Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸುಖ ನಿದ್ರೆಗೆ ಈ ಪಾಯಸ ಕುಡಿದು ನೋಡಿ.! ಮಲಗಿದ ತಕ್ಷಣ ನಿದ್ರೆ ಬರುತ್ತೆ!
ಮಳೆಗಾಲ ಅಂತ್ಯಗೊಂಡು ಚಳಿಗಾಲ ಆರಂಭಗೊಂಡಿದೆ. ಹಗಲು ನೆತ್ತಿ ಸುಡುವ ಬಿಸಿಲು ನಿಮ್ಮನ್ನು ಕಾಡಿದರೆ ರಾತ್ರಿಯ ಸಮಯದಲ್ಲಿ ಚಳಿಯ ಬದಲಾಗಿ ಈಗ ವಿಪರೀತ ಬೇಗೆ ಇರಲಿದೆ. ಆದ್ರೆ ಬೆಳಗಿನ ಜಾವದಲ್ಲಿ ತಣ್ಣನೆಯ ವಾತಾವರಣ ಇರಲಿದೆ. ಹೀಗೆ ಒಂದೇ ದಿನದಲ್ಲಿ ಮೂರು ಮೂರು ರೀತಿಯ ಹವಾಮಾನದಿಂದ ಜನರು ತತ್ತರಿಸುತ್ತಾರೆ.
ಅದ್ರಲ್ಲೂ ಇತ್ತೀಚಿಗೆ ರಾತ್ರಿ ಸಮಯದಲ್ಲಿ ನಿದ್ರೆ ಬರುವುದಿಲ್ಲ ಎಂಬ ದೂರಿನೊಂದಿಗೆ ಹಲವರು ಚಿಂತೆ ಮಾಡುವುದು ನೋಡಬಹುದು. ಹಾಗೆ ನಿದ್ರೆಗಾಗಿ ನೀವು ಕೂಡ ಹಲವು ರೀತಿಯ ಪ್ರಯೋಗಗಳ ಮಾಡಿರಬಹುದು. ಆದ್ರೆ ನಾವಿಂದು ಸುಲಭವಾಗಿ ಪಾಯಸ ಸವಿಯುವ ಮೂಲಕ ನಿದ್ರೆಯನ್ನ ಅನುಭವಿಸಬಹುದು.

ಹಾಗಾದ್ರೆ ನಾವಿಂದು ಮಲಗಿದ ತಕ್ಷಣ ನಿದ್ರೆ ಬರಬೇಕಾದ್ರೆ ಅಕ್ಕಿ ಹಾಕಿ ಮಾಡುವ ಈ ಪಾಯಸ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಈ ಪಾಯಸ ನಿಮ್ಮ ಬಾಯಲ್ಲಿ ನೀರು ತರಿಸುವ ಜೊತೆಗೆ ನಿದ್ರೆಗೂ ಸಹಕಾರಿಯಾಗಲಿದೆ. ಹಾಗಾದ್ರೆ ಅಕ್ಕಿಯಿಂದ ಈ ರುಚಿಯಾದ ಪಾಯಸ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಕ್ಕಿ ಪಾಯಸ ಮಾಡಲು ಯಾವೆಲ್ಲಾ ವಸ್ತುಗಳು ಬೇಕು
- ಬಾಸ್ಮತಿ ಅಕ್ಕಿ
- ತೆಂಗಿನ ಹಾಲು
- ಬಾದಾಮಿ
- ಗೋಡಂಬಿ
- ಬೆಲ್ಲ
- ತೆಂಗಿನ ತುರಿ
- ಗಸೆಗಸೆ
- ಏಲಕ್ಕಿ ಪುಡಿ
- ಉಪ್ಪು
ಅಕ್ಕಿ ಪಾಯಸ ಮಾಡುವ ವಿಧಾನವೇನು?
ಮೊದಲು ನೀರಿನಲ್ಲಿ ಬಾಸ್ಮತಿ ಅಕ್ಕಿ ಅಥವಾ ಸಾಮಾನ್ಯ ಅಕ್ಕಿಯನ್ನು ತೊಳೆದು ಒಣಗಿಸಬೇಕು. ಫ್ಯಾನ್ ಕೆಳಗೆ ಸ್ವಲ್ಪ ಒಣಗಿಸಿದ ಬಳಿಕ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಅಕ್ಕಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಸಣ್ಣ ಉರಿಯಲ್ಲಿ ಇಟ್ಟು ಹುರಿದುಕೊಳ್ಳಿ. ಅರ್ಧ ಕಪ್ ಅಕ್ಕಿ ಬಳಸಿದರೆ ಸಾಕು. ನಂತರ ಇದಕ್ಕೆ 2 ಸ್ಪೂನ್ ಗಸೆಗಸೆ ಹಾಕಿಕೊಳ್ಳಿ.
