Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೋಸೆಯಂತೂ ಅಲ್ಲ! ಆದ್ರೆ ಪೌಷ್ಟಿಕ, ರುಚಿಕರ.. ಒಮ್ಮೆ ತಿನ್ನಿ, ಮತ್ತೆ ಮತ್ತೆ ಮಾಡ್ತೀರಾ!
ಪೌಷ್ಟಿಕ.. ರುಚಿಕರ.. ಮಾಡೋದು ತುಂಬಾ ಈಸಿ! ಪ್ರತಿದಿನ ಬೆಳಗ್ಗೆ ಒಂದೇ ರೀತಿಯ ಟಿಫನ್ ತಿಂದು ಬೇಸರವಾಗಿದೆಯೇ? ಸ್ವಲ್ಪ ಟೇಸ್ಟಿ ಮತ್ತು ಪೌಷ್ಟಿಕ ಉಪಹಾರವನ್ನು ಮಾಡಲು ಬಯಸುವಿರಾ? ಹಾಗಾದರೆ, ವೆಜ್ ಉತ್ತಪ್ಪಮ್ (Veg Uttapam) ನಿಮಗೆ ಉತ್ತಮ ಆಯ್ಕೆ. ವಿವಿಧ ತರಕಾರಿಗಳನ್ನು ಬಳಸಿ ಮಾಡುವ ಇದು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಬೆಳಗ್ಗೆ ಇದನ್ನು ತಿನ್ನುವುದರಿಂದ ದೇಹಕ್ಕೆ ಆ ದಿನ ಬೇಕಾಗುವ ಶಕ್ತಿ ಸಿಗುತ್ತದೆ. ಬನ್ನಿ, ಈ ವೆಜ್ ಉತ್ತಪ್ಪಂ ಮಾಡುವ ಸುಲಭ ವಿಧಾನವನ್ನು (Veg Uttapam Recipe) ತಿಳಿಯೋಣ.
ಉತ್ತಪ್ಪಂ ದಕ್ಷಿಣ ಭಾರತದ ಒಂದು ಜನಪ್ರಿಯ ಖಾದ್ಯವಾಗಿದೆ. ಇದು ಬೆಳಗ್ಗಿನ ಉಪಾಹಾರಕ್ಕೆ ಬಹಳ ಯೋಗ್ಯ ಮತ್ತು ಉತ್ತಮ. ಇದನ್ನು ದೋಸೆಯಂತೆಯೇ ತಯಾರಿಸಲಾಗುತ್ತದೆ. ಆದರೆ, ಇದರ ವಿಶೇಷತೆಯೆಂದರೆ ಇದರಲ್ಲಿ ತರಕಾರಿಗಳನ್ನು ಬಳಸಲಾಗುತ್ತದೆ. ಇದು ಪೌಷ್ಟಿಕ ಮತ್ತು ರುಚಿಕರವಾಗಿರುತ್ತದೆ. ನೀವು ಆರೋಗ್ಯಕರ ಮತ್ತು ರುಚಿಕರವಾದ ಟಿಫನ್ ಆಯ್ಕೆ ಹುಡುಕುತ್ತಿದ್ದರೆ, ವೆಜ್ ಉತ್ತಪ್ಪಂ ಬೆಸ್ಟ್ ಚಾಯ್ಸ್. ಈ ಉತ್ತಪ್ಪಮ್ ಅನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ತಿನ್ನಬಹುದು. ಇದನ್ನು ಮಕ್ಕಳ ಟಿಫನ್ ಬಾಕ್ಸ್ಗೆ ಕೊಡಬಹುದು.

