Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಲಗಿ 1 ನಿಮಿಷದಲ್ಲೇ ಗಾಢ ನಿದ್ರೆ ಬರ್ಬೇಕಾ? ಸುಲಭದ ಪರಿಹಾರ ಇದು!
ಇತ್ತೀಚಿಗೆ ನಿದ್ರಾಹೀನತೆ ಸಮಸ್ಯೆ ಗಾಢವಾಗಿ ಕಾಡುತ್ತಿರುವ ಸಮಸ್ಯೆ. ನಗರೀಕರಣ, ಜೀವನಶೈಲಿಯ ಬದಲಾವಣೆಗಳು, ಒತ್ತಡ ಮತ್ತು ಕಳಪೆ ಆಹಾರ, ಸೇರಿದಂತೆ ಹಲವು ಕಾರಣಗಳಿಂದ ಈ ಸಮಸ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ವಯಸ್ಕ ಜನರಲ್ಲಿ ಸುಮಾರು 33ರಷ್ಟು ಜನರು ನಿದ್ರಾಹೀನತೆಯ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ವರದಿಯೊಂದು ತಿಳಿಸುತ್ತದೆ.
ಅದ್ರಲ್ಲೂ ವಯಸ್ಕರು ಹಾಗೂ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಎಂದು ವರದಿಯಾಗಿದೆ. ಶೇ.37ರಷ್ಟು ಮಹಿಳೆಯರಲ್ಲಿ ನಿದ್ರಾಹೀನತೆ ಸಮಸ್ಯೆ ಇದೆ ಎಂದು ಅಧ್ಯಯನಗಳು ತಿಳಿಸಿವೆ. ಇದು ಹಲವು ಬಾಹ್ಯ ಹಾಗೂ ಆಂತರಿಕ ಕಾರಣಗಳಿಂದಾಗಿ ಉಂಟಾಗುವ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಸಂಬಂಧಿಸಿದೆ. ಆದ್ರೆ ನಿದ್ರಾಹೀನತೆಯನ್ನು ನಾವು ಸುಲಭವಾಗಿ ನಿವಾರಿಸಿಕೊಳ್ಳಬಹುದು.

ದಿನವೆಲ್ಲಾ ಚಟುವಟಿಕೆಯಿಂದ ಇದ್ದು ರಾತ್ರಿ ಮಲಗಿದಾಗ ನಿದ್ರೆ ಬಾರದ ಸ್ಥಿತಿ ಹಲವು ಅನಾರೋಗ್ಯ ಸಮಸ್ಯೆಗಳ ತರಲು ಕಾರಣವಾಗಲಿದೆ. ಹಾಗೆ ನಿದ್ರೆ ಬರುವಂತೆ ಮಾಶಡಲು ನೀವು ಸಹ ಹಲವು ರೀತಿಯ ಪರಿಹಾರೋಪಾಯ ಮಾಡಿರಬಹುದು. ಹಾಗೆ ನಾವಿಂದು ಸುಲಭವಾಗಿ ಮನೆಯಲ್ಲಿ ಮಾಡಿ ಸವಿಯುವ ಈ ಪದಾರ್ಥವು ನಿಮ್ಮ ನಿದ್ರೆಗೆ ಸಹಕಾರಿಯಾಗಲಿದೆ.