ಗಸೆ ಗಸೆ ಅಕ್ಕಿ ಹುರಿದ ಬಳಿಕ ಅದನ್ನು ತೆಗೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಕಾಲು ಕಪ್ ತೆಂಗಿನ ತುರಿ ಕೂಡ ಹಾಕಿ ಹುರಿದುಕೊಳ್ಳಿ. ನಂತರ ಇದಕ್ಕೆ ಬಾದಾಮಿ, ಗೋಡಂಬಿ ಸಹ ಹಾಕಿ ಸಣ್ಣ ಉರಿಯಲ್ಲಿ 1 ನಿಮಿಷ ಹುರಿದುಕೊಳ್ಳಿ. ತುರಿ ಕೆಂಪಗಾಗುವ ಸಮಯದಲ್ಲಿ ಒಲೆ ಆಫ್ ಮಾಡಿ.
ಈಗ ಮತ್ತೊಂದು ಪಾತ್ರೆಯಲ್ಲಿ ನೀರು ಇಟ್ಟು ಅದಕ್ಕೆ ಬೆಲ್ಲ ಹಾಕಿ ಕರಗಿಸಿಕೊಳ್ಳಿ. ನಂತರ ಬೆಲ್ಲದ ನೀರನ್ನು ಸಹ ಬದಿಗೆ ಇಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್‌ನಲ್ಲಿ ಹುರಿದುಕೊಂಡ ಅಕ್ಕಿ ಹಾಗೂ ಗಸೆ ಗಸೆಯನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಬಳಿಕ ಇದಕ್ಕೆ ಗೋಡಂಬಿ, ಬಾದಾಮಿ, ತೆಂಗಿನತುರಿಯನ್ನು ಹಾಕಿ ಮತ್ತೆ ಪುಡಿ ಮಾಡಿಕೊಳ್ಳಿ.
ಈಗ ಮತ್ತೊಂದು ಮಿಕ್ಸಿ ಜಾರ್‌ಗೆ ಒಂದು ಕಪ್ ತೆಂಗಿನ ತುರಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ತೆಳುವಾದ ಹಿಟ್ಟಿನಂತೆ ಮಾಡಿಕೊಂಡು ಜರಡಿ ಹಿಡಿದು ಅದರ ಹಾಲನ್ನು ತೆಗೆದುಕೊಳ್ಳಿ. 2 ಕಪ್ ತೆಂಗಿನ ಹಾಲು ಬರಬೇಕು. ಈಗ ತೆಂಗಿನಹಾಲಿಗೆ ಮಿಕ್ಸಿಯಲ್ಲಿ ರುಬ್ಬಿದ್ದ ಪುಡಿಯನ್ನು ಹಾಕಿ ಗಂಟು ಇಲ್ಲದೆ ಮಿಕ್ಸ್ ಮಾಡಿ ಅನಂತರ ಬೆಲ್ಲದ ನೀರು ಸಹ ಹಾಕಿಕೊಂಡು ಮಿಕ್ಸ್ ಮಾಡಿ.
ಈಗ ಒಲೆ ಮೇಲೆ ಕುದಿಬರಲು ಇಡಬೇಕು. ಈಗ ಏಲಕ್ಕಿ ಪುಡಿ, ಉಪ್ಪು ಸಹ ಹಾಕಿ ಮಿಕ್ಸ್ ಮಾಡಿ. ಹಾಗೆ ಕುದಿಬರಲು ಬಿಡಿ, ಆಗಾಗ ಮಿಕ್ಸ್ ಮಾಡುತ್ತಾ ಇರಿ. ನಂತರ ಗ್ಯಾಸ್ ಸಣ್ಣ ಮಾಡಿ. ಇನ್ನೊಂದು ಪಾತ್ರೆ ಒಲೆ ಮೇಲೆ ಇಟ್ಟು ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹಾಕಿಕೊಂಡು ಇದನ್ನು ಕೂಡ ಪಾಯಸಕ್ಕೆ ಹಾಕಿ. ಅರ್ಧ ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಅಕ್ಕಿ ಪಾಯಸ ರೆಡಿ ಆಗುತ್ತೆ.



Click it and Unblock the Notifications