For Quick Alerts
ALLOW NOTIFICATIONS  
For Daily Alerts

ಗಣೇಶ ಹಬ್ಬಕ್ಕೆ ಸ್ಪೆಷಲ್- ಆಲೂ ಪಲ್ಯ ರೆಸಿಪಿ

Posted By: Lekhaka
|

ಆರೋಗ್ಯದ ವಿಚಾರದಲ್ಲಿ ಆಲೂಗಡ್ಡೆ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಸ್ವಲ್ಪ ಗ್ಯಾಸ್ ಹೆಚ್ಚಿಸುವ ತರಕಾರಿಯಾಗಿದ್ದರೂ ಸಹ ಇದರೊಂದಿಗೆ ಸೇರಿಸುವ ಮಸಾಲ ಪದಾರ್ಥಗಳು ಸಮತೋಲನವನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ. ಆಲೂಗಡ್ಡೆಯ ಪದಾರ್ಥಗಳು ಹೆಚ್ಚು ರುಚಿಯನ್ನು ನೀಡುತ್ತವೆ. ಅದಕ್ಕಾಗಿಯೇ ಸಾಮಾನ್ಯ ಎಲ್ಲರೂ ಆಲೂಗಡ್ಡೆಯ ಅಡುಗೆಯನ್ನು ಮೆಚ್ಚುತ್ತಾರೆ. ನೀವೂ ಆಲೂಗಡ್ಡೆಯ ಪ್ರಿಯರೇ ಆಗಿದ್ದರೆ ವ್ರತ ವಾಲಾ ಆಲೂ ಸಬ್ಜಿ(ಆಲೂ ಪಲ್ಯ) ಹೊಸ ರುಚಿಯ ಬಗ್ಗೆ ತಿಳಿಯಿರಿ.

ವ್ರತ ವಾಲಾ ಆಲೂ ಸಬ್ಜಿ (ವ್ರತಕ್ಕೆ ಮಾಡುವ ಆಲೂ ಪಲ್ಯ) ಉತ್ತರ ಭಾರತದ ಪ್ರಸಿದ್ಧ ಪಾಕವಿಧಾನದಲ್ಲಿ ಒಂದು. ಸಾಂಪ್ರದಾಯಿಕ ಭಕ್ಷ್ಯವಾದ ಇದನ್ನು ಉಪವಾಸದ ಸಂದರ್ಭದಲ್ಲಿ ಹಾಗೂ ಊಟದ ಒಂದು ಭಾಗವಾಗಿ ಸೇವಿಸಬಹುದು. ಆಲೂಗಡ್ಡೆಯೊಂದಿಗೆ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಮಸಾಲ ಪದಾರ್ಥಗಳು ಸೇರಿಕೊಂಡು ಉತ್ತಮ ರುಚಿಯನ್ನು ನೀಡುತ್ತವೆ. ಇದನ್ನು ಚಪಾತಿ, ರೊಟ್ಟಿ, ದೋಸೆ ಹಾಗೂ ಅನ್ನದ ಜೊತೆಗೂ ಸವಿಯಬಹುದು. ಒಮ್ಮೆ ತಿಂದರೆ ನಾಲಿಗೆ ಮತ್ತೆ ಮತ್ತೆ ಚಪ್ಪರಿಸುವಂತೆ ಮಾಡುತ್ತದೆ. ಹೊಸ ರುಚಿಯಾದ ವ್ರತ ವಾಲಾ ಆಲೂ ಸಬ್ಜಿಯ ಪಾಕವಿಧಾನದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ ಬೋಲ್ಡ್ ಸ್ಕೈ ನೀಡುವ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ನೋಡಿ.

