Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಂಗಡಿಗಿಂತ ರುಚಿ! ಉದ್ದಿನ ಬೇಳೆಯಿಂದ ಮಾಡಿ ಅಜ್ಜಿ ಕಾಲದ ಗರಿಗರಿಯಾದ ಹಪ್ಪಳ.. ವರ್ಷವಿಡೀ ಕೆಡಲ್ಲ!!
ಅಂಗಡಿಗಿಂತ ರುಚಿ! ಅಜ್ಜಿ ಕಾಲದ ಗರಿಗರಿಯಾದ ಹಪ್ಪಳ.. ಇನ್ಮುಂದೆ ಅಂಗಡಿಯಿಂದ ತರೋ ಅವಶ್ಯಕತೆಯೇ ಇಲ್ಲ. ವರ್ಷವಿಡೀ ಕೆಡದಂತೆ ಉದ್ದಿನ ಹಪ್ಪಳ ಮಾಡುವ (Urad Dal Papad) ಸೀಕ್ರೆಟ್ ಇಲ್ಲಿದೆ. ಸಾಮಾನ್ಯವಾಗಿ ಊಟದ ತಟ್ಟೆಯಲ್ಲಿ ಹಪ್ಪಳವಿಲ್ಲದಿದ್ದರೆ ಊಟವೇ ಅಪೂರ್ಣ ಅನಿಸುತ್ತದೆ. ಬಿಸಿಬಿಸಿ ಸಾರು-ಅನ್ನ ಅಥವಾ ಮಸಾಲಾ ಕಿಚಡಿಯೊಂದಿಗೆ ಗರಿಗರಿಯಾದ ಉದ್ದಿನ ಹಪ್ಪಳವಿದ್ದರೆ ಊಟದ ರುಚಿ ಇಮ್ಮಡಿ. ಮಾರುಕಟ್ಟೆಯಲ್ಲಿ ಹಲವು ಹಪ್ಪಳ ಲಭ್ಯವಿದ್ದರೂ, ಮನೆಯಲ್ಲಿ ತಯಾರಿಸಿದ ಹಪ್ಪಳದ ತಾಜಾತನ, ಶುಚಿತ್ವಕ್ಕೆ ಸರಿಸಾಟಿಯಿಲ್ಲ.
ಹಪ್ಪಳ ಮಾಡುವುದು ಕಷ್ಟ ಎಂಬುದು ಹಲವರ ಮಾತು. ಆದರೆ, ಇದು ತಪ್ಪು. ಸರಿಯಾದ ಪ್ರಮಾಣ ಮತ್ತು ವಿಧಾನ ಅನುಸರಿಸಿದರೆ, ಮನೆಯಲ್ಲೇ ರುಚಿಕರ ಉದ್ದಿನ ಬೇಳೆ ಹಪ್ಪಳ ತಯಾರಿಸುವುದು ಸುಲಭ. ಅಜ್ಜಿಯ ಕಾಲದ ಈ ಸಂಪ್ರದಾಯಬದ್ಧ ರೆಸಿಪಿಯಲ್ಲಿ ಬೇಕಾಗುವ ಸಾಮಗ್ರಿಗಳು, ಹಂತ ಹಂತದ ತಯಾರಿ (Urad Dal Papad Recipe) ಹಾಗೂ ವರ್ಷವಿಡೀ ಹಪ್ಪಳ ಸಂಗ್ರಹಿಸುವ ಸೀಕ್ರೆಟ್ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಉದ್ದಿನ ಬೇಳೆ ಹಪ್ಪಳಕ್ಕೆ ಬೇಕಾಗುವ ಸಾಮಗ್ರಿಗಳು
• ಉದ್ದಿನ ಬೇಳೆ - 1 ಕಪ್
• ಉಪ್ಪು - ರುಚಿಗೆ ತಕ್ಕಷ್ಟು
• ಅಡುಗೆ ಸೋಡಾ - ಒಂದು ಚಿಟಿಕೆ
• ಕಾಳುಮೆಣಸಿನ ಪುಡಿ - 1 ಚಮಚ
• ಜೀರಿಗೆ ಪುಡಿ - 1 ಚಮಚ
• ಇಂಗು - 1/2 ಚಮಚ
• ನೀರು - ಹಿಟ್ಟು ಕಲಸಲು ಬೇಕಾದಷ್ಟು
• ಎಣ್ಣೆ - ಹಪ್ಪಳ ಕರಿಯಲು
ಉದ್ದಿನ ಬೇಳೆ ಹಪ್ಪಳ ತಯಾರಿಸುವ ವಿಧಾನ
- ಮೊದಲು ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು, 6 ರಿಂದ 8 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೀರಿನಲ್ಲಿ ನೆನೆಸಿ.
- ಬೇಳೆ ಚೆನ್ನಾಗಿ ನೆನೆದ ಮೇಲೆ ನೀರನ್ನು ಸಂಪೂರ್ಣವಾಗಿ ಸೋಸಿ, ಅದನ್ನು ಮಿಕ್ಸಿ ಜಾರ್ಗೆ ಹಾಕಿ ನುಣುಪಾದ ಪೇಸ್ಟ್ನಂತೆ ರುಬ್ಬಿಕೊಳ್ಳಿ.
- ಹಿಟ್ಟು ತೆಳುವಾಗದಂತೆ ನೋಡಿಕೊಳ್ಳಲು, ರುಬ್ಬುವಾಗ ಕಡಿಮೆ ನೀರು ಬಳಸಿ. ಇದು ಹಪ್ಪಳ ಲಟ್ಟಿಸಲು ಅನುಕೂಲ.
