Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
10 ವರ್ಷ ಚಿಕ್ಕವರಂತೆ ಕಾಣಿಸಬೇಕಾ? ಈ ಜ್ಯೂಸ್ ಮಾಡಿ ಕುಡಿಯಿರಿ ಸಾಕು..!!
ನೀವು ಬಹಳ ಮೇಕಪ್ ಪ್ರಿಯರಾಗಿದ್ರೆ ಅಥವಾ ನಿಮ್ಮ ಸೌಂದರ್ಯ ಕುರಿತಾಗಿ ಬಹಳ ಕೇರ್ ಮಾಡುವವರಾಗಿದ್ದರೆ ಮಾರುಕಟ್ಟಯಲ್ಲಿ ಸಿಗುವ ಹಲವು ರೀತಿಯ ವಸ್ತುಗಳನ್ನು ಬಳಸುತ್ತಿರುತ್ತೀರಿ. ಅದ್ರಲ್ಲೂ ಎಲ್ಲಾ ಕಂಪನಿಗಳು ಸೌಂದರ್ಯ ವರ್ಧಕಗಳನ್ನು ಕೂಡ ನೀವು ಬಳಸುವುದು ನೋಡಬಹುದು. ಅದ್ರಲ್ಲೂ ಮಹಿಳೆಯರು ತಮ್ಮ ಸೌಂದರ್ಯವನ್ನು ಕಾಪಾಡಲು ಯಾವಾಗಲು ಒಂದು ಹೆಜ್ಜೆ ಮುಂದಿಡುತ್ತಾರೆ.
ಇನ್ನು ಸಣ್ಣ ವಯಸ್ಸಿನಲ್ಲೇ ಹೆಚ್ಚು ವಯಸ್ಸಾದಂತೆ ಕಾಣುವ ಭಯವಿದ್ದರೆ ಅದಕ್ಕೂ ಹಲವು ರೀತಿಯ ಕ್ರೀಮ್ಗಳ ಬಳಸುತ್ತೀರಿ. ಮುಖದಲ್ಲಿ ಸುಕ್ಕುಗಳು ಇಲ್ಲದಂತೆ ನೋಡಿಕೊಳ್ಳುವುದು ಹೇಗೆ ಅನ್ನೋದನ್ನು ನೀವು ಕೂಡ ತಿಳಿದಿರುತ್ತೀರಿ. ಇದಕ್ಕಾಗಿ ದುಬಾರಿ ಬೆಲೆಯ ಕಾಸ್ಮೆಟಿಕ್ಸ್ ಬಳಸುತ್ತಿರಬಹುದು. ಆದ್ರೆ ಮನೆಯಲ್ಲಿ ಸುಲಭವಾಗಿ ನಿಮ್ಮ ವಯಸ್ಸನ್ನು 10 ವರ್ಷ ಚಿಕ್ಕವರಂತೆ ಮಾಡೋದು ಹೇಗೆ ಗೊತ್ತಾ?

ಕೆಲವರು ವಯಸ್ಸಿಗಿಂತಲೂ ಚಿಕ್ಕವರಂತೆ ಕಾಣಿಸುತ್ತಾರೆ. ಆದರೆ ನಾವಿಂದು ಕೇವಲ ಜ್ಯೂಸ್ ಸೇವಿಸುವ ಮೂಲಕ 10 ವರ್ಷ ಚಿಕ್ಕವರಂತೆ ಕಾಣಿಸುವುದು ಹೇಗೆ? ಯಾವ ಜ್ಯೂಸ್ ಸೇವಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ನಮ್ಮ ಚರ್ಮದ ಹೊಳಪು ಹಾಗೆ ಉಳಿಯಬೇಕು ಅಂದ್ರೆ ನಮ್ಮ ದೇಹಕ್ಕೆ ವಿಟಮಿನ್ ಸಿ ಅಗತ್ಯವಿರುತ್ತದೆ. ಹೀಗಾಗಿ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ಅನ್ನು ನಾವು ಸೇವಿಸಬೇಕಾಗುತ್ತದೆ.
ಆದ್ರೆ ಮನೆಯಲ್ಲೇ ಮಾಡುವಂತಹ ಟೊಮೆಟೋ ಜ್ಯೂಸ್ ಕೂಟ ನಿಮ್ಮಲ್ಲಿ ವಯಸ್ಸಾಗುವಿಕೆಯನ್ನು ತಡೆಯಲಿದೆ. ಹಾಗಾದ್ರೆ 10 ವರ್ಷ ಚಿಕ್ಕವರಂತೆ ಕಾಣಲು ಹೇಗೆ ಈ ಟೊಮೆಟೋ ಜ್ಯೂಸ್ ಸಹಕಾರಿಯಾಗಲಿದೆ ಎಂಬುದನ್ನು ತಿಳಿದುಕೊಳ್ಳಿ. ಹಾಗೆ ಈ ಜ್ಯೂಸ್ ಮಾಡೋದು ಹೇಗೆ ನೋಡಿ.