vrat wale aloo recipe
ವ್ರತ ವಾಲಾ ಆಲೂ ರೆಸಿಪಿ | ವ್ರತಕ್ಕೆ ಮಾಡುವ ಆಲೂ ಪಲ್ಯ ಸ್ಟೆಪ್ ಸ್ಟೆಪ್ ಟಿಪ್ಸ್ | ಆಲೂಗಡ್ಡೆ ಕರಿ ರೆಸಿಪಿ | ಉಪವಾಸಕ್ಕೆ ಮಾಡುವ ರೆಸಿಪಿ | ವ್ರತಕ್ಕೆ ಮಾಡುವ ಆಲೂ ರೆಸಿಪಿ ವಿಡಿಯೋ
ವ್ರತ ವಾಲಾ ಆಲೂ ರೆಸಿಪಿ | ವ್ರತಕ್ಕೆ ಮಾಡುವ ಆಲೂ ಪಲ್ಯ ಸ್ಟೆಪ್ ಸ್ಟೆಪ್ ಟಿಪ್ಸ್ | ಆಲೂಗಡ್ಡೆ ಕರಿ ರೆಸಿಪಿ | ಉಪವಾಸಕ್ಕೆ ಮಾಡುವ ರೆಸಿಪಿ | ವ್ರತಕ್ಕೆ ಮಾಡುವ ಆಲೂ ರೆಸಿಪಿ ವಿಡಿಯೋ
Prep Time
5 Mins
Cook Time
30M
Total Time
35 Mins

Recipe By: ಮೀನಾ ಭಂಡಾರಿ

Recipe Type: ಸೈಡ್ ಡಿಶ್

Serves: 2 ಮಂದಿಗೆ

Ingredients
  • ತೊಳೆದುಕೊಂಡ ಆಲೂಗಡ್ಡೆ - 2

    ನೀರು - 1, 1/2 ಕಪ್

    ಎಣ್ಣೆ - 1 ಟೇಬಲ್ ಚಮಚ

    ಜೀರಿಗೆ -1 ಟೀ ಚಮಚ

    ಖಾರದ ಪುಡಿ/ ಕೆಂಪು ಮೆಣಸಿನ ಪುಡಿ - 1ಟೀ ಚಮಚ

    ಅರಿಶಿನ - 1/4 ಟೀ ಚಮಚ

    ಕೊತ್ತಂಬರಿ ಬೀಜ - 3 ಟೀ ಚಮಚ

    ಕಲ್ಲುಪ್ಪು - 1 ಟೀಚಮಚ

    ಜೀರಿಗೆ ಪುಡಿ - 1 ಟೀ ಚಮಚ

    ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - ಅಲಂಕಾರಕ್ಕೆ

Red Rice Kanda Poha
How to Prepare
  • 1. ಕುಕ್ಕರ್‌ನಲ್ಲಿ 2 ಕಪ್ ನೀರನ್ನು ಹಾಕಿ ಆಲೂಗಡ್ಡೆಯನ್ನು ಬೇಯಲು ಇಡಿ.

    2. ಕುಕ್ಕರ್‍ಅನ್ನು 3-4 ಸೀಟಿ ಕೂಗಿಸಿ, ತಣಿಯಲು ಬಿಡಿ.

    3. ಕುಕ್ಕರ್ ನಲ್ಲಿರುವ ಬೆಂದ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯಬೇಕು.

    4. ಆಲೂಗಡ್ಡೆಯನ್ನು ಹೋಳು ಹೋಳಾಗಿ ಹೆಚ್ಚಿಕೊಳ್ಳಬೇಕು.

    5. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

    6. ಜೀರಿಗೆ ಮತ್ತು ಹಸಿಮೆಣಸಿನಕಾಯನ್ನು ಸೇರಿಸಿ.

    7. ಇವು ಎರಡು ಹುರಿದು ಚಟ ಪಟ ಎನ್ನುವಾಗ, ಅರಿಶಿನ ಮತ್ತು ಖಾರದ ಪುಡಿಯನ್ನು ಸೇರಿಸಿ.

    8. ನಂತರ ಕೊತ್ತಂಬರಿ ಬೀಜವನ್ನು ಹಾಕಿ ಚೆನ್ನಾಗಿ ಹುರಿಯಿರಿ.

    9. ನಂತರ ಅರ್ಧ ಕಪ್ ನೀರನ್ನು ಹಾಕಿ, 2 ನಿಮಿಷ್ ಚೆನ್ನಾಗಿ ಕುದಿಯಲು ಬಿಡಿ.

    10. ಈಗ ಹೆಚ್ಚಿಕೊಂಡ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

    11. ಕಲ್ಲುಪ್ಪನ್ನು ಸೇರಿಸಿ ಮಿಶ್ರಗೊಳಿಸಿ.

