Latest Updates
-
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ? -
30 ವರ್ಷ ದಾಟಿದ್ರಾ? ಈ 5 ಅಭ್ಯಾಸಗಳನ್ನು ತಕ್ಷಣ ಬದಲಿಸಿ.. ಜೀವನಪೂರ್ತಿ ಫಿಟ್ ಆಗಿರಿ! -
Tata: ಅಬ್ಬರಿಸಿದ ಟಾಟಾ.. ಮುಗಿಬಿದ್ದ ಜನ.. ಈ ಗುಣಮಟ್ಟದ ಕಾರು ಮತ್ತೆ ನಂ.1.. ಕೇವಲ 7 ಲಕ್ಷ ರೂಪಾಯಿ! -
Happy Holi 2026: ನಿಮ್ಮ ಪ್ರೀತಿಪಾತ್ರರಿಗೆ ಕಳಿಸಿ ಈ ಸ್ಪೆಷಲ್ ಶುಭಾಶಯಗಳು! ಸ್ನೇಹ, ಪ್ರೀತಿ, ಸಂತೋಷ ತುಂಬಿದ ಮೆಸೇಜ್ ಇಲ್ಲಿವೆ -
ಹಸಿ ಬಟಾಣಿ ಬಳಸಿ ಖಸ್ತ ಪೂರಿ ಹೀಗೆ ಮಾಡಿ.. ಪ್ರತಿ ಪುರಿಯೂ ಹೂವಿನಂತೆ ಉಬ್ಬಿ ಬರುತ್ತೆ! ಸೂಪರ್ ರುಚಿ, 15 ನಿಮಿಷಗಳಲ್ಲಿ ರೆಡಿ! -
ಈ ದಿನ ಕೌಟುಂಬಿಕ ಸುಖ ಪ್ರಾಪ್ತಿ! ಪ್ರೇಮ ಜೀವನದಲ್ಲಿ ತೊಂದರೆಗಳು -
March 02 Horoscope: ಸಾಲದ ಕುರಿತಾದ ಚಿಂತೆಯೊಂದು ದೂರಾಗಲಿದೆ! -
ಮಾರ್ಚ್ನಲ್ಲಿ ಸೂರ್ಯ-ಕೇತು ಸಮನ್ವಯ ಚಲನೆ: ಮೂರು ರಾಶಿಯವರ ಬದುಕಲ್ಲಿ ಅದೃಷ್ಟ! -
Vijay–Sangeetha Divorce Sparks Row: Trisha Link Rumors and Jyothika’s Old Comment Go Viral
ಅಕ್ಕಿ ಇಡ್ಲಿಗೆ ಹೇಳಿ ಗುಡ್ ಬೈ! ಹೆಸರುಕಾಳು ಬಳಸಿ ಮಾಡಿ ಟೇಸ್ಟಿ & ಹೆಲ್ದಿ ಇಡ್ಲಿ.. ತೂಕವೂ ಇಳಿಯುತ್ತೆ
ಪ್ರತಿದಿನದ ಅಕ್ಕಿ ಇಡ್ಲಿಗೆ ಗುಡ್ ಬೈ ಹೇಳಿ! ಕೇವಲ ಹಸಿರು ಹೆಸರುಕಾಳನ್ನು ಬಳಸಿ ಮಾಡುವ ಅತ್ಯಂತ ರುಚಿಕರ ಮತ್ತು ಪೌಷ್ಟಿಕಾಂಶಯುಕ್ತ 'ಹೆಸರುಕಾಳು ಇಡ್ಲಿ' ಮಾಡಿ ನೋಡಿ. ಸಿಂಪಲ್ ರೆಸಿಪಿ ಇಲ್ಲಿದೆ. ತೂಕ ಇಳಿಸಲು ಮತ್ತು ಪ್ರೋಟೀನ್ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಇದು ಸುಲಭ ಹಾಗೂ ಮೃದುವಾದ ಉಪಾಹಾರದ ಆಯ್ಕೆಯಾಗಿದೆ. ಈ ಲೇಖನದಲ್ಲಿ ಹೆಸರುಕಾಳು ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನವನ್ನು ತಿಳಿಸಲಾಗಿದೆ.
ಆರೋಗ್ಯಕರ ಬದುಕಿಗೆ ಬೆಳಗ್ಗಿನ ತಿಂಡಿ ಅತಿ ಮುಖ್ಯ. ದಿನವೂ ಅಕ್ಕಿ-ಉದ್ದಿನಬೇಳೆ ಇಡ್ಲಿ ಸಾಕಿ ಅನಿಸಿದರೆ, 'ಹೆಸರುಕಾಳು ಇಡ್ಲಿ' (Green Moong Idli) ಉತ್ತಮ ಪರ್ಯಾಯ. ಇದು ರುಚಿಕರ ಜೊತೆಗೆ ಪೌಷ್ಟಿಕವೂ ಹೌದು. ಪ್ರೋಟೀನ್ ಮತ್ತು ಫೈಬರ್ ನಿಂದ ಸಮೃದ್ಧವಾದ ಹೆಸರುಕಾಳು, ತೂಕ ಇಳಿಸುವವರಿಗೆ (Weight Loss) ಹಾಗೂ ಮಧುಮೇಹಿಗಳಿಗೆ ರಾಮಬಾಣ. ಕಡಿಮೆ ಸಾಮಗ್ರಿಗಳಲ್ಲಿ ಸುಲಭವಾಗಿ ತಯಾರಿಸುವ ಈ ರೆಸಿಪಿ (Green Moong Idli Recipe) ಇಲ್ಲಿದೆ.

ಹೆಸರುಕಾಳು ಇಡ್ಲಿಗೆ ಬೇಕಾಗುವ ಸಾಮಗ್ರಿಗಳು
• ನೆನೆಸಿದ ಹೆಸರುಕಾಳು - ಒಂದು ಕಪ್
• ರವೆ (ಚಿರೋಟಿ / ಸೂಜಿ) - 1/2 ಕಪ್
• ಮೊಸರು - 1/2 ಕಪ್
• ಹಸಿ ಮೆಣಸಿನಕಾಯಿ - 1 ಅಥವಾ 2
• ಶುಂಠಿ - ಸ್ವಲ್ಪ
• ಉಪ್ಪು - ರುಚಿಗೆ ತಕ್ಕಷ್ಟು
• ಅಡುಗೆ ಸೋಡಾ (ಅಥವಾ ಈನೋ) - ಒಂದು ಚಮಚ
• ಎಣ್ಣೆ - ಇಡ್ಲಿ ತಟ್ಟೆಗೆ
• ನೀರು - ಅಗತ್ಯಕ್ಕೆ ತಕ್ಕಷ್ಟು
ಹೆಸರುಕಾಳು ಇಡ್ಲಿ ತಯಾರಿಸುವ ವಿಧಾನ
- ಮೊದಲು ಹೆಸರುಕಾಳನ್ನು ಚೆನ್ನಾಗಿ ತೊಳೆದು ಐದರಿಂದ ಆರು ಗಂಟೆ ಅಥವಾ ಇಡೀ ರಾತ್ರಿ ನೆನೆಸಿಡಿ. ಹೆಸರುಕಾಳು ಚೆನ್ನಾಗಿ ನೆನೆದರೆ ಇಡ್ಲಿ ಮೃದುವಾಗಿ ಬರುತ್ತದೆ.
- ನೆನೆಸಿದ ಹೆಸರುಕಾಳನ್ನು ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ ಹಸಿಮೆಣಸಿನಕಾಯಿ, ಶುಂಠಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ. ಈ ಹಸಿರು ಮಿಶ್ರಣ ಆಕರ್ಷಕವಾಗಿ ಕಾಣುತ್ತದೆ.
- ಪೇಸ್ಟ್ ಅನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿ. ಅದಕ್ಕೆ ರವೆ, ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಇಡ್ಲಿ ಹಿಟ್ಟಿನ ಹದಕ್ಕೆ ಬೇಕಾದಷ್ಟು ನೀರು ಹಾಕಿ. ರವೆ ನೀರು ಹೀರಿಕೊಳ್ಳಲು ಮಿಶ್ರಣವನ್ನು ಹತ್ತು ಅಥವಾ ಹದಿನೈದು ನಿಮಿಷ ಮುಚ್ಚಿಡಿ.
- ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ. ಹಿಟ್ಟಿಗೆ ಅಡುಗೆ ಸೋಡಾ ಸೇರಿಸಿ ನಿಧಾನವಾಗಿ ಬೆರೆಸಿ (ಸೋಡಾ ಹಾಕಿದ ಕೂಡಲೇ ಹಿಟ್ಟು ಉಬ್ಬುತ್ತದೆ).
- ಈಗ ಇಡ್ಲಿ ತಟ್ಟೆಗೆ ಎಣ್ಣೆ ಹಚ್ಚಿ, ಹಿಟ್ಟು ಹಾಕಿ. ಮಧ್ಯಮ ಉರಿಯಲ್ಲಿ ಹನ್ನೆರಡು ಅಥವಾ ಹದಿನೈದು ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ.
- ಇಡ್ಲಿ ಬೆಂದ ನಂತರ ಪಾತ್ರೆಯನ್ನು ಕೆಳಗಿಳಿಸಿ ತಣ್ಣಗಾಗಲು ಬಿಡಿ. ನಂತರ ಚಮಚದಿಂದ ಇಡ್ಲಿಗಳನ್ನು ತೆಗೆಯಿರಿ. ಈಗ ಬಿಸಿಬಿಸಿ ಹೆಸರುಕಾಳು ಇಡ್ಲಿ (Moong Dal Idli) ಸವಿಯಲು ಸಿದ್ಧ!
ಯಾರೊಂದಿಗೆ ಸವಿಯಬೇಕು?
ಈ ಮೃದು ಹೆಸರುಕಾಳು ಇಡ್ಲಿಯನ್ನು ಕಾಯಿ ಚಟ್ನಿ, ಶುಂಠಿ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಸವಿಯಬಹುದು. ಮಕ್ಕಳಿಗೆ ಲಂಚ್ ಬಾಕ್ಸ್‌ನಲ್ಲಿ ಇದು ಆರೋಗ್ಯಕರ ಆಯ್ಕೆ.
ಆರೋಗ್ಯಕರ ಪ್ರಯೋಜನಗಳು
- ಹೆಸರುಕಾಳು ಇಡ್ಲಿ ಆರೋಗ್ಯಕ್ಕೆ ಹಲವು ಪ್ರಯೋಜನ ನೀಡುತ್ತದೆ.
- ಅಧಿಕ ಪ್ರೋಟೀನ್ ಸ್ನಾಯುಗಳ ಬೆಳವಣಿಗೆಗೆ ಸಹಕಾರಿ.
- ನಾರಿನಂಶ (ಫೈಬರ್) ಹೊಟ್ಟೆ ತುಂಬಿದ ಅನುಭವ ನೀಡಲಿದೆ.
- ಅನಗತ್ಯ ಹಸಿವು ಕಡಿಮೆ ಮಾಡಿ ತೂಕ ಇಳಿಕೆಗೆ ನೆರವಾಗುತ್ತದೆ. ಅಕ್ಕಿ ಇಡ್ಲಿಗಿಂತ ಇದು ಸುಲಭವಾಗಿ ಜೀರ್ಣವಾಗುತ್ತದೆ.



Click it and Unblock the Notifications