Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಂಗಾಳಿ ಶೈಲಿಯ ಈ ಟೊಮೆಟೊ ಗೊಜ್ಜು ಟೇಸ್ಟ್ ಮಾಡಿದರೆ ಇದರ ರೆಸಿಪಿ ಬೇಕೆ ಅಂತೀರಿ
ಬೆಂಗಾಳಿ ಶೈಲಿಯ ಅಡುಗೆ ಟೇಸ್ಟ್ ಮಾಡಿದ್ದರೆ ಖಂಡಿತ ನೀವು ಇಷ್ಟಪಟ್ಟಿರುತ್ತೀರಿ, ಬೆಂಗಳೂರಿನಲ್ಲಿರುವ ಪಶ್ಚಿಮ ಬಂಗಾಳದಿಂದ ಬಂದಿರುವ ಫ್ರೆಂಡ್ ನಿಮಗಿದ್ದರೆ ಖಂಡಿತ ಅವರ ಅಡುಗೆಯ ರುಚಿ ನೋಡಲು ಮರೆಯದಿರಿ, ತುಂಬಾನೇ ಚೆನ್ನಾಗಿರುತ್ತದೆ, ಅಲ್ಲದೆ ಸ್ವಲ್ಪ ಭಿನ್ನವಾಗಿ ಮಾಡುವುದರಿಂದ ಏನೋ ಸ್ಪೆಷಲ್ ಕೂಡ ಅನಿಸುವುದು. ಟೊಮೆಟೊ ಗೊಜ್ಜು ನಮಗೆಲ್ಲಾ ಗೊತ್ತು, ಆದರೆ ಅವರು ಟೊಮೆಟೊ ಗೊಜ್ಜು ಮಾಡುವ ಸ್ಟೈಲ್ ಭಿನ್ನವಾಗಿರುತ್ತದೆ.
ನಮ್ಮ ಬೆಂಗಾಳಿ ಫ್ರೆಂಡ್ ನಮ್ಮ ಜೊತೆ ಶೇರ್ ಮಾಡಿರುವ ಸಿಂಪಲ್ ಟೊಮೆಟೊ ಗೊಜ್ಜು ರೆಸಿಪಿ ನೀಡಿದ್ದೇವೆ, ಟ್ರೈ ಮಾಡಿ ನೋಡಿ ಎಷ್ಟು ಸೂಪರ್ ಆಗಿರುತ್ತದೆ ಎಂದರೆ ಇದನ್ನು ವಾರಕೊಮ್ಮೆಯಾದರೂ ಟೇಸ್ಟ್ ಮಾಡುವ ಮನಸಾಗುವುದು. ತುಂಬಾ ಸರಳವಾಗಿದೆ, ನಾವು ಮಾಡುವ ಟೊಮೆಟೊ ಗೊಜ್ಜು ಶೈಲಿಯಲ್ಲಿಯೇ ಮಾಡುವುದು, ಆದರೆ ಅವರು ಸೇರಿಸುವ ಸಾಮಗ್ರಿ ಸ್ವಲ್ಪ ಭಿನ್ನವಾಗಿರುತ್ತದೆ.