    12. ನೀರು ಆವಿಯಾಗಿ ಮಸಾಲವೆಲ್ಲಾ ಆಲೂಗಡ್ಡೆಗೆ ಹೀರಿಕೊಳ್ಳುವ ವರೆಗೆ ಬೇಯಿಸಬೇಕು.

    13. ಜೀರಿಗೆ ಪುಡಿಯನ್ನು ಸೇರಿಸಿ ಮಿಶ್ರಗೊಳಿಸಿ.

    13. ಸವಿಯಲು ನೀಡುವ ಮುನ್ನ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ನೀಡಿ.

Instructions
Nutritional Information

ವ್ರತಕ್ಕೆ ಮಾಡುವ ಆಲೂ ಪಲ್ಯ ಸ್ಟೆಪ್ ಸ್ಟೆಪ್ ಮಾಡುವ ವಿಧಾನ:

1. ಕುಕ್ಕರ್‌ನಲ್ಲಿ 2 ಕಪ್ ನೀರನ್ನು ಹಾಕಿ ಆಲೂಗಡ್ಡೆಯನ್ನು ಬೇಯಲು ಇಡಿ.

vrat wale aloo recipe
vrat wale aloo recipe

2. ಕುಕ್ಕರ್‍ಅನ್ನು 3-4 ಸೀಟಿ ಕೂಗಿಸಿ ತಣಿಯಲು ಬಿಡಿ.

vrat wale aloo recipe

3. ಕುಕ್ಕರ್ ನಲ್ಲಿರುವ ಬೆಂದ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯಬೇಕು.

vrat wale aloo recipe
vrat wale aloo recipe

4. ಆಲೂಗಡ್ಡೆಯನ್ನು ಹೋಳು ಹೋಳಾಗಿ ಹೆಚ್ಚಿಕೊಳ್ಳಬೇಕು.

vrat wale aloo recipe

5. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

vrat wale aloo recipe

6. ಜೀರಿಗೆ ಮತ್ತು ಹಸಿಮೆಣಸಿನಕಾಯನ್ನು ಸೇರಿಸಿ.

vrat wale aloo recipe
vrat wale aloo recipe

7. ಇವು ಎರಡು ಹುರಿದು ಚಟ ಪಟ ಎನ್ನುವಾಗ ಅರಿಶಿನ ಮತ್ತು ಖಾರದ ಪುಡಿಯನ್ನು ಸೇರಿಸಿ.

vrat wale aloo recipe
vrat wale aloo recipe

8. ನಂತರ ಕೊತ್ತಂಬರಿ ಬೀಜವನ್ನು ಹಾಕಿ ಚೆನ್ನಾಗಿ ಹುರಿಯಿರಿ.

vrat wale aloo recipe
vrat wale aloo recipe

9. ನಂತರ ಅರ್ಧ ಕಪ್ ನೀರನ್ನು ಹಾಕಿ 2 ನಿಮಿಷ್ ಚೆನ್ನಾಗಿ ಕುದಿಯಲು ಬಿಡಿ.

vrat wale aloo recipe
vrat wale aloo recipe

10. ಈಗ ಹೆಚ್ಚಿಕೊಂಡ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

vrat wale aloo recipe
vrat wale aloo recipe

11. ಕಲ್ಲುಪ್ಪನ್ನು ಸೇರಿಸಿ ಮಿಶ್ರಗೊಳಿಸಿ.

vrat wale aloo recipe

12. ನೀರು ಆವಿಯಾಗಿ ಮಸಾಲವೆಲ್ಲಾ ಆಲೂಗಡ್ಡೆಗೆ ಹೀರಿಕೊಳ್ಳುವ ವರೆಗೆ ಬೇಯಿಸಬೇಕು.

vrat wale aloo recipe

13. ಜೀರಿಗೆ ಪುಡಿಯನ್ನು ಸೇರಿಸಿ ಮಿಶ್ರಗೊಳಿಸಿ.

vrat wale aloo recipe
vrat wale aloo recipe

14. ಸವಿಯಲು ನೀಡುವ ಮುನ್ನ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ನೀಡಿ.

vrat wale aloo recipe
vrat wale aloo recipe
[ 3.5 of 5 - 48 Users]
X
Desktop Bottom Promotion