ಮೊದಲಿಗೆ ಹಣ್ಣಾಗಿರುವ 2 ರಿಂದ 3 ಟೊಮೆಟೋವನ್ನು ತೆಗೆದುಕೊಳ್ಳಿ. ಮೊದಲು ತೊಳೆದು ಅದರ ತೊಟ್ಟಿನ ಭಾಗವನ್ನು ಕತ್ತರಿಸಿ ತೆಗೆದುಕೊಳ್ಳಿ. ಈಗ ಟೊಮೆಟೋವನ್ನು ಒಂದು ಪಾತ್ರೆಗೆ ಹಾಕಿ ಬಳಿಕ ಮುಳುಗುವಷ್ಟು ನೀರು ಹಾಕಿ ಒಲೆ ಮೇಲೆ ಇಡಿ. ನಂತರ ಕುದಿ ಬರಲು ಬಿಡಬೇಕು. 5 ನಿಮಿಷ ಕುದಿಬಂದ ಬಳಿಕ ಒಲೆಯಿಂದ ಇಳಿಸಿ ಬಿಸಿ ನೀರು ತೆಗೆದು ಮತ್ತೆ ತಣ್ಣೀರು ಹಾಕಿ ಇಡಿ. 2 ನಿಮಿಷ ಇಟ್ಟರೆ ಇದು ತಣ್ಣಗಾಗುತ್ತದೆ.
ಅನಂತರ ಟೊಮೆಟೋ ಹಣ್ಣಿನ ಸಿಪ್ಪೆಗಳು ಸುಲಭವಾಗಿ ಬರುತ್ತದೆ. ಈ ಸಿಪ್ಪೆಯನ್ನು ತೆಗೆದು ಬರೀ ಹಣ್ಣನ್ನು ಒಂದು ಕಡೆ ಇಟ್ಟುಕೊಳ್ಳಿ. ಸಿಪ್ಪೆ ತೆಗೆದು ಬಳಿಕ ಮಧ್ಯದಲ್ಲಿ ಕತ್ತರಿಸಿಕೊಳ್ಳಿ. ನಂತರ ಜ್ಯೂಸ್ ಮಾಡುವಂತಹ ಮಿಕ್ಸರ್ ಜಾರ್ಗೆ ಹಾಕಿಕೊಳ್ಳಿ. ಅನಂತರ ಅರ್ಧ ನಿಂಬೆ ರಸ ಹಿಂಡಿಕೊಳ್ಳಿ. ಹಾಗೆ ಸಕ್ಕರೆ ಅಥವಾ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ.
ಹಾಗೆ ಇದಕ್ಕೆ ಸ್ವಲ್ಪವೇ ಸ್ವಲ್ಪ ನೀರು ಸಹ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿದ ಬಳಿಕ ಒಮ್ಮೆ ಜರಡಿ ಹಿಡಿದು ಫಿಲ್ಟರ್ ಮಾಡಿಕೊಳ್ಳಿ. ಕೇವಲ ಟೊಮೆಟೋ ಜ್ಯೂಸ್ ಅನ್ನು ತೆಗೆದುಕೊಳ್ಳಿ. ಇದನ್ನು ನೀವು ಫ್ರಿಡ್ಜ್ನಲ್ಲಿಟ್ಟು ತಣ್ಣಗಾದ ಬಳಿಕ ಕುಡಿಯಬಹುದು. ಹಾಗೆ ದಪ್ಪವಿದ್ದರೆ ಸ್ವಲ್ಪ ನೀರು ಸಹ ಸೇರಿಸಿಕೊಂಡು ಮಿಕ್ಸ್ ಮಾಡಿ ಕುಡಿಯಬಹುದು. ಈ ಜ್ಯೂಸ್ ಅನ್ನು ವಾರದಲ್ಲಿ 4ರಿಂದ 5 ಬಾರಿ ಮಾಡಿ ಕುಡಿಯುವುದರಿಂದ ನಿಮ್ಮಲ್ಲಿ ವಿಟಮಿನ್ ಸಿ ಹೆಚ್ಚಳವಾಗೋ ಜೊತೆಗೆ ನಿಮ್ಮ ಚರ್ಮದ ಹೊಳಪು ಕಾಪಾಡಲು ಬಹಳ ಉತ್ತಮ.
ಇದು ನೀವು 10 ವರ್ಷ ಚಿಕ್ಕವರಂತೆ ಕಾಣಿಸಲು ಸಹಾಯ ಮಾಡಲಿದೆ. ಆದಷ್ಟು ಸಕ್ಕರೆ ಬಳಸದೆ ಈ ಜ್ಯೂಸ್ ಮಾಡಿ. ಅದರ ಬದಲು ಜೇನು ತುಪ್ಪ ಬೆಲ್ಲ ಸ್ವಲ್ಪ ಪ್ರಮಾಣದಲ್ಲಿ ಬಳಸಬಹುದು.



Click it and Unblock the Notifications