Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರುಚಿಯಾದ ರಾಗಿ ಮಣ್ಣಿಯನ್ನು 2 ರೀತಿಯಲ್ಲಿ ಮಾಡಬಹುದು
ರಾಗಿ ಮಣ್ಣಿ ಅತ್ಯಂತ ಆರೋಗ್ಯಕರವಾದ ಸ್ನ್ಯಾಕ್ಸ್ ಆಗಿದೆ, ಇದನ್ನು ತಿನ್ನಲು ತುಂಬಾನೇ ರುಚಿಯಾಗಿರುತ್ತದೆ, ಮಕ್ಕಳಿಂದ ಹಿಡಿದು ದೊಡ್ಡವವರೆಗೆ ಇದನ್ನು ಸವಿಯಬಹುದು, ಇದನ್ನು ಇಡಿ ರಾಗಿ ನೆನೆ ಹಾಕಿ ಮಾಡಬಹುದು ಅಥವಾ ಪುಡಿ ಬಳಸಿ ಮಾಡಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ರಾಗಿ ಹಿಟ್ಟು 4 ಕಪ್
ಹಾಲು ಎರಡೂವರೆ ಕಪ್
(ನೀವು ಬೇಕಿದ್ದರೆ ಒಂದು ಕಪ್ ಹಾಲು ಹಾಲು, ಒಂದು ಕಪ್ ತೆಂಗಿನಹಾಲು
ಬಳಸಬಹುದು)
ಬೆಲ್ಲ ಒಂದೂವರೆ ಕಪ್
ಏಲಕ್ಕಿ 203
ಡ್ರೈ ಫ್ರೂಟ್ಸ್
ತುಪ್ಪ 2-3 ಚಮಚ
ಚಿಟಿಕೆಯಷ್ಟು ಉಪ್ಪು
ಮಾಡುವ ವಿಧಾನ
ನೀವು ರಾಗಿ ಬಳಸಿ ಮಾಡಬಹುದು, ರಾಗಿ ಹಿಟ್ಟು ಕೂಡ ಬಳಸಿ ಮಾಡಬಹುದು, ಆದರೆ
ರಾಗಿ ನೆನೆ ಹಾಕಿ ರುಬ್ಬಿ ಅದರ ಹಾಲು ತೆಗೆದು ಮಾಡುವ ಮಣ್ಣಿಗೆ ರುಚಿ
ಹೆಚ್ಚು.
ನೀವು ರಾಗಿ ಹಿಟ್ಟು ಹಾಕಿ ಮಾಡುವುದಾರೆ ಹಾಲಿಗೆ ಬೆಲ್ಲ ಹಾಕಿ ಕುದಿಸಿ, ನಂತರ
ಹಿಟ್ಟು ಹಾಕಿ ಗಂಟು ಕಟ್ಟದಂತೆ ಮಿಕ್ಸ್ ಮಾಡಿ, ಹೀಗೆ ಮಿಕ್ಸ್ ಮಾಡುತ್ತಾ
ಕೈಯಿಂದಲೇ ಹಿಸುಕಿದ ಏಲಕ್ಕಿ ಸೇರಿಸಿ, ನಂತರ ತುಪ್ಪ ಸೇರಿಸಿ ಮಿಕ್ಸ್ ಮಾಡಿ. ರಾಗಿ
ಹಿಟ್ಟಿನ ಮಿಶ್ರಣ ಸ್ವಲ್ಪ ಗಟ್ಟಿಯಾಗುತ್ತಾ ಬರುವಾಗ ನೀವು ಸ್ಟೌವ್ ಆಫ್ ಮಾಡಿ
ಈಗ ತಟ್ಟೆಗೆ ತುಪ್ಪ ಸವರಿ ನಂತರ ಈ ಮಣ್ಣಿ ಸುರಿಯಿರಿ, 10-15 ನಿಮಿಷ ಬಿಟ್ಟ ಬಳಿಕ
ನಿಮಗೆ ಬೇಕಾದ ಶೇಪ್‌ನಲ್ಲಿ ಕತ್ತರಿಸಿ ಸವಿಯಿರಿ.
ನೀವು ರಾಗಿ ರುಬ್ಬಿ ಮಾಡುವುದಾದರೆ
ನೀವು ರಾಗಿಯನ್ನು ಸ್ವಚ್ಛ ಮಾಡಿ ತೊಳೆದು ನೆನೆಹಾಕಿ. ನಂತರ ಅದನ್ನು ರುಬ್ಬಿ ರಸ ಹಿಂಡಿ. ಈಗ ಹಿಟ್ಟಿಗೆ ಏಲಕ್ಕಿ, ಬೆಲ್ಲ ಸೇರಿಸಿ ಮಿಕ್ಸ್ ಮಾಡಿ, ಈಗ ಕಡಿಮೆ ಉರಿಯಲ್ಲಿ ಇದನ್ನು ಬೇಯಿಸಿ, ಮೆಲ್ಲನೆ ತಿರುಗಿಸುತ್ತಾ ಬೇಯಿಸಿ, ನೀವು ಹೀಗೆ 30 ನಿಮಿಷ ಬೇಯಿಸಿದರೆ ಹಿಟ್ಟು ಗಟ್ಟಿಯಾಗುವುದು. ನಂತರ ತುಪ್ಪ ಹಾಕಿ, ಮಿಕ್ಸ್ ಮಾಡಿ ಬಳಿಕ ಪ್ಲೇಟ್‌ಗೆ ಸ್ವಲ್ಪ ತುಪ್ಪ ಸವರಿ ಅದರಲ್ಲಿ ಮಣ್ಣಿ ಸರಿಯಿರಿ, ಅದರ ಮೇಲೆ ಡ್ರೈ ಫ್ರೂಟ್ಸ್ ಉದುರಿಸಿ, ನಂತರ ಮಣ್ಣಿ ಗಟ್ಟಿಯಾದ ಮೇಲೆ ಕತ್ತರಿಸಿ ಇಡಿ. ಈ ರಾಗಿ ಮಣ್ಣಿಯನ್ನು ನೀವು ಫ್ರಿಡ್ಜ್‌ನಲ್ಲಿಟ್ಟರೆ ವಾರದವರೆಗೆ ಇಟ್ಟು ಬಳಸಬಹುದು.
ರಾಗಿ ಮಣ್ಣಿನ ಪ್ರಯೋಜನಗಳು
ಇದನ್ನು ಮಕ್ಕಳಿಗೆ ನೀಡಬಹುದಾದ ಆರೋಗ್ಯಕರವಾದ ಸ್ನ್ಯಾಕ್ಸ್ ಆಗಿದೆ
ಮಕ್ಕಳ ಸ್ನ್ಯಾಕ್ಸ್ ಬಾಕ್ಸ್‌ಗೆ ಹಾಕಿ ಕಳುಹಿಸಿದರೆ ಅವರು ಖುಷಿಯಿಂದ
ಸವಿಯುತ್ತಾರೆ, ಮಕ್ಕಳ ಆರೋಗ್ಯಕ್ಕೂ ಒಳ್ಳೆಯದು.
ಇದಕ್ಕೆ ಬೆಲ್ಲ ಹಾಕಿ ಮಾಡಿರುವುದರಿಂದ ಒಂದು ಪೀಸ್ ತಿಂದರೆ ಬಾಯಿಗೆ ರುಚಿ, ಭಯ
ಪಡಬೇಕಾಗಿಲ್ಲ.



Click it and Unblock the Notifications