ಇನ್ನು ಅವರ ಅಡುಗೆಯಲ್ಲಿ ಸಾಸಿವೆಯೆಣ್ಣೆ ಪ್ರಮುಖವಾದದ್ದು. ನಾವು ಹೇಗೆ ಕಡ್ಲೆಯೆಣ್ಣೆ, ತೆಂಗಿನೆಣ್ಣೆ, ಸೂರ್ಯಕಾಂತಿಯೆಣ್ಣೆ ಬಳಸುತ್ತೇವೋ ಅದರಂತೆಯೇ ಅವರು ಕೂಡ ಸಾಸಿವೆಯೆಣ್ಣೆ ಹೆಚ್ಚಾಗಿ ಬಳಸುತ್ತಾರೆ. ನೀವು ನಿಮಗಿಷ್ಟವಾದ ಎಣ್ಣೆ ಬಳಸಿ ಮಾಡಬಹುದು, ಥೇಟ್ ಅದೇ ರುಚಿಯಲ್ಲಿ ಮಾಡಬೇಕೆಂದಿದ್ದರೆ ಮಾತ್ರ ಸಾಸಿವೆಯೆಣ್ಣೆ ಬಳಸುವುದು ಹೆಚ್ಚು ಸೂಕ್ತ:
ಬಂಗಾಳಿ ಶೈಲಿಯ ಟೊಮೆಟೊ ಗೊಜ್ಜು ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ
ಟೊಮೆಟೊ 4
ಜೀರಿಗೆ 1 ಚಮಚ
ಕಲೋಂಜಿ 1 ಚಮಚ (Optional)
ಸಾಸಿವೆ 1 ಚಮಚ
ಮೆಂತೆ ಬೀಜ 1/ 4 ಚಮಚ
ಸೋಂಪು 1 ಚಮಚ
ಸಾಸಿವೆಯೆಣ್ಣೆ ಒಂದೂವರೆ ಚಮಚ (ಇದರ ವಾಸನೆ ಇಷ್ಟವಾಗದಿದ್ದರೆ ನೀವು ಮಾಮೂಲಿ
ಅಡುಗೆಗೆ ಬಳಸುವ ಎಣ್ಣೆ ಬಳಸಬಹುದು)
ರುಚಿಗೆ ತಕ್ಕ ಉಪ್ಪು 1 ಚಮಚ
ಸಕ್ಕರೆ 1/4 ಚಮಚ
ಚಿಲ್ಲಿ ಫ್ಲೇಕ್ಸ್ 2 ಚಮಚ
ಮಾಡುವ ವಿಧಾನ
ನೀವು ಹಣ್ಣಾದ ಟೊಮೆಟೊವನ್ನು ದೊಡ್ಡ ಪೀಸ್‌ಗಳಾಗಿ ಕತ್ತರಿಸಿ
ಈಗ ಜೀರಿಗೆ, ಸಾಸಿವೆ, ಜೀರಿಗೆ, ಮೆಂತೆ, ಕಲೋಂಜಿ ಮಿಕ್ಸ್ ಮಾಡಿಡಿ
ಎಣ್ಣೆಯನ್ನು ಬಿಸಿ ಮಾಡಿ
ಈಗ ನೀವು ಮಿಕ್ಸ್ ಮಾಡಿಟ್ಟ ಮೆಂತೆ-ಜೀರಿಗೆ ಇತರ ಮಿಶ್ರಣಗಳನ್ನು ಹಾಕಿ
ಟೊಮೆಟೊ ಹಾಕಿ, ಉಪ್ಪು ಸೇರಿಸಿ ಸ್ವಲ್ಪ ಹೊತ್ತು ಸೌಟ್‌ನಿಂದ ಆಡಿಸಿ , 6-7 ನಿಮಿಷ
ಆಡಿಸಿದರೆ ಸಾಕಾಗುತ್ತೆ
ಈಗ ಚಿಲ್ಲಿಫ್ಲೇಕ್ಸ್ ಸೇರಿಸಿ ಮಿಕ್ಸ್ ಮಾಡಿ ಸರ್ವ್ ಮಾಡಿ ನೋಡಿ, ರುಚಿ ಬೊಂಬಾಟ್
ಆಗಿರುತ್ತದೆ.
ಟಿಪ್ಸ್:
ನೀವು ಹುಳಿ ಟೊಮೆಟೊ ಬದಲಿಗೆ ಈ ಗೊಜ್ಜು ಮಾಡಲು ಜಾಮೂನು ಟೊಮೆಟೊ ಬಳಸಬೇಕು
ಹಣ್ಣಾದ ಟೊಮೆಟೊ ಬಳಸಿ, ಕಾಯ ಬಳಸಿದರೆ ಅಷ್ಟು ರುಚಿ ಅನಿಸಲ್ಲ
ಇನ್ನು ಟೊಮೆಟೊವನ್ನು ತುಂಬಾ ಮ್ಯಾಶ್ ಮಾಡಲು ಹೋಗಬೇಡಿ.



Click it and Unblock the Notifications