಂಶಗಳಿವೆ
18ಗ್ರಾಂ ಕ್ಯಾಲೋರಿ
3ಗ್ರಾಂ ಕೊಬ್ಬಿನಂಶ
7 ಗ್ರಾಂ ಪ್ರೊಟೀನ್
ವಿಟಮಿನ್ ಸಿ
ವಿಟಮನ್ ಬಿ
ಕ್ಯಾಲ್ಸಿಯಂ
ರಂಜಕ
ಖನಿಜಾಂಶಗಳು ದೊರೆಯುತ್ತದೆ.
ಈ ಹಣ್ಣಿನ ಪ್ರಯೋಜನವೇನು?
- ಬೇಸಿಗೆಗೆ ತುಂಬಾ ಒಳ್ಳೆಯದು, ದೇಹದ ಉಷ್ಣಾಂಶ ಕಾಪಾಡುವಲ್ಲಿ ತುಂಬಾನೇ ಸಹಕಾರಿ: ಈ ಬೇಸಿಗೆಯಲ್ಲಿ ಅಂತೂ ಸೆಕೆ ತುಂಬಾನೇ ಇದೆ, ಇಂಥ ಆಹಾರಗಳ ಸೇವನೆ ಕಡೆಗೆ ಹೆಚ್ಚಿನ ಗಮನಹರಿಸಬೇಕು.
- ಈ ಹಣ್ಣು ಸೇವನೆಯಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು: ಬೇಸಿಗೆಯಲ್ಲಿ ಈ ತಂಪು ಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಹೊಟ್ಟೆ ನೋವು ಮುಂತಾದ ಸಮಸ್ಯೆ ತಡೆಗಟ್ಟುತ್ತದೆ.
- ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು
- ಉಷ್ಣ ಹೆಚ್ಚಾದಾಗ ಉಂಟಾಗುವ ಹೊಟ್ಟೆನೋವಿಗೆ ಒಳ್ಳೆಯ ಮದ್ದು
- ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು: ಇದರ ಎಣ್ಣೆ ಮೈಗೆ ಹಚ್ಚುವುದರಿಂದ ತ್ವಚೆ ಹೊಳಪಿನಿಂದ ಕೂಡಿರುತ್ತದೆ. ಹಣ್ಣಿನ ತೊಗಟೆ, ತಿರುಳು, ಎಲೆ ಎಲ್ಲವನ್ನು ಎಣ್ಣೆ ಹಾಕಿ ಕಾಯಿಸಿ ಬಳಸಲಾಗುವುದು.
- ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
- ಮಧುಮೇಹಿಗಳಿಗೂ ತುಂಬಾನೇ ಒಳ್ಳೆಯದು
ಬೇಲದ ಹಣ್ಣಿನ ಮರ ಮನೆಯಲ್ಲಿದ್ದರೆ ದೊರೆಯುವ ಪ್ರಯೋಜನ
- ತಿರುಳನ್ನು ಬಳಸಿ ಪಾನಕ ಮಾಡಬಹುದು, ಇನ್ನು ನೀವು ತಿರುಳು ಒಣಗಿಸಿಟ್ಟು ನಿಮಗೆ ಬೇಕಾದಾಗ ಪಾನಕ ಬಳಸಬಹುದು
- ಇನ್ನು ಇದರ ತಿರುಳು ಒಣಗಿಸಿಟ್ಟರೆ ಅದನ್ನು ಸ್ವಲ್ಪ ಮಜ್ಜಿಗೆಗೆ ಹಾಕಿ ಕುಡಿಯಬಹುದು, ಇದರಿಂದ ಜೀರ್ಣಶಕ್ತಿಗೆ ಒಳ್ಳೆಯದು
- ಇನ್ನು ಅತಿಸಾರ, ಆಮಶಂಕೆಗೂ ಇದು ಅತ್ಯುತ್ತಮವಾದ ಮದ್ದು
- ಬೇಲದ ಮರದ ತೊಗಟೆ, ಹೂವು, ಹಣ್ಣಿನ ತಿರುಳು ಬಳಸಿ ಕಾಯಿಸಿದ ಎಣ್ಣೆಯನ್ನು ತ್ವಚೆಗೆ ಹಚ್ಚಿದರೆ ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಇದರ ಪಾನಕ ರಾಮ ನವಮಿಗೆ ಮಾತ್ರ ಸೀಮಿತ ಮಾಡಬೇಡಿ, ಈ ಪಾನಕವನ್ನು ವಾರದಲ್ಲಿ ಎರಡು ಬಾರಿಯಾದರೂ ಸೇವಿಸಿ, ಇದರಿಂದ ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ.



Click it and Unblock the Notifications