ಮಗಲಗಿದ ತಕ್ಷಣ ನಿದ್ರೆ ಬರಬೇಕು ಎಂದರೆ ಈ ರೀತಿ ಸುಲಭದ ಖಾದ್ಯವೊಂದನ್ನು ಮಾಡಿ ಸವಿದು ನೋಡಿ. ಈ ರುಚಿಯ ಪಾಯಸ ನಿಮ್ಮ ನಿದ್ರೆಗೆ ಸಹಕಾರಿಯಾಗಲಿದೆ. ಹಾಗಾದ್ರೆ ಈ ಪಾಯಸ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ನಿದ್ರೆಗೆ ಸಹಕಾರಿಯಾಗುವಂತಹ ಪಾಯಸ ಮಾಡಲು ಬೇಕಾಗುವ
ಪದಾರ್ಥಗಳು
- ಗಸೆಗಸೆ
- ಹಾಲು
- ಏಲಕ್ಕಿ
- ಬಾದಾಮಿ
ನಿದ್ರೆಗೆ ಸಹಕಾರಿಯಾಗುವಂತಹ ಪಾಯಸ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಗಸೆಗಸೆ ಹಾಕಿಕೊಂಡು ಬಳಿಕ ಡ್ರೈ ಫ್ರೈ ಮಾಡಿಕೊಳ್ಳಬೇಕು. 1 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಇದನ್ನು ಒಂದು ಬೌಲ್‌ಗೆ ಹಾಕಿ ತಣ್ಣಗಾಗಲು ಬಿಡಿ. ಹಾಗೆ 5 ಬಾದಾಮಿ ಪುಡಿ ಮಾಡಿಟ್ಟುಕೊಳ್ಳಿ. ಈಗ ಸಣ್ಣ ಮಿಕ್ಸಿ ಜಾರ್‌ಗೆ ಹುರಿದುಕೊಂಡ ಗಸೆಗಸೆ ಹಾಕಿಕೊಂಡು ಪುಡಿ ಮಾಡಿ ಬಾದಾಮಿ, ಏಲಕ್ಕಿ ಸಹ ಹಾಕಿಕೊಂಡು ರುಬ್ಬಿ ಪುಡಿ ಮಾಡಿಕೊಳ್ಳಬೇಕು.
ಈಗ ಒಂದು ಗ್ಲಾಸ್ ತೆಗೆದುಕೊಂಡು ಅದಕ್ಕೆ 2 ಸ್ಪೂನ್ ರುಬ್ಬಿದ ಪುಡಿ ಹಾಕಿಕೊಳ್ಳಿ. ನಂತರ ಅದಕ್ಕೆ ಬಿಸಿ ಮಾಡಿರುವ ಹಾಲನ್ನು ಹಾಕಿಕೊಳ್ಳಿ. ಹಾಲು ಬಿಸಿಯಾಗಿರಬೇಕು. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 10 ನಿಮಿಷ ಹಾಗೆಯೇ ಬಿಡಿ.
ಅನಂತರ ಇದಕ್ಕೆ ಚಿಟಿಕೆ ಅರಶಿಣ ಪುಡಿ ಅಥವಾ ಕೇಸರಿ ಸಹ ಹಾಕಿಕೊಂಡು ಮಿಕ್ಸ್ ಮಾಡಿ ಕುಡಿಯಲು ನೀಡಬಹುದು. ಇದನ್ನು ನಿತ್ಯ ಮಲಗುವ ಮುನ್ನ ಇದನ್ನು ಕುಡಿದರೆ ನಿದ್ರೆ ಸಂಪೂರ್ಣ ಆಗಲಿದೆ.
ಅದ್ರಲ್ಲೂ ಬೇಗ ಊಟ ಮಾಡಿ ರಾತ್ರಿ 8 ಗಂಟೆ ಒಳಗೆ ಇದನ್ನು ಸೇವಿಸಬೇಕು. ಹೀಗೆ ನಿತ್ಯ ಮಾಡುವುದು ನಿಮ್ಮ ನಿದ್ರಾಹೀನತೆ ಸಮಸ್ಯೆಯನ್ನು ದೂರಾಗಿಸಲಿದೆ, ಇದು ತಕ್ಷಣ ನಿಮಗೆ ನಿದ್ರೆ ತರುವಂತಹ ವಿಶೇಷ ಅಂಶಗಳ ಹೊಂದಿದೆ. ನಿತ್ಯವೂ ಈ ಪಾಯಸ ಕುಡಿಯೋದ್ರಿಂದ ನಿದ್ರೆ ಸಮಸ್ಯೆ ಬಗೆಹರಿಯಲು ಸಾಮಾನ್ಯವಾಗಿ ನಿದ್ರೆ ಅಡ್ಡಿಯಿಂದ ಉಂಟಾಗುವಂತಹ ಆಯಾಸ ಸಹ ಇದರಿಂದ ನಿವಾರಣೆಯಾಗಲಿದೆ. ಮಕ್ಕಳಿಗೂ ಕೂಡ ಈ ಪಾಯಸ ನೀಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಯನ್ನು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications