Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಸಿ ತೆಂಗಿನಕಾಯಿ ದೋಸೆ ಈ ರೀತಿ ಮಾಡಿ! ಬಾಯಲ್ಲಿಟ್ಟರೆ ಕರಗುತ್ತೆ.. ರುಚಿಯೂ ಸೂಪರ್
ಹಸಿ ತೆಂಗಿನಕಾಯಿ ದೋಸೆ ಈ ರೀತಿ ಮಾಡಿ ನೋಡಿ. ಮನೆಯವರೆಲ್ಲಾ ಲೊಟ್ಟೆ ಹೊಡೆಯುತ್ತಾ ತಿಂತಾರೆ.. ಅಷ್ಟು ರುಚಿ ಈ ದೋಸೆ. ಹೌದು, ಇಡ್ಲಿ, ವಡೆ ಮತ್ತು ಮಸಾಲಾ ದೋಸೆಗಳು ನಮ್ಮ ನಿತ್ಯದ ಉಪಾಹಾರಗಳಾಗಿವೆ. ಆದರೆ, ರುಚಿ ಮತ್ತು ಮೃದುತ್ವದಲ್ಲಿ ಇವೆಲ್ಲಕ್ಕಿಂತ ವಿಭಿನ್ನವಾಗಿ, ಅತ್ಯಂತ ರುಚಿಕರವಾದ ಉಪಾಹಾರವೆಂದರೆ ಹಸಿ ತೆಂಗಿನಕಾಯಿ ದೋಸೆ (Coconut Dosa). ಕರ್ನಾಟಕ ಮತ್ತು ಕೇರಳದಂತಹ ದಕ್ಷಿಣ ರಾಜ್ಯಗಳಲ್ಲಿ ಈ ದೋಸೆ ಬಹಳ ಜನಪ್ರಿಯವಾಗಿದೆ.
ಹಸಿ ತೆಂಗಿನಕಾಯಿ ಬಳಕೆಯಿಂದ ಈ ದೋಸೆಗೆ ಒಂದು ವಿಶೇಷವಾದ ಸಿಹಿ ಸುವಾಸನೆ ಮತ್ತು ಮೃದುವಾದ ರಚನೆ ಬರುತ್ತದೆ. ಸಾಮಾನ್ಯ ದೋಸೆಗಳಂತೆ ಇದು ಗರಿಗರಿಯಾಗಿರುವುದಿಲ್ಲ. ಬದಲಿಗೆ, ಹತ್ತಿಯಂತೆ ಮೃದುವಾಗಿದ್ದು, ಬಾಯಿಗೆ ಹಾಕ್ಕೊಂಡ ತಕ್ಷಣ ಕರಗಿ ಹೋಗುವ ಗುಣ ಹೊಂದಿದೆ. ಈ ವಿಶೇಷ ಹಸಿ ತೆಂಗಿನಕಾಯಿ ದೋಸೆಯನ್ನು ತಯಾರಿಸಲು ಬೇಕಾದ ಪದಾರ್ಥಗಳು ಮತ್ತು ಸುಲಭವಾಗಿ ತಯಾರಿಸುವ ವಿಧಾನ (Coconut Dosa Recipe) ಇಲ್ಲಿದೆ ನೋಡಿ.
ಹಸಿ ತೆಂಗಿನಕಾಯಿ ದೋಸೆಗೆ ಬೇಕಾದ ಪದಾರ್ಥಗಳು
• ಅಕ್ಕಿ - 2 ಕಪ್
• ಹಸಿ ತೆಂಗಿನಕಾಯಿ ತುರಿ - 1 ಕಪ್
• ಅವಲಕ್ಕಿ - ಅರ್ಧ ಕಪ್
• ಮೆಂತ್ಯ ಬೀಜಗಳು - 1 ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
• ಎಣ್ಣೆ - ದೋಸೆ ಬೇಯಿಸಲು ಬೇಕಾದಷ್ಟು
• ನೀರು - ಹಿಟ್ಟು ರುಬ್ಬಲು ಅಗತ್ಯವಾದಷ್ಟು
ಹಸಿ ತೆಂಗಿನಕಾಯಿ ದೋಸೆ ತಯಾರಿಸುವ ವಿಧಾನ
- ಮೊದಲಿಗೆ, ಒಂದು ಬೌಲ್ನಲ್ಲಿ 2 ಕಪ್ ಅಕ್ಕಿ ಮತ್ತು 1 ಸ್ಪೂನ್ ಮೆಂತ್ಯ ಬೀಜಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.
- ನಂತರ ಅದಕ್ಕೆ ಸಾಕಷ್ಟು ನೀರು ಹಾಕಿ 4 ರಿಂದ 5 ಗಂಟೆಗಳ ಕಾಲ ನೆನೆಸಲು ಬಿಡಿ.
- ಅವಲಕ್ಕಿಯನ್ನು ರುಬ್ಬುವ ಸುಮಾರು 15 ನಿಮಿಷಗಳ ಮೊದಲು ತೊಳೆದು, ನೆನೆಸಿಕೊಂಡರೆ ಸಾಕು.
- ನೆನೆಸಿದ ಅಕ್ಕಿ, ಮೆಂತ್ಯ, ನೆನೆಸಿದ ಅವಲಕ್ಕಿ ಮತ್ತು ಹಸಿ ತೆಂಗಿನಕಾಯಿ ತುರಿಯನ್ನು ಮಿಕ್ಸಿ ಜಾರ್ ಅಥವಾ ಗ್ರೈಂಡರ್ಗೆ ಹಾಕಿ. ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಹಿಟ್ಟನ್ನು ಬಹಳ ನಯವಾಗಿ ರುಬ್ಬಿಕೊಳ್ಳಬೇಕು.
- ರುಬ್ಬಿದ ಹಿಟ್ಟನ್ನು ದೊಡ್ಡ ಪಾತ್ರೆಗೆ ಹಾಗಿ, ಮುಚ್ಚಳ ಮುಚ್ಚಿ ಸುಮಾರು 8 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಹುದುಗಲು ಬಿಡಿ.
- ಮರುದಿನ ಬೆಳಗ್ಗೆ, ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ, ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಹೊಂದಿಸಿಕೊಳ್ಳಿ.
- ಒಲೆಯನ್ನು ಆನ್ ಮಾಡಿ, ದೋಸೆ ಪ್ಯಾನ್ ಬಿಸಿ ಮಾಡಿ. ಪ್ಯಾನ್ ಬಿಸಿಯಾದ ನಂತರ ಒಂದು ಸೌಟು ಹಿಟ್ಟನ್ನು ತೆಗೆದುಕೊಂಡು ಪ್ಯಾನ್ನ ಮಧ್ಯದಲ್ಲಿ ಸುರಿಯಿರಿ. ಇದನ್ನು ಸಾಮಾನ್ಯ ದೋಸೆಯಂತೆ ತೆಳ್ಳಗೆ ಹರಡಬಾರದು. ಸ್ವಲ್ಪ ದಪ್ಪವಾಗಿ ಇರಬೇಕು. ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ, ತಕ್ಷಣ ಮುಚ್ಚಳ ಮುಚ್ಚಿ.
- ಹಸಿ ತೆಂಗಿನಕಾಯಿ ದೋಸೆಯನ್ನು ಸಾಮಾನ್ಯವಾಗಿ ಒಂದು ಕಡೆ ಮಾತ್ರ ಬೇಯಿಸುತ್ತಾರೆ. ಮುಚ್ಚಳ ಮುಚ್ಚುವುದರಿಂದ ಹಬೆಯಿಂದ ಮೇಲ್ಭಾಗವೂ ಬೇಯುತ್ತದೆ. ದೋಸೆಯ ಮೇಲೆ ಸಣ್ಣ ಸಣ್ಣ ರಂಧ್ರಗಳು ಕಾಣಿಸಿಕೊಂಡರೆ ಅದು ಮೃದುವಾಗಿದೆ ಎಂದರ್ಥ. ದೋಸೆ ಕೆಳಭಾಗದಲ್ಲಿ ತಿಳಿ ಚಿನ್ನದ ಬಣ್ಣ ಬಂದ ನಂತರ ತೆಗೆದು ಪ್ಲೇಟ್ಗೆ ಹಾಕಿ.
ಯಾವುದರ ಜೊತೆ ಸವಿಯಲು ಉತ್ತಮ?
ಈ ಮೃದುವಾದ & ಖಾರವಾದ ಹಸಿ ತೆಂಗಿನಕಾಯಿ ದೋಸೆಯು ಶುಂಠಿ ಚಟ್ನಿ, ಖಾರವಾದ ಟೊಮೆಟೊ ಚಟ್ನಿ ಅಥವಾ ಕಾಯಿ ಚಟ್ನಿಯೊಂದಿಗೆ ಅದ್ಭುತವಾಗಿ ಹೊಂದಿಕೆಯಾಗುತ್ತದೆ. ಮಾಂಸಾಹಾರಿಗಳಾಗಿದ್ದರೆ, ಕೋಳಿ ಸಾರು ಜೊತೆಗೆ ಈ ದೋಸೆ ತಿಂದರೆ ಅದರ ಮಜವೇ ಬೇರೆ.



Click it and Unblock the Notifications
