Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಾರಿ ಅಥವಾ ಗ್ರೇವಿಗೆ ಉಪ್ಪು ಹೆಚ್ಚಾದರೆ ಉಪ್ಪಿನಂಶ ಕಡಿಮೆ ಮಾಡಲು 7 ಟಿಪ್ಸ್
ಉಪ್ಪಿಲ್ಲದ ಆಹಾರ ರುಚಿಸುವುದಿಲ್ಲ, ಆದರೆ ಉಪ್ಪು ಹೆಚ್ಚಾದ ಆಹಾರ ಕೂಡ ಬಾಯಿಗೆ ಇಡಲು ಸಾಧ್ಯವಿಲ್ಲ. ಅಡುಗೆ ಕಲಿಯುತ್ತಿರುವವರೆಗೆ ಮಾತ್ರವಲ್ಲ, ಕೆಲವೊಮ್ಮೆ ಚೆನ್ನಾಗಿ ಅಡುಗೆ ಬರುವವರೆಗೂ ಕೈ ತಪ್ಪಿ ಉಪ್ಪು ಅಧಿಕವಾಗುವುದುಂಟು. ಉಪ್ಪು ಹೆಚ್ಚಾಯ್ತು ಎಂದು ಮಾಡಿದ ಅಡುಗೆ ಬಿಸಾಡಲು ಸಾಧ್ಯವೇ ಬದಲಿಗೆ ಈ ಟ್ರಿಕ್ಸ್ ಬಳಸಿ ಉಪ್ಪು ಕಡಿಮೆಯಾಗುವುದು:

ಸಾರು, ಗ್ರೇವಿಗೆ ಹಸಿ ಆಲೂಗಡ್ಡೆ ಹಾಕಿರಿ
ನೀವು ಒಂದು ಆಲೂಗಡ್ಡೆ ಸಿಪ್ಪೆ ಸುಲಿದು ತೊಳೆದು ಕತ್ತರಿಸಿ ಗ್ರೇವಿ ಅಥವಾ ಸಾರಿಗೆ ಹಾಕಿ, ಆಲೂಗಡ್ಡೆ ಅಧಿಕ ಉಪ್ಪಿನಂಶ ಹೀರಿಕೊಳ್ಳುತ್ತದೆ. ಇದರಿಂದ ಸ್ವಲ್ಪ ಹೊತ್ತಿನ ಬಳಿಕ ನೀವು ಸಾರಿನ ಟೇಸ್ಟ್ ನೋಡಿದರೆ ಉಪ್ಪು ಸರಿಯಾಗಿರುತ್ತದೆ.
ಅನ್ನದ ಉಂಡೆ
ನೀವು ಅನ್ನದ ಚಿಕ್ಕ ಚಿಕ್ಕ ಉಂಡೆ ಮಾಡಿ ಸಾರಿಗೆ ಹಾಕಿ, ಬೇಗನೆ ಉಪ್ಪಿನಂಶ ಹೀರಿಕೊಳ್ಳುತ್ತದೆ. ಆದರೆ ಅನ್ನದ ಉಂಡೆ ಗಟ್ಟಿಯಾಗಿ ಮಾಡಿ ಇಲ್ಲದಿದ್ದರೆ ಅನ್ನ ಬಿಡಿ ಬಿಡಿಯಾಗಿ ಸಾರು ಹೋಗಿ ಕಿಚಡಿಯಾಗುವುದು, ನಂತರ ಉಪ್ಪಿನಂಶ ಕಡಿಮೆಯಾದಾಗ ಅನ್ನದ ಉಂಡೆಯನ್ನು ಹೊರ ತೆಗೆದು ಗ್ರೇವಿ ಸರ್ವ್ ಮಾಡಿ.
ಮೊಸರು
ನೀವು ಸ್ವಲ್ಪ ಮೊಸರನ್ನು ಸಾರಿಗೆ ಸೇರಿಸಿದರೆ ಉಪ್ಪಿನಂಶ ಕಡಿಮೆಯಾಗುವುದು, ಅಲ್ಲದೆ ಗ್ರೇವಿ ಟೇಸ್ಟ್ ಕೂಡ ಸೂಪರ್ ಆಗಿರುತ್ತದೆ.
ಫ್ರೆಷ್ ಕ್ರೀಮ್
ನೀವು ಗ್ರೇವಿ, ಸಾರಿಗೆ ಉಪ್ಪಿನಂಶ ಅಧಿಕವಾದಾಗ ಸ್ವಲ್ಪ ಫ್ರೆಷ್ ಕ್ರೀಮ್ ಸೇರಿಸಿದರೆ ಸಾಕು ಉಪ್ಪಿನಂಶ ಕಡಿಮೆಯಾಗುವುದು.
