For Quick Alerts
ALLOW NOTIFICATIONS  
For Daily Alerts

ಈ ಹಾಟ್‌ ಡ್ರಿಂಕ್ಸ್ ಚಳಿಗಾಲದಲ್ಲಿ ನೆಗಡಿ, ಕೆಮ್ಮು ತಡೆಗಟ್ಟುತ್ತೆ

Posted By:
|

ಚಳಿಗಾಲದಲ್ಲಿ ನಾವು ಮೈ ಬೆಚ್ಚಗಿಡುವ ಆಹಾರಗಳನ್ನು ಸೇವಿಸಬೇಕು. ನಮ್ಮ ಆಹಾರದಲ್ಲಿ ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಏಲಕ್ಕಿ ಇವುಗಳನ್ನು ಬಳಸಬೇಕು, ಆಗ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡು ನೆಗಡಿ, ಕೆಮ್ಮು, ಅಲರ್ಜಿ ಈ ರೀತಿಯ ಸಮಸ್ಯೆ ತಡೆಗಟ್ಟಬಹುದು.

ನಿಮಗೆ ಎರಡು ಹೊತ್ತು ಟೀ ಕುಡಿಯುವ ಅಭ್ಯಾಸವಿದ್ದರೆ ಅದಕ್ಕೆ ಬದಲಾಗಿ ಈ ಪಾನೀಯ ಮಾಡಿ ಕುಡಿದರೆ ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಸಹಕಾರಿ. ಇವುಗಳ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

1. ಮಸಾಲೆ ಟೀ

1. ಮಸಾಲೆ ಟೀ

ಮಸಾಲೆ ಟೀಯನ್ನು ನೀವು ನಾನಾ ರೀತಿ ತಯಾರಿಸಬಹುದು. ಶುಂಠಿ ಹಾಕಿ ಮಾಡಬಹುದು. ಏಲಕ್ಕಿ ಹಾಕಿ ಅಥವಾ ಚಕ್ಕೆ-ಲವಂಗ ಹಾಕಿ ತಯಾರಿಸಿ ಕುಡಿಯಬಹುದು, ಮಸಾಲೆ ಟೀ ಸಾಮಾನ್ಯ ಟೀಗಿಂತ ಸ್ಟ್ರಾಂಗ್ ಆಗಿರುವುದರಿಂದ ಚಳಿಗಾಲದಲ್ಲಿ ಕುಡಿಯಲು ಹಿತ ಅನಿಸುವುದು, ಆರೋಗ್ಯಕ್ಕೂ ಒಳ್ಳೆಯದು.

2. ಬ್ಲ್ಯಾಕ್ ಟೀ

2. ಬ್ಲ್ಯಾಕ್ ಟೀ

ಇನ್ನು ಬ್ಲ್ಯಾಕ್‌ ಟೀ ತುಂಬಾನೇ ಒಳ್ಳೆಯದು. ಇದು ಜೀರ್ಣಕ್ರಿಯೆ ಸಹಕಾರಿ. ಇದಕ್ಕೆ ಸಕ್ಕರೆ ಹಾಕದೆ ಕುಡಿದರೆ ತುಂಬಾನೇ ಪ್ರಯೋಜನಕಾರಿಯಾಗಿರುವುದರಿಂದ ಹಾಗೇ ಕುಡಿಯುವುದು ಒಳ್ಳೆಯದು.

3. ಕಾಶ್ಮೀರಿ ಕವಾ

3. ಕಾಶ್ಮೀರಿ ಕವಾ

ಗ್ರೀನ್‌ ಟೀ ಜೊತೆಗ ಸ್ವಲ್ಪ ಕೇಸರಿ, ಚಿಕ್ಕದಾಗಿ ಕತ್ತರಿಸಿದ ಬಾದಾಮಿ, ಏಲಕ್ಕಿ, ಚಕ್ಕೆ, ಲವಂಗ, ಸಕ್ಕರೆ ಸೇರಿಸಿ ಮಾಡುವ ಟೀ ಇದಾಗಿದೆ.

4. ರಾಜಾಸ್ಥಾನದ ಬಜ್ರಾ ರಾಬ್

4. ರಾಜಾಸ್ಥಾನದ ಬಜ್ರಾ ರಾಬ್

1 ಚಮಚ ತುಪ್ಪ, ಒಂದೂವರೆ ಚಮಚ ಬೆಲ್ಲದ ಪುಡಿ, ಚಿಟಿಕೆಯಷ್ಟು ಅಜ್ವೈನ್‌, ಒಣ ಶುಂಠಿ ಪುಡಿ

ಒಂದೂವರೆ ಚಮಚ ಬಜ್ರಾ ಹಿಟ್ಟು (ಕಪ್ಪು ನವಣೆ ಹಿಟ್ಟು)

ತುಪ್ಪವನ್ನು ಬಿಸಿ ಮಾಡಿ ಅದರಲ್ಲಿ ಬಜ್ರಾ ಹಿಟ್ಟು ಸೇರಿಸಿ ಹುರಿದು 1 ಕಪ್ ನೀರು ಹಾಕಿತಿರುಗಿಸುತ್ತಾ ಇರಿ, ನಂತರ ಉರಿ ಕಡಿಮೆ ಮಾಡಿ ಶುಂಠಿ ಪುಡಿ, ಅಜ್ವೈನ್ ಹಾಕಿ 2 ನಿಮಿಷ ತಿರುಗಿಸಿ ನಂತರ . ಇದನ್ನು ಬಿಸಿ-ಬಿಸಿ ಇರುವಾಗಲೇ ಕುಡಿಯಿರಿ.

5. ಶೀತವಾಗಿದ್ದರೆ ಜೇನು ಶುಂಠಿ ಟೀ ಕುಡಿಯಿರಿ

5. ಶೀತವಾಗಿದ್ದರೆ ಜೇನು ಶುಂಠಿ ಟೀ ಕುಡಿಯಿರಿ

ತುಂಬಾ ಶೀತವಾಗಿದ್ದರೆ ಶುಂಠಿ ಹಾಕಕಿ ತಯಾರಿಸಿದ ಬ್ಲ್ಯಾಕ್‌ ಟೀಗೆ ಜೇನು ತುಪ್ಪ ಸೇರಿಸಿ ಕುಡಿಯಿರಿ. ಕಡಿಮೆಯಾಗುವುಉದ. ಬೇಕಾದರೆ ಸ್ವಲ್ಪ ನಿಂಬೆರಸ ಸೇರಿಸಿ, ರುಚಿ ಚೆನ್ನಾಗಿರುತ್ತೆ.

[ of 5 - Users]
Story first published: Wednesday, December 29, 2021, 18:04 [IST]
X
Desktop Bottom Promotion