For Quick Alerts
ALLOW NOTIFICATIONS  
For Daily Alerts

ರೊಟ್ಟಿ ಮತ್ತು ಚಪಾತಿ ಹೀಗೆ ಮಾಡಿದರೆ ಬಲುರುಚಿ

|

ಚಪಾತಿ, ರೊಟ್ಟಿ ಮಾಡುವುದು ದೊಡ್ಡ ವಿಷಯವಲ್ಲ, ಆದರೆ ಅದನ್ನು ಮೃದುವಾಗಿ, ರುಚಿಕರವಾಗಿ ಮಾಡುವುದು ಇದೆಯಲ್ಲಾ ಅದಕ್ಕೆ ಮಾತ್ರ ಅಡುಗೆ ವಿದ್ಯೆ ಗೊತ್ತಿರಬೇಕು. ಕುಕ್ಕಿಂಗ್ ಟಿಪ್ಸ್ ಅಡುಗೆಯನ್ನು ಮತ್ತಷ್ಟು ಸರಳ ಮತ್ತು ರುಚಿಕರವಾಗಿ ಮಾಡಲು ಸಹಾಯ ಮಾಡುತ್ತದೆ.

ಇಲ್ಲಿ ನಾನು ಮೃದುವಾದ ಚಪಾತಿ ಮತ್ತು ರೊಟ್ಟಿ ಮಾಡುವುದು ಹೇಗೆ? ಅದಕ್ಕೆ ಬಳಸಬೇಕಾದ ಟ್ರಿಕ್ಸ್ ಏನು ಎಂದು ವಿವರಿಸಿದ್ದೇನೆ ನೋಡಿ.

For Soft Chapathi And Roti Cooking Tips

ಮೃದುವಾದ ರೊಟ್ಟಿಗಾಗಿ ಟಿಪ್ಸ್

* ಸ್ವಲ್ಪ ನೀರನ್ನು ಬಿಸಿ ಮಾಡಿ, ಅದಕ್ಕೆ ಹಿಟ್ಟು ಹಾಕಿ 2 ನಿಮಿಷ ಬಿಟ್ಟು ನಂತರ ಸೌಟ್ ನಿಂದ ಚೆನ್ನಾಗಿ ತಿರುಗಿಸಿ, ಕಲೆಸಿ, ತಟ್ಟಿ ರೊಟ್ಟಿ ಮಾಡಿದರೆ ರೊಟ್ಟಿ ಮೃದುವಾಗಿರುತ್ತದೆ.

* ರೊಟ್ಟಿ ಹಿಟ್ಟನ್ನು ಕಲೆಸುವಾಗ ರುಚಿಗೆ ತಕ್ಕ ಉಪ್ಪಿನ ಜೊತೆ ಅದಕ್ಕೆ ಒಂದು/ಎರಡು ಚಮಚ ಡಾಲ್ಡ ಅಥವಾ ವನಸ್ಪತಿ , ಹಾಲನ್ನು ಸೇರಿಸಿ ನಂತರ ಅಗತ್ಯಕ್ಕೆ ತಕ್ಕ ನೀರು ಹಾಕಿ ಕಲೆಸಿ, ಚೆನ್ನಾಗಿ ತಟ್ಟಿದ ರೊಟ್ಟಿ ಮೃದುವಾಗಿರುತ್ತದೆ.

* ರಾಗಿ ಮತ್ತು ಗೋಧಿ ಹಿಟ್ಟನ್ನು ಸಮಪ್ರಮಾಣದಲ್ಲಿ ಹಾಕಿ ಕಲೆಸಿ ರೊಟ್ಟಿ ಮಾಡಿದರೆ ರೊಟ್ಟಿ ತುಂಬಾ ರುಚಿಯಾಗಿರುತ್ತದೆ. ಈ ರೊಟ್ಟಿಗೆ ಕೊತ್ತಂಬರಿ ಸೊಪ್ಪು, ಸ್ವಲ್ಪ ಸಬ್ಬಸ್ಸಿಗೆ ಸೊಪ್ಪನ್ನು ಕತ್ತರಿಸಿ ಹಾಕಿ ಕಲೆಸಿದರೆ ಮತ್ತಷ್ಟು ಸ್ವಾದಿಷ್ಟಕರ.

ಮೃದುವಾದ, ರುಚಿಯಾದ ಚಪಾತಿಗಾಗಿ ಈ ಟಿಪ್ಸ್

* ಚಪಾತಿ ಹಿಟ್ಟಿಗೆ ಸ್ವಲ್ಪ ಎಣ್ಣೆ ಮತ್ತು ಹಾಲು ಸೇರಿಸಿ, ನಂತರ ಬಿಸಿ ನೀರು, ರುಚಿಗೆ ತಕ್ಕ ಉಪ್ಪು ಸೇರಿಸಿ ಕಲೆಸಿದರೆ ಚಪಾತಿ ತುಂಬಾ ಮೃದುವಾಗಿರುತ್ತದೆ.

* ಹಿಟ್ಟನ್ನು ಕಲೆಸಿ ತುಂಬಾ ಹೊತ್ತು ಇಡಬೇಡಿ. ಪೂರಿ ಮಾಡುವಾಗ ಹಿಟ್ಟು ಕಲೆಸಿಟ್ಟರೆ ರುಚಿ ಹಿಟ್ಟು, ಆದರೆ ಚಪಾತಿಗೆ ಆ ರೀತಿ ಮಾಡಿದರೆ ಸರಿಯಾಗಿ ಉಬ್ಬಿ ಬರುವುದಿಲ್ಲ. ಹಿಟ್ಟನ್ನು ಕಲೆಸಿ 10 ನಿಮಿಷಕ್ಕಿಂತ ಹೆಚ್ಚು ಹೊತ್ತು ಇಡಬೇಡಿ. ಹೆಚ್ಚು ಹೊತ್ತು ಇಟ್ಟರೆ ಅದರ ಸತ್ವ ಹಾಳಾಗುತ್ತದೆ.

* ಗೋಧಿ ಜೊತೆ ಮೆಂತೆ, ಹೆಸರುಕಾಳು, ಉಪ್ಪು ಹಾಕಿ ಬೀಸಿಟ್ಟರೆ ಆ ಚಪಾತಿ ಹೆಚ್ಚು ರುಚಿಕರವಾಗಿರುತ್ತದೆ. ಇದಕ್ಕೆ ಸೋಯಾಬೀನ್ಸ್ ಕೂಡ ಸೇರಿಸಬಹುದು.

* ಚಪಾತಿಗೆ ಕಲೆಸುವಾಗ ಚಿಕ್ಕದಾಗಿ ಕತ್ತರಿಸಿದ ಟೊಮೆಟೊ, ಈರುಳ್ಳಿ, ಮೆಣಸಿನ ಪುಡಿ, ಅರಿಶಿಣ, ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿ ಚಪಾತಿ ಮಾಡಿ, ಅದನ್ನು ಚಟ್ನಿ ಜೊತೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ.

English summary

For Soft Chapathi And Roti Cooking Tips | Cooking Tips

Cooking also one kind of technique. If You know cooking it's not sufficient. Those who knows cookery tips, they only can become expert cook.
 
X
Desktop Bottom Promotion