ವೆಜ್ ಉತ್ತಪ್ಪಮ್ ಮಾಡಲು ಬೇಕಾಗುವ ಸಾಮಗ್ರಿಗಳು
• ಅಕ್ಕಿ - 1 ಕಪ್
• ಉದ್ದಿನ ಬೇಳೆ - ½ ಕಪ್
• ಪೋಹಾ - ¼ ಕಪ್ (ಅನ್ನ)
• ಮೆಂತ್ಯ ಬೀಜ - ½ ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ಟೊಮೆಟೊ - 1 (ಸಣ್ಣದಾಗಿ ಹೆಚ್ಚಿದ)
• ಈರುಳ್ಳಿ - 1 ಸಣ್ಣ (ಸಣ್ಣಗೆ ಕತ್ತರಿಸಿ)
• ಹಸಿ ಮೆಣಸಿನಕಾಯಿ - 1 (ಸಣ್ಣಗೆ ಕತ್ತರಿಸಿದ)
• ಕೊತ್ತಂಬರಿ ಸೊಪ್ಪು - ಸಣ್ಣಗೆ ಕತ್ತರಿಸಿದ 2 ರಿಂದ 3 ಚಮಚ
• ತುರಿದ ಕ್ಯಾರೆಟ್ - ½ ಕಪ್
• ಅಡುಗೆ ಎಣ್ಣೆ ಅಥವಾ ತುಪ್ಪ - 2 ರಿಂದ 3 ಚಮಚ
ವೆಜ್ ಉತ್ತಪ್ಪಮ್ ಮಾಡುವ ಸುಲಭ ವಿಧಾನ
ವೆಜ್ ಉತ್ತಪ್ಪಮ್ ಮಾಡುವ ಮೊದಲು, ಅಕ್ಕಿ, ಉದ್ದಿನ ಬೇಳೆ, ಅವಲಕ್ಕಿ ಮತ್ತು ಮೆಂತ್ಯ ಬೀಜಗಳನ್ನು ಪ್ರತ್ಯೇಕವಾಗಿ 4 ರಿಂದ 5 ಗಂಟೆಗಳ ಕಾಲ ನೆನೆಸಿಡಬೇಕು. ಇದಾದ ಬಳಿಕ, ಅವುಗಳನ್ನು ನೀರಿನಿಂದ ತೆಗೆದು (ಮಿಕ್ಸರ್ ಬಳಸಿ) ಪುಡಿಮಾಡಬೇಕು. ಸ್ವಲ್ಪ ನೀರು ಸೇರಿಸಿ ನಯವಾದ ಬ್ಯಾಟರ್ ತಯಾರಿಸಿಕೊಳ್ಳಿ. ಬ್ಯಾಟರ್ ತುಂಬಾ ತೆಳುವಾಗಿರಬಾರದು. ನೆನಪಿರಲಿ, ಇದು ತುಂಬಾ ದಪ್ಪವಾಗಿರಬಾರದು. ಈಗ ಒಂದು ದೊಡ್ಡ ಬಟ್ಟಲು ತೆಗೆದುಕೊಂಡು ಹಿಟ್ಟನ್ನು ಹಾಕಿ, 8 ರಿಂದು 10 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಬಿಡಬೇಕು. ಅದನ್ನು ಬೇಗನೆ ಹುದುಗಿಸಲು, ನೀವು ಅದಕ್ಕೆ ಇನೋ ಸಹ ಹಾಕಬಹುದು.
ಬಳಿಕ, ಹಿಟ್ಟು ಹುದುಗಿದಾಗ ಸಣ್ಣಗೆ ಕತ್ತರಿಸಿದ ಟೊಮ್ಯಾಟೊ, ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ, ಕ್ಯಾರೆಟ್ ಸೇರಿದಂತೆ ಎಲ್ಲಾ ತರಕಾರಿಗಳನ್ನು ತೆಗೆದುಕೊಳ್ಳಿ. ಉತ್ತಪ್ಪಮ್ ಮೇಲೆ ಸುಲಭವಾಗಿ ಹಾಕಲು ಸಾಧ್ಯವಾಗುವಂತೆ ಅವುಗಳನ್ನು ಪಕ್ಕದಲ್ಲಿ ಇಡಿ. ಈಗ, ಗ್ಯಾಸ್ ಆನ್ ಮಾಡಿ ಬಾಣಲೆ (ನಾನ್ ಸ್ಟಿಕ್ ಪ್ಯಾನ್) ಬಿಸಿ ಮಾಡಿ, ಅದರ ಮೇಲೆ ಸ್ವಲ್ಪ ಎಣ್ಣೆ ಹಚ್ಚಿ. ಬಾಣಲೆಯು ಮಧ್ಯಮ ಉರಿಯಲ್ಲಿ ಬಿಸಿಯಾಗಲು ಬಿಡಿ. ಬಳಿಕ, ಬ್ಯಾಟರ್ ಅನ್ನು ವೃತ್ತಾಕಾರದಲ್ಲಿ ಹರಡಿ.
ಈಗ, ಕತ್ತರಿಸಿದ ಎಲ್ಲಾ ತರಕಾರಿಗಳನ್ನು ಬ್ಯಾಟರ್ ಮೇಲೆ ಸಮವಾಗಿ ಹರಡಿ. ಬಳಿಕ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಸೈಡ್ನಲ್ಲಿ ಹಾಕಿ, ಹಾಗೆಯೇ ಮುಚ್ಚಿ 2 ರಿಂದ 3 ನಿಮಿಷಗಳ ಕಾಲ ಬೇಯಿಸಬೇಕು. ಕೆಳಭಾಗವು ಗೋಲ್ಡ್ ಬಣ್ಣಕ್ಕೆ ತಿರುಗಿದಾಗ, ಉತ್ತಪ್ಪಮ್ ಅನ್ನು ತಿರುಗಿಸಿ. ಇನ್ನೊಂದು ಬದಿಯನ್ನು ಸಹ 1 ರಿಂದ 2 ನಿಮಿಷ ಫ್ರೈ ಮಾಡಿ. ಇಷ್ಟು ಮಾಡಿದರೆ ಸಾಕು, ಪೌಷ್ಟಿಕ ಮತ್ತು ರುಚಿಕರವಾದ ವೆಜ್ ಉತ್ತಪ್ಪಂ ಸಿದ್ಧವಾಗುತ್ತದೆ. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಬಹುದು.



Click it and Unblock the Notifications