ಹಾಲು
ನಾನ್ವೆಜ್ ಸಾರಾದರೆ ಅಥವಾ ವೆಜ್ ಕುರ್ಮಾವಾದರೆ ಸ್ವಲ್ಪ ಹಾಲು ಸೇರಿಸಿ ಉಪ್ಪಿನಂಶ ಕಡಿಮೆಯಾಗುವುದು, ಸಾರಿನ ರುಚಿ ಕೂಡ ಹೆಚ್ಚಾಗುವುದು.
ಈರುಳ್ಳಿ
ನೀವು ಸಾರಿಗೆ ಸ್ವಲ್ಪ ಈರುಳ್ಳಿ ಕತ್ತರಿಸಿ ಹಾಕಿ ಅಥವಾ ಹಸಿ ತಿನ್ನಲು ಇಷ್ಟವಿಲ್ಲ ಎಂದರೆ ಈರುಳ್ಳಿಯನ್ನು ಫ್ರೈ ಮಾಡಿ ಸೇರಿಸಿ ಉಪ್ಪಿನಂಶ ಕಡಿಮೆಯಾಗುವುದು.
ವಿನೆಗರ್ ಮತ್ತು ಸಕ್ಕರೆ
ನೀವು ಸಾರು ಅಥವಾ ಗ್ರೇವಿಗೆ 1 ಚಮಚ ವಿನೆಗರ್ ಮತ್ತು ಸಕ್ಕರೆ ಸೇರಿಸಿ. ಇವೆರಡರ ಕಾಂಬಿನೇಷನ್ ಉಪ್ಪಿನಂಶ ಕಡಿಮೆ ಮಾಡುತ್ತದೆ, ಸಾರು ಹುಳಿಯಾಗಿಸುವುದಿಲ್ಲ.
ಈಗಷ್ಟೇ ಅಡುಗೆ ಕಲಿಯುತ್ತಿರುವವರೆಗೆ ಸಲಹೆ
- ನೀವು ಈಗಷ್ಟೇ ಅಡುಗೆ ಕಲಿಯುತ್ತಿದ್ದೀರಿ ಎಂದಾದರೆ ನೀವು ಮೊದಲಿಗೆ ತುಂಬಾ ಉಪ್ಪು ಹಾಕಬೇಡಿ. ಒಂದು ಸ್ವಲ್ಪ ಉಪ್ಪು ಹಾಕಿ , ಒಂದು 1/4 ಚಮಚ ಹಾಕಿ ನಂತರ ರುಚಿ ನೀಡಿ ಮತ್ತೆ ಸ್ವಲ್ಪ ಸೇರಿಸಿ. ಈ ರೀತಿ ರುಚಿ ನೋಡಿ ಸೇರಿಸಿದಾಗ ಉಪ್ಪು ಹೆಚ್ಚಾಗುವುದಿಲ್ಲ.
- ಇನ್ನು ಕಲ್ಲುಪ್ಪು ಮತ್ತು ಹುಡಿ ಉಪ್ಪು ಬಳಸುವುದಾದರೂ ಅದರ ಹದ ಭಿನ್ನವಾಗಿರುತ್ತದೆ
- ನೀವು ಒಂದು ಚಮಚ ಕಲ್ಲುಪ್ಪು ಬಳಸಿದರೆ ಪುಡಿ ಬಳಸುವಾಗ ಕಡಿಮೆ ಬಳಸಬೇಕು, ಈ ರೀತಿಯ ಅಂಶಗಳ ಕಡಿಮೆ ನೀಡಿದರೆ ಅಡುಗೆ ಮಾಡುವುದು ದೊಡಡ್ ವಿಷಯವಲ್ಲ.
- ಇನ್ನು ತರಕಾರಿ ಬೇಯಸಿಉವಾಗ ಉಪ್ಪು ಸೇರಿಸಿ, ಕೊನೆಗೆ ಉಪ್ಪು ಸೇರಿಸಿದರೆ ಗ್ರೇವಿಗೆ ಉಪ್ಪು ಇರುತ್ತದೆ, ಆದರೆ ತರಕಾರಿ ಸಪ್ಪೆ ಸಪ್ಪೆ ಅನಿಸುವುದು.
- ಇನ್ನು ನೀವು ಉಪ್ಪನ್ನು ಹಾಕಲು ಒಂದೇ ಸ್ಪೂನ್ ಬಳಸಿ, ಇಲ್ಲದಿದ್ದರೆ ನಿಮಗೆ ಹದ ಮಿಸ್ ಆಗಬಹುದು.
- ಇನ್ನು ಸಾರಿನ ಪ್ರಮಾಣ ಹೆಚ್ಚಾದಾಗ ಬಳಸಿರುವುದಕ್ಕಿಂತ ಸ್ವಲ್ಪ ಉಪ್ಪು ಹೆಚ್ಚು ಬಳಸಿ, ಒಂದೇ ಬಾರಿ ಹೆಚ್ಚು ಉಪ್ಪು ಹಾಕಲು ಹೋಗಬೇಡಿ.



Click it and Unblock the Notifications