- ರುಬ್ಬಿದ ಉದ್ದಿನ ಬೇಳೆ ಪೇಸ್ಟ್ ಅನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಅದಕ್ಕೆ ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ಇಂಗು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಿಟಿಕೆ ಅಡುಗೆ ಸೋಡಾವನ್ನು ಸೇರಿಸಿ.
- ಈ ಮಿಶ್ರಣವನ್ನು ಕೈಯಿಂದ ಸುಮಾರು 5 ರಿಂದ 7 ನಿಮಿಷಗಳ ಕಾಲ ಚೆನ್ನಾಗಿ ನಾದಿಕೊಳ್ಳಿ. ಹಿಟ್ಟು ನುಣುಪಾಗಿ, ಜಿಗುಟಾಗಿ ಮತ್ತು ಮೃದುವಾಗುವವರೆಗೆ ನಾದಿ.
- ಹಿಟ್ಟು ಸಿದ್ಧವಾದ ಬಳಿಕ, ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಹಿಟ್ಟಿನಿಂದ ಸಣ್ಣ ಸಣ್ಣ ಗಾತ್ರದ ಉಂಡೆಗಳನ್ನು ಮಾಡಿ. ಈ ಉಂಡೆಗಳು ಒಣಗದಂತೆ ಒಂದು ಬದಿಯಲ್ಲಿ ಇಡಿ. ಅಗತ್ಯವಿದ್ದರೆ, ತೆಳುವಾದ ಬಟ್ಟೆಯಿಂದ ಮುಚ್ಚಿ ಇಡಬಹುದು.
- ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಮರದ ಮಣೆಯ ಮೇಲೆ ಒಂದು ಉಂಡೆಯನ್ನು ಇಡಿ. ಕೈಗೆ ಅಥವಾ ಲಟ್ಟಣಿಗೆಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು, ಅದನ್ನು ಸಾಧ್ಯವಾದಷ್ಟು ತೆಳುವಾಗಿ ಲಟ್ಟಿಸಿ. ಎಷ್ಟು ತೆಳುವಾಗಿ ಲಟ್ಟಿಸುತ್ತಿರೋ, ಹಪ್ಪಳಗಳು ಅಷ್ಟೇ ಗರಿಗರಿಯಾಗಿ ಬರುತ್ತವೆ ಎಂಬುದನ್ನು ನೆನಪಿಡಿ.
- ಲಟ್ಟಿಸಿದ ಹಪ್ಪಳಗಳನ್ನು ಸ್ವಚ್ಛವಾದ ಬಿಳಿ ಬಟ್ಟೆಯ ಮೇಲೆ ಅಥವಾ ಪ್ಲಾಸ್ಟಿಕ್ ಶೀಟ್ ಮೇಲೆ ಹರಡಿ. ಕನಿಷ್ಠ 2 ರಿಂದ 3 ದಿನಗಳ ಕಾಲ ಇವುಗಳನ್ನು ನೇರ ಬಿಸಿಲಿನಲ್ಲಿ ಒಣಗಿಸಬೇಕು. ಹಪ್ಪಳಗಳು ಸಂಪೂರ್ಣವಾಗಿ ಗಡುಸಾಗಿ, ಅವುಗಳ ಬಣ್ಣ ಬದಲಾಗುವವರೆಗೆ ಎರಡೂ ಕಡೆ ತಿರುಗಿಸುತ್ತಾ ಚೆನ್ನಾಗಿ ಒಣಗಲು ಬಿಡಿ.
ಸವಿಯುವ ವಿಧಾನ ಮತ್ತು ಸಂಗ್ರಹಣೆ
ಸಂಪೂರ್ಣವಾಗಿ ಒಣಗಿರುವ ಹಪ್ಪಳಗಳನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸುವುದರಿಂದ ವರ್ಷವಿಡೀ ಕೆಡದೆ ತಾಜಾತನದಿಂದಿರುತ್ತವೆ. ಅಗತ್ಯವಿದ್ದಾಗ ಬಿಸಿ ಎಣ್ಣೆಯಲ್ಲಿ ಕರಿದು ಅಥವಾ ಕೆಂಡದ ಮೇಲೆ ಸುಟ್ಟು ಸೇವಿಸಬಹುದು. ತಿಳಿಸಾರು, ಮೊಸರನ್ನ ಅಥವಾ ಮಸಾಲಾ ಕಿಚಡಿಯಂತಹ ಭಕ್ಷ್ಯಗಳೊಂದಿಗೆ ಇದು ಅತ್ಯುತ್ತಮ ಕಾಂಬಿನೇಷನ್.
ಈ ಟಿಪ್ಸ್ ನೆನಪಿರಲಿ!
ಹಪ್ಪಳ ಹಿಟ್ಟು ತುಂಬಾ ಮೆತ್ತಗಾಗಿದ್ದರೆ, ಸ್ವಲ್ಪ ಉದ್ದಿನ ಹಿಟ್ಟು ಅಥವಾ ಮೈದಾ ಸೇರಿಸಿ ಹದಗೊಳಿಸಬಹುದು. ಹಪ್ಪಳ ಲಟ್ಟಿಸುವಾಗ ಹರಿದು ಹೋಗುವುದನ್ನು ತಪ್ಪಿಸಲು, ಎಣ್ಣೆಯನ್ನು ಮಿತವಾಗಿ ಉಪಯೋಗಿಸಿ. ಬಿಸಿಲಿನಲ್ಲಿ ಒಣಗಿಸುವಾಗ ಧೂಳು ಬೀಳದಂತೆ, ತೆಳುವಾದ ಬಟ್ಟೆಯಿಂದ ಮುಚ್ಚುವುದು ಉತ್ತಮ.



Click it and Unblock